Homeಮುಖಪುಟತೆರೆಯ ಮೇಲೆ ರಾಯರ ಪ್ರಭಾವಳಿ; ಶಶಿಧರ ಚಿತ್ರದುರ್ಗ ಬರಹ

ತೆರೆಯ ಮೇಲೆ ರಾಯರ ಪ್ರಭಾವಳಿ; ಶಶಿಧರ ಚಿತ್ರದುರ್ಗ ಬರಹ

- Advertisement -
- Advertisement -

ಕನ್ನಡ, ತಮಿಳು, ತೆಲುಗು ಭಾಷೆಗಳಲ್ಲಿ ರಾಯರ ಜೀವನ-ಪವಾಡಗಳ ಕುರಿತ ಸಿನಿಮಾಗಳು ತಯಾರಾಗಿವೆ. ಖ್ಯಾತನಾಮ ಸಿನಿಮಾ ತಾರೆಯರು ಹಾಗೂ ತಂತ್ರಜ್ಞರು ಈ ಮೂಲಕ ರಾಯರಿಗೆ ಭಕ್ತಿ ಅರ್ಪಿಸಿದ್ದಾರೆ. ಮಂತ್ರಾಲಯದಲ್ಲಿ ಆರಾಧನಾ ಮಹೋತ್ಸವ ನಡೆಯುತ್ತಿದ್ದು, ಈ ಸಂದರ್ಭದಲ್ಲಿ ತೆರೆಯ ಮೇಲೆ ರಾಯರ ಕತೆ ಹಾಗೂ ಪಾತ್ರಗಳ ಕುರಿತ ಲೇಖನವಿದು.

ಕನ್ನಡ ಮತ್ತು ತಮಿಳು ಚಿತ್ರರಂಗಗಳಲ್ಲಿ ರಾಯರ ಭಕ್ತರು ಅತಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ತೆರೆಯ ಮೇಲೆ ರಾಯರ ಜೀವನಗಾಥೆ, ಪವಾಡಗಳು ಅನಾವರಣಗೊಂಡಿವೆ. ಸಾಮಾಜಿಕ, ಕೌಟುಂಬಿಕ ಚಿತ್ರಗಳಲ್ಲೂ ರಾಯರ ಭಕ್ತಿಗೀತೆಗಳು ಜನಪ್ರಿಯವಾಗಿವೆ. ಜಾತಿ, ಮತ, ಧರ್ಮಗಳನ್ನು ಮೀರಿದ ರಾಯರ ಪ್ರಭಾವಳಿಯೇ ಇದಕ್ಕೆ ಕಾರಣವಾಗಿರಬಹುದು.

ಕನ್ನಡ ಚಿತ್ರರಂಗದ ಚಟುವಟಿಕೆಗಳು ಚೆನ್ನೈನಲ್ಲಿ ನಡೆಯುತ್ತಿದ್ದ ದಿನಗಳಲ್ಲೇ ರಾಯರ ಆರಾಧನೆ ಆರಂಭವಾಗಿತ್ತು. ಹಿರಿಯ ತಂತ್ರಜ್ಞರಾದ ಬಿ. ಆರ್. ಪಂತುಲು, ಸಿಂಗ್ ಠಾಕೂರ್ ಚಿತ್ರ ನಿರ್ಮಾಣಕ್ಕೆ ಮುನ್ನ ಮಂತ್ರಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸುತ್ತಿದ್ದರು. ಬಿಡುಗಡೆ ಮಾಡುವ ಮುನ್ನ ಇವರು ತಮ್ಮ ಚಿತ್ರದ ಪ್ರಥಮ ಪ್ರತಿಯನ್ನು ಬೃಂದಾವನದಲ್ಲಿಟ್ಟು ಪೂಜಿಸುತ್ತಿದ್ದರಂತೆ.

ಕನ್ನಡದ ಮೇರು ನಟ ಡಾ.ರಾಜ್‌ಕುಮಾರ್, ತಮಿಳು ಸ್ಟಾರ್ ರಜನೀಕಾಂತ್, ನಿರ್ದೇಶಕರಾದ ಹುಣಸೂರು ಕೃಷ್ಣಮೂರ್ತಿ, ದ್ವಾರಕೀಶ್, ನಟ ಶಿವರಾಂ ಹಾಗೂ ಇವರ ಸಮಕಾಲೀನರೇನಕರು ಶುಭ ಕಾರ್ಯಕ್ಕೆ ಮುನ್ನ ರಾಯರ ಅನುಗ್ರಹ ಪಡೆಯುವುದು ಕಡ್ಡಾಯವಾಗಿತ್ತು.

ರಾಯರ ಪಾತ್ರದಲ್ಲಿ ರಾಜ್

ಚಿತ್ರ ನಿರ್ಮಾಪಕರಲ್ಲಿದ್ದ ರಾಯರೆಡೆಗಿನ ಭಕ್ತಿ – ಭಾವ ತೆರೆ ಮೇಲೆ ಮೂಡಲು ಹೆಚ್ಚು ಸಮಯ ಬೇಕಾಗಲಿಲ್ಲ. ಸಿಂಗ್ ಠಾಕೂರ್ `ಮಂತ್ರಾಲಯ ಮಹಾತ್ಮೆ’ (1966) ನಿರ್ದೇಶಿಸಿದರು. ಡಾ. ರಾಜ್ ರಾಯರ ಪಾತ್ರಕ್ಕೆ ಜೀವ ತುಂಬಿದ್ದರು. ಚಿತ್ರದಲ್ಲಿ ರಾಯರೇ ರಚಿಸಿದ್ದ `ಇಂದು ಎನಗೆ ಗೋವಿಂದ…’ ಗೀತೆ ಬಳಕೆಯಾಗಿತ್ತು. 1980ರಲ್ಲಿ ಹುಣಸೂರು ಕೃಷ್ಣಮೂರ್ತಿ `ಗುರು ಸಾರ್ವಭೌಮ ಶ್ರೀ ರಾಘವೇಂದ್ರ ಕರುಣೆ’ ನಿರ್ದೇಶಿಸಿದ್ದರು.

ಸರಿಸುಮಾರು ಇದೇ ಸಮಯದಲ್ಲಿ `ರಾಘವೇಂದ್ರ ವೈಭವ’ ಚಿತ್ರವೂ ತಯಾರಾಗಿತ್ತು. ಈ ಸಿನಿಮಾದಲ್ಲಿ ನಟ ಶ್ರೀನಾಥ್ ರಾಯರ ಪಾತ್ರದಲ್ಲಿ ನಟಿಸಿದ್ದರು. ಮುಂದೆ 2011ರಲ್ಲಿ `ಶ್ರೀ ರಾಘವೇಂದ್ರ ಸ್ವಾಮಿ’ ಕನ್ನಡ ಚಿತ್ರ ತೆರೆಕಂಡಿತ್ತು. ಕೃಷ್ಣಚಂದ್ರ ನಿರ್ದೇಶನದಲ್ಲಿ ತಯಾರಾದ ಚಿತ್ರದ ಶಿರ್ಷಿಕೆ ಪಾತ್ರವನ್ನು ರವೀಂದ್ರ ಗೋಪಾಲ ನಿರ್ವಹಿಸಿದ್ದರು.

ರಜನೀ ಸಿನಿಮಾ

ತಮಿಳು ಚಿತ್ರರಂಗದ ಜನಪ್ರಿಯ ನಟ ರಜನೀಕಾಂತ್ ರಾಯರ ಪರಮ ಭಕ್ತ. 1985 ರಲ್ಲಿ ಅವರು ಶಿರ್ಷಿಕೆ ಪಾತ್ರದಲ್ಲಿ ನಟಿಸಿದ್ದ `ಶ್ರೀ ರಾಘವೇಂದ್ರ’ ತಮಿಳು ಚಿತ್ರ ಮೂಡಿಬಂದಿತ್ತು. ರಜನಿಗೆ ಇದು ವೃತ್ತಿ ಜೀವನದ 100 ನೇ ಸಿನಿಮಾ. ಎಸ್. ಪಿ. ಮುತ್ತುರಾಮನ್ ನಿರ್ದೇಶನದಲ್ಲಿ ತಯಾರಾದ ಚಿತ್ರ `ಶ್ರೀ ಮಂತ್ರಾಲಯ ರಾಘವೇಂದ್ರ ಸ್ವಾಮಿ ಮಹಾತ್ಯಂ’ ಶಿರ್ಷಿಕೆಯಡಿ ತೆಲುಗಿಗೂ ಡಬ್ ಆಗಿತ್ತು. ತಾವು ರಾಯರ ಪಾತ್ರದಲ್ಲಿ ನಟಿಸಲು ಡಾ. ರಾಜ್ ಪ್ರೇರಣೆ ಎಂದು ಹಿಂದೊಮ್ಮೆ ರಜನಿ ಹೇಳಿಕೊಂಡಿದ್ದರು.

ಬಿಡೆನು ನಿನ್ನ ಪಾದ…

ಭಕ್ತಿಪ್ರಧಾನ ಚಿತ್ರಗಳ ಹೊರತಾಗಿ ಇತರೆ ಪ್ರಯೋಗಗಳಲ್ಲೂ ರಾಯರ ಗೀತೆಗಳನ್ನು ನಾವು ನೋಡಬಹುದು. ಡಾ.ರಾಜ್‌ರ `ಪೂಜಿಸಲೆಂದೇ ಹೂಗಳ ತಂದೆ…’ (ಎರಡು ಕನಸು), `ಹಾಲಲ್ಲಾದರು ಹಾಕು…’ (ದೇವತಾ ಮನುಷ್ಯ) ಹಾಡುಗಳು ಜನಪ್ರಿಯವಾಗಿವೆ. ಸಂಕಷ್ಟದಲ್ಲಿ ರಾಯರನ್ನು ನೆನೆಯುವ `ಬಿಡೆನು ನಿನ್ನ ಪಾದ…’ (ನಾ ನಿನ್ನ ಬಿಡಲಾರೆ), `ದಾರಿ ಕಾಣದಾಗಿದೆ ರಾಘವೇಂದ್ರನೆ…’ (ದೀಪ) ಮತ್ತೆರಡು ಶ್ರೇಷ್ಠ ಉದಾಹರಣೆ. `ಭಾಗ್ಯವಂತ’ ಚಿತ್ರದ `ಗುರುವಾರ ಬಂತಮ್ಮ…’ ಸೇರಿದಂತೆ ಹಲವು ರಾಯರ ಭಕ್ತಿಗೀತೆಗಳು ರಚಿಸಲ್ಪಿಟ್ಟಿವೆ.

ಕಿರುತೆರೆಯಲ್ಲಿ…

ಕನ್ನಡ ಕಿರುತೆರೆಯಲ್ಲಿ ಮೂಡಿಬಂದ `ಶ್ರೀ ಗುರುರಾಘವೇಂದ್ರ ವೈಭವ’ ಸೀರಿಯಲ್ ಜನಮನ್ನಣೆಗೆ ಪಾತ್ರವಾಗಿತ್ತು. ಯುವನಟ ಪರೀಕ್ಷಿತ್ ಶಿರ್ಷಿಕೆ ಪಾತ್ರದಲ್ಲಿ ಅಭಿನಯಿಸಿದ್ದರು. ಸುವರ್ಣ ವಾಹಿನಿಯಲ್ಲಿ ನಿರ್ದೇಶಕ ಬ.ಲ.ಸುರೇಶ್ 565 ಸಂಚಿಕೆಗಳಲ್ಲಿ ಸಮಗ್ರವಾಗಿ ರಾಯರ ಕಥೆ, ಇತಿಹಾಸ ಕಟ್ಟಿಕೊಟ್ಟಿದ್ದರು. `ಕಲಿಯುಗದ ಕಲ್ಪತರು’, `ರಾಘವೇಂದ್ರ ವಿಜಯ’, `ಸಮಕಾಲೀನ ಇತಿಹಾಸ’ ಗ್ರಂಥಗಳನ್ನು ಆಧರಿಸಿ ಧಾರಾವಾಹಿಗೆ ಕಥೆ ಹೆಣೆಯಲಾಗಿತ್ತು.

ಈ ಟೀವಿ ವಾಹಿನಿಯಲ್ಲಿ `ಶ್ರೀ ರಾಘವೇಂದ್ರ ಮಹಿಮೆ’ ಶಿರ್ಷಿಕೆಯಡಿ ರಾಯರ ಕಥೆ ಮೂಡಿಬಂದಿತ್ತು. ಚಿತ್ರನಟ, ನೃತ್ಯ ತಾರೆ ಶ್ರೀಧರ್ ರಾಯರ ಪಾತ್ರದಲ್ಲಿ ಮನೋಜ್ಞ ಅಭಿನಯ ನೀಡಿದ್ದರು. ತೆಲುಗು ಮತ್ತು ತಮಿಳು ಕಿರುತೆರೆಯಲ್ಲಿಯೂ ರಾಯರ ಕಥೆಗಳು ಮೂಡಿಬಂದಿವೆ.

ಬರಹ: ಶಶಿಧರ ಚಿತ್ರದುರ್ಗ

ಫೋಟೋಗಳು: ಡಿ.ಸಿ.ನಾಗೇಶ್


ಓದಿ: ಬಾಲಿವುಡ್ ಗ್ಯಾಂಗ್! ಸ್ವಜನಪಕ್ಷಪಾತದ ಸುಳಿಯಲ್ಲಿ ಹಿಂದಿ ಚಿತ್ರರಂಗ


 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ದಾಳಿ ನಡೆಸಿದರೆ ನಮ್ಮ ನೇರ ಗುರಿಯಾಗುತ್ತೀರಿ : ಅಮೆರಿಕ, ಇಸ್ರೇಲ್‌ಗೆ ಎಚ್ಚರಿಕೆ ನೀಡಿದ ಇರಾನ್

ಇರಾನ್‌ನಲ್ಲಿ ನಡೆಯುತ್ತಿರುವ ಆಡಳಿತ ವಿರೋಧಿ ದಂಗೆಯಲ್ಲಿ ಸಾವುಗಳು ಹೆಚ್ಚಾದರೆ ಅಮೆರಿಕ ಮಧ್ಯಪ್ರವೇಶಿಸಲಿದೆ ಎಂದಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಇರಾನ್‌ ತಿರುಗೇಟು ನೀಡಿದೆ. ಇರಾನ್‌ನ ಸಂಸತ್ತಿನ ಅಧ್ಯಕ್ಷ ಮೊಹಮ್ಮದ್ ಬಾಗರ್ ಖಲೀಬಾಫ್ "ಅಮೆರಿಕ ಇರಾನ್ ಮೇಲೆ...

ಕೇಂದ್ರ ಸರ್ಕಾರದ ಎಚ್ಜರಿಕೆ ನಂತರ 3,500 ಪೋಸ್ಟ್‌ಗಳ ನಿರ್ಬಂಧ, 600 ಖಾತೆಗಳನ್ನು ಅಳಿಸಿದ ಎಕ್ಸ್ ಪ್ಲಾಟ್ ಫಾರ್ಮ್

ಮಹಿಳೆಯರನ್ನು ಗುರಿಯಾಗಿಸಿಕೊಂಡು AI- ರಚಿತವಾದ ಅಶ್ಲೀಲ ವಿಡಿಯೋಗಳ ವಿಷಯವನ್ನು ಕೇಂದ್ರವು ಗಮನಕ್ಕೆ ತಂದ ಕಠಿಣ ಕಾನೂನು ಜಾರಿಗೊಳಿಸುವಿಕೆಗೆ ಪ್ರತಿಜ್ಞೆ ಮಾಡಿದ ನಂತರ X 3,500 ಪೋಸ್ಟ್‌ಗಳು ಮತ್ತು 600 ಖಾತೆಗಳನ್ನು ಅಳಿಸಿಹಾಕಿದೆ.   ಅಶ್ಲೀಲ ವಿಷಯಗಳ...

ಮಾನವ ತಲೆಬುರುಡೆ, ಹುಲಿಚರ್ಮದಂತಹ ಕಸ್ಟಮೈಸ್ ಚರ್ಮ ಸೇರಿದಂತೆ ಹಲವು ಅನುಮಾನಾಸ್ಪದ ವಸ್ತುಗಳ ಮಾರಾಟ: ಮಾಂತ್ರಿಕನ ಬಂಧನ

ಬೆಂಗಳೂರು ವಲಯ ಘಟಕದ ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ಉತ್ತರ ಬೆಂಗಳೂರಿನ ಭೂಪ್ಸಂದ್ರದ 39 ವರ್ಷದ ವ್ಯಕ್ತಿಯನ್ನು ವನ್ಯಜೀವಿ (ರಕ್ಷಣಾ) ಕಾಯ್ದೆ, 1972 ರ ಅಡಿಯಲ್ಲಿ ಬಂಧಿಸಿದೆ. "ಜನವರಿ 9 ರಂದು ನಡೆದ ಕಾರ್ಯಾಚರಣೆಯಲ್ಲಿ...

ದಲಿತ ಮಹಿಳೆಯನ್ನು ಕೊಂದು ಮಗಳ ಅಪಹರಣ : ಆರೋಪಿಯ ಬಂಧನ

ಉತ್ತರ ಪ್ರದೇಶದ ಮೀರತ್‌ನಲ್ಲಿ ದಲಿತ ಮಹಿಳೆಯನ್ನು ಕೊಂದು, ಆಕೆಯ ಮಗಳನ್ನು ಅಪಹರಿಸಿದ ಆರೋಪಿಯನ್ನು ಪೊಲೀಸರು ಶನಿವಾರ (ಜ.10) ಬಂಧಿಸಿದ್ದಾರೆ. ಬಂಧಿತನನ್ನು 22 ವರ್ಷದ ಪರಾಸ್ ಸೋಮ್ (ಪರಾಸ್ ಠಾಕೂರ್) ಎಂದು ಗುರುತಿಸಲಾಗಿದೆ. ರಜಪೂತ ಸಮುದಾಯದ...

‘ಮುಂಬೈ ಮಹಾರಾಷ್ಟ್ರ ನಗರವಲ್ಲ’: ಅಣ್ಣಾಮಲೈ ಹೇಳಿಕೆಗೆ ಶಿವಸೇನೆಯಿಂದ ತೀವ್ರ ಆಕ್ರೋಶ

ಮುಂಬೈ: ಐಪಿಎಸ್ ಅಧಿಕಾರಿಯಿಂದ ರಾಜಕಾರಣಿಯಾಗಿ ಬದಲಾದ ಕೆ.ಅಣ್ಣಾಮಲೈ ಅವರು "ಬಾಂಬೆ ಮಹಾರಾಷ್ಟ್ರ ನಗರವಲ್ಲ, ಅಂತರರಾಷ್ಟ್ರೀಯ ನಗರ" ಎಂದು ಹೇಳಿದ್ದು, ಇದು ಮುಂಬೈನಲ್ಲಿ ವಿವಾದ ಸೃಷ್ಟಿಸಿದೆ.  ಇದಕ್ಕೆ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ (ಯುಬಿಟಿ)...

ಮೂರನೇ ಅತ್ಯಾಚಾರ ಪ್ರಕರಣ ದಾಖಲು : ಉಚ್ಛಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಾಂಕೂಟತ್ತಿಲ್ ಬಂಧನ

ಅತ್ಯಾಚಾರ ಆರೋಪ ಕೇಳಿ ಬಂದ ಬಳಿಕ ಕಾಂಗ್ರೆಸ್‌ನಿಂದ ಉಚ್ಛಾಟನೆಗೊಂಡಿರುವ ಕೇರಳದ ಪಾಲಕ್ಕಾಡ್‌ನ ಶಾಸಕ ರಾಹುಲ್ ಮಾಂಕೂಟತ್ತಿಲ್ ಅವರನ್ನು ಭಾನುವಾರ (ಜ.11) ಬಂಧಿಸಲಾಗಿದೆ. ಪಾಲಕ್ಕಾಡ್‌ನ ಕೆಪಿಎಂ ರೀಜೆನ್ಸಿ ಹೋಟೆಲ್‌ನಿಂದ ಬೆಳಗಿನ ಜಾವ 12.30ರ ಸುಮಾರಿಗೆ ಮಾಂಕೂಟತ್ತಿಲ್...

ಇರಾನ್‌ ಹಿಂಸಾಚಾರ : ಸಾವಿನ ಸಂಖ್ಯೆ 116ಕ್ಕೆ ಏರಿಕೆ

ಕಳೆದ ಎರಡು ವಾರಗಳಿಂದ ಇರಾನ್‌ನಲ್ಲಿ ನಡೆಯುತ್ತಿರುವ ಸರ್ಕಾರಿ ವಿರೋಧಿ ಪ್ರತಿಭಟನೆಗಳಲ್ಲಿ ಕನಿಷ್ಠ 116 ಜನರು ಸಾವನ್ನಪ್ಪಿದ್ದಾರೆ. ಅಧಿಕಾರಿಗಳು ಪ್ರತಿಭಟನಾ ನಿರತರ ಮೇಲೆ ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದಾರೆ ಎಂದು ವರದಿಯಾಗಿದೆ. ಡಿಸೆಂಬರ್ 28ರಂದು ಪ್ರಾರಂಭವಾದ...

ಪಾಕಿಸ್ತಾನದ ಸಿಂಧ್‌ನಲ್ಲಿ 23 ವರ್ಷದ ಹಿಂದೂ ರೈತನನ್ನು ಗುಂಡಿಕ್ಕಿ ಕೊಂದ ಭೂಮಾಲೀಕರು 

ಕರಾಚಿ: ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ 23 ವರ್ಷದ ಹಿಂದೂ ರೈತನೊಬ್ಬ ತನ್ನ ಜಮೀನಿನಲ್ಲಿ ಆಶ್ರಯ ಮನೆ ನಿರ್ಮಿಸಿದ್ದಕ್ಕಾಗಿ ಆತನ ಮನೆ ಮಾಲೀಕರು ಗುಂಡಿಕ್ಕಿ ಕೊಂದಿದ್ದಾರೆ, ಇದು ಹಿಂದೂ ಸಮುದಾಯದಿಂದ ವ್ಯಾಪಕ ಪ್ರತಿಭಟನೆಗೆ ಎಂದು...

ದ್ವೇಷ ಭಾಷಣ ಮಸೂದೆ ರಾಜ್ಯಪಾಲರಿಂದ ತಿರಸ್ಕೃತವಾಗಿಲ್ಲ: ಸಿಎಂ ಸಿದ್ದರಾಮಯ್ಯ

ದ್ವೇಷ ಭಾಷಣ ಮಸೂದೆ ಸರ್ವಾನುಮತದಿಂದ ಅಂಗೀಕಾರವಾಗಿದ್ದು, ರಾಜ್ಯಪಾಲರು ಅದನ್ನು ವಾಪಸ್ ಕಳಿಸಿಲ್ಲ, ತಿರಸ್ಕರಿಸಿಲ್ಲ, ಅಂಕಿತವನ್ನೂ ಹಾಕಿಲ್ಲ. ಅವರು ಕರೆದಾಗ ಈ ಬಗ್ಗೆ ವಿವರಣೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಭಾನುವಾರ (ಜ.11) ಮಂಗಳೂರಿನಲ್ಲಿ...

ಐಸಿಸ್ ಗುರಿ ಮಾಡಿ ಸಿರಿಯಾ ಮೇಲೆ ವೈಮಾನಿಕ ದಾಳಿ ನಡೆಸಿದ ಅಮೆರಿಕ

ಸಿರಿಯಾದ ಇಸ್ಲಾಮಿಕ್ ಸ್ಟೇಟ್ (ಐಎಸ್) ಗುಂಪಿನ ತಾಣಗಳ ಮೇಲೆ ಅಮೆರಿಕ ಮತ್ತು ಅದರ ಪಾಲುದಾರ ಪಡೆಗಳು ದೊಡ್ಡ ಪ್ರಮಾಣದ ದಾಳಿಗಳನ್ನು ನಡೆಸಿವೆ ಎಂದು ಅಮೆರಿಕದ ಸೆಂಟ್ರಲ್ ಕಮಾಂಡ್ (ಸೆಂಟ್‌ಕಾಮ್) ಘೋಷಿಸಿದೆ. ಡಿಸೆಂಬರ್ 13ರಂದು ಸಿರಿಯಾದಲ್ಲಿ...