Homeಮುಖಪುಟಪುಷ್ಕರ್‌ರವರ 80ಕೋಟಿ ರೂಗಳ ರಿಸ್ಕ್..!!! ಕಾಪಾಡ್ತಾನಾ.. ಅವನೇ ಶ್ರೀಮನ್ ನಾರಾಯಣ..?

ಪುಷ್ಕರ್‌ರವರ 80ಕೋಟಿ ರೂಗಳ ರಿಸ್ಕ್..!!! ಕಾಪಾಡ್ತಾನಾ.. ಅವನೇ ಶ್ರೀಮನ್ ನಾರಾಯಣ..?

- Advertisement -
- Advertisement -

ಅವನೇ ಶ್ರೀಮನ್ ನಾರಾಯಣ ಸ್ಯಾಂಡಲ್‌ವುಡ್ ನಲ್ಲಿ ತಯಾರಾಗಿರೋ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ. ಗೋಧಿ ಬಣ್ಣ ಸಾಧಾರಣ ಮೈಕಟ್ಟು, ಕಿರಿಕ್ ಪಾರ್ಟಿ ಅಂತ ಸೂಪರ್ ಹಿಟ್ ಸಿನಿಮಾಗಳನ್ನ ಬ್ಯಾಕ್ ಟು ಬ್ಯಾಕ್ ಕೊಟ್ಟ, ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ ಹಾಗೂ ನಟ ರಕ್ಷಿತ್ ಶೆಟ್ಟಿ ಅದೇ ಹುಮ್ಮಸ್ಸಿನಲ್ಲಿ, ಗೆಲುವಿನ ಅಲೆಯಲ್ಲಿ ಪ್ಯಾನ್ ಇಂಡಿಯಾ ಸಿನಿಮಾ ಮಾಡೋದಕ್ಕೆ ಕೈ ಹಾಕಿ, ಈಗ ಆ ಸಾಹಸವನ್ನ ರಿಲೀಸ್ ಹಂತಕ್ಕೆ ತಂದಿದ್ದಾರೆ. ಈಗಾಗ್ಲೇ ಅವನೇ ಶ್ರೀಮನ್ ನಾರಾಯಣ ಸಿನಿಮಾ ಕನ್ನಡದ ಅತಿದೊಡ್ಡ ಸಿನಿಮಾ, ಬಹುಭಾಷೆಯಲ್ಲಿ ತಯಾರಾಗಿರೋ ಪ್ಯಾನ್ ಇಂಡಿಯಾ ಸಿನಿಮಾ ಅನ್ನೋ ಕಾರಣಕ್ಕೆ ಸಖತ್ ಸುದ್ದಿಯಾಗ್ತಿದೆ.

ಇತ್ತೀಚೆಗಷ್ಟೇ ಅವನೇ ಶ್ರೀಮನ್ ನಾರಾಯಣ ಚಿತ್ರದ ರಿಲೀಸ್ ಡೇಟ್ ಅನೌನ್ಸ್ ಮಾಡೋ ಮೂಲಕ, ಪ್ರಚಾರ ಕಾರ್ಯಕ್ಕೆ ಚಾಲನೆ ಕೊಟ್ಟಿರೋ ಚಿತ್ರತಂಡ, ಮಾಡಲು ಹೊರಟಿರೋ ಸಾಹಸವನ್ನ ಕಂಡು, ಇಡೀ ಉದ್ಯಮ ಶಾಕ್ ಆಗಿದೆ. ಪ್ಯಾನ್ ಇಂಡಿಯಾ ಸಿನಿಮಾವನ್ನ ರಿಲೀಸ್ ಮಾಡ್ತಿವಿ. ಬರೊಬ್ಬರಿ 300ಕೋಟಿ ಬ್ಯುಸಿನೆಸ್ ಮಾಡ್ತೀವಿ ಅಂತ ನಿರ್ಮಾಪಕರು ದಿಲ್ದಾರಾಗಿ ಹೇಳಿಕೊಂಡಿದ್ದಾರೆ. ಇದು ಒಂದು ಕಡೆ ಸ್ಯಾಂಡಲ್ವುಡ್ ಗೆ ಶಾಕ್ ಕೊಟ್ರೆ. ಮತ್ತೆಂದು ಕಡೆ ಇದು ವರ್ಕೌಟ್ ಆದ್ರೀ ಆಗಬಹುದು ಅನ್ನೋ ಲೆಕ್ಕಾಚಾರದ ಮಾತುಗಳು ಕೇಳಿ ಬರ್ತಿವೆ..

80ಕೋಟಿ ಬಜೆಟ್.. 300 ಕೋಟಿ ಟಾರ್ಗೆಟ್…!!!
ಅವನೇ ಶ್ರೀಮನ್ ನಾರಾಯಣ ಸಿನಿಮಾದ ಮೇಲೆ. ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ ಬರೊಬ್ಬರಿ 80ಕೋಟಿ ಸುರಿದಿದ್ದಾರೆ. ಹಳೇ ಸಿನಿಮಾಗಳಿಂದ ಗಳಿಸಿದ್ದು, ಬ್ಯುಸಿನೆಸ್ ನಲ್ಲಿ ಗಳಿಸಿದ್ದರ ಜೊತೆಗೆ ಸಾಲ ಸೋಲ ಮಾಡಿ ಈ ಚಿತ್ರದ ಮೇಲೆ ಇಷ್ಟು ದೊಡ್ಡ ಬಂಡವಾಳ ಹೂಡಿದ್ದಾರೆ. ಗೆಲ್ಲೋ ಸೂತ್ರ ನನಗೆ ಗೊತ್ತಿದೆ. ಈ ಸಿನಿಮಾದಿಂದ 300 ಕೋಟಿ ಬ್ಯುಸಿನೆಸ್ ಆಗೇ ಆಗುತ್ತೆ ಅನ್ನೋ ಕಾನ್ಫಿಡೆನ್ಸ್ ನಲ್ಲಿ ಪುಷ್ಕರ್ ಮಲ್ಲಿಕಾರ್ಜುನಯ್ಯ ಈ ರಿಸ್ಕ್ ತೆಗೆದುಕೊಂಡಿದ್ದಾರೆ. ಅಷ್ಟೇ ಅಲ್ಲ, ಶ್ರೀಮನ್ ನಾರಾಯಣ ಸಿನಿಮಾದ ಜೊತೆಗೆ ನಾಲ್ಕು ಸಿನಿಮಾಗಳು ಚಿತ್ರೀಕರಣ ಹಂತದಲ್ಲಿ, ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿವೆ. ಮುಂದಿನ ಆರೇಳು ತಿಂಗಳಲ್ಲಿ ಪುಷ್ಕರ್ ಬರೊಬ್ಬರಿ 5-6 ಚಿತ್ರಗಳನ್ನ ರಿಲೀಸ್ ಮಾಡೋದಕ್ಕೆ ತಯಾರಿ ನಡೆಸಿದ್ದಾರೆ. ಮೂಲಗಳ ಪ್ರಕಾರ ಪುಷ್ಕರ್ ಮಲ್ಲಿಕಾರ್ಜುನಯ್ಯ ನೂರು ಕೋಟಿಗೂ ಹೆಚ್ಚು ಬಂಡವಾಳವನ್ನ ಸಿನಿಮಾಗಳ ಮೇಲೆ ಹೂಡಿದ್ದಾರೆ.

ಕೆ.ಜಿ.ಎಫ್ ಸಿನಿಮಾ ಸ್ಫೂರ್ತಿಯಿಂದ ಈ ರಿಸ್ಕ್
ಅವನೇ ಶ್ರೀಮನ್ ನಾರಾಯಣ ಸಿನಿಮಾ ಮೇಲೆ 80ಕೋಟಿಯಷ್ಟು ದೊಡ್ಡ ಬಜೆಟ್ ನ ರಿಸ್ಕ್ ತಗೆದುಕೊಂಡಿದ್ದರು, ಚಿತ್ರದ ಕಥೆ ಮತ್ತು ಮೇಕಿಂಗ್ ಅಷ್ಟೇ ಕ್ವಾಲಿಟಿಯಾಗಿ ಮೂಡಿ ಬಂದಿದೆಯಂತೆ. ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆ.ಜಿ.ಎಫ್ ಸಿನಿಮಾ ದೇಶದಾದ್ಯಂತ ಸೃಷ್ಟಿಸಿದ ಸಂಚಲನ ಮತ್ತು ಆ ಚಿತ್ರವನ್ನ ನಿರ್ಮಿಸಿದ್ದ ರೀತಿ ಪುಷ್ಕರ್ ಮತ್ತು ರಕ್ಷಿತ್ ಶೆಟ್ಟಿಗೆ ಸ್ಫೂರ್ತಿ ತುಂಬಿದೆ. ಅದೇ ಸ್ಫೂರ್ತಿಯಲ್ಲಿ, ಅಂತಹದ್ದೇ ಮ್ಯಾಜಿಕ್ ರಕ್ಷಿತ್ ಶೆಟ್ಟಿ ಸಿನಿಮಾನೂ ಮಾಡುತ್ತೆ. ಒಳ್ಳೆಯ ಯೂನಿವರ್ಸಲ್ ಕಥೆ, ಒಳ್ಳೆಯ ಸ್ಟಾರ್ ಕಾಸ್ಟ್, ಕ್ವಾಲಿಟಿ ಮೇಕಿಂಗ್ ಇವೆಲ್ಲದ್ರ ಜೊತೆಗೆ ಎಲ್ಲಾ ಕಡೆ ಸಲ್ಲುವ, ಎಲ್ಲಾ ಕಾಲಕ್ಕೂ ಸಲ್ಲುವ ರಂಜನೀಯ ಅಂಶಗಳನ್ನ ಹದವಾಗಿ ಮಿಶ್ರಣಗೊಳಿಸಿದ್ರೆ, ಸಾಕು ಸಿನಿಮಾ ವರ್ಕೌಟ್ ಆಗುತ್ತೆ. ಗೆದ್ದೆ ಗೆಲ್ಲುತ್ತೆ ಅನ್ನೋ ಭರವಸೆಯಲ್ಲಿ ಅವನೇ ಶ್ರೀಮನ್ ನಾರಾಯಣನ ಮೇಲೆ ಅಷ್ಟು ಕೋಟಿ ಸುರಿದಿದ್ದಾರೆ.
ಕಿರಿಕ್ ಪಾರ್ಟಿ ರಿಲೀಸ್ ಡೇಟ್ಗೆ ಶ್ರೀಮನ್ ನಾರಾಯಣ ರಿಲೀಸ್

ಡಿಸೆಂಬರ್ ತಿಂಗಳಲ್ಲಿ ರಿಲೀಸ್ ಮಾಡಿ ದೊಡ್ಡ ಸಕ್ಸಸ್ ಪಡೆದಿದ್ದ ಕಿರಿಕ್ ಪಾರ್ಟಿ ರಿಲೀಸ್ ಆದ ಅದೃಷ್ಟದ ಡೇಟ್ಗೆನೇ ಅವನೇ ಶ್ರೀಮನ್ ನಾರಾಯಣ ಸಿನಿಮಾವನ್ನ ರಿಲೀಸ್ ಮಾಡೋದಕ್ಕೆ ಚಿತ್ರತಂಡ ನಿರ್ಧರಿಸಿದ್ದು, ಆಗ್ಲೇ ನಾವು ಇದೇ ಡಿಸೆಂಬರ್ 27ಕ್ಕೆ ವರ್ಲ್ಡ್ ವೈಡ್ ಸಿನಿಮಾವನ್ನ ರಿಲೀಸ್ ಮಾಡ್ತೀವಿ ಅಂತ ಅನೌನ್ಸ್ ಮಾಡಿದೆ.
ಅವನೇ ಶ್ರೀಮನ್ ನಾರಾಯಣದ ಮೈನ್ ಸ್ಟ್ರೆಂಥ್ ಅಂದ್ರೆ ಅದು ರಕ್ಷಿತ್ ಶೆಟ್ಟಿ ಒಬ್ಬರೇ, ನೇಮೂ ಫೇಮೂ ಇರೋದು ಇವರೊಬ್ಬರದೇ. ಅದ್ರೆ ಜೊತೆಗೆ ಪುಷ್ಕರ್ ಫಿಲಂಸ್ ಬ್ಯಾನರ್ ವಿಚಾರವಾಗಿ ಹೆಸರು ಮಾಡಿದೆ. ಅದು ಬಿಟ್ರೆ, ಸಚಿನ್ ರವಿಗೆ ಇದು ಚೊಚ್ಚಲ ನಿರ್ದೇಶನದ ಸಿನಿಮಾ, ಅಜನೀಶ್ ಲೋಕನಾಥ್ ರಕ್ಷಿತ್ ಶೆಟ್ಟಿ ನೆಚ್ಚಿನ ಸಂಗೀತ ನಿರ್ದೇಶಕನಾಗಿರೋದಿಂದ, ಈ ಹಿಟ್ ಕಾಂಬಿನೇಶನ್ ಮತ್ತೊಮ್ಮೆ ವರ್ಕೌಟ್ ಆಗೋ ಸೂಚನೆ ಸಿಕ್ಕಿದೆ. ಚಿತ್ರದಲ್ಲಿ ರಕ್ಷಿತ್ ಗೆ ನಾಯಕಿಯಾಗಿ ಶಾನ್ವಿಶ್ರೀವಾತ್ಸವ್ ಕಾಣಿಸಿಕೊಂಡಿದ್ದು, ಬಾಲಾಜಿ ಮೋಹನ್, ಪ್ರಮೋದ್ ಶೆಟ್ಟಿ ಮತ್ತು ಅಚ್ಯುತ್ ಕುಮಾರ್ ಮುಖ್ಯಪಾತ್ರಗಳಲ್ಲಿ ಕಾಣಿಸಿಕೊಂದ್ದಾರೆ.

ಕೆ.ಜಿ.ಎಫ್ ಹಿಂದೆ ಬಂದ ಕುರುಕ್ಷೇತ್ರ, ಪೈಲ್ವಾನ್ ವರ್ಕ್ ಆಗ್ಲಿಲ್ಲ
ಅಂದ್ಹಾಗೆ ಕೆ.ಜಿ.ಎಫ್ ಸಿನಿಮಾದ ಪ್ಯಾನ್ ಇಂಡಿಯಾ ಸಕ್ಸಸ್ ನೋಡಿದ್ಮೇಲೆ, ಅದೇ ತರಹ ಪ್ಯಾನ್ ಇಂಡಿಯಾ ಸಿನಿಮಾ ಮಾಡೋ ಭರದಲ್ಲಿ, ಕಿಚ್ಚ ಸುದೀಪ್ ಪೈಲ್ವಾನ್ ಮತ್ತು ಚಾಲೆಂಜಿಂಗ್ ಸ್ಟಾರ್ ದರ್ಶನ್ ಕುರುಕ್ಷೇತ್ರ ಚಿತ್ರಗಳನ್ನ ಬಹುಭಾಷೆಯಲ್ಲಿ ರಿಲೀಸ್ ಮಾಡಿದ್ರೂ, ಆದ್ರೆ ಕನ್ನಡ ಬಿಟ್ಟು ಬೇರೆ ಯಾವ ಭಾಷೆಯಲ್ಲೂ ಈ ಎರಡೂ ಚಿತ್ರಗಳು ವರ್ಕೌಟ್ ಆಗ್ಲಿಲ್ಲ. ಕೆ.ಜಿ.ಎಫ್ ಸಿನಿಮಾಗಿದ್ದ ಕಂಟೆಂಟ್ ಕ್ವಾಲಿಟಿಯಾಗ್ಲಿ, ಮೇಕಿಂಗ್ ಕ್ವಾಲಿಟಿಯಾಗ್ಲಿ ಈ ಚಿತ್ರಗಳಲ್ಲಿ ಇರಲಿಲ್ಲ ಅನ್ನೋ ರೆಸ್ಪಾನ್ಸ್ ರಿಸಲ್ಟ್ ಆಚೆ ಬಂದಾಯ್ತು.
ಅವನೇ ಶ್ರೀಮನ್ನಾರಾಯಣ ಏನಾಗಬಹುದು…?

ಯಶ್ ಎರಡು ವರ್ಷದ ಪರಿಶ್ರಮಕ್ಕೆ ಕೆ.ಜಿ.ಎಫ್ ಪ್ಯಾನ್ ಇಂಡಿಯಾ ಸಕ್ಸಸ್ ಕೊಟ್ಟಿತ್ತು. ಆದ್ರೆ ದರ್ಶನ್, ಸುದೀಪ್ ಅಂತಹ ಕನ್ನಡದ ದೊಡ್ಡ ಸ್ಟಾರ್ ಗಳ ಸಿನಿಮಾಗಳು ಪ್ಯಾನ್ ಇಂಡಿಯಾ ಲೆವ್ವೆಲ್ ನಲ್ಲಿ ಮಕ್ಕಾಡೆ ಮಲಗಿದ್ವು. ಹೀಗಿರೋವಾಗ ಅದ್ರ ಬೆನ್ನಿಗೇನೇ ಬರ್ತಿರೋ ಅವನೇ ಶ್ರೀಮನ್ ನಾರಾಯಣ ಸಿನಿಮಾ ಏನಾಗಬಹುದು ಅನ್ನೋ ಪ್ರಶ್ನೆಗಳು ಈಗ ಕನ್ನಡ ಚಿತ್ರರಂಗದಲ್ಲಿ ಹುಟ್ಟಿಕೊಂಡಿದೆ. ಅವನೇ ಶ್ರೀಮನ್ ನಾರಾಯಣ ನಿರ್ಮಾಪಕರು ತೆಗೆದುಕೊಂಡಿರೋ ರಿಸ್ಕ್ ಕಂಡು ಬೆಚ್ಚಿ ಬಿದ್ದಿದೆ. ಕೆ.ಜಿ.ಎಫ್ ಹುಟ್ಟಿಸಿದ್ದ ಭರವಸೆ, ವಿಸ್ತರಿಸಿರೋ ಮಾರುಕಟ್ಟೆಯನ್ನ, ಲಾಸ್ಟ್ ಎರಡು ಸಿನಿಮಾಗಳ ಸೋಲು ಕುಗ್ಗಿಸಿವೆ. ಇದನ್ನ ಕಂಡು ಚಿತ್ರರಂಗ ಕನ್ನಡದಲ್ಲಿ ಪ್ಯಾನ್ ಇಂಡಿಯಾ ಸಿನಿಮಾ ನಿರ್ಮಾಣಕ್ಕೆ ಹೆದರಿ ನಿಂತಿದೆ. ಇಂತಹ ಸಮಯದಲ್ಲಿ ಅವನೇ ಶ್ರೀಮನ್ ನಾರಾಯಣ ಚಿತ್ರತಂಡ ನಾವು ಕೆಜಿಎಫ್ ಗಿಂತ ಯಾವುದ್ರಲ್ಲೂ ಕಡಿಮೆಯಿಲ್ಲ. ನಮ್ಮ ಸಿನಿಮಾ ಅವ್ರಿಗಿಂತ ಒಂದು ಪಟ್ಟು ಜಾಸ್ತೀನಿ ಅನ್ನೋ ಓವರ್ ಕಾನ್ಫಿಡೆನ್ಸ್ ನಲ್ಲಿದೆ.
ಯಡವಟ್ಟಾದ್ರೆ ಬೀದಿಗೆ ಬರ್ತಾರೆ ನಿರ್ಮಾಪಕರು

ಅವನೇ ಶ್ರೀಮನ್ ನಾರಾಯಣ ಸಿನಿಮಾ ನಿರ್ಮಾಪಕರು ಅಂದುಕೊಂಡಂತೆ ಆಗಲಿಲ್ಲ ಅಂದ್ರೆ, ಖಂಡಿತ ನಿರ್ಮಾಪಕರು ಬೀದಿಗೆ ಬರ್ತಾರೆ. ಇರೋಬರೋದನ್ನೆಲ್ಲಾ ಈ ಸಿನಿಮಾ ಮೇಲೆ ಹಾಕಿ, ದೊಡ್ಡ ಗೆಲುವಿನ ನಿರೀಕ್ಷೆಯಲ್ಲಿರೋ ಪುಷ್ಕರ್ ಮಲ್ಲಿಕಾರ್ಜುನಯ್ಯರಿಗೆ, ಬರೀ ಕನ್ನಡದಲ್ಲಿ ಮಾತ್ರ ಸಿನಿಮಾ ವರ್ಕೌಟ್ ಆದ್ರೂ ಕಷ್ಟ. ಶತಾಯಗತಾಯ ಎಲ್ಲಾ ಭಾಷೆಯಲ್ಲೂ ಈ ಸಿನಿಮಾ ಚೆನ್ನಾಗಿ ಓಡಿದ್ರೆ ಮಾತ್ರ ಇವ್ರು ಹಾಕಿದ ಬಂಡವಾಳ ವಾಪಸ್ ಬರುತ್ತೆ. ಲಾಭ ಬರುತ್ತೆ. ಇಲ್ಲವಾದಲ್ಲಿ, ಭಾರಿ ತೊಂದರೆ ಎದುರಾಗುತ್ತೆ. ಸಿನಿಮಾ ನಿರ್ಮಾಣದ ಹಂತದಲ್ಲೇ ಕನ್ನಡದವತರಣಿಕೆಯ ಸ್ಯಾಟಿಲೈಟ್ ಮತ್ತಿ ಡಿಜಿಟಲ್ ರೈಟ್ಸ್ ನ ಸೇಲ್ ಮಾಡಿರೋ ಪುಷ್ಕರ್, ಪರಭಾಷೆಯ ಸ್ಯಾಟಿಲೈಟ್ ಮತ್ತು ಡಿಜಿಟಲ್ ರೈಟ್ಸ್ ಒಳ್ಳೆಯ ಬೆಲೆಗೆ ಸೇಲ್ ಆಗುತ್ತೆ ಅನ್ನೋ ನಿರೀಕ್ಷೆಯಲ್ಲಿದ್ದಾರೆ. ಕೆ.ಜಿ.ಎಫ್ ಸಿನಿಮಾ ರಿಲೀಸ್ಗೂ ಎರಡು ತಿಂಗಳ ಮೊದ್ಲೇ ಎಲ್ಲಾ ಭಾಷೆಯ ವಿತರಣೆಯ ಹಕ್ಕು, ಡಿಜಿಟಲ್, ಸ್ಯಾಟಿಲೈಟ್ ಹಕ್ಕನ್ನ ವ್ಯಾಪಾರ ಮಾಡಿಕೊಂಡು, ಪ್ರತಿಭಾಷೆಯಲ್ಲೂ ಪ್ರಚಾರ ಕಾರ್ಯವನ್ನ ಆರಂಭಿಸಿದ್ರು, ಆದ್ರೆ ಹಾಗೇ ಕಂಪೇರ್ ಮಾಡೋದಾದ್ರೆ, ಅವನೇ ಶ್ರೀಮನ್ ನಾರಾಯಣ ತಂಡದಿಂದ ಅಂತಹ ಯಾವುದೇ ದೊಡ್ಡಮಟ್ಟದ ಪ್ರೋಗ್ರೇಸೀವ್ ಕೆಲಸ ಆಗಿಲ್ಲ. ಹಾಗಾಗಿ, ಮೂಲಗಳು ಹೇಳೋ ಪ್ರಕಾರ ಈ ಚಿತ್ರದ ಕಂಟೆಂಟ್ ಚೆನ್ನಾಗಿದೇ ಆದ್ರೂ, ಈ ಚಿತ್ರತಂಡ ಮಾಡಿರೋ ಸಾಹಸ ಪ್ರಯೋಗಕ್ಕೆ, ಇವರು ನಿರೀಕ್ಷಿಸಿರೋ 300ಕೋಟಿ ಬರೋದು ದೂರದ ಮಾತು ಅಂತ ಗಾಂಧಿನಗರದ ಸಿನಿಮಾ ಬ್ಯುಸಿನೆಸ್ ಪಂಡಿತರು ಹೇಳ್ತಿದ್ದಾರೆ. ಅದೇನೆ ಇದ್ರೂ ಈ ವರ್ಷಾಂತ್ಯಕ್ಕೆ ರಕ್ಷಿತ್ ಶೆಟ್ಟಿ ಮತ್ತು ಪುಷ್ಕರ್ ವೃತ್ತಿ ಬದುಕಿಗೆ ಟರ್ನಿಂಗ್ ಪಾಯಿಂಟ್ ಆಗಲಿದೆ. ಆದ್ರೆ ಅದು ಪಾಸಿಟೀವಾ..? ನೆಗೆಟೀವಾ..? ಅನ್ನೋದೇ ಸದ್ಯ ಗಾಂಧಿನಗರವನ್ನ ಕಾಡ್ತಿರೋ ಪ್ರಶ್ನೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಭಾರತದಲ್ಲಿ 12 ಸಾವಿರ ಉದ್ಯೋಗಿಗಳನ್ನು ವಜಾಗೊಳಿಸಿದ ಒರಾಕಲ್ : ಜಾಗತಿಕವಾಗಿ 30 ಸಾವಿರ ಜನರ ಕೆಲಸಕ್ಕೆ ಕುತ್ತು

ಐಟಿ ದೈತ್ಯ ಒರಾಕಲ್ ಜಾಗತಿಕ ಮಟ್ಟದಲ್ಲಿ ಸುಮಾರು 30,000 ಉದ್ಯೋಗಿಗಳನ್ನು ವಜಾಗೊಳಿಸಲು ನಿರ್ಧರಿಸಿದ್ದು, ಇದು ಭಾರತದ ಮೇಲೂ ತೀವ್ರ ಪರಿಣಾಮ ಬೀರಿದೆ. ವರದಿಗಳ ಪ್ರಕಾರ, ಭಾರತವೊಂದರಲ್ಲೇ ಸುಮಾರು 12,000 ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಲಾಗಿದೆ. ಕಂಪನಿಯು ತನ್ನ ಒಟ್ಟು ಉದ್ಯೋಗಿಳ...

ಗೋವಾ ನೈಟ್‌ಕ್ಲಬ್ ಬೆಂಕಿ ಪ್ರಕರಣ: ಮಾಲೀಕರಾದ ಸೌರಭ್ ಲೂತ್ರಾ, ಗೌರವ್ ಲೂತ್ರಾ ಸಹೋದರರಿಗೆ ಜಾಮೀನು

ಪಣಜಿ: ಕಳೆದ ಡಿಸೆಂಬರ್‌ನಲ್ಲಿ 25 ಜನರ ಸಾವಿಗೆ ಕಾರಣವಾದ ವಿನಾಶಕಾರಿ ಬೆಂಕಿ ಪ್ರಕರಣಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಬಿರ್ಚ್ ಬೈ ರೋಮಿಯೋ ಲೇನ್ ನೈಟ್‌ಕ್ಲಬ್‌ನ ಮಾಲೀಕರಾದ ಸೌರಭ್ ಲೂತ್ರಾ ಮತ್ತು ಗೌರವ್ ಲೂತ್ರಾ ಅವರಿಗೆ...

ಲೈಂಗಿಕ ದೌರ್ಜನ್ಯ ಆರೋಪ: ಮಲಯಾಳಂ ಚಲನಚಿತ್ರ ನಿರ್ದೇಶಕ ರಂಜಿತ್ ಬಾಲಕೃಷ್ಣನ್ 14 ದಿನಗಳ ನ್ಯಾಯಾಂಗ ಬಂಧನಕ್ಕೆ 

ಕೇರಳ: ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮಲಯಾಳಂ ನಿರ್ದೇಶಕ ಮತ್ತು ನಿರ್ಮಾಪಕ ರಂಜಿತ್ ಬಾಲಕೃಷ್ಣನ್ ಅವರನ್ನು ಬುಧವಾರ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಪ್ರಸ್ತುತ ಅವರನ್ನು ಎರ್ನಾಕುಲಂ ಸಬ್ ಜೈಲಿನಲ್ಲಿ ಇರಿಸಲಾಗಿದೆ.  ಜನವರಿ...

ಫಾರ್ಮ್–6 ವಿವಾದ : ಕೋಲ್ಕತ್ತಾದ ಚುನಾವಣಾಧಿಕಾರಿ ಕಚೇರಿ ಮುಂದೆ ಟಿಎಂಸಿ -ಬಿಜೆಪಿ ಕಾರ್ಯಕರ್ತರ ನಡುವೆ ಘರ್ಷಣೆ

ಮತದಾರರ ಪಟ್ಟಿಗೆ ಹೊಸದಾಗಿ ಹೆಸರುಗಳನ್ನು ಸೇರಿಸುವ ನಮೂನೆ -6 (ಫಾರ್ಮ್ -6) ವಿಚಾರದಲ್ಲಿ ಕೋಲ್ಕತ್ತಾದ ಮುಖ್ಯ ಚುನಾವಣಾಧಿಕಾರಿ ಕಚೇರಿ ಮುಂದೆ ಮಂಗಳವಾರ (ಮಾ. 31) ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮತ್ತು ಬಿಜೆಪಿ ಕಾರ್ಯಕರ್ತರ...

‘ಶೀಘ್ರದಲ್ಲೇ ಹೊರಡುತ್ತೇನೆ’: ‘2-3 ವಾರಗಳಲ್ಲಿ’ ಇರಾನ್ ಮೇಲಿನ ಯುದ್ಧ ಕೊನೆಗೊಳಿಸುವ ಬಗ್ಗೆ ಸುಳಿವು ನೀಡಿದ ಅಮೆರಿಕ ಅಧ್ಯಕ್ಷ ಟ್ರಂಪ್ 

ವಾಷಿಂಗ್ಟನ್ ಡಿಸಿ: ಜಾಗತಿಕ ಇಂಧನ ಮಾರುಕಟ್ಟೆಗಳನ್ನು ಅಸ್ತವ್ಯಸ್ತಗೊಳಿಸಿರುವ ಒಂದು ತಿಂಗಳ ಕಾಲ ನಡೆದ ಯುದ್ಧದ ಸಂಭಾವ್ಯ ಅಂತ್ಯದ ಬಗ್ಗೆ ಸುಳಿವು ನೀಡುವ ಮೂಲಕ, ಮುಂದಿನ ಎರಡು ಮೂರು ವಾರಗಳ ಮೊದಲೇ ಇರಾನ್ ವಿರುದ್ಧದ...

ದೊಡ್ಡಬಳ್ಳಾಪುರದಲ್ಲಿ ಭೂ ಸ್ವಾಧೀನ ವಿರೋಧಿ ಹೋರಾಟ : ಕೆಐಎಡಿಬಿ ವಿರುದ್ಧ ಬೀದಿಗಿಳಿದ ಜನ

ದೇವನಹಳ್ಳಿ ಬಳಿಕ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಭೂ ಸ್ವಾಧೀನ ವಿರೋಧಿ ಹೋರಾಟ ಪ್ರಾರಂಭಗೊಂಡಿದೆ. ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ದಿ ಮಂಡಳಿ (ಕೆಐಎಡಿಬಿ) ವಿರುದ್ಧ ಜನರು ಬೀದಿಗಿಳಿದಿದ್ದಾರೆ. ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡಬೆಳವಂಗಲ...

ಬಿಹಾರ: ಪತಿಯನ್ನು ಹತ್ಯೆ ಮಾಡಿದ ಗುಂಪಿನಿಂದ ಬೆದರಿಕೆ; ಇಬ್ಬರು ಮಕ್ಕಳೊಂದಿಗೆ ವಿಷ ಸೇವಿಸಿದ ಮುಸ್ಲಿಂ ಮಹಿಳೆ ಸಾವು, ಮಕ್ಕಳ ಸ್ಥಿತಿ ಗಂಭೀರ

ಬಿಹಾರದ ರೋಹ್ತಾಸ್ ಜಿಲ್ಲೆಯ ಮುಸ್ಲಿಂ ಮಹಿಳೆಯೊಬ್ಬರು ಮಂಗಳವಾರ ತನ್ನ ಇಬ್ಬರು ಅಪ್ರಾಪ್ತ ಮಕ್ಕಳೊಂದಿಗೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.  ಪತಿಯನ್ನು ಅಮಾನುಷವಾಗಿ ಹಲ್ಲೆ ನಡೆಸಿ ಹತ್ಯೆ ಮಾಡಿದ್ದ ಆರೋಪಿಗಳಿಂದ ಬೆದರಿಕೆಗಳನ್ನು ತಾಳಲಾರದೆ...

ಅತ್ಯಾಚಾರ ಆರೋಪ: ಅಶೋಕ್ ಖರತ್ ಅವರ ಪುತ್ರನನ್ನು ವಿಚಾರಣೆಗಾಗಿ ವಶಕ್ಕೆ ಪಡೆದ ಎಸ್ಐಟಿ; ಪತ್ನಿಗಾಗಿ ಹುಡುಕಾಟ 

ನಾಸಿಕ್: ಅತ್ಯಾಚಾರ ಆರೋಪಿ ಸ್ವಯಂ ಘೋಷಿತ ದೇವಮಾನವ ಅಶೋಕ್ ಖರತ್ ವಿರುದ್ಧ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ), ನಾಸಿಕ್ ನಗರದಲ್ಲಿ ಆತನ ಮಗನನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದು, ಆತನ ಪತ್ನಿಗಾಗಿಯೂ...

ಇರಾಕ್‌ : ಬಗ್ದಾದ್‌ನಲ್ಲಿ ಯುಎಸ್‌ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅಪಹರಣ

ಇರಾಕ್‌ ರಾಜಧಾನಿ ಬಗ್ದಾದ್‌ ನಗರದ ಅಲ್-ಸಾದೂನ್ ಬೀದಿಯಲ್ಲಿರುವ ಬಗ್ದಾದ್ ಹೋಟೆಲ್ ಬಳಿ ಅಮೆರಿಕದ ಪ್ರಶಸ್ತಿ ವಿಜೇತ ಸ್ವತಂತ್ರ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅವರನ್ನು ಮಂಗಳವಾರ (ಮಾ.31, 2026) ಅಪಹರಿಸಲಾಗಿದೆ ಎಂದು ವರದಿಯಾಗಿದೆ. ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ,...

ವಾಣಿಜ್ಯ ಎಲ್‌ಪಿಜಿ ದರ 195.50 ರೂ. ಏರಿಕೆ : ಜನ ಸಾಮಾನ್ಯರಿಗೆ ಗಾಯದ ಮೇಲೆ ಬರೆ

ಪಶ್ಚಿಮ ಏಷ್ಯಾ ಸಂಘರ್ಷದಿಂದಾಗಿ ಜಾಗತಿಕ ತೈಲ ಬೆಲೆಗಳು ಏರುತ್ತಿರುವ ನಡುವೆ, ವಾಣಿಜ್ಯ ಎಲ್‌ಪಿಜಿ ದರವನ್ನು ಬುಧವಾರ (ಏ.1) 195.50 ರೂ. ಹೆಚ್ಚಿಸಲಾಗಿದೆ. ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳ ಪ್ರಕಾರ, ಬೆಲೆ ಏರಿಕೆ ಬಳಿಕ...