“ಮಹಿಳೆಯರು ಏನನ್ನೂ ಧರಿಸದಿದ್ದರೂ ಚೆನ್ನಾಗಿ ಕಾಣುತ್ತಾರೆ” ಎಂದು ಪತಂಜಲಿ ಸಂಸ್ಥೆಯ ಬಾಬಾ ರಾಮದೇವ್ ಹೇಳಿರುವುದು ಆಕ್ರೋಶಕ್ಕೆ ಗುರಿಯಾಗಿದೆ.
“ಮಹಿಳೆಯರು ಸೀರೆಯಲ್ಲಿ, ಸಲ್ವಾರ್ ಸೂಟ್‌ಗಳಲ್ಲಿ ಮತ್ತು ಏನೂ ಧರಿಸದಿದ್ದರೂ ಚೆನ್ನಾಗಿ ಕಾಣುತ್ತಾರೆ” ಎಂದು ರಾಮದೇವ್ ಹೇಳಿದ್ದು, ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಲಿವಾಲ್ ಅವರು ಈ ಹೇಳಿಕೆಗೆ ಕ್ಷಮೆಯಾಚಿಸುವಂತೆ ಒತ್ತಾಯಿಸಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಥಾಣೆಯಲ್ಲಿ ನಡೆದ ಯೋಗ ಶಿಬಿರದಲ್ಲಿ ಮಾತನಾಡಿದ ರಾಮ್‌ದೇವ್ ಅವರು, “ಸೀರೆ, ಸಲ್ವಾರ್ ಸೂಟ್‌ಗಳಲ್ಲಿ ಮತ್ತು ಏನನ್ನೂ ಧರಿಸದಿದ್ದರೂ ಮಹಿಳೆಯರು ಚೆನ್ನಾಗಿ ಕಾಣುತ್ತಾರೆ” ಎಂದು ಹೇಳುವ ಮೂಲಕ ವಿವಾದ ಸೃಷ್ಟಿಸಿದ್ದಾರೆ.
ಈ ಶಿಬಿರದಲ್ಲಿ ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರ ಪತ್ನಿ ಅಮೃತಾ ಫಡ್ನಾವೀಸ್ ಉಪಸ್ಥಿತರಿದ್ದರು. ರಾಮ್‌ದೇವ್ ಅವರ ಈ ಹೇಳಿಕೆಯ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ.
महाराष्ट्र के उपमुख्यमंत्री जी की पत्नी के सामने स्वामी रामदेव द्वारा महिलाओं पर की गई टिप्पणी अमर्यादित और निंदनीय है। इस बयान से सभी महिलाएँ आहत हुई हैं, बाबा रामदेव जी को इस बयान पर देश से माफ़ी माँगनी चाहिए! pic.twitter.com/1jTvN1SnR7
— Swati Maliwal (@SwatiJaiHind) November 26, 2022
ದೆಹಲಿ ಮಹಿಳಾ ಆಯೋಗದ ಮುಖ್ಯಸ್ಥೆ ಸ್ವಾತಿ ಮಲಿವಾಲ್ ಅವರು ಈ ವಿಡಿಯೋವನ್ನು ಶೇರ್ ಮಾಡಿದ್ದು, ಬಾಬಾ ರಾಮದೇವ್ ಹೇಳಿಕೆಯನ್ನು ಖಂಡಿಸಿದ್ದಾರೆ. ಮಹಿಳೆಯರನ್ನು ಅವಮಾನಿಸುವ ಹೇಳಿಕೆಯ ಕಾರಣ ಅವರು ಕ್ಷಮೆಯಾಚಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
“ಮಹಾರಾಷ್ಟ್ರದ ಉಪಮುಖ್ಯಮಂತ್ರಿಯವರ ಪತ್ನಿಯ ಮುಂದೆ ಸ್ವಾಮಿ ರಾಮ್‌ದೇವ್ ಅವರು ಮಹಿಳೆಯರ ಬಗ್ಗೆ ನೀಡಿದ ಹೇಳಿಕೆಗಳು ಅಸಭ್ಯ ಮತ್ತು ಖಂಡನೀಯ. ಈ ಹೇಳಿಕೆಯಿಂದ ಎಲ್ಲಾ ಮಹಿಳೆಯರಿಗೆ ನೋವಾಗಿದೆ, ಬಾಬಾ ರಾಮದೇವ್ ಅವರು ದೇಶದ ಎದುರು ಕ್ಷಮೆಯಾಚಿಸಬೇಕು!” ಎಂದು ಅವರು ಟ್ವೀಟ್ ಮಾಡಿದ್ದಾರೆ.
ಈ ಕಾರ್ಯಕ್ರಮದಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ಪುತ್ರ ಸಂಸದ ಶ್ರೀಕಾಂತ್ ಶಿಂಧೆ ಕೂಡ ಉಪಸ್ಥಿತರಿದ್ದರು.
ಉದ್ಧವ್ ಬಾಳಾಸಾಹೇಬ್ ಠಾಕ್ರೆ ಬಣದ ಶಿವಸೇನೆ ನಾಯಕ ಸಂಜಯ್ ರಾವತ್ ಕೂಡ ಈ ವಿಷಯದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. “ಈ ರೀತಿಯ ಹೇಳಿಕೆ ನೀಡಿದಾಗ ಅಮೃತಾ ಫಡ್ನವಿಸ್ ಏಕೆ ಪ್ರತಿಭಟಿಸಲಿಲ್ಲ” ಎಂದು ಪ್ರಶ್ನಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, “ರಾಜ್ಯಪಾಲರು ಶಿವಾಜಿ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದಾಗ, ಕರ್ನಾಟಕದ ಮುಖ್ಯಮಂತ್ರಿಗಳು ಮಹಾರಾಷ್ಟ್ರದ ಗ್ರಾಮಗಳನ್ನು ಕರ್ನಾಟಕಕ್ಕೆ ಸೇರಿಸಿಕೊಳ್ಳುವುದಾಗಿ ಬೆದರಿಕೆ ಹಾಕಿದಾಗ ಮತ್ತು ಈಗ ಬಿಜೆಪಿ ಪ್ರಚಾರಕ ರಾಮದೇವ್ ಮಹಿಳೆಯರನ್ನು ಅವಮಾನಿಸಿದಾಗ ಸರ್ಕಾರ ಮೌನವಾಗಿದೆ. ಸರ್ಕಾರ ದೆಹಲಿಗೆ ಅಡಮಾನವಿಟ್ಟುಕೊಂಡಿದೆಯೇ?” ಎಂದು ಸಂಜಯ್ ರಾವುತ್ ಕೇಳಿದ್ದಾರೆ.
ಇದನ್ನೂ ಓದಿರಿ: ಮತದಾರರ ಮಾಹಿತಿ ಕದಿಯಲು 500 ಸಿಬ್ಬಂದಿ ನೇಮಿಸಿದ್ದ ಚಿಲುಮೆ: ತನಿಖೆಯಲ್ಲಿ ಬಯಲು
“ಸಮಾರಂಭಕ್ಕೆ ಅನೇಕ ಮಹಿಳೆಯರು ಸೀರೆಗಳನ್ನು ತಂದರು. ಆದರೆ ಒಂದರ ಹಿಂದೆ ಒಂದು ಕಾರ್ಯಕ್ರಮಗಳು ಇದ್ದ ಕಾರಣದಿಂದಾಗಿ ಅವುಗಳನ್ನು ಧರಿಸಲು ಸಮಯ ಸಿಗಲಿಲ್ಲ” ಎನ್ನುತ್ತಾ ರಾಮದೇವ್, “ನೀವು ಸೀರೆಯಲ್ಲಿ ಚೆನ್ನಾಗಿ ಕಾಣುತ್ತೀರಿ, ಅಮೃತಾಜಿಯವರಂತೆ ಸಲ್ವಾರ್ ಸೂಟ್‌ಗಳಲ್ಲಿಯೂ ಚೆನ್ನಾಗಿ ಕಾಣುತ್ತೀರಿ ಮತ್ತು ನನ್ನಂತೆ ನೀವು ಏನೂ ಧರಿಸದಿದ್ದರೆ ಚೆನ್ನಾಗಿ ಕಾಣುತ್ತೀರಿ…” ಎಂದಿದ್ದರು.
ಈ ಹೇಳಿಕೆ ಕುರಿತು ಆಘಾತ ವ್ಯಕ್ತಪಡಿಸಿರುವ ವಿದರ್ಭದ ರೈತ ನಾಯಕಿ ಅಪರ್ಣಾ ಮಾಲಿಕರ್, “ರಾಮ್‌ದೇವ್ ಅವರ ‘ಕೊಳಕು ಮನಸ್ಸಿನಲ್ಲಿ’ ಏನು ನಡೆಯುತ್ತಿವೆ ಎಂಬುದನ್ನು ಇದು ಬಹಿರಂಗಪಡಿಸಿದೆ. ರಾಮದೇವ್ ಮುಂದೆ ಹೋಗುವ ಎಲ್ಲ ಮಹಿಳೆಯರು ಹೆಚ್ಚು ಜಾಗರೂಕರಾಗಿರಿ” ಎಂದು ಎಚ್ಚರಿಸಿದ್ದಾರೆ.
ಎಂಎಲ್‌ಸಿ ಡಾ. ಮನೀಶಾ ಕಯಾಂಡೆ ಪ್ರತಿಕ್ರಿಯಿಸಿ, “ಅಪರ್ಣಾ ಅವರು ಆತನಿಗೆ ಒದ್ದು ಕಾರ್ಯಕ್ರಮದಿಂದ ಹೊರನಡೆಯಬೇಕಿತ್ತು. ದುರಾದೃಷ್ಟವಶಾತ್ ಆಕೆ ನಗುತ್ತಿದ್ದರು, ರಾಮ್‌ದೇವ್‌ನ ಹೇಳಿಕೆಗಳನ್ನು ಆನಂದಿಸುತ್ತಿದ್ದರು. ರಾಮದೇವ್ ಹೆಣ್ತನಕ್ಕೆ ಗೌರವವನ್ನು ನೀಡುತ್ತಿದ್ದಾರೆಂಬಂತೆ ಸುಮ್ಮನಿದ್ದರು” ಎಂದು ಬೇಸರ ವ್ಯಕ್ತಪಡಿಸಿರುವುದಾಗಿ ವರದಿಯಾಗಿದೆ.


