ಆಡಳಿತರೂಢ ಬಿಜೆಪಿ ಆದಿವಾಸಿಗಳಿಂದ ನೀರು, ಕಾಡು ಮತ್ತು ಭೂಮಿಯನ್ನು ಕಿತ್ತುಕೊಂಡು ಎರಡು ಕಾರ್ಪೊರೇಟ್ ಸಂಸ್ಥೆಗಳಿಗೆ ವರ್ಗಾಯಿಸಿ, ಆದಿವಾಸಿಗಳನ್ನು ನಿರಾಶ್ರಿತರನ್ನಾಗಿ ಮಾಡಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ನ್ಯಾಯ ಯಾತ್ರೆ ಕೊನೆಯ ಘಟ್ಟವನ್ನು ತಲುಪಿದೆ. ಭಾರತ್ ಜೋಡೋ ನ್ಯಾಯ ಯಾತ್ರೆ ಗುಜರಾತ್‌ನಿಂದ ಮಹಾರಾಷ್ಟ್ರ ಪ್ರವೇಶಿಸಿ ನಂದುರ್ಬಾರ್‌ನಲ್ಲಿ ಮುಂದುವರಿದಿದೆ. ಗಡಿಯಲ್ಲಿ ಗುಜರಾತ್ ಕಾಂಗ್ರೆಸ್ ಅಧ್ಯಕ್ಷ ಶಕ್ತಿ ಸಿಂಗ್ ಗೋಯಲ್ ಅವರು ಮಹಾರಾಷ್ಟ್ರ ಕಾಂಗ್ರೆಸ್ ಅಧ್ಯಕ್ಷ ನಾನಾ ಪಟೋಲೆಯವರಿಗೆ ಧ್ವಜ ಹಸ್ತಾಂತರ ಮಾಡಿದ್ದರು.
ನಂದುರ್ಬಾರ್ ಆದಿವಾಸಿ ನ್ಯಾಯ ಸಮ್ಮೇಳನದಲ್ಲಿ ಮಾತನಾಡಿದ ರಾಹುಲ್ ಗಾಂಧಿ, ಆದಿವಾಸಿಗಳು ಭಾರತದ ಮೊದಲ ಮಾಲಿಕರು, ದೇಶದಲ್ಲಿ ಇರುವ ಜಲ, ಜಮೀನು ಮತ್ತು ಧನಸಂಪತ್ತಿನ ನಿಜ ಮಾಲೀಕರು ಎಂದರೆ ಆದಿವಾಸಿಗಳು, ಅದಿವಾಸಿ ಶಬ್ದದೊಂದಿಗೆ ಜಲ, ಜಂಗಲ್ ಜಮೀನಿನ ಅಧಿಕಾರ ಜೋಡಿಕೊಂಡಿದೆ, ವನವಾಸಿ ಎಂಬುದರಲ್ಲಿ ಆ ಅಧಿಕಾರ ಇಲ್ಲ, ಆದ್ದರಿಂದ ನಿಮ್ಮನ್ನು ಬಿಜೆಪಿ ವನವಾಸಿ ಎಂದು ಕರೆಯುತ್ತಿದೆ. ಆಡಳಿತಾರೂಢ ಬಿಜೆಪಿ ಆದಿವಾಸಿಗಳಿಂದ ನೀರು, ಕಾಡು ಮತ್ತು ಭೂಮಿಯನ್ನು ಕಿತ್ತುಕೊಂಡು ಎರಡು ಕಾರ್ಪೊರೇಟ್ ಸಂಸ್ಥೆಗಳಿಗೆ ವರ್ಗಾಯಿಸಿ, ಆದಿವಾಸಿಗಳನ್ನು ನಿರಾಶ್ರಿತರನ್ನಾಗಿ ಮಾಡಿದೆ ಎಂದು ಹೇಳಿದ್ದಾರೆ.
ದೇಶದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದರೆ, ಅರಣ್ಯ ಹಕ್ಕು ಅಧಿನಿಯಮದ ಪರಿಣಾಮಕಾರಿ ಅನುಷ್ಠಾನಕ್ಕಾಗಿ ರಾಷ್ಟ್ರೀಯ ಮಿಶನ್ ಸ್ಥಾಪಿಸಲಾಗುವುದು, ಒಂದು ವಿಶೇಷ ಬಜೆಟ್ ಇರಿಸಲಾಗುವುದು, ವಿಶೇಷ ಕಾರ್ಯ ಯೋಜನೆ ತಯಾರಿಸಲಾಗುವುದು. ಮೋದಿ ಸರಕಾರದ ಮೂಲಕ ಅರಣ್ಯ ಸಂರಕ್ಷಣೆ ಮತ್ತು ಭೂಮಿ ಅಧಿಗ್ರಹಣ ಅಧಿನಿಯಮಗಳಲ್ಲಿ ಮಾಡಿರುವ ಎಲ್ಲ ತಿದ್ದುಪಡಿಗಳನ್ನು ಕಾಂಗ್ರೆಸ್ ವಾಪಸ್ ತೆಗೆದುಕೊಳ್ಳಲಿದೆ ಎಂದು ಹೇಳಿದ್ದಾರೆ.
ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಯಾವ ಬಸ್ತಿಗಳಲ್ಲಿ ಪರಿಶಿಷ್ಟ ಪಂಗಡಗಳ ಜನಸಂಖ್ಯೆ ಹೆಚ್ಚು ಇದೆಯೋ ಆ ಬಸ್ತಿಗಳನ್ನು ಪರಿಶಿಷ್ಟ ಪ್ರದೇಶ ಎಂದು ಘೋಷಿಸಲು ಬದ್ಧವಾಗಿದೆ. ಕಾಂಗ್ರೆಸ್ PESA ಪ್ರಕಾರ ರಾಜ್ಯಗಳಲ್ಲಿ ಕಾನೂನು ರೂಪಿಸಲು ಬದ್ಧವಾಗಿದೆ. ಆಗ ‘ಗ್ರಾಮ ಸರಕಾರ’ ಮತ್ತು ‘ಸ್ವಾಯತ್ತ ಜಿಲ್ಲಾ ಸರಕಾರ’ ಸ್ಥಾಪನೆ ಸಾಧ‍್ಯವಾಗುತ್ತದೆ. ಕಾಂಗ್ರೆಸ್ ಪಕ್ಷವು ಕನಿಷ್ಠ ಬೆಂಬಲ ಬೆಲೆ (MSP)ಯ ಅಧಿಕಾರದ ಕಾನೂನು ತರಲಿದೆ. ಇದರಲ್ಲಿ ಲಘು ಅರಣ್ಯ ಉತ್ಪತ್ತಿ (MFP)ಯನ್ನು ಸೇರ್ಪಡೆಗೊಳಿಸಲಾಗುವುದು ಎಂದು ಘೋಷಿಸಿದ್ದಾರೆ.
ಭಾರತ ಜೋಡೋ ನ್ಯಾಯ ಯಾತ್ರೆ ಜನವರಿ 14ರಂದು ಹಿಂಸಾಚಾರ ಪೀಡಿತ ಮಣಿಪುರದಿಂದ ಪ್ರಾರಂಭವಾಗಿದ್ದು, 6,700 ಕಿಲೋಮೀಟರ್ ಪಾದಯಾತ್ರೆ ಬಳಿಕ ಮಾ.15ರಂದು ಮಹಾರಾಷ್ಟ್ರದ ಥಾಣೆ ಜಿಲ್ಲೆಯನ್ನು ಪ್ರವೇಶಿಸಲಿದೆ.
#Congress leader Rahul Gandhi accused the ruling #BJP of taking away “jal, jungle, and jamin” (water, forests, and land) from tribals and transferring them to two corporate entities, making the Adivasis homeless, @iAbhinayD reports. https://t.co/bMgum1mSCS
— The Hindu (@the_hindu) March 13, 2024
ಇದನ್ನು ಓದಿ: ಎಸ್‌ಬಿಐ ಮುಖ್ಯಸ್ಥರ ರಾಜೀನಾಮೆಗೆ ನೌಕರರ ಒಕ್ಕೂಟ ಒತ್ತಾಯ


