Homeಮುಖಪುಟಚುನಾವಣಾ ಬಾಂಡ್: ಸುಪ್ರೀಂ ಕೋರ್ಟ್ ವಕೀಲರ ಸಂಘದ ಅಧ್ಯಕ್ಷರಿಂದ ರಾಷ್ಟ್ರಪತಿಗೆ ಪತ್ರ, ಪದಾಧಿಕಾರಿಗಳಿಂದ ಆಕ್ಷೇಪ

ಚುನಾವಣಾ ಬಾಂಡ್: ಸುಪ್ರೀಂ ಕೋರ್ಟ್ ವಕೀಲರ ಸಂಘದ ಅಧ್ಯಕ್ಷರಿಂದ ರಾಷ್ಟ್ರಪತಿಗೆ ಪತ್ರ, ಪದಾಧಿಕಾರಿಗಳಿಂದ ಆಕ್ಷೇಪ

ಅಧ್ಯಕ್ಷರ ಪತ್ರಕ್ಕೂ ನಮಗೂ ಸಂಬಂಧವಿಲ್ಲ ಎಂದ ಸದಸ್ಯರು

- Advertisement -
- Advertisement -

ಚುನಾವಣಾ ಬಾಂಡ್‌ಗೆ ಸಂಬಂಧಿಸಿದಂತೆ ನೀಡಿರುವ ತೀರ್ಪನ್ನು ಮರು ಪರಿಶೀಲಿಸುವಂತೆ ಸುಪ್ರೀಂ ಕೋರ್ಟ್‌ಗೆ ಸೂಚಿಸಬೇಕು ಎಂದು ಕೋರಿ ಸುಪ್ರೀಂ ಕೋರ್ಟ್ ವಕೀಲರ ಸಂಘದ (ಎಸ್‌ಸಿಬಿಎ) ಅಧ್ಯಕ್ಷ ಆದಿಶ್ ಸಿ. ಅಗರ್ವಾಲ್ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ನಿನ್ನೆ (ಮಾ.12) ಪತ್ರ ಬರೆದಿದ್ದರು.

ಇದಕ್ಕೆ ಸುಪ್ರೀಂ ಕೋರ್ಟ್ ವಕೀಲರ ಸಂಘದ ಇತರ ಪದಾಧಿಕಾರಿಗಳು ವಿರೋಧ ವ್ಯಕ್ತಪಡಿಸಿದ್ದಾರೆ. ಅಧ್ಯಕ್ಷ ಆದಿಶ್ ಅಗರ್ವಾಲ್ ಅವರು ರಾಷ್ಟ್ರಪತಿಗೆ ಬರೆದ ಪತ್ರಕ್ಕೂ ನಮಗೂ ಯಾವುದೇ ಸಂಬಧವಿಲ್ಲ ಎಂದು ಸಂಘದ ಗೌರವ ಕಾರ್ಯದರ್ಶಿ ರೋಹಿತ್ಪಾಂಡೆ ಪ್ರಕಟಣೆ ಹೊರಡಿಸಿದ್ದಾರೆ.

“ಚುನಾವಣಾ ಬಾಂಡ್‌ಗೆ ಸಂಬಂಧಿಸಿದಂತೆ ಮಾರ್ಚ್‌ 11ರಂದು ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿನ ಜಾರಿ ತಡೆ ಹಿಡಿಯುವಂತೆ ಆದಿಶ್ ಅಗರ್ವಾಲ್ ಅವರು ರಾಷ್ಟ್ರಪತಿಗೆ ಪತ್ರ ಬರೆದಿರುವುದು ಮಾಧ್ಯಮ ವರದಿಗಳಿಂದ ತಿಳಿದು ಬಂದಿದೆ. ಸುಪ್ರೀ ಕೋರ್ಟ್ ವಕೀಲರ ಸಂಘ ಅಥವಾ ಅಖಿಲ ಭಾರತ ವಕೀಲರ ಸಂಘದ ಲೆಟರ್ ಹೆಡ್‌ನಲ್ಲಿ 7 ಪುಟಗಳ ಪತ್ರ ಬರೆಯಲಾಗಿದೆ. ಪತ್ರದ ಕೊನೆಯಲ್ಲಿ ಆದಿಶ್ ಅಗರ್ವಾಲ್ ಅವರು ತಮ್ಮ ಅಧ್ಯಕ್ಷ ಹುದ್ದೆಯನ್ನು ಉಲ್ಲೇಖಿಸಿ ಸಹಿ ಹಾಕಿದ್ದಾರೆ” ಎಂದು ರೋಹಿತ್ ಪಾಂಡೆ ಹೇಳಿದ್ದಾರೆ.

“ಅಧ್ಯಕ್ಷ ಆದಿಶ್ ಅಗರ್ವಾಲ್ ಅವರಿಗೆ ವಕೀಲರ ಸಂಘದ ಹೆಸರಿನಲ್ಲಿ ಪತ್ರ ಬರೆಯಲು ಸಂಘದ ಸದಸ್ಯರು ಅನುಮತಿ ನೀಡಿಲ್ಲ. ಅವರು ಪತ್ರದಲ್ಲಿ ವ್ಯಕ್ತಪಡಿಸಿರುವ ಅಭಿಪ್ರಾಯವೂ ಸಂಘದ ಸದಸ್ಯರದ್ದಲ್ಲ. ಆದಿಶ್ ಅಗರ್ವಾಲ್ ಅವರ ಪತ್ರ ಗೌರವಾನ್ವಿತ ಸುಪ್ರೀಂ ಕೋರ್ಟ್ ಆದೇಶವನ್ನು ಮೀರಿದೆ ಮತ್ತು ದುರ್ಬಲಗೊಳಿಸುವ ಪ್ರಯತ್ನವಾಗಿದೆ. ಇದನ್ನು ವಕೀಲರ ಸಂಘ ಬಲವಾಗಿ ಖಂಡಿಸುತ್ತದೆ” ಎಂದು ತಿಳಿಸಿದ್ದಾರೆ.

ಸುಪ್ರೀಂ ಕೋರ್ಟ್ ವಕೀಲರ ಸಂಘದ ಲೆಟರ್ ಹೆಡ್‌ನಲ್ಲಿ ರೋಹಿತ್ ಪಾಂಡೆ ಪ್ರಕಟನೆ ಹೊರಡಿಸಿದ್ದಾರೆ. ಈ ಮೂಲಕ ಸಂಘದ ಅಧ್ಯಕ್ಷ ಸುಪ್ರೀಂ ಕೋರ್ಟ್ ಆದೇಶದ ವಿರುದ್ದ ರಾಷ್ಟ್ರಪತಿಗೆ ಪತ್ರ ಬರೆದಿರುವುದು ಅವರ ವೈಯುಕ್ತಿಕ ಎಂದು ಸ್ಪಷ್ಟಪಡಿಸಿದ್ದಾರೆ. ಅಲ್ಲದೆ, ಸಂಘದ ಇತರ ಸದಸ್ಯರ ಅನುಮತಿ ಇಲ್ಲದೆ ಪತ್ರ ಬರೆದಿರುವ ಆದಿಶ್ ಅಗರ್ವಾಲ್ ಅವರ ನಡೆಯನ್ನು ಖಂಡಿಸಿದ್ದಾರೆ.

“ದೇಣಿಗೆ ನೀಡಿದವರ ಹೆಸರು ಮತ್ತು ಅವರು ವಿವಿಧ ರಾಜಕೀಯ ಪಕ್ಷಗಳಿಗೆ ನೀಡಿದ ಮೊತ್ತವನ್ನು ಬಹಿರಂಗಪಡಿಸಿದರೆ, ಅವರಿಂದ ಕಡಿಮೆ ದೇಣಿಗೆ ಪಡೆದ ಪಕ್ಷಗಳು ಕಿರುಕುಳ ನೀಡುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ದೇಣಿಗೆ ಪಡೆಯುವಾಗ ಹೆಸರು ಬಹಿರಂಗಪಡಿಸುವುದಿಲ್ಲ ಎಂಬ ಮಾತು ಕೊಡಲಾಗಿತ್ತು. ಹೆಸರು ಬಹಿರಂಗಪಡಿಸಿದರೆ ವಚನ ಭಂಗ ಮಾಡಿದಂತೆ ಆಗುತ್ತದೆ” ಎಂದು ಆದಿಶ್ ಅಗರ್ವಾಲ್ ರಾಷ್ಟ್ರಪತಿಗೆ ಬರೆದ ಪತ್ರದಲ್ಲಿ ತಿಳಿಸಿದ್ದರು.

ಆದಿಶ್ ಅಗರ್ವಾಲ್ ಪತ್ರ ಬರೆದಿರುವುದು ಯಾಕೆ?

ರೋಹಿತ್ ಪಾಂಡೆಯ ಪ್ರಕಟನೆಯ ಕುರಿತು ಪ್ರತಿಕ್ರಿಯಿಸಿರುವ ಪತ್ರಕರ್ತ ರಾಜದೀಪ್ ಸರ್ದೇಸಾಯಿ,” ಸುಪ್ರೀಂ ಕೋರ್ಟ್ ವಕೀಲರ ಸಂಘದ ಅಧ್ಯಕ್ಷ ರಾಷ್ಟ್ರಪತಿಗಳಿಗೆ ಪತ್ರ ಬರೆದಿರುವುದು ಯಾಕೆ? ಅವರು ಪ್ರಚಾರಕ್ಕಾಗಿ ಬರೆದ್ರಾ? ಇಲ್ಲ, ಯಾರ ಸಲಹೆ ಮೇರೆಗೆ ಬರೆದ್ರಾ? ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಎಸ್‌ಬಿಐ ಮುಖ್ಯಸ್ಥರ ರಾಜೀನಾಮೆಗೆ ನೌಕರರ ಒಕ್ಕೂಟ ಒತ್ತಾಯ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. Mr. Adish agarwal , President of Supreme Court Bar association , must be arrested immediately for having written letter in ” All india bar association ” name and letterhead which is fake. He must have organised a bar association meet to raise consensus with regard to writing a letter to SC stopping the constitutional 5 justices bench judgement.
    I feel he is a broker to corporate company and bjp . If the details of ELECTROL BONDS are publicized many corporate CEO and ministers must go to jail.
    Simple Question to Mr.Adis agarwal is that why you have not legally interfered into he Court trial to express your point of view ?
    He can only file either review petition or Curative potion. But he have no right to demand for the stoppage of judgement.
    Judicial Review structure cannot be questioned by even the houses of parliament or any association. Let experts give clarification if I’m wrong. This my openion not judgemental.

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...