Homeಕರ್ನಾಟಕರಂಗೀಲಾ ರಾಘುಸ್ವಾಮಿ ಚೇಲಾಗಳ ಕಿತಾಪತಿ, ಗಿರಿನಗರ ಪೊಲೀಸರ ಹುಚ್ಚಾಟದಿಂದ ಸತ್ತವರ ಮೇಲೆ ದಾಖಲಾಯ್ತು ಎಫ್‌ಐಆರ್‌

ರಂಗೀಲಾ ರಾಘುಸ್ವಾಮಿ ಚೇಲಾಗಳ ಕಿತಾಪತಿ, ಗಿರಿನಗರ ಪೊಲೀಸರ ಹುಚ್ಚಾಟದಿಂದ ಸತ್ತವರ ಮೇಲೆ ದಾಖಲಾಯ್ತು ಎಫ್‌ಐಆರ್‌

- Advertisement -
- Advertisement -

“ಅತ್ಯಾಚಾರ ಆರೋಪದ ವಿಷಯಕ್ಕೆ ಲೋಕಪ್ರಸಿದ್ಧನಾಗಿರುವ ರಾಮಚಂದ್ರಪುರ ಮಠದ ಸ್ವಾಮಿ ರಾಘು ಯಾನೆ ರಾಘವೇಶ್ವರ ಭಾರತಿ ಬುರ್ನಾಸ್ ಭಾನ್ಗಡಿಗಳಿಂದು ಸುದ್ದಿಯಾಗುತ್ತಲೇ ಇದ್ದಾನೆ. ಅದೆಂದೋ ಜೈಲುಪಾಲಾಗಬೇಕಿದ್ದ ಈ ಧರ್ಮಭ್ರಷ್ಟ ನ್ಯಾಯ ಆಡಳಿತ ವ್ಯವಸ್ಥೆಗಳನ್ನೇ ದಿಕ್ಕುತಪ್ಪಿಸಿ ತಿಂದುಂಡು ಬೋಗಸ್ ಪ್ರವಚನ ಬಿಗಿಯುತ್ತ ಲೌಕಿಕಾನಂದ ಅನುಭವಿಸುತ್ತಿದ್ದಾನೆ ಎಂಬ ಆರೋಪಗಳಿವೆ. ಕನ್ಯಾದೀಕ್ಷೆ, ಏಕಾಂತ ಸಂದರ್ಶನ, ಹೆಂಗಸರ ಹಣೆಗೆ ಕುಂಕುಮವಿಟ್ಟು ಮೈಸವರಿ ಆಶೀರ್ವಾದ ಮಾಡುವುದೇ ಮುಂತಾದ ಲೈಂಗಿಕ ಕುಚೇಷ್ಟೆಗಳಿಂದ ಹವ್ಯಕರ ಮಠವನ್ನು ತನ್ನ ಕಾಮಕಾಂಡದ ಅಡ್ಡೆ ಮಾಡಿಕೊಂಡಿದ್ದಾನೆ” ಎಂದು ಮೊಟ್ಟಮೊದಲು ಆರೋಪ ಮಾಡಿದ್ದು ಕುಮಟಾದ ಪ್ರಸಿದ್ಧ ವೈದ್ಯರೂ, ಸಾಮಾಜಿಕ ಮುಖಂಡರೂ ಹವ್ಯಕ ಹೀರೇಮಾಣಿಗಳೂ ಆಗಿದ್ದ ಡಾ.ಟಿ.ಟಿ.ಹೆಗಡೆ!

ಡಾ.ಹೆಗಡೆಯನ್ನು ರಾಘವ ಮಠ ಮಾಫಿಯಾ ಒಂದೆರಡು ರೀತಿಯಲ್ಲಿ ಕಾಡಲಿಲ್ಲ. ಹಲವು ಬಾರಿ ಅವರ ಮೇಲೆ ಭೀಭತ್ಸ ಹಲ್ಲೆಯಾಗಿತ್ತು. ಪೊಲೀಸರನ್ನು ಛೂ ಬಿಟ್ಟು ಕಾಡಿದ್ದರು. ಕೇಸುಗಳನ್ನು ಹಾಕಿಸಿದ್ದರು. ರಾಘುನ ಪೂರ್ವಾಶ್ರಮದ ಸಹೋದರಿ ಗ್ಯಾಂಗು ಕಟ್ಟಿಕೊಂಡು ಪೊರಕೆಯಿಂದ ಹೊಡೆಯಲು ಹೋಗಿ ತಮ್ಮನ ಕಲ್ಯಾಣ ಗುಣಗಳ ಅನಾವರಣವೂ ಮಾಡಿದ್ದಳು. ಎಂಬತ್ತರ ಗಡಿದಾಟಿದ್ದ ಡಾ.ಹೆಗಡೆ ಹಲ್ಲೆಯಿಂದ ಆಸ್ಪತ್ರೆಯಲ್ಲಿ ಕಳೆಯುವಂತಾಗಿತ್ತು. ಇಷ್ಟಾದರೂ ಹೆಗಡೆ ಹೆದರಲಿಲ್ಲ. ತ್ರಿಕಾಲ ಪೂಜೆ ಮಾಡದೆ ಹಣ-ಹೆಣ್ಣಿನ ವಾಸನೆಗೆ ಬಿದ್ದಿರುವ ರಾಘು ಗುರು ಪೀಠದಲ್ಲಿರಲು ಅನರ್ಹನೆಂದು ತನ್ನ ಕೊನೆಗಾಲದತನಕ ಹೇಳುತ್ತಲೇ ಇದ್ದರು. ರಾಘುನ ಪೀಠೋಚ್ಛಾಟನೆ ಮಾಡಲು ನ್ಯಾಯಾಲಯಕ್ಕೂ ಹೋಗಿದ್ದರು.

ಡಾ.ಹೆಗಡೆಯವರು ಸಾಮಾಜಿಕ ಕಳಕಳಿ, ಧಾರ್ಮಿಕ ಪಾಂಡಿತ್ಯ, ನೈತಿಕ ನಡವಳಿಕೆಯಿಂದ ಹವ್ಯಕ ಸಮುದಾಯದಲ್ಲಿ ಪ್ರೀತಿ-ಗೌರವ ಸಂಪಾದಿಸಿದ್ದರು. ಸ್ತ್ರೀ ಸಖ್ಯಾ ಸುಖ ಸಂತೃಪ್ತ “ಸನ್ಯಾಸಿ” ರಾಘುನ ಕಂಡರೆ ಹವ್ಯಕರು ಮೂಗು ಮುರಿಯುತ್ತಿದ್ದರೆ ಟಿ.ಟಿ.ಹೆಗಡೆಯನ್ನು ನೋಡಿದಾಕ್ಷಣ ತಲೆಬಾಗಿ ನಮಿಸುತ್ತಿದ್ದರು. ಆದರೆ ಹವ್ಯಕರು ರಾಘು ಗ್ಯಾಂಗಿನ ಬಹಿಷ್ಕಾರ, ಹಲ್ಲೆ, ಜೀವನೋಪಾಯ ವ್ಯವಹಾರಕ್ಕೆ ಕಲ್ಲುಹಾಕುವ ಕ್ರೌರ್ಯಕ್ಕೆ ಹೆದರಿ ಟಿ.ಟಿ.ಹೆಗಡೆಯ ಹೋರಾಟಕ್ಕೆ ಬೆಂಬಲ ನೀಡಲಿಲ್ಲ. ಇದಕ್ಕೆಲ್ಲಾ ಬೇಸರಿಸದೆ ಟಿ.ಟಿ.ಹೆಗಡೆ “ಜಾಣ” ಹವ್ಯಕರ ಕಣ್ಣಿನ ಪೊರೆ ತೆರೆಯಲು ಪ್ರಯತ್ನ ಮಾಡುತ್ತಲೇ ಇದ್ದರು ಎಂಬುದು‌ ಅವರನ್ನು ಬಲ್ಲವರೆಲ್ಲರೂ ಹೇಳುವ ಮಾತು.

ಮಠಬಾನಿಗಳನ್ನು ಎದುರುಹಾಕಿಕೊಂಡಿದ್ದ ಟಿ.ಟಿ.ಹೆಗಡೆಯವರು ಸುಮಾರು ಎರಡು ತಿಂಗಳ ಹಿಂದೆ ವಯೋಸಹಜ ಸಾವು ಕಂಡಿದ್ದಾರೆ. ಲಗಾಯ್ತಿನಿಂದಲೂ ಅನಾಚಾರಿ ರಾಘುನ ಚೇಲಾಗಿರಿ ಮಾಡುತ್ತಲೇ ಬಂದಿರುವ ಬೆಂಗಳೂರಿನ ಗಿರಿನಗರ ಪೊಲೀಸ್‌ ಅಧಿಕಾರಿಗಳು ದಿವಂಗತ ಟಿ.ಟಿ.ಹೆಗಡೆ ಮೇಲೆ ಕೇಸು ಜಡಿದಿದ್ದಾರೆ. ರಾಘುನ ವಿರುದ್ಧ ಅವಹೇಳನಕಾರಿ ಬರಹವನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಚುರಪಡಿಸುತ್ತಿದ್ದಾರೆಂಬ ಆರೋಪ ಹೊರಿಸಿದ್ದಾರೆ. ಪಾಪಾ ಟಿ.ಟಿ ಹೆಗಡೆಯವರು ಮರಣಹೊಂದಿ ಎರಡು ತಿಂಗಳಾದರೂ ಸಹ ಅವರನ್ನು ಬಿಡುತ್ತಿಲ್ಲ ಮಠಬಾನಿಗಳು. ಮಠದ ಸಿಇಓ ಕೆ.ಜಿ.ಭಟ್ಟ ಕೊಟ್ಟ ಕಂಪ್ಲೇಂಟಿನ ಮೇಲೆ ಎಫ್‌ಐಆರ್‌ ಕೂಡ ಹಾಕಿರುವ ಪೆದ್ದು ಪೊಲೀಸರು ಅದನ್ನು ನ್ಯಾಯಾಲಯಕ್ಕೂ ಸಲ್ಲಿಸಿದ್ದಾರೆ. ಎನ್‌ಸಿಆರ್‌ 207/19 ನಂಬರಿನ ಎಫ್‌ಐಆರ್ ಅನ್ನು 25-09-2019 ರಂದು ಕೋರ್ಟಿಗೆ ಸಲ್ಲಿಸಿರುವ ಪೊಲೀಸ್ ಅಧಿಕಾರಿಗಳು ಮತ್ತು ಮಠಬಾನಿಗಳ ಹುಚ್ಚಾಟಕ್ಕೆ ಜನ ಬಿದ್ದು ಬಿದ್ದು ನಗುತ್ತಿದ್ದಾರೆ!!

ಈ ಗಿರಿನಗರ ಪೊಲೀಸರು ಹಿಂದೆ ರಾಘುನ ವಿರುದ್ಧ ಅತ್ಯಾಚಾರ ಸಂತ್ರಸ್ತೆಯು ದೂರು ಕೊಡಲು ಹೋದಾಗಲೂ ಸತಾಯಿಸಿದ್ದರು. ರಾಘುನ ರಗಳೆ-ರಾದ್ಧಾಂತದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚಿಸಿದ್ದವರಿಗೆ, ಅಲ್ಲಲ್ಲಿ ಮಾತಾಡಿದವರಿಗೆಲ್ಲಾ ಈ ಗಿರಿನಗರ ಪೊಲೀಸರು ಹಿಂಸೆ ನೀಡಿದ್ದ ದೊಡ್ಡ ಪಟ್ಟಿಯೇ ಇದೆ. ಸತ್ತವರನ್ನು ಬಿಡದೇ ಕಾಡಿ ತೆವಲು ತೀರಿಸಿಕೊಳ್ಳುವ ಸ್ಯಾಡಿಸ್ಟ್ ರಾಘುನ ಪೀಠಕ್ಕೆ ಬಲಿಯಾದ ಪುತ್ತೂರಿನ ಶ್ಯಾಮಶಾಸ್ತ್ರಿಯ ಕುಟುಂಬ ಪಟ್ಟ ಕಷ್ಟ ಹೇಳತೀರದು. ಈಗ ದಿವಂಗತ ಟಿ.ಟಿ.ಹೆಗಡೆ ಮೇಲೆ ಮಸಲತ್ತಿನ ಎಫ್‌ಐಆರ್‌ ಆಗಿದೆ. ಹವ್ಯಕರಿಗೇಕೆ ನೈತಿಕ ಸಾತ್ವಿಕ ಸಿಟ್ಟು ಬರುತ್ತಿಲ್ಲ? ಹವ್ಯಕ ಕುಲಘಾತುಕ ರಾಘುನನ್ನ ಆ ಸಮುದಾಯ ಇನ್ನೆಷ್ಟು ದಿನ ಸಹಿಸಿಕೊಳ್ಳುತ್ತದೋ ಎಂಬ ಪ್ರಶ್ನೆ ಅವರನ್ನು ವಿರೋಧಿಸುತ್ತಿರುವ ಹವ್ಯಕರದ್ದು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬಿಹಾರ ಚುನಾವಣೆಯಲ್ಲಿ ಅಕ್ರಮ ಆರೋಪಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಜನ್ ಸುರಾಜ್ ಪಕ್ಷ : ಹೊಸದಾಗಿ ಚುನಾವಣೆ ನಡೆಸುವಂತೆ ಮನವಿ

ಪ್ರಶಾಂತ್ ಕಿಶೋರ್ ನೇತೃತ್ವದ ಜನ್ ಸುರಾಜ್ ಪಕ್ಷವು 2025ರ ಬಿಹಾರ ವಿಧಾನಸಭಾ ಚುನಾವಣೆಯನ್ನು ಪ್ರಶ್ನಿಸಿ ಗುರುವಾರ (ಫೆ.5) ಸುಪ್ರೀಂ ಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿದೆ ಎಂದು ವರದಿಯಾಗಿದೆ. ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ವ್ಯಾಪಕ...

ಸಭಾಪತಿ ಹೊರಟ್ಟಿ ಉಮಾಶ್ರೀ ಜೊತೆ ಬಳಸಿದ ಭಾಷೆ ಶಿಸ್ತಿನ ಹೆಸರಿನ ಅಹಂಕಾರ: ನಿರ್ದೇಶಕಿ ಸುಮನಾ ಕಿತ್ತೂರು

ಸಭಾಪತಿ ಬಸವರಾಜ ಹೊರಟ್ಟಿ ಅವರು ವಿಧಾನಪರಿಷತ್‌ನಲ್ಲಿ ಉಮಾಶ್ರೀ ಅವರಿಗೆ ಬಳಸಿದ ಭಾಷೆ ಶಿಸ್ತಿನ ಹೆಸರಲ್ಲಿನ ಅಹಂಕಾರವಾಗಿದೆ ಎಂದು ನಿರ್ದೇಶಕಿ ಸುಮನಾ ಕಿತ್ತೂರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಗುರುವಾರ (ಫೆ.5) ಈ ಕುರಿತು ಫೇಸ್‌ಬುಕ್‌ನಲ್ಲಿ ಪೋಸ್ಟ್ ಹಾಕಿರುವ...

ವಾಷಿಂಗ್ಟನ್ ಪೋಸ್ಟ್‌ನಲ್ಲಿ ಉದ್ಯೋಗ ಕಡಿತ : ಕೆಲಸ ಕಳೆದುಕೊಂಡ ಶಶಿ ತರೂರ್ ಮಗ

ಪ್ರಮುಖ ಮಾಧ್ಯಮ ಸಂಸ್ಥೆ ವಾಷಿಂಗ್ಟನ್‌ ಪೋಸ್ಟ್‌ನಲ್ಲಿ ಭಾರೀ ಉದ್ಯೋಗ ಕಡಿತ ನಡೆದಿರುವ ಬಗ್ಗೆ ವರದಿಯಾಗಿದೆ. ಈ ಕುರಿತು ಕೆಲಸ ಕಳೆದುಕೊಂಡಿರುವ ಹಿರಿಯ ಕಾಂಗ್ರೆಸ್‌ ನಾಯಕ ಹಾಗೂ ಸಂಸದ ಶಶಿ ತರೂರ್ ಅವರ ಮಗ...

ಪ್ರತಿಪಕ್ಷಗಳಿಂದ ತೀವ್ರ ಪ್ರತಿಭಟನೆ : ಲೋಕಸಭೆ ಕಲಾಪ ಮುಂದೂಡಿಕೆ

ಪ್ರತಿಪಕ್ಷಗಳ ತೀವ್ರ ಪ್ರತಿಭಟನೆ ಹಿನ್ನೆಲೆ ಗುರುವಾರ (ಫೆ.5) ಲೋಕಸಭೆ ಕಲಾಪವನ್ನು ಸ್ಪೀಕರ್ ಓಂ ಬಿರ್ಲಾ ಮಧ್ಯಾಹ್ನದವರೆಗೆ ಮುಂದೂಡಿದರು. ಬೆಳಿಗ್ಗೆ 11 ಗಂಟೆಗೆ ಸದನ ಸಮಾವೇಶಗೊಳ್ಳುತ್ತಿದ್ದಂತೆಯೇ, ಪ್ರತಿಪಕ್ಷದ ಸದಸ್ಯರು ಘೋಷಣೆಗಳನ್ನು ಕೂಗುತ್ತಾ ಪ್ರತಿಭಟನೆ ಆರಂಭಿಸಿದರು. ವಿಶೇಷವಾಗಿ,...

ಗದಗ | ಕ್ಯಾಂಟರ್-ಕ್ರೂಸರ್ ನಡುವೆ ಅಪಘಾತ : ಮೂವರು ಸ್ಥಳದಲ್ಲೇ ಸಾವು, 10ಕ್ಕೂ ಹೆಚ್ಚು ಜನರಿಗೆ ಗಾಯ

ಗದಗ ಜಿಲ್ಲೆ ರೋಣ ತಾಲೂಕಿನ ಜಿಗಳೂರು ಕ್ರಾಸ್ ಬಳಿ ಕ್ರೂಸರ್ ಹಾಗೂ ಕ್ಯಾಂಟರ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಮೂವರು ಮಹಿಳೆಯರು ಸ್ಥಳದಲ್ಲೇ ಸಾವಿಗೀಡಾಗಿದ್ದು, 10ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಗಜೇಂದ್ರಗಡದ...

‘ಗಾಜಿಯಾಬಾದ್ ಮೂವರು ಸಹೋದರಿಯರ ಆತ್ಮಹತ್ಯೆ’: ಕೊರಿಯನ್ ಮೂಲದ ಆನ್ ಲೈನ್ ಆಟದಿಂದ ಸಾವನ್ನಪ್ಪಿರುವ ಶಂಕೆ 

ಗಾಜಿಯಾಬಾದ್‌ನಲ್ಲಿ ಬುಧವಾರ ತಡರಾತ್ರಿ 12, 14 ಮತ್ತು 16 ವರ್ಷ ವಯಸ್ಸಿನ ಮೂವರು ಸಹೋದರಿಯರು ತಮ್ಮ ವಸತಿ ಕಟ್ಟಡದ ಟೆರೇಸ್‌ನಿಂದ ಹಾರಿ ಸಾವನ್ನಪ್ಪಿದ್ದಾರೆ. ಈ ಕೃತ್ಯವು ಕೊರಿಯನ್ ಮೂಲದ ಆನ್‌ಲೈನ್ ಆಟಕ್ಕೆ ಸಂಬಂಧಿಸಿರಬಹುದು...

‘ಹೆಚ್ಚುತ್ತಿರುವ ನಿರುದ್ಯೋಗ ಬಿಕ್ಕಟ್ಟು’: ಮಧ್ಯಪ್ರವೇಶಿಸುವಂತೆ ಕೇಂದ್ರ ಸರ್ಕಾರಿ ಸಂಸ್ಥೆಗಳಿಗೆ ಮನವಿ ಪತ್ರ ಸಲ್ಲಿಸಿದ ಲಕ್ಷದ್ವೀಪ ವಿದ್ಯಾರ್ಥಿಗಳ  ಸಂಘ 

ಲಕ್ಷದ್ವೀಪ ವಿದ್ಯಾರ್ಥಿ ಸಂಘವು, ಕೇಂದ್ರಾಡಳಿತ ಪ್ರದೇಶದಲ್ಲಿ ಹೆಚ್ಚುತ್ತಿರುವ ನಿರುದ್ಯೋಗ ಬಿಕ್ಕಟ್ಟಿನ ಬಗ್ಗೆ ಮಧ್ಯಪ್ರವೇಶಿಸುವಂತೆ ರಾಷ್ಟ್ರೀಯ ಪರಿಶಿಷ್ಟ ಪಂಗಡಗಳ ಆಯೋಗ ಮತ್ತು ಇತರ ಕೇಂದ್ರ ಸರ್ಕಾರಿ ಸಂಸ್ಥೆಗಳನ್ನು ಒತ್ತಾಯಿಸಿದೆ. ಒಂದು ವರ್ಷಕ್ಕೂ ಹೆಚ್ಚು ಕಾಲ...

ಪ.ಬಂಗಾಳವನ್ನು ಗುರಿಯಾಗಿಸಲಾಗುತ್ತಿದೆ, ಅಸ್ಸಾಂನಲ್ಲಿ ಎಸ್‌ಐಆರ್‌ ಏಕಿಲ್ಲ? : ಸುಪ್ರೀಂ ಕೋರ್ಟ್‌ನಲ್ಲಿ ಮಮತಾ ಬ್ಯಾನರ್ಜಿ ವಾದ

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯಲ್ಲಿ ಪಶ್ಚಿಮ ಬಂಗಾಳವನ್ನು ಗುರಿಯಾಗಿಸಲಾಗಿದೆ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬುಧವಾರ (ಫೆ.4) ಆರೋಪಿಸಿದ್ದು, ಬಿಜೆಪಿ ಆಡಳಿತವಿರುವ ಅಸ್ಸಾಂನಲ್ಲಿ ಏಕೆ ಎಸ್‌ಐಆರ್ ನಡೆಸುತ್ತಿಲ್ಲ ಎಂಬುವುದಾಗಿ...

ತಮಿಳುನಾಡು| ದಲಿತ ಯುವಕನನ್ನು ಪ್ರೀತಿಸುತ್ತಿದ್ದ ಯುವತಿ ಅನುಮಾನಾಸ್ಪದ ಸಾವು; ಮರ್ಯಾದೆಗೇಡು ಹತ್ಯೆ ಶಂಕೆ

ತಮಿಳುನಾಡಿನ ತಿರುನಲ್ವೇಲಿ ಜಿಲ್ಲೆಯಲ್ಲಿ ಕಾಲೇಜು ವಿದ್ಯಾರ್ಥಿನಿ ಸಾವು ಮರ್ಯಾದಾ ಹತ್ಯೆಯ ಗಂಭೀರ ಆರೋಪಗಳನ್ನು ಹುಟ್ಟುಹಾಕಿದೆ. ಸಾವಿನ ಆರಂಭಿಕ ತನಿಖೆಯು ಆತ್ಮಹತ್ಯೆಯತ್ತ ಬೊಟ್ಟು ಮಾಡುತ್ತಿದ್ದು, ಮರಣೋತ್ತರ ಪರೀಕ್ಷೆಯ ವರದಿಯ ನಂತರವೇ ಸಾವಿಗೆ ಅಂತಿಮ ಕಾರಣ...

‘ರಾಜ್ಯವನ್ನು ನಿರ್ಲಕ್ಷಿಸಲಾಗಿದೆ’ : ಕೇಂದ್ರ ಬಜೆಟ್‌ ವಿರುದ್ಧ ನಿರ್ಣಯ ಅಂಗೀಕರಿಸಿದ ಕೇರಳ ವಿಧಾನಸಭೆ

ಕೇಂದ್ರ ಸರ್ಕಾರದ 2026-27ನೇ ಸಾಲಿನ ಬಜೆಟ್ ವಿರುದ್ದ ಕೇರಳ ವಿಧಾನಸಭೆ ನಿರ್ಣಯ ಅಂಗೀಕರಿಸಿದ್ದು, ರಾಜ್ಯವನ್ನು 'ನಿರ್ಲಕ್ಷಿಸಲಾಗಿದೆ' ಎಂದು ಆಕ್ರೋಶ ವ್ಯಕ್ತಪಡಿಸಿದೆ. ಬಜೆಟ್‌ನಲ್ಲಿ ಕೇರಳದ ದೀರ್ಘಕಾಲದ ಬೇಡಿಕೆಗಳನ್ನು ಪರಿಗಣಿಸದೆ ಇರುವುದು ಮತ್ತು ರಾಜ್ಯಕ್ಕೆ ನೀಡಬೇಕಾದ ನ್ಯಾಯಯುತ...