Homeಚಳವಳಿಕಿಸಾನ್ ಸಂಸತ್: ರೈತರಿಗೆ ಬೆಂಬಲ ನೀಡಿ ವಿಪಕ್ಷ ನಾಯಕರ ಜಂಟಿ ಪ್ರತಿಭಟನೆ

ಕಿಸಾನ್ ಸಂಸತ್: ರೈತರಿಗೆ ಬೆಂಬಲ ನೀಡಿ ವಿಪಕ್ಷ ನಾಯಕರ ಜಂಟಿ ಪ್ರತಿಭಟನೆ

- Advertisement -
- Advertisement -

ಒಕ್ಕೂಟ ಸರ್ಕಾರದ ವಿವಾದಿತ ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತರಿಗೆ ಬೆಂಬಲ ನೀಡಲು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಮತ್ತು 14 ವಿರೋಧ ಪಕ್ಷಗಳ ನಾಯಕರು ಶುಕ್ರವಾರ ದೆಹಲಿಯ ಜಂತರ್ ಮಂತರ್‌ನಲ್ಲಿ ಜಂಟಿ ಪ್ರತಿಭಟನೆ ನಡೆಸಿದ್ದಾರೆ.

ರಾಹುಲ್ ಗಾಂಧಿ ಮತ್ತು ಇತರ ನಾಯಕರು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದ್ದಾರೆ. ‘ರೈತರನ್ನು ಉಳಿಸಿ, ಭಾರತವನ್ನು ಉಳಿಸಿ’ ಎಂಬ ಭಿತ್ತಿ ಪತ್ರ ಹಿಡಿದು ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಜಂಟಿ ಪ್ರತಿಭಟನೆಯಲ್ಲಿ ಕಾಂಗ್ರೆಸ್ ಸೇರಿ ಡಿಎಂಕೆ, ತೃಣಮೂಲ ಕಾಂಗ್ರೆಸ್, ಎನ್‌ಸಿಪಿ, ಶಿವಸೇನೆ, ರಾಷ್ಟ್ರೀಯ ಜನತಾದಳ, ಸಮಾಜವಾದಿ ಪಕ್ಷ ಮತ್ತು ದೆಹಲಿಯ ಆಡಳಿತಾರೂಢ ಎಎಪಿ, ಎಡಪಕ್ಷಗಳ ಪ್ರತಿನಿಧಿಗಳು (ಸಿಪಿಎಂ ಮತ್ತು ಸಿಪಿಐ), ಮುಸ್ಲಿಂ ಲೀಗ್ ಮತ್ತು ನ್ಯಾಷನಲ್ ಕಾನ್ಫರೆನ್ಸ್ ಕೂಡ ಪ್ರತಿಭಟನೆಯಲ್ಲಿ ಭಾಗವಹಿಸಿವೆ.

 

ಇದನ್ನೂ ಓದಿ: ರೈತ ಹೋರಾಟ: ಯುವಕರನ್ನು ಸೆಳೆಯುತ್ತಿರುವ ಮಿನಿ ಕಿಸಾನ್ ಸಂಸತ್‌ಗಳು

ಈ ಹಿಂದೆ ಸಂಸತ್ತಿಗೆ ಟ್ಯ್ರಾಕ್ಟರ್‌ ಚಲಾಯಿಸಿಕೊಂಡು ರೈತರಿಗೆ ಬೆಂಬಲ ಸೂಚಿಸಿದ್ದ ರಾಹುಲ್ ಗಾಂಧಿ, “ನಾನು ರೈತರ ಸಂದೇಶವನ್ನು ಸಂಸತ್ತಿಗೆ ತಂದಿದ್ದೇನೆ. ಸರ್ಕಾರ ರೈತರ ಧ್ವನಿಯನ್ನು ನಿಗ್ರಹಿಸಲು ಪ್ರಯತ್ನಿಸುತ್ತಿದ್ದಾರೆ. ಕೃಷಿ ಕಾನೂನುಗಳ ಬಗ್ಗೆ ಸಂಸತ್ತಿನಲ್ಲಿ ಚರ್ಚೆ ನಡೆಯಲು ಬಿಡುತ್ತಿಲ್ಲ. ಅವರು ಈ ಕರಾಳ ಕಾನೂನುಗಳನ್ನು ರದ್ದುಗೊಳಿಸಬೇಕಾಗುತ್ತದೆ. ಈ ಕಾನೂನುಗಳು 2- 3 ದೊಡ್ಡ ಉದ್ಯಮಿಗಳ ಪರವಾಗಿರುತ್ತದೆ ಎಂದು ಇಡೀ ದೇಶಕ್ಕೆ ತಿಳಿದಿದೆ” ಎಂದು ರಾಹುಲ್ ಗಾಂಧಿ ಹೇಳಿದ್ದರು.

ಕಳೆದ ನವೆಂಬರ್‌ನಿಂದ ಒಕ್ಕೂಟ ಸರ್ಕಾರದ ವಿವಾದಿತ ಮೂರು ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತರು ಜುಲೈ 22 ರಿಂದ ರಾಷ್ಟ್ರ ರಾಜಧಾನಿಯ ಜಂತರ್ ಮಂತರ್‌ನಲ್ಲಿ ಕಿಸಾನ್ ಸಂಸತ್ ಪ್ರಾರಂಭಿಸಿದ್ದಾರೆ. ಮಾನ್ಸೂನ್ ಅಧಿವೇಶನ ನಡೆಯುವ ಪ್ರತಿದಿನ 200 ಜನರ ರೈತರ ಗುಂಪು ಆಂದೋಲನ ನಡೆಸುತ್ತಿದೆ.

ಜುಲೈ 22 ರಿಂದ ಆಗಸ್ಟ್ 9 ರವರೆಗೆ ಬೆಳಿಗ್ಗೆ 11 ರಿಂದ ಸಂಜೆ 5 ರವರೆಗೆ ಜಂತರ್ ಮಂತರ್ ನಲ್ಲಿ ಕಿಸಾನ್ ಸಂಸತ್ ನಡೆಸಲು ದೆಹಲಿ ಸರ್ಕಾರ ಮತ್ತು ಪೊಲೀಸರು ಒಪ್ಪಿಗೆ ನೀಡಿದೆ. ಇದಕ್ಕಾಗಿ ಕೋವಿಡ್ ಪ್ರೋಟೋಕಾಲ್ ಅನ್ನು ಕಟ್ಟುನಿಟ್ಟಾಗಿ ಅನುಸರಿಸಬೇಕು ಎಂಬ ಷರತ್ತು ಹಾಕಲಾಗಿದೆ. ಷರತ್ತುಗಳ ಪ್ರಕಾರ ಪ್ರತಿದಿನ 206 ಜನರಿಗೆ ಮಾತ್ರ ಪ್ರತಿಭಟನೆ ನಡೆಸಲು ಅವಕಾಶವಿದೆ.


ಇದನ್ನೂ ಓದಿ: ರೈತ ಹೋರಾಟ: ಮಳೆ ನೀರಿನಿಂದ ತುಂಬಿಕೊಂಡ ಸಿಂಘು ಪ್ರತಿಭಟನಾ ಸ್ಥಳ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...