Homeಅಂತರಾಷ್ಟ್ರೀಯಸಂಸತ್ತಿನಲ್ಲಿ ಮಹಿಳೆ ಮೇಲೆ ಅತ್ಯಾಚಾರ: ಕ್ಷಮೆ ಕೋರಿದ ಆಸ್ಟ್ರೇಲಿಯ ಪ್ರಧಾನಿ

ಸಂಸತ್ತಿನಲ್ಲಿ ಮಹಿಳೆ ಮೇಲೆ ಅತ್ಯಾಚಾರ: ಕ್ಷಮೆ ಕೋರಿದ ಆಸ್ಟ್ರೇಲಿಯ ಪ್ರಧಾನಿ

- Advertisement -

ಸಂಸತ್ತಿನ ಉದ್ಯೋಗಿಯೊಬ್ಬರು ತನ್ನ ಮೇಲೆ ಆಸ್ಟ್ರೇಲಿಯ ಸಂಸತ್ತಿನಲ್ಲೇ ಅತ್ಯಾಚಾರ ನಡೆಸಿದ್ದಾರೆ ಎಂದು ಮಹಿಳೆಯೊಬ್ಬರು ಆರೋಪಿಸಿದ್ದು, ಘಟನೆಯ ಬಗ್ಗೆ ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್ ಮಂಗಳವಾರ ಕ್ಷಮೆಯಾಚಿಸಿದ್ದಾರೆ. ಜೊತೆಗೆ ಸರ್ಕಾರಿ ಕೆಲಸದ ಸ್ಥಳ ಸಂಸ್ಕೃತಿಯ ಬಗ್ಗೆ ಸಮಗ್ರ ತನಿಖೆ ನಡೆಸುವುದಾಗಿ ಭರವಸೆ ನೀಡಿದ್ದಾರೆ.

2019 ರ ಮಾರ್ಚ್‌ನಲ್ಲಿ ರಕ್ಷಣಾ ಸಚಿವ ಲಿಂಡಾ ರೆನಾಲ್ಡ್ಸ್ ಅವರ ಕಚೇರಿಯಲ್ಲಿ ಮಾರಿಸನ್‌ರ ಆಡಳಿತಾರೂಢ ಲಿಬರಲ್ ಪಕ್ಷದಲ್ಲಿ ಕೆಲಸ ಮಾಡುತ್ತಿದ್ದ ಯಾರೋ ಒಬ್ಬರು ತನ್ನನ್ನು ಅತ್ಯಾಚಾರ ಮಾಡಿದ್ದಾರೆ ಎಂದು ಮಹಿಳೆಯು ಆರೋಪಿಸಿದ್ದಾರೆ.

ಇದನ್ನೂ ಓದಿ: ಅಫ್ಘಾನಿಸ್ಥಾನದಲ್ಲಿ ನಿರ್ದೋಷಿ ನಾಗರಿಕರು, ಪತ್ರಕರ್ತರನ್ನು ಗುರಿಯಾಗಿಸಲಾಗುತ್ತಿದೆ: ಪ್ರಧಾನಿ ಕಳವಳ

ಪ್ರಧಾನಿ ಸ್ಕಾಟ್ ಮಾರಿಸನ್, “ಅದು ಸಂಭವಿಸಬಾರದಿತ್ತು, ಇದಕ್ಕಾಗಿ ನಾನು ಕ್ಷಮೆಯಾಚಿಸುತ್ತೇನೆ. ಸಂಸತ್ತಿನಲ್ಲಿ ಕೆಲಸ ಮಾಡುವ ಯಾವುದೇ ಯುವತಿಯು ಸುರಕ್ಷಿತವಾಗಿದ್ದಾರೆಯೆ ಎಂದು ಖಚಿತಪಡಿಸಿಕೊಳ್ಳಲು ನಾನು ಬಯಸುತ್ತೇನೆ. ಕೆಲಸದ ಸ್ಥಳಗಳಲ್ಲಿ ಇರುವ ದೂರುಗಳನ್ನು ಪರಿಶೀಲಿಸಲು ಕ್ಯಾಬಿನೆಟ್ ಅಧಿಕಾರಿ ಸ್ಟೆಫನಿ ಫೋಸ್ಟರ್ ಅವರನ್ನು ನೇಮಕ ಮಾಡಿದ್ದು, ಜೊತೆಗೆ ಕೆಲಸದ ಸ್ಥಳ ಸಂಸ್ಕೃತಿಯ ಬಗ್ಗೆ ಸಮಗ್ರ ತನಿಖೆ ನಡೆಸುತ್ತೇವೆ” ಎಂದು ಮಾಧ್ಯಮದೊಂದಿಗೆ ಮಾತನಾಡುತ್ತಾ ಹೇಳಿದ್ದಾರೆ.

ಆ ವರ್ಷದ ಏಪ್ರಿಲ್ ಆರಂಭದಲ್ಲಿ ಘಟನೆಯ ಬಗ್ಗೆ ತಾನು ಪೊಲೀಸರೊಂದಿಗೆ ಮಾತನಾಡಿದ್ದಾಗಿ ಮಹಿಳೆಯು ಸ್ಥಳೀಯ ಮಾಧ್ಯಮಗಳಿಗೆ ಹೇಳಿದ್ದಾರೆ. ಆದರೆ ತನ್ನ ವೃತ್ತಿಜೀವನದ ಮುಂದಿನ ಭವಿಷ್ಯದ ಬಗ್ಗೆ ಆತಂಕಗೊಂಡು ಔಪಚಾರಿಕ ದೂರು ನೀಡಿರಲಿಲ್ಲ ಎಂದು ಹೇಳಿದ್ದಾರೆ. ದೇಶದ ರಾಜಧಾನಿಯಲ್ಲಿನ ಪೊಲೀಸರು 2019 ಏಪ್ರಿಲ್ ತಿಂಗಳಲ್ಲಿ ಮಹಿಳೆಯೊಂದಿಗೆ ಮಾತನಾಡಿದ್ದಾಗಿ ದೃಡಪಡಿಸಿದ್ದು, ಆದರೆ ಮಹಿಳೆಯು ಔಪಚಾರಿಕ ದೂರು ನೀಡಿಲ್ಲ ಎಂದು ಹೇಳಿದ್ದಾರೆ.

ತನ್ನ ಮೇಲೆ ಆಗಿರುವ ದಾಳಿಯ ಬಗ್ಗೆ ರೆನಾಲ್ಡ್ಸ್ ಕಚೇರಿಯ ಹಿರಿಯ ಸಿಬ್ಬಂದಿಗೆ ತಿಳಿಸಿದ್ದೆ, ಆದರೆ ತನ್ನ ಮೇಲೆ ಅತ್ಯಾಚಾರ ನಡೆಸಲಾಗಿರುವ ಕಚೇರಿಯಲ್ಲಿ ನಡೆಯುವ ಸಭೆಯಲ್ಲಿ ಭಾಗವಹಿಸಲು ಕೇಳಿಕೊಳ್ಳಲಾಗಿತ್ತು ಎಂದು ಮಹಿಳೆಯು ಹೇಳಿದ್ದಾರೆ.

ತನ್ನ ಕಚೇರಿಯಲ್ಲಿ ನಡೆದಿದೆ ಎನ್ನಲಾಗಿರುವ ಘಟನೆಯ ಬಗ್ಗೆ ಕಳೆದ ವರ್ಷ ತಿಳಿಸಲಾಗಿತ್ತು ಎಂದು ರೆನಾಲ್ಡ್ಸ್ ಸೋಮವಾರ ದೃಡಪಡಿಸಿದ್ದಾರೆ, ಆದರೆ ಪೊಲೀಸ್ ದೂರು ನೀಡದಂತೆ ಮಹಿಳೆ ಮೇಲೆ ತಾನು ಒತ್ತಡ ಹೇರಿಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಅಭಿವ್ಯಕ್ತಿ ಸ್ವಾತಂತ್ಯ್ರ, ಪ್ರಜಾಪ್ರಭುತ್ವ ಮೌಲ್ಯಕ್ಕೆ ಸದಾ ಬದ್ಧ: ಟ್ವಿಟರ್‌ ಬೆಂಬಲಕ್ಕೆ ಅಮೆರಿಕ

ನಾನು ಗೌರಿ ಡೆಸ್ಕ್
+ posts

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಭಾರತದ ಮಾತೃ ಭಾಷೆ ಸಂಸ್ಕೃತವೇ? ದ್ರಾವಿಡವೇ?

ಯಾವುದೇ ಭಾಷೆಯ ಮೂಲ ಉದ್ದೇಶ ಸಂವಹನ. ಸಂವಹನದ ಉದ್ದೇಶದಿಂದ ಬಳಸಲಾಗುವ ಯಾವುದೇ ಭಾಷೆಗಳಲ್ಲಿ ಮೇಲು ಕೀಳು ಎಂಬ ಭಾವವೇ ನಿಕೃಷ್ಟವಾದದ್ದು. ಜಗತ್ತಿನ ಮೂಲೆ ಮೂಲೆಗಳಲ್ಲಿ ಮನುಷ್ಯರು ಬಳಸುವ ಎಲ್ಲಾ ಭಾಷೆಗಳಿಗೂ ತನ್ನದೇ ಆದ...
Wordpress Social Share Plugin powered by Ultimatelysocial