ಭಾರತದ ಬ್ಯಾಡ್ಮಿಂಟನ್ ತಾರೆ ಪಿ.ವಿ ಸಿಂಧು ಕಾಮನ್‌ವೆಲ್ತ್ ಕ್ರೀಡಾಕೂಟದ ಬ್ಯಾಡ್ಮಿಂಟನ್ ಮಹಿಳಾ ಸಿಂಗಲ್ಸ್ ಫೈನಲ್ ಪಂದ್ಯದಲ್ಲಿ ಕೆನಡಾದ ಮಿಚೆಲ್ ಲಿ ಅವರನ್ನು ಸೋಲಿಸಿ ಚಿನ್ನದ ಪದಕ ಜಯಿಸಿದ್ದಾರೆ.
ಮಾಜಿ ವಿಶ್ವ ಚಾಂಪಿಯನ್ ಮತ್ತು ಎರಡು ಬಾರಿ ಒಲಿಂಪಿಕ್ಸ್ ಪದಕ ವಿಜೇತೆಯಾಗಿರುವ ಸಿಂಧು 21-15, 21-13 ನೇರ ಸೆಟ್‌ಗಳಿಂದ ಮಿಚೆಲ್ ಲಿ ಎದುರು ಗೆದ್ದು ಸಂಭ್ರಮಿಸಿದರು.
ರಿಯೊ ಒಲಿಂಪಿಕ್ಸ್‌ನಲ್ಲಿ ಸಿಂಧು ಬೆಳ್ಳಿ ಗೆದ್ದಿದ್ದರು. ಟೋಕಿಯೊದಲ್ಲಿ ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಂಡಿದ್ದರು. ಕಳೆದ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕ ಗೆದ್ದಿದ್ದರು. 2012ರ ಏಷ್ಯನ್ ಗೇಮ್ಸ್‌ನಲ್ಲಿಯೂ ಸಹ ಬೆಳ್ಳಿ ಪದಕ ಗೆದ್ದಿದ್ದರು. ಇದು ಬಹು ಕ್ರೀಡಾಕೂಟದಲ್ಲಿ ಅವರ ಮೊದಲ ಚಿನ್ನದ ಪದಕವಾಗಿದೆ.
PV Sindhu
2014🥉
2018🥈
2022🥇It's remarkable that a player of PV Sindhu's calibre with multiple World and Olympic medals had never won a women's singles gold at Commonwealth Games. She corrects that at her 3 CWG beating Michelle Li 21-15, 21-13 in the final at Birmingham. pic.twitter.com/CeljX2c5bR
— jonathan selvaraj (@jon_selvaraj) August 8, 2022
ಇನ್ನು ಭಾರತವು ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯುತ್ತಿರುವ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಪದಕಗಳ ಸುರಿಮಳೆಗೈದಿದೆ. ಇದುವರೆಗೂ 19 ಚಿನ್ನ, 15 ಬೆಳ್ಳಿ ಮತ್ತು 22 ಕಂಚಿನ ಪದಕಗಳೊಂದಿಗೆ ಒಟ್ಟು 56 ಪದಕ ಗಳಿಸಿ ಪದಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಪಡೆದಿದೆ.
ಇದನ್ನೂ ಓದಿ: ನೆನೆಯೋಣ ಅಮರವೀರರ: ಸ್ವಾತಂತ್ರ್ಯಕ್ಕಾಗಿ ಹುತಾತ್ಮರಾದ ವಿದ್ಯಾರ್ಥಿಗಳ ನೆನೆಪಿನಲ್ಲಿ ಮೈಸೂರು ಬ್ಯಾಂಕ್ ವೃತ್ತದಲ್ಲಿ ಕಾರ್ಯಕ್ರಮ


