Homeಸಿನಿಮಾಕ್ರೀಡೆಇನ್ನೆರೆಡು ಪಂದ್ಯ ಗೆದ್ದರೆ RCB ಪ್ಲೇಆಫ್ ಸಾಧ್ಯ: ಆದರೆ ಈ ತಂಡಗಳೂ ಸೋಲಬೇಕು

ಇನ್ನೆರೆಡು ಪಂದ್ಯ ಗೆದ್ದರೆ RCB ಪ್ಲೇಆಫ್ ಸಾಧ್ಯ: ಆದರೆ ಈ ತಂಡಗಳೂ ಸೋಲಬೇಕು

- Advertisement -
- Advertisement -

ಐಪಿಎಲ್ 15ನೇ ಆವೃತ್ತಿಯ ಲೀಗ್ ಹಂತ ಮುಕ್ತಾಯದ ಹಂತಕ್ಕೆ ಬಂದಿದೆ. 13 ಪಂದ್ಯಗಳಿಂದ 18 ಅಂಕ ಗಳಿಸಿರುವ ಗುಜರಾತ್ ಟೈಟನ್ಸ್ ಪ್ಲೇಆಫ್ ಪ್ರವೇಶಿಸಿದೆ. ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ತಂಡಗಳು 8 ಸೋಲು ಕಂಡ ಪರಿಣಾಮ ಪ್ಲೇಆಫ್ ರೇಸ್‌ನಿಂದ ಹೊರಬಿದ್ದಿವೆ. ಹಾಗಾಗಿ ಉಳಿದ 3 ಪ್ಲೇಆಫ್ ಸ್ಥಾನಕ್ಕಾಗಿ 7 ತಂಡಗಳು ಪೈಪೋಟಿ ನಡೆಸುತ್ತಿವೆ. ಇನ್ನೆರೆಡು ಪಂದ್ಯ ಗೆದ್ದರೆ RCB ಪ್ಲೇಆಫ್ ಪ್ರವೇಶ ಸಾಧ್ಯ. ಆದರೆ ಕೆಲವು ತಂಡಗಳು ಸೋಲಬೇಕಿದೆ. ಆರ್‌ಸಿಬಿ ಪ್ಲೇಆಫ್ ಸಾಧ್ಯತೆಗಳು ಹೀಗಿವೆ.

12 ಪಂದ್ಯಗಳಿಂದ 6 ಜಯ ಮತ್ತು 6 ಸೋಲಿನೊಂದಿಗೆ 12 ಅಂಕ ಗಳಿಸಿರುವ RCB ಅಂಕ ಪಟ್ಟಿಯಲ್ಲಿ 5 ನೇ ಸ್ಥಾನದಲ್ಲಿದ್ದು, ಸತತ ನಾಲ್ಕನೇ ಬಾರಿಗೆ ಪ್ಲೇ ಆಫ್‌ ಪ್ರವೇಶಿಸಲು ಕಾದು ಕುಳಿತಿದೆ. ಗುಜರಾತ್ ಟೈಟನ್ಸ್ ಮೊದಲ ಸ್ಥಾನ, 15 ಅಂಕ ಪಡೆದಿರುವ ಚನ್ನೈ 2ನೇ ಸ್ಥಾನ, 14 ಅಂಕ ಪಡೆದಿರುವ ಮುಂಬೈ 3ನೇ ಸ್ಥಾನದಲ್ಲಿದ್ದರೆ, 13 ಅಂಕ ಪಡೆದಿರುವ ಲಕ್ನೋ ನಾಲ್ಕನೇ ಸ್ಥಾನದಲ್ಲಿದೆ. ಆರ್‌ಸಿಬಿ ನಂತರ ತಲಾ 12 ಅಂಕ ಪಡೆದಿರುವ ರಾಜಸ್ಥಾನ್ ರಾಯಲ್ಸ್ 6ನೇ, ಕೋಲ್ಕತ್ತಾ ನೈಟ್ ರೈಡರ್ಸ್ 7ನೇ ಮತ್ತು ಪಂಜಾಬ್ ಕಿಂಗ್ಸ್ 8 ನೇ ಸ್ಥಾನ ಪಡೆದಿವೆ. ಈ ಎಲ್ಲಾ ತಂಡಗಳಿಗೂ ಪ್ಲೇ ಆಫ್ ತಲುಪುವ ಅವಕಾಶವಿದೆ.

ಆರ್‌ಸಿಬಿ ಪ್ಲೇಆಫ್ ಸಾಧ್ಯತೆಗಳು ಹೀಗಿವೆ

ಆರ್‌ಸಿಬಿ ಮೇ 18 ರಂದು ಸನ್‌ರೈಸರ್ಸ್ ಹೈದರಾಬಾದ್ ಎದುರು ಮತ್ತು 21 ರಂದು ಗುಜರಾತ್ ಟೈಟನ್ಸ್ ಎದುರು ಸೆಣಸಲಿದೆ. ಆ ಎರಡೂ ಪಂದ್ಯಗಳಲ್ಲಿ ಗೆಲ್ಲಲೇಬೇಕು. ಅಷ್ಟು ಮಾತ್ರವಲ್ಲದೇ ಇತರ ತಂಡಗಳು ಸೋಲಬೇಕೆಂದು ಆರ್‌ಸಿಬಿ ಕಾದು ನೋಡಬೇಕಿದೆ. ಅವುಗಳೆಂದರೆ

ಮುಂಬೈ ತಂಡವು ಇಂದು ನಡೆಯುವ ಪಂದ್ಯದಲ್ಲಿ ಲಕ್ನೋ ವಿರುದ್ಧ ಜಯ ಗಳಿಸಬೇಕು. ಆಗ ಲಕ್ನೋ ಅವಕಾಶಗಳು ಕಡಿಮೆಯಾಗುತ್ತವೆ. ಒಂದು ವೇಲೆ ಲಕ್ನೋ ಗೆದ್ದಲ್ಲಿ ಮುಂಬೈ ತನ್ನ ಕೊನೆಯ ಪಂದ್ಯದಲ್ಲಿ ಹೈದರಾಬಾದ್ ವಿರುದ್ಧ ಸೋತರೆ ಮುಂಬೈಯನ್ನು ಆರ್‌ಸಿಬಿ ಕೆಳಗೆ ತಳ್ಳಬಹುದಾಗಿದೆ. ಇನ್ನು ಲಕ್ನೋ ಮುಂಬೈ ವಿರುದ್ಧ ಗೆದ್ದರೂ ತನ್ನ ಕೊನೆಯ ಪಂದ್ಯ ಕೋಲ್ಕತ್ತಾ ಎದುರು ಸೋತರೆ ಅದು ಆರ್‌ಸಿಬಿಗೆ ಅನುಕೂಲವಾಗಲಿದೆ.

ಪಂಜಾಬ್ ಕಿಂಗ್ಸ್ ತಂಡವು ತನ್ನ ಕೊನೆಯ ಎರಡು ಪಂದ್ಯಗಳಲ್ಲಿ ಡೆಲ್ಲಿ ಮತ್ತು ಹೈದರಾಬಾದ್ ಎದುರು ಸೋಲಬೇಕಿದೆ. ಆಗ ಆರ್‌ಸಿಬಿ ಪ್ಲೇಆಫ್ ಹಾದಿ ಸುಗಮವಾಗಲಿದೆ.

ರಾಜಸ್ಥಾನ್ ಮತ್ತು ಕೋಲ್ಕತ್ತಾ ತಂಡಗಳು 13 ಪಂದ್ಯಗಳಿಂದ 12 ಅಂಕ ಗಳಿಸಿವೆ. ಅವು ತಮ್ಮ ಕಡೆಯ ಪಂದ್ಯಗಳನ್ನು ಗೆಲ್ಲುವುದು ಮಾತ್ರವಲ್ಲದೇ ಆರ್‌ಸಿಬಿ, ಲಕ್ನೋ, ಮುಂಬೈ ತಂಡಗಳು ಸತತವಾಗಿ ಸೋಲಲಿ ಎಂದು ಹಾರೈಸುತ್ತಿವೆ.

ಆರ್‌ಸಿಬಿ ತಂಡವು ಸಾಂಘಿಕ ಪ್ರದರ್ಶನ ನೀಡುವಲ್ಲಿ ಎಡವುತ್ತಿದೆ. ಬ್ಯಾಟಿಂಗ್‌ನಲ್ಲಿ ಕೊಹ್ಲಿ, ಫಾಫ್ ಡುಪ್ಲೆಸಿ ಮತ್ತು ಮ್ಯಾಕ್ಸ್‌ವೆಲ್ ಬಿಟ್ಟರೆ ಉಳಿದವರು ಕಳಪೆ ಪ್ರದರ್ಶನ ನೀಡುತ್ತಿದ್ದಾರೆ. ಇನ್ನು ಬೌಲಿಂಗ್ ವಿಭಾಗ ಪರಿಣಾಮಕಾರಿ ಪ್ರದರ್ಶನ ನೀಡುತ್ತಿಲ್ಲ. ಉಳಿದ ಪಂದ್ಯಗಳಲ್ಲಿ ಸಾಂಘಿಕ ಪ್ರದರ್ಶನ ನೀಡಿದರೆ ಮಾತ್ರ ಪ್ಲೇಆಫ್ ಕನಸು ಕಾಣಬಹುದಾಗಿದೆ.

ಇದನ್ನೂ ಓದಿ: ಬಜರಂಗದಳ ಬ್ಯಾನ್ ಚರ್ಚೆಯ ಸುತ್ತ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -