Homeಕರ್ನಾಟಕಜಿಲ್ಲಾಧಿಕಾರಿ ಮತ್ತು ತಹಶೀಲ್ದಾರ್‌ರಿಂದ ವಯೋವೃದ್ಧ ದಲಿತನ ಪಿಂಚಣಿಗೆ ಸಂಚಕಾರ

ಜಿಲ್ಲಾಧಿಕಾರಿ ಮತ್ತು ತಹಶೀಲ್ದಾರ್‌ರಿಂದ ವಯೋವೃದ್ಧ ದಲಿತನ ಪಿಂಚಣಿಗೆ ಸಂಚಕಾರ

ಲೋಕಾಯುಕ್ತರಂತವರೆ ಬಡಪಾಯಿ ಶಿವುರ ಸಮಸ್ಯೆ ಪರಿಗಣಿಸದಿರುವಾಗ ಅವರಿಗೆ ಇನ್ನೆಲ್ಲಿ ನ್ಯಾಯ ಸಿಗುತ್ತದೆ?

- Advertisement -
- Advertisement -

ಉತ್ತರ ಕನ್ನಡದ ಹೊನ್ನಾವರ ತಾಲೂಕಿನ ಹೆರಂಗಡಿ ಗ್ರಾಮದ ವಯೋವೃದ್ಧ ದಲಿತ ಶಿವು ಹಳ್ಳೇರ ತುತ್ತಿಗಾಧರವಾದ ವೃದ್ಧಾಪ್ಯ ವೇತನ ಅಧಿಕಾರಿಗಳ ಅಸಡ್ಡೆ, ಹೊಣೆಗೇಡಿತನದಿಂದ ಸರಿಯಾಗಿ ಸಿಗದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಉಳಿಯಲೊಂದು ಗುಡಿಸಲೂ ಇಲ್ಲದ ದೇಖರೇಖೆ ನೋಡಿಕೊಳ್ಳಲು ಯಾರೂ ಇಲ್ಲದ ಅವಿವಾಹಿತ ಶಿವುಗೀಗ ಎಂಬತ್ತು ವರ್ಷ ವಯಸ್ಸು. ಈ ಇಳಿ ವಯಸ್ಸಿನಲ್ಲಿ ಅವರಿಗೆ ಕಿವಿಯೂ ಕೇಳಿಸುತ್ತಿಲ್ಲ! ಫೆಬ್ರುವರಿ 2006 ರಿಂದ ಶಿವು ವೃದ್ಧಾಪ್ಯ ಪಿಂಚಣಿ ಮೇಲೆ ಜೀವವಿಟ್ಟು ಜೀವನ ನಡೆಸುತ್ತಿದ್ದರು.

ಹೇಗೋ ದಿನ ಕಳೆಯುತ್ತಿದ್ದಾಗ ಇದ್ದಕ್ಕಿದ್ದಂತೆ ಅಗಸ್ಟ್ 2018ರಲ್ಲಿ ಹೊನ್ನಾವರದ ಅಂದಿನ ತಹಶೀಲ್ದಾರ್ ವಿವೇಕ್ ಶೆಣ್ವಿ ಅಸಾಯಕ ಶಿವು ಹಳ್ಳೇರ ವೃದ್ದಾಪ್ಯ ವೇತನ ರದ್ದುಗೊಳಿಸಿ ಬಿಟ್ಟರು! ಅದಕ್ಕವರು ನೀಡಿದ ಕಾರಣ ಶಿವು ಹೊನ್ನಾವರ ತಾಲ್ಲೂಕಿನಲ್ಲಿ ವಾಸ್ತವ್ಯ ಮಾಡುತ್ತಿಲ್ಲ ಎಂಬುದಾಗಿತ್ತು. ಹೊನ್ನಾವರದ ಕಂದಾಯ ಅಧಿಕಾರಿಗಳು ಶಿವುರ ಅತಿ ಮುಖ್ಯ ದಾಖಲೆಯಾದ ಆಧಾರ ಕಾರ್ಡ್, ಮತದಾರ ಗುರುತಿನ ಚೀಟಿ, ಬಿಪಿಎಲ್ ಪಡಿತರ ಕಾರ್ಡ್, ಆಯುಷ್ಮಾನ್ ಆರೋಗ್ಯ ಕಾರ್ಡ್ ಅಥವಾ ಪಿಂಚಣಿ ಸಂದಾಯವಾಗುತ್ತಿದ್ದ ಅಂಚೆ ಇಲಾಖೆಯ ಪಾಸ್ ಬುಕ್‌ನಂಥ ಯಾವ ದಾಖಲೆಯನ್ನೂ ಪರಿಶೀಲಿಸದೆ ಎಡವಟ್ಟು ತೀರ್ಮಾನಕ್ಕೆ ಬಂದಿದ್ದರು! ತಹಶೀಲ್ದಾರರ ವಿವೇಚನಾರಹಿತ ಕ್ರಮವನ್ನು ಅಂದಿನ ಜಿಲ್ಲಾಧಿಕಾರಿ ಹರೀಶ್ ಕುಮಾರ್ ಎತ್ತಿ ಹಿಡಿದಿದ್ದು ಶಿವು ಹಳ್ಳಿರಗೆ ಅನ್ಯಾಯ ಮಾಡಿತ್ತು.

ಅಶಿಕ್ಷಿತ-ಅಮಾಯಕ ಶಿವು ಹಳ್ಳೇರ ಏನು ಮಾಡಬೇಕೆಂದು ತಿಳಿಯದೆ ಒದ್ದಾಡುತ್ತಿರುವಾಗ ಊರಿನ ಜಿ.ಎನ್.ಭಟ್ಟರಿಗೆ ವಿಷಯ ತಿಳಿಯುತ್ತದೆ. ಅವರು ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ, ತಹಶೀಲ್ದಾರ್‌ರಿಗೆ ಶಿವು ಹಳ್ಳೇರಗಾಗಿರುವ ತೊಂದರೆ ವಿವರಿಸಿ 2018ರ ಆಗಸ್ಟ್‌ನಿಂದ ಪಿಂಚಣಿ ಬಟವಡೆ ಮಾಡುವಂತೆ ಮನವಿ ಮಾಡುತ್ತಾರೆ. ಸರಕಾರಿ ಅಧಿಕಾರಿಗಳೊಂದಿಗೆ ವ್ಯವಹರಿಸುವ ಶಕ್ತಿ ವಯೋವೃದ್ಧ-ಅಶಿಕ್ಷಿತ ಶಿವುಗೆ ಇಲ್ಲದಿರುವುದರಿಂದ ಮತ್ತು ಅವರಿಗೆ ಕಿವಿ ಕೇಳಿಸದಿರುವುದರಿಂದ ಭಟ್ಟರೆ ಅರ್ಜಿ ಸಲ್ಲಿಸಿದ್ದರು. ಆದರೆ ಆರೆಂಟು ತಿಂಗಳು ಕಳೆದರೂ ತಹಶೀಲ್ದಾರ್ ಸಾಹೇಬರಿಂದ ಕನಿಷ್ಟ ಹಿಂಬರಹವೂ ಬರಲಿಲ್ಲ. ಜಿಲ್ಲಾಧಿಕಾರಿಗಳ ವಾಟ್ಸಪ್‌ಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಲಿಲ್ಲ!

ಕಂದಾಯ ಅಧಿಕಾರಿಗಳು ಆಗಿರುವ ಅಚಾತುರ್ಯವನ್ನು ಅರಿತು ಕ್ಷಣಾರ್ಧದಲ್ಲಿ ಪರಿಹರಿಸಬಹುದಾಗಿದ್ದ ಈ ಸಣ್ಣ ಸಮಸ್ಯೆಯನ್ನು ಗೋಜಲುಗೊಳಿಸಲಾಗಿತ್ತು. ಬಡಪಾಯಿ ಶಿವುರ ಗೋಳು ಹೇಳತೀರದಾಗಿತ್ತು. ಆಗ ಅನಿವಾರ್ಯವಾಗಿ ಭಟ್ಟರು 30 ನವೆಂಬರ್ 2019ರಂದು ಬೆಂಗಳೂರಲ್ಲಿರುವ ಲೋಕಾಯುಕ್ತ ಕಚೇರಿಗೆ ಖುದ್ದು ಹೋಗಿ ದೂರು ದಾಖಲಿಸಿದರು. ಆಗಲೂ ತಹಶೀಲ್ದಾರ್ ಹಿಂದೆ ಮಾಡಿದ ತಪ್ಪನ್ನೇ ಮತ್ತೆ ಮಾಡಿದರು. ಶಿವುರ ವಾಸ್ತವ್ಯ ಹೊನ್ನಾವರ ತಾಲೂಕಿನಲ್ಲಿಯೇ ಇದೆಯೆಂದು ದೃಢಪಡಿಸುವ ಯಾವ ದಾಖಲೆಯನ್ನೂ ಪರಿಗಣಿಸಲೇ ಇಲ್ಲ. ಫಲಾನುಭವಿ ಹೊನ್ನಾವರ ತಾಲೂಕಿ ಹೆರಂಗಡಿ ವ್ಯಾಪ್ತಿಯಲ್ಲಿಲ್ಲವೆಂದು ತಹಶೀಲ್ದಾರ್ ವರದಿ ತಯಾರಿಸಿದ್ದರು. ಇದನ್ನೆ ಡಿಸಿ ಸಾಹೇಬರು ಕಣ್ಣು ಮುಚ್ಚಿ ಲೋಕಾಯುಕ್ತಕ್ಕೆ ರವಾನಿಸಿಬಿಟ್ಟಿದ್ದರು!

ಆದರೆ ಲೋಕಾಯುಕ್ತದಲ್ಲಿದ್ದ ದೂರನ್ನು ಮುಗಿಸಿಕೊಳ್ಳುವ ಅನಿವಾರ್ಯತೆಗೆ ಸಿಲುಕಿದ್ದ ತಹಶೀಲ್ದಾರ್ ಶಿವು ಹಳ್ಳೇರ ರದ್ದಾದ ಪೆನ್‌ಷನ್ ಪುನಃ ಪ್ರಾರಂಭಿಸಬೇಕಾಗಿ ಬಂತು. ಆದರೆ ಇಲ್ಲೂ ಪ್ರಮಾದವಾಗಿತ್ತು. 1 ಅಕ್ಟೋಬರ್ 2020ರಿಂದ ಶಿವುರಿಗೆ ಪಿಂಚಣಿ ಬಟವಡೆ ಮಾಡುವಂತೆ ತಹಶೀಲ್ದಾರ್ ಆದೇಶಿಸಿದ್ದರು. ನ್ಯಾಯ ಕ್ರಮದಂತೆ ಶಿವುರ ಸಾಮಾಜಿಕ ಭದ್ರತಾ ಪಿಂಚಣಿ ವಿನಾ ಕಾರಣ ಸ್ಥಗಿತಗೊಳಿಸಲಾಗಿದ್ದ 2018ರ ಆಗಸ್ಟ್ ತಿಂಗಳಿಂದ ಬಾಕಿಯಿದ್ದ ಮೊತ್ತ ಬರಬೇಕಿತ್ತು. ಕಂದಾಯ ಅಧಿಕಾರಿಗಳ ಈ ಅವಾಂತರವನ್ನು ಮತ್ತೆ ಭಟ್ಟರು ಲೋಕಾಯುಕ್ತರ ಗಮನಕ್ಕೆ ತಂದರು. ಆದರೆ ಲೋಕಾಯುಕ್ತದಿಂದ ಯಾವ ಕ್ರಮವೂ ಆಗಿಲ್ಲ. ಲೋಕಾಯುಕ್ತದ ವಿಫಲತೆ ಶಿವುರನ್ನು ದಿಕ್ಕೆಡಿಸಿಬಿಟ್ಟಿದೆ.

ಲೋಕಾಯುಕ್ತರಂತವರೆ ಬಡಪಾಯಿ ಶಿವುರ ಸಮಸ್ಯೆ ಪರಿಗಣಿಸದಿರುವಾಗ ಅವರಿಗೆ ಇನ್ನೆಲ್ಲಿ ನ್ಯಾಯ ಸಿಗುತ್ತದೆ? ಹರ ಕೊಲ್ಲಲ್ ನರ ಕಾಯ್ವನೆ ಎಂಬಂತಾಗಿದೆಯೆಂದು ಜನರಾಡಿ ಕೊಳ್ಳುತ್ತಿದ್ದಾರೆ. ಜಿಲ್ಲಾಧಿಕಾರಿ ಮತ್ತಿತರ ಕಂದಾಯ ಅಧಿಕಾಗಳು ಗ್ರಾಮ ವಾಸ್ತವ್ಯ ಮಾಡಿ ಅರ್ಹರಿಗೆ ಸ್ಥಳದಲ್ಲೆ ವೃದ್ದಾಪ್ಯ ಮಂಜೂರಿ ಮಾಡುತ್ತಾರೆ. 60 ವರ್ಷ ಮೀರಿದ ಫಲಾನುಭವಿಗಳಿಗೆ ಪಿಂಚಣಿ ಮನೆ ಬಾಗಿಲಲ್ಲೆ ವಿತರಿಸಲಾಗುತ್ತದೆಂದು ಕಂದಾಯ ಮಂತ್ರಿ ಆರ್.ಅಶೋಕ್ ಹೇಳುತ್ತಾರೆ. ವಿಪರ್ಯಾಸವೆಂದರೆ ಮಂಜೂರಿಯಾಗಿ ಬರುತ್ತಿರುವ ಪಿಂಚಣಿಯನ್ನೆ ಕಿತ್ತುಕೊಳ್ಳುವ ಕ್ರೌರ್ಯ ಇನ್ನೊಂದೆಡೆಯಾಗುತ್ತಿದೆ!


ಇದನ್ನೂ ಓದಿ: ದಲಿತ ಮಹಿಳೆಯರನ್ನು ಕಾನೂನುಬಾಹಿರವಾಗಿ ಸೇವೆಯಿಂದ ವಜಾಗೊಳಿಸಿದ ನಿಮ್ಹಾನ್ಸ್‌: ಆರೋಪ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ವೆನೆಜುವೆಲಾದ ತೈಲ ಖರೀದಿಗೆ ಅಮೆರಿಕದ ಅನುಮತಿ ಪಡೆಯಲು ರಿಲಯನ್ಸ್ ಮಾತುಕತೆ : ವರದಿ

ಭಾರತದ ರಿಲಯನ್ಸ್ ಇಂಡಸ್ಟ್ರೀಸ್ ವೆನೆಜುವೆಲಾದ ಕಚ್ಚಾ ತೈಲ ಖರೀದಿಯನ್ನು ಪುನರಾರಂಭಿಸಲು ಅಮೆರಿಕದ ಅನುಮೋದನೆಯನ್ನು ಕೋರುತ್ತಿದೆ ಎಂದು ಈ ವಿಷಯದ ಬಗ್ಗೆ ಗೊತ್ತಿರುವ ಎರಡು ಮೂಲಗಳು ಶುಕ್ರವಾರ ತಿಳಿಸಿವೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್...

ಐ-ಪ್ಯಾಕ್‌ ಮೇಲೆ ದಾಳಿ | ಇಡಿ ಅಧಿಕಾರಿಗಳ ವಿರುದ್ಧ ತನಿಖೆ ಪ್ರಾರಂಭಿಸಿದ ಕೋಲ್ಕತ್ತಾ ಪೊಲೀಸರು : ಸುಪ್ರೀಂ ಕೋರ್ಟ್‌ನಲ್ಲಿ ಕೇವಿಯಟ್ ಸಲ್ಲಿಸಿದ ಪ. ಬಂಗಾಳ ಸರ್ಕಾರ

ಐ-ಪ್ಯಾಕ್ ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ ನಡೆಸಿದ ಸಂದರ್ಭದಲ್ಲಿ ದಾಖಲೆಗಳ ಕಳ್ಳತನದ ಆರೋಪದ ಮೇಲೆ ಕೋಲ್ಕತ್ತಾ ಪೊಲೀಸರು ಶನಿವಾರ (ಜ.10)...

ಟ್ರಂಪ್ ಸಂಚಿಗೆ ತಿರುಗೇಟು : ನಾವು ಯಾರ ಅಡಿಯಾಳಾಗಲು ಸಿದ್ದರಿಲ್ಲ ಎಂದ ಗ್ರೀನ್‌ಲ್ಯಾಂಡ್‌ನ ರಾಜಕೀಯ ಪಕ್ಷಗಳು

ವೆನೆಜುವೆಲಾ ಬಳಿಕ ಖನಿಜ-ಸಮೃದ್ಧ ಡ್ಯಾನಿಶ್ (ಡೆನ್ಮಾರ್ಕ್‌) ಸ್ವಾಯತ್ತ ಪ್ರದೇಶವಾದ ಗ್ರೀನ್‌ ಲ್ಯಾಂಡ್‌ ಮೇಲೆ ಬಲಪ್ರಯೋಗ ಮಾಡಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಯೋಜಿಸುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗ್ರೀನ್‌ಲ್ಯಾಂಡ್‌ನ ರಾಜಕೀಯ ಪಕ್ಷಗಳು...

ಮತ್ತೆ ಒಂದಾದ ಎನ್‌ಸಿಪಿ ಬಣಗಳು : ಸುಪ್ರಿಯಾ ಸುಳೆ ಜೊತೆ ವೇದಿಕೆ ಹಂಚಿಕೊಂಡ ಅಜಿತ್ ಪವಾರ್, ಜಂಟಿ ಪ್ರಣಾಳಿಕೆ ಬಿಡುಗಡೆ

ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಮತ್ತು ಅವರ ಚಿಕ್ಕಪ್ಪ ಶರದ್ ಪವಾರ್ ನೇತೃತ್ವದ ಎನ್‌ಸಿಪಿ (ಎಸ್‌ಪಿ) ಶನಿವಾರ (ಜ.10) ಪುಣೆ ಮಹಾನಗರ ಪಾಲಿಕೆಗೆ ನಡೆಯಲಿರುವ ಚುನಾವಣೆಗೆ ಜಂಟಿ ಪ್ರಣಾಳಿಕೆಯನ್ನು ಬಿಡುಗಡೆ...

ಮಹಾರಾಷ್ಟ್ರ : ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿಯನ್ನು ಕೌನ್ಸಿಲರ್ ಮಾಡಿದ ಬಿಜೆಪಿ

ಬದ್ಲಾಪುರ ಲೈಂಗಿಕ ದೌರ್ಜನ್ಯ ಪ್ರಕರಣದ ಸಹ ಆರೋಪಿ ಮತ್ತು ಶಾಲೆಯೊಂದರ ಮಾಜಿ ಕಾರ್ಯದರ್ಶಿ ತುಷಾರ್ ಆಪ್ಟೆ ಎಂಬಾತನನ್ನು ಥಾಣೆ ಜಿಲ್ಲೆಯ ಕುಲ್ಗಾಂವ್-ಬದ್ಲಾಪುರ ಮುನ್ಸಿಪಲ್ ಕೌನ್ಸಿಲ್‌ಗೆ ಬಿಜೆಪಿ ನಾಮನಿರ್ದೇಶನ ಮಾಡಿದೆ. ಮುನ್ಸಿಪಲ್ ಕೌನ್ಸಿಲ್ ಅಧ್ಯಕ್ಷೆ ರುಚಿತಾ...

ಕಳ್ಳನೆಂದು ಸುಳ್ಳಾರೋಪ ಹೊರಿಸಿ ಜೈಲಿಗಟ್ಟಿದ ಪೊಲೀಸರು : ಸಂತ್ರಸ್ತಗೆ 14 ಲಕ್ಷ ರೂ. ಪರಿಹಾರ ನೀಡಲು ಕೋರ್ಟ್ ಆದೇಶ

ಕಳ್ಳನೆಂದು ಸುಳ್ಳಾರೋಪ ಹೊರಿಸಿ ಪೊಲೀಸರು ಜೈಲಿಗಟ್ಟಿದ ವ್ಯಕ್ತಿಗೆ 14 ಲಕ್ಷ ರೂಪಾಯಿ ಪರಿಹಾರ ಒದಗಿಸುವಂತೆ ಕೇರಳ ಸರ್ಕಾರಕ್ಕೆ ಹೈಕೋರ್ಟ್ ಆದೇಶಿಸಿದೆ. ಕಣ್ಣೂರು ಮೂಲದ ವಿ.ಕೆ ತಾಜುದ್ದೀನ್ ಕಾನೂನು ಹೋರಾಟದಲ್ಲಿ ಗೆದ್ದು ಪರಿಹಾರ ಪಡೆದ ವ್ಯಕ್ತಿ....

ಇರಾನ್‌ನಲ್ಲಿ ತೀವ್ರಗೊಂಡ ಆಡಳಿತ ವಿರೋಧಿ ಪ್ರತಿಭಟನೆ : ಟ್ರಂಪ್ ಮಧ್ಯಪ್ರವೇಶ ಕೋರಿದ ಮಾಜಿ ದೊರೆಯ ಮಗ

ಇರಾನ್‌ನಲ್ಲಿ ಭುಗಿಲೆದ್ದಿರುವ ಆಡಳಿತ ವಿರೋಧಿ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ. 2025ರ ಡಿಸೆಂಬರ್ 28ರಂದು ಪ್ರಾರಂಭಗೊಂಡ ಪ್ರತಿಭಟನೆಗಳು ಹಿಂಸಾಚಾರ ರೂಪ ಪಡೆದುಕೊಂಡು 13ನೇ ದಿನವೂ ಮುಂದುವರಿದಿದೆ. ಆರ್ಥಿಕ ಬಿಕ್ಕಟ್ಟಿನ ವಿರುದ್ದ (ರಿಯಾಲ್ ಕರೆನ್ಸಿ ಮೌಲ್ಯ...

ಮತದಾರರ ಹೆಸರು ಅಳಿಸಲು ಯತ್ನ : ಬಿಜೆಪಿ ವಿರುದ್ಧ 5 ವಿಪಕ್ಷಗಳಿಂದ ದೂರು ದಾಖಲು

ಅಸ್ಸಾಂನ ಐದು ವಿರೋಧ ಪಕ್ಷಗಳು ಶುಕ್ರವಾರ (ಜ.9) ಪೊಲೀಸ್ ದೂರು ದಾಖಲಿಸಿದ್ದು, ಆಡಳಿತಾರೂಢ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ರಾಜ್ಯದ ಮತದಾರರ ಪಟ್ಟಿಯಿಂದ ಹೆಚ್ಚಿನ ಸಂಖ್ಯೆಯ ನಿಜವಾದ ಮತದಾರರ ಹೆಸರನ್ನು ಅಳಿಸಲು ಸಂಚು...

ಐ-ಪ್ಯಾಕ್ ಮೇಲೆ ದಾಳಿ ಪ್ರಕರಣ: ಮಮತಾ ಬ್ಯಾನರ್ಜಿ ದೂರಿನ ಬೆನ್ನಲ್ಲೇ ಜಾರಿ ನಿರ್ದೇಶನಾಲಯದ ವಿರುದ್ಧ ಎಫ್‌ಐಆರ್

ಕೋಲ್ಕತ್ತಾ: ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ನಡೆಸಿದ ದಾಳಿಗೆ ಸಂಬಂಧಿಸಿದಂತೆ ಟಿಎಂಸಿ ಅಧ್ಯಕ್ಷೆ ಮಮತಾ ಬ್ಯಾನರ್ಜಿ...

‘ಭ್ರಷ್ಟ ಜನತಾ ಪಾರ್ಟಿ’: ಬಿಜೆಪಿ ಡಬಲ್ ಎಂಜಿನ್ ಆಡಳಿತದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ನವದೆಹಲಿ: ವಿವಿಧ ರಾಜ್ಯಗಳಲ್ಲಿ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರಗಳ ವಿರುದ್ಧ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.  ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಹುಲ್, ಉತ್ತರಾಖಂಡದಲ್ಲಿ ಅಂಕಿತ...