Homeಎಕಾನಮಿಭಾರತದ ಆರ್ಥಿಕತೆ ಮತ್ತು ಉದ್ಯೋಗ ಸೃಷ್ಟಿಯ ಮೇಲೆ RCEP ಪರಿಣಾಮಗಳು - ಡಾ. ಬಿ.ಸಿ.ಬಸವರಾಜ್

ಭಾರತದ ಆರ್ಥಿಕತೆ ಮತ್ತು ಉದ್ಯೋಗ ಸೃಷ್ಟಿಯ ಮೇಲೆ RCEP ಪರಿಣಾಮಗಳು – ಡಾ. ಬಿ.ಸಿ.ಬಸವರಾಜ್

ಈ ಬಗೆಯ ಮುಕ್ತ ವ್ಯಾಪಾರ ಒಪ್ಪಂದಗಳ ಅಡಿಯಲ್ಲಿ ಭಾರತ ಬೇರೆ ದೇಶದ ವಸ್ತುಗಳಿಗೆ ತಾನು ಬೃಹತ್ ಮಾರುಕಟ್ಟೆಯಾಗುವ ಸ್ಥಿತಿಯಲ್ಲಿದೆಯೇ ಹೊರತು ತನ್ನ ಉತ್ಪನ್ನಗಳನ್ನು ಬೇರೆ ದೇಶಗಳ ಮಾರುಕಟ್ಟೆಗಳಿಗೆ ಸರಬರಾಜು ಮಾಡುವ ಸ್ಥಿತಿಯಲ್ಲಿಲ್ಲ.

- Advertisement -
- Advertisement -

RCEP – Regional Comprehensive Economic Partnership ಅಂದರೆ ಸದಸ್ಯ ದೇಶಗಳ ನಡುವೆ ಯಾವುದೇ ಅಡೆತಡೆಗಳಿಲ್ಲದೆ ವ್ಯಾಪಾರ ವಹಿವಾಟುಗಳನ್ನು ನಡೆಸಲು ಅನುವು ಮಾಡಿಕೊಡುವ ಒಂದು ಒಪ್ಪಂದ.
ಈ ಸದಸ್ಯ ದೇಶಗಳು ತಮ್ಮ ದೇಶದಲ್ಲಿ ಉತ್ಪಾದಿಸಿದ ಉತ್ಪನ್ನವನ್ನು ಯಾವುದೇ ತೆರಿಗೆ ಕಟ್ಟದೆ (ಅಥವಾ ಕನಿಷ್ಠ ತೆರಿಗೆ ಕಟ್ಟಿ) ಇನ್ನೊಂದು ಸದಸ್ಯ ದೇಶದ ಮಾರುಕಟ್ಟೆಯಲ್ಲಿ ಮಾರಬಹುದು. ಉದಾಹರಣೆಗೆ, ಈ ಒಪ್ಪಂದದ ಅಡಿಯಲ್ಲಿ ಭಾರತ ತಾನು ಆಮದು ಮಾಡಿಕೊಳ್ಳುತ್ತಿರುವ ಕನಿಷ್ಟ ಶೇ ತೊಂಬತ್ತರಷ್ಟು ವಸ್ತುಗಳ ಮೇಲೆ ಇನ್ನು ಮುಂದೆ ಯಾವುದೇ ಆಮದು ಸುಂಕ ವಿಧಿಸುವಂತಿಲ್ಲ (ಪ್ರಸಕ್ತ ಭಾರತ ಬೇರೆ ದೇಶದ ಹಲವಾರು ಉತ್ಪನ್ನಗಳಿಗೆ ಶೇ.50 ರಿಂದ 60 ರಷ್ಟು ಆಮದು ಸುಂಕ ವಿಧಿಸುತ್ತಿದೆ).

ಈ ಮೊದಲೇ ಆಗ್ನೇಯ ಏಷ್ಯಾದ ಹತ್ತು ದೇಶಗಳ ಮಧ್ಯೆ ASEAN (Association of South East Asian Nations) ಎನ್ನುವ ಹೆಸರಿನಲ್ಲಿ ಒಂದು ಮುಕ್ತ ವ್ಯಾಪಾರ ವಹಿವಾಟು ನಡೆಯುತ್ತಿತ್ತು. ಆ ಹತ್ತು ದೇಶಗಳೆಂದರೆ ಇಂಡೋನೇಷಿಯ, ಮಲೇಷಿಯಾ, ವಿಯೆಟ್ನಾಮ್, ಕಾಂಬೋಡಿಯ, ಬ್ರುನೈ, ಫಿಲಿಪೈನ್ಸ್, ಮಯನ್ಮಾರ್, ಸಿಂಗಪುರ್, ಲಾವೋಸ್ ಮತ್ತು ಥೈಲ್ಯಾಂಡ್.

ಈಗ ಆ ಹತ್ತು ದೇಶಗಳ ಜೊತೆಗೆ ಭಾರತ, ಚೀನಾ, ದಕ್ಷಿಣ ಕೊರಿಯ, ಜಪಾನ್, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ಸೇರಿ ಒಟ್ಟು ಹದಿನಾರು ದೇಶಗಳು ಈ RCEP ಒಪ್ಪಂದದ ಅಡಿಯಲ್ಲಿ ಮುಕ್ತ ವ್ಯಾಪಾರ ವಹಿವಾಟು ನಡೆಸಲು ತಯಾರಾಗುತ್ತಿವೆ. ಇದರ ಕುರಿತ ಮಾತುಕತೆಗಳು 2012 ರಲ್ಲೇ ಪ್ರಾರಂಭವಾಗಿ ಈ ನವೆಂಬರ್ ನಾಲ್ಕರಂದು ಅಂತಿಮ ಹಂತದ ಸಭೆ ನಡೆಯಲಿದೆ.

ಒಂದು ಲೆಕ್ಕಾಚಾರದ ಪ್ರಕಾರ, ಈ ಹದಿನಾರು ದೇಶಗಳ ಒಟ್ಟು ಜಿಡಿಪಿ ಇನ್ನು ಹತ್ತು ಹನ್ನೆರಡು ವರ್ಷಗಳಲ್ಲಿ ವಿಶ್ವದ ಒಟ್ಟು ಜಿಡಿಪಿಯ ಶೇ.50ರಷ್ಟಾಗಲಿದೆ (ಈಗ ಇದು ವಿಶ್ವದ ಒಟ್ಟು ಜಿಡಿಪಿಯ ಶೇ.30ರಷ್ಟಿದೆ). ಈ RCEP ಜಗತ್ತಿನ ಅತಿದೊಡ್ಡ ಮುಕ್ತ ವ್ಯಾಪಾರೀ ಒಕ್ಕೂಟವಾಗಲಿದೆ.

ಈ RCEPಯನ್ನು ಬೆಂಬಲಿಸುತ್ತಿರುವವರ ಪ್ರಕಾರ ಈ ಒಪ್ಪಂದ ಜಾರಿಯಾದರೆ ನಮಗೆ ಬೇಕಾದ ಗುಣಮಟ್ಟದ ವಸ್ತುಗಳು ಕಡಿಮೆ ಬೆಲೆಯಲ್ಲಿ ದೊರೆಯುತ್ತವೆ. ಅದರಿಂದ ಜನರಿಗೆ ಅನುಕೂಲವೇ ಆಗಲಿದೆ. ಹಾಗೂ, ನಮ್ಮ ದೇಶದಲ್ಲಿ ತಯಾರಾಗುವ ವಸ್ತುಗಳಿಗೂ ತೆರಿಗೆಯಿಲ್ಲದೆ ಬೇರೆ ದೇಶದ ಮಾರುಕಟ್ಟೆಗಳು ದೊರೆಯುವುದರಿಂದ ನಮ್ಮ ದೇಶದ ಉದ್ಯಮಗಳೂ ಈ ಮುಕ್ತ ರಫ್ತಿನ ಅನುಕೂಲದಿಂದಾಗಿ ಬೆಳೆಯುತ್ತವೆ ಎಂದು ಹೇಳಲಾಗುತ್ತಿದೆ.

ಹಾಗೆ ನೋಡಿದರೆ ಭಾರತ ಈಗಾಗಲೇ ASEAN. ಜಪಾನ್ ಮತ್ತು ದಕ್ಷಿಣ ಕೊರಿಯಾದೊಂದಿಗೆ ಒಂದು ಸೀಮಿತವಾದ ಮುಕ್ತ ವ್ಯಾಪಾರ ಒಪ್ಪಂದ (Free Trade Agreement) ಮಾಡಿಕೊಂಡಿದೆ. ಇದರಿಂದ ಭಾರತದ ಸಾಧನೆಯೇನಿದೆ ಮತ್ತು ಅದರಿಂದ ಭಾರತದ ಆರ್ಥಿಕತೆಗೇನು ಪ್ರಯೋಜನವಾಗಿದೆ ಎಂದು ನೋಡಿದರೆ ನಮಗೆ ಈ RCEP ಒಪ್ಪಂದದ ಪರಿಣಾಮದ ಬಗ್ಗೆ ಒಂದು ಸ್ಥೂಲ ಅಂದಾಜು ಸಿಗಲಿದೆ.

ಆಸಿಯಾನ್ ಜತೆಗೆ 2009-10 ರಲ್ಲಿ ರಫ್ತು 18 ಬಿಲಿಯನ್ ಡಾಲರುಗಳಿದ್ದರೆ ಅದೇ 2018-19 ರಲ್ಲಿ 28 ಬಿಲಿಯನ್ ಡಾಲರುಗಳಾಗಿದೆ. ಅದೇ 2009-10 ರಲ್ಲಿ ಆಸಿಯಾನ್‍ನಿಂದ ಆಮದು 26 ಬಿಲಿಯನ್ ಡಾಲರುಗಳಿದ್ದರೆ, 2018-19 ರಲ್ಲಿ ಅದು 60 ಬಿಲಿಯನ್ ಡಾಲರುಗಳಾಗಿದೆ.

ಒಟ್ಟಾರೆಯಾಗಿ ನೋಡಿದಾಗ, ಸೀಮಿತವಾದ ಮುಕ್ತ ವ್ಯಾಪಾರ ಒಪ್ಪಂದದ ಅಡಿಯಲ್ಲಿಯೇ ಭಾರತಕ್ಕೆ ತನ್ನ ಉತ್ಪನ್ನಗಳನ್ನು ಬೇರೆ ದೇಶದ ಮಾರುಕಟ್ಟೆಗೆ ರಫ್ತು ಮಾಡಿರುವುದಕ್ಕಿಂತ ಹೆಚ್ಚು ಆಮದು ಮಾಡಿಕೊಂಡಿರುವುದು ಸ್ಪಷ್ಟವಾಗಿ ಗೊತ್ತಾಗುತ್ತದೆ.  ASEAN, ಜಪಾನ್ ಮತ್ತು ದಕ್ಷಿಣ ಕೊರಿಯಾದೊಂದಿಗೆ ಜತೆಗೆಯೇ ಭಾರತದ ಒಟ್ಟು ವ್ಯಾಪಾರದ ಕೊರತೆ 2018-19 ರಲ್ಲಿ ಹತ್ತಿರತ್ತಿರ 51 ಬಿಲಿಯನ್ ಡಾಲರುಗಳಷ್ಟಿದೆ.

ಅಂದರೆ, ಈ ಬಗೆಯ ಮುಕ್ತ ವ್ಯಾಪಾರ ಒಪ್ಪಂದಗಳ ಅಡಿಯಲ್ಲಿ ಭಾರತ ಬೇರೆ ದೇಶದ ವಸ್ತುಗಳಿಗೆ ತಾನು ಬೃಹತ್ ಮಾರುಕಟ್ಟೆಯಾಗುವ ಸ್ಥಿತಿಯಲ್ಲಿದೆಯೇ ಹೊರತು ತನ್ನ ಉತ್ಪನ್ನಗಳನ್ನು ಬೇರೆ ದೇಶಗಳ ಮಾರುಕಟ್ಟೆಗಳಿಗೆ ಸರಬರಾಜು ಮಾಡುವ ಸ್ಥಿತಿಯಲ್ಲಿಲ್ಲ. ಅದಕ್ಕೆ ಮುಖ್ಯ ಕಾರಣ ಭಾರತದ ಉತ್ಪನ್ನಗಳು ಬೆಲೆ ಮತ್ತು ಗುಣಮಟ್ಟದಲ್ಲಿ ಸ್ಪರ್ಧಾತ್ಮಕತೆ ಹೊಂದಿಲ್ಲದಿರುವುದು. ಅದಕ್ಕೆ ತಂತ್ರಜ್ಞಾನದ ಕೊರತೆ, ಕೌಶಲ್ಯ ಅಭಿವೃದ್ಧಿಯ ಕೊರತೆ, ಮೂಲಸೌಕರ್ಯದ ಕೊರತೆ, ವಿವಿಧ ಸಬ್ಸಿಡಿಗಳ ಕೊರತೆ ಸೇರಿದಂತೆ ಹಲವು ಕಾರಣಗಳಿವೆ.

ಇಂಥಾ ಸ್ಥಿತಿಯಲ್ಲಿ ಭಾರತ ಮುಕ್ತ ವ್ಯಾಪಾರಕ್ಕೆ ತೆರೆದುಕೊಂಡಾಗ ವ್ಯಾಪಾರದ ಕೊರತೆ ಎದುರಿಸುವುದರ ಜತೆ ಅಭಿವೃದ್ದಿಯ ಹಿನ್ನಡೆ ಮತ್ತು ಅದರಿಂದಾಗಿ ನಿರುದ್ಯೋಗವೂ ಹೆಚ್ಚುತ್ತದೆ.

ಒಂದು ಸರಳ ಉದಾಹರಣೆಯ ಮೂಲಕ ನೋಡುವುದಾದರೆ, ಆಸಿಯಾನ್, ಜಪಾನ್ ಮತ್ತು ಕೊರಿಯಾ ದೇಶಗಳ ಜತೆಗಿನ ಮುಕ್ತ ವ್ಯಾಪಾರ ಒಪ್ಪಂದದಿಂದಾಗಿ ಭಾರತಕ್ಕೆ ನಷ್ಟವಾದ ಆಮದು ಸುಂಕ 2016-17 ರಲ್ಲಿ 1.7 ಬಿಲಿಯನ್ ಡಾಲರುಗಳಾದರೆ 2018-19 ರಲ್ಲಿ ಆದ ನಷ್ಟ ಅಂದಾಜು 5 ಬಿಲಿಯನ್ ಡಾಲರುಗಳಷ್ಟು. ಅಂದರೆ ಸುಮಾರು 35000 ಕೋಟಿ ರೂಪಾಯಿಗಳಷ್ಟು. ಇಷ್ಟು ಹಣವನ್ನು ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಮತ್ತು ಗ್ರಾಮೀಣ ರಸ್ತೆ ನಿರ್ಮಾಣಕ್ಕೆ ಬಳಸಿದ್ದರೆ ಎಷ್ಟು ಉದ್ಯೋಗ ಸೃಷ್ಟಿಯಾಗುತ್ತಿತ್ತು ಮತ್ತು ತನ್ಮೂಲಕ ಮೂಲಸೌಕರ್ಯ ಅಭಿವೃದ್ದಿಯಾಗುತ್ತಿತ್ತು ಯೋಚಿಸಿ.

ಈಗ RCEP ಅಂದರೆ, FTA (Free Trade Agreement) ಗಿಂತಲೂ ಹೆಚ್ಚು ಆಳವಾದ ಮುಕ್ತ ವ್ಯಾಪಾರ ಒಪ್ಪಂದ. ಅದರಲ್ಲೂ ಚೀನಾದಂತಹ ಆರ್ಥಿಕ ಬಲಿಷ್ಟ ದೇಶವನ್ನೂ ಒಳಗೊಂಡು ಅಂದಾಗ ನಮ್ಮ ಹಿಂದಿನ ಅನುಭವಗಳ ಹಿನ್ನೆಲೆಯಲ್ಲಿ ನಮ್ಮ ಮೇಲಿನ ಪರಿಣಾಮವನ್ನು ಅರ್ಥಮಾಡಿಕೊಳ್ಳಬಹುದು.

RCEP ಯಿಂದ ಭಾರತದ ವಿವಿಧ ವಲಯಗಳ ಮೇಲಾಗುವ ಪರಿಣಾಮ ನೋಡೋಣ.

ವ್ಯವಸಾಯ ಕ್ಷೇತ್ರ:
ಭಾರತದ ಡೇರಿ ಉದ್ಯಮ ನ್ಯೂಝಿಲೆಂಡ್ ನಿಂದ ಬರುವ ಕಡಿಮೆ ಬೆಲೆಯ ಉತ್ತಮ ಗುಣಮಟ್ಟದ ಹಾಲಿನ ಉತ್ಪನ್ನಗಳಿಂದಾಗಿ ಭಾರೀ ಹೊಡೆತ ತಿನ್ನಲಿದೆ. ದೇಶದಲ್ಲಿ ಕನಿಷ್ಟ ಹತ್ತು ಕೋಟಿ ಜನ ಹೈನೋದ್ಯಮದಿಂದ ಬದುಕು ಕಟ್ಟಿಕೊಂಡಿದ್ದು ಅವರಲ್ಲಿ ಕನಿಷ್ಟ ಅರ್ಧದಷ್ಟು ಮಂದಿ ಇದರಿಂದಾಗಿ ಉದ್ಯೋಗ ವಂಚಿತರಾಗಲಿದ್ದಾರೆ. (ನ್ಯೂಝಿಲೆಂಡ್ ತಾನು ಉತ್ಪಾದಿಸುವ ಹಾಲಿನ ಉತ್ಪನ್ನಗಳಲ್ಲಿ ಶೇ ತೊಂಬತ್ತರಷ್ಟು ರಫ್ತು ಮಾಡುತ್ತಿದೆ)

ಆಸ್ಟ್ರೇಲಿಯಾದ ಸಕ್ಕರೆ ಮತ್ತು ಗೋಧಿಯ ಅನಿಯಮಿತ ಆಮದಿನಿಂದಾಗಿ ಭಾರತದ ಗೋಧಿ ಮತ್ತು ಕಬ್ಬು ಬೆಳೆಗಾರರು ಮತ್ತು ಸಂಬಂಧಿತ ಉದ್ದಿಮೆಗಳು ಹೊಡೆತ ತಿನ್ನಲಿವೆ. ಇಲ್ಲಿಯೂ ಲಕ್ಷಾಂತರ ಉದ್ಯೋಗ ನಷ್ಟವಾಗಲಿದೆ. ಆಸಿಯಾನ್ ದೇಶಗಳಿಂದ ಕಡಿಮೆ ಬೆಲೆಯಲ್ಲಿ ಬರುವ ಟೀ, ಕಾಫಿ, ಮೆಣಸು, ಅಡಿಕೆ ಮುಂತಾದವುಗಳಿಂದಾಗಿ ಈ ಎಲ್ಲಾ ತೋಟಗಾರಿಕಾ ಬೆಳೆಗಳ ಮೇಲೂ ದುಷ್ಪರಿಣಾಮ ಬೀರಲಿದೆ
ಒಟ್ಟಿನಲ್ಲಿ ದೇಶದ ಶೇ ಐವತ್ತರಷ್ಟು ಜನರಿಗೆ ಉದ್ಯೋಗ ಕೊಟ್ಟಿರುವ ವ್ಯವಸಾಯ ಕ್ಷೇತ್ರ ಭಾರೀ ಸಂಕಷ್ಟಕ್ಕೆ ಸಿಲುಕುವ ಲಕ್ಷಣಗಳಿವೆ ( ಸರ್ಕಾರ ಇನ್ನೂ ಯಾವ ಉತ್ಪನ್ನಗಳನ್ನುRCEP ಯಿಂದ ಹೊರಗಿಡಲಾಗುವುದು ಎಂದು ಬಹಿರಂಗಪಡಿಸಿಲ್ಲ)

Indian coordination committee of farmers movements (ICCFM), United planters association of southern India, ಹಾಗೂ ದೇಶದ ಬಹುತೇಕ ರೈತ ಸಂಘಟನೆಗಳು ಈ ಬಗ್ಗೆ ಪ್ರತಿಭಟಿಸುತ್ತಲೇ ಇದ್ದು ತಮ್ಮ ವಿರೋಧವನ್ನು ದಾಖಲಿಸುತ್ತಿವೆ.

ವಾಹನೋದ್ಯಮ
ಚೀನಾವೂ ಸೇರಿದಂತೆ ಆಸಿಯಾನ್, ಜಪಾನ್ ಮತ್ತು ಕೊರಿಯಾಗಳೊಂದಿಗೆ ಭಾರತ ಬಂಡವಾಳ ಸರಕುಗಳು(Capital goods), ಗ್ರಾಹಕ ಸರಕುಗಳು ಮತ್ತು ಬಿಡಿಭಾಗಗಳೆಲ್ಲದರಲ್ಲಿಯೂ ವ್ಯಾಪಾರ ಕೊರತೆ ಅನುಭವಿಸುತ್ತಿದೆ. ಇಂತಹ ಸ್ಥಿತಿಯಲ್ಲಿ RCEPಗೆ ಸಹಿ ಹಾಕಿದರೆ ತಯಾರಿಕಾ ಕ್ಷೇತ್ರಕ್ಕೆ ಹಿನ್ನಡೆ ಆಗುತ್ತದೆ.

ಅದರಲ್ಲೂ ಸಿದ್ಧಪಡಿಸಿದ ವಾಹನಗಳಾಗಿರಬಹುದು ಮತ್ತು ವಾಹನ ಬಿಡಿಭಾಗಗಳಿರಬಹುದು, ಈ ಎಲ್ಲದರಲ್ಲಿಯೂ ಚೀನಾದ ಉತ್ಪನ್ನಗಳು ಭಾರತದ ಮಾರುಕಟ್ಟೆಯನ್ನು ಸುಲಭವಾಗಿ ಆಕ್ರಮಿಸಲಿವೆ.
ಇವತ್ತು ಕನಿಷ್ಟ ನಾಲ್ಕು ಕೋಟಿ ಜನಕ್ಕೆ ಉದ್ಯೋಗ ನೀಡಿರುವ ಆಟೋಮೊಬೈಲ್ ಕ್ಷೇತ್ರದಲ್ಲಿ ನಿರುದ್ಯೋಗದ ಪ್ರಮಾಣ ಮತ್ತಷ್ಟು ಹೆಚ್ಚಲಿದೆ.
Society of Indian automobile manufacturers(SIAM) ಮತ್ತು Automotive component manufacturers association of India (ACMA) ಇದರ ಬಗ್ಗೆ ಗಮನ ನೀಡಬೇಕೆಂದು ಸರ್ಕಾರವನ್ನು ಆಗ್ರಹಿಸಿವೆ.

ಜವಳಿ ಕ್ಷೇತ್ರ
ಭಾರತ ಜವಳಿ ಕ್ಷೇತ್ರದಲ್ಲಿ ಬಾಂಗ್ಲಾ, ಚೀನಾ ಮತ್ತು ವಿಯಟ್ನಾಂನಿಂದ ಬರುವ ಅಗ್ಗದ ಸಿದ್ದ ಉಡುಪುಗಳಿಂದ ಸ್ಪರ್ಧೆ ಎದುರಿಸಬೇಕಾಗುತ್ತದೆ. ಕನಿಷ್ಟ ಐದು ಕೋಟಿ ಜನರಿಗೆ ಉದ್ಯೋಗ ನೀಡಿರುವ ಜವಳಿ ಉದ್ಯಮದ ಮೇಲೆ ಇದು ನಕಾರಾತ್ಮಕ ಪರುಣಾಮ ಬೀರಲಿದೆ. Confederation of Indian Textile Industry ಯ ಅಧ್ಯಕ್ಷ ಸಂಜಯ್ ಜೈನ್ ರವರು ” RCEP, ಜವಳಿ ಕ್ಷೇತ್ರದಲ್ಲಿ ಚೀನಾ ಜತೆಗಿನ ವ್ಯಾಪಾರ ಕೊರತೆಯನ್ನು ಇನ್ನಷ್ಟು ಹೆಚ್ಚಿಸಲಿದೆ” ಎಂದಿದ್ದಾರೆ.

RCEP ಅಡಿಯಲ್ಲಿ ಬೌದ್ಧಿಕ ಹಕ್ಕು ಸ್ವಾಮ್ಯದ ನಿಯಮಗಳೂ ಬದಲಾಗುವ ಪ್ರಸ್ತಾಪವಿದೆ. ಅದರಿಂದ ಮುಖ್ಯವಾಗಿ ಅಗತ್ಯ ಔಷಧಿಗಳು ತುಟ್ಟಿಯಾಗಲಿವೆ. ಭಾರತ ಜೆನರಿಕ್ ಔಷಧಿ ತಯಾರಿಕೆಯಲ್ಲಿ ಮುಂಚೂಣಿಯಲ್ಲಿದ್ದು ಜನರಿಗೆ ಅಗ್ಗದ ದರದಲ್ಲಿ ಔಷಧಿಗಳು ಸಿಗುತ್ತಿವೆ. ಆದರೆ ಹೊಸ ಒಪ್ಪಂದದಲ್ಲಿ ಔಷಧ ಕಂಪನಿಗಳ ಪೇಟೆಂಟ್ ಅವಧಿ ಇಪ್ಪತ್ತು ವರ್ಷಗಳಿಗಿಂತ ಹೆಚ್ಚು ಮಾಡುವ ಪ್ರಸ್ತಾಪವಿದ್ದು, ಅದರಿಂದಾಗಿ ಹಲವು ಔಷಧಿಗಳು ಜೆನರಿಕ್ ವ್ಯಾಪ್ತಿಯಿಂದ ಹೊರಗುಳಿಯಲಿವೆ. ಇದರಿಂದ ಜನಸಾಮಾನ್ಯರಿಗೆ ಹೊರೆಯಾಗುವುದಲ್ಲದೆ, ಜೆನರಿಕ್ ಔಷಧಿ ಉದ್ಯಮ ಸಂಕಷ್ಟಕ್ಕೆ ಸಿಲುಕುತ್ತದೆ.

ಭಾರತದ ನೀತಿ ಆಯೋಗದ ವರದಿಯೇ ಹೇಳುವಂತೆ, RCEPಯಿಂದ ಭಾರತದ ಉದ್ದಿಮೆಗಳು ಪಡೆದುಕೊಳ್ಳುವುದಕ್ಕಿಂತ ಕಳೆದುಕೊಳ್ಳುವುದೇ ಹೆಚ್ಚಿರುತ್ತದೆ (ಅದರಲ್ಲೂ ಚೀನಾ ಜತೆಗಿನ ಸ್ಪರ್ಧೆಯಲ್ಲಿ).

ಒಟ್ಟಿನಲ್ಲಿ RCEPಯ ಕೊಡುಗೆ
1. ಉದ್ಯೋಗ ನಷ್ಟದಿಂದ ಹೆಚ್ಚುವ ಬಡತನ ಮತ್ತು ಬೇಡಿಕೆ ಕುಸಿತ
2. ಉದ್ದಿಮೆಗಳ ಹಿಂಜರಿತದಿಂದ ತೆರಿಗೆ ಸಂಗ್ರಹವೂ ಕುಸಿತ
3. ಆಮದು ಸುಂಕ ಸಂಗ್ರಹಣೆಯಲ್ಲಿಯೂ ಮತ್ತಷ್ಟು ಕುಸಿತ.
ಇವುಗಳೆಲ್ಲದರ ಪರಿಣಾಮ, ಭಾರತದ ಆರ್ಥಿಕತೆಯು ಮತ್ತೆ ಮೇಲೇಳಲು ಅಸಾಧ್ಯವೆನಿಸುವಷ್ಟು ಪಾತಾಳಕ್ಕೆ ಕುಸಿಯಲಿದೆ.

RSSನ ಅಂಗಸಂಸ್ಥೆ ಸ್ವದೇಶಿ ಜಾಗರಣ್ ಮಂಚ್ ಹೇಳಿರುವ ” RCEP ಗೆ ಸಹಿ ಹಾಕುವುದು ಸ್ವಾತಂತ್ರ್ಯಾನಂತರದ ಅತ್ಯಂತ ಆತ್ಮಹತ್ಯಾಕಾರಿ ನಡೆಯಾಗಲಿದೆ” ಎಂದಿರುವುದನ್ನೂ ಇದೇ ಹಿನ್ನೆಲೆಯಲ್ಲಿ ನೆನಪಿಸಿಕೊಳ್ಳಬಹುದು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...