Homeಮುಖಪುಟಗಣರಾಜ್ಯೋತ್ಸವ ಪರೇಡ್‌‌ ಟ್ಯಾಬ್ಲೊ ವಿವಾದ: ಒಕ್ಕೂಟ ಸರ್ಕಾರದ ನಿರ್ಧಾರವನ್ನು ಸಮರ್ಥಿಸಿಕೊಂಡ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌

ಗಣರಾಜ್ಯೋತ್ಸವ ಪರೇಡ್‌‌ ಟ್ಯಾಬ್ಲೊ ವಿವಾದ: ಒಕ್ಕೂಟ ಸರ್ಕಾರದ ನಿರ್ಧಾರವನ್ನು ಸಮರ್ಥಿಸಿಕೊಂಡ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌

- Advertisement -
- Advertisement -

ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರಿಗೆ ಮಂಗಳವಾರ ಪತ್ರ ಬರೆದಿದ್ದು, ಅದರಲ್ಲಿ ಎರಡೂ ರಾಜ್ಯಗಳ ಟ್ಯಾಬ್ಲೋಗಳನ್ನು ನಿರಾಕರಿಸಿರುವ ತಮ್ಮ ಸರ್ಕಾರದ ನಿರ್ಧಾರಗಳನ್ನು ಸಮರ್ಥಿಸಿಕೊಂಡಿದ್ದಾರೆ. ಪತ್ರದಲ್ಲಿ ಅವರು, ಗಣರಾಜ್ಯೋತ್ಸವದ ಪರೇಡ್‌ಗೆ ಟ್ಯಾಬ್ಲೊಗಳನ್ನು ಆಯ್ಕೆ ಮಾಡುವ ನಿರ್ಧಾರಗಳನ್ನು ವಿವರವಾದ ಮಾರ್ಗಸೂಚಿಗಳ ಪ್ರಕಾರ ತೆಗೆದುಕೊಳ್ಳಲಾಗಿದೆ ಎಂದು ಹೇಳಿದ್ದಾರೆ.

ಎರಡೂ ರಾಜ್ಯಗಳಿಂದ ಟ್ಯಾಬ್ಲೋ ಪ್ರಸ್ತಾಪಗಳನ್ನು ತಿರಸ್ಕರಿಸಿರುವುದರಿಂದ ಇದು ವಿವಾದವಾಗಿದ್ದು, ತೀವ್ರ ವಿವಾದಕ್ಕೆ ಗುರಿಯಾಗಿದೆ. ಈ ನಡುವೆ ರಕ್ಷಣಾ ಸಚಿವರು ಮುಖ್ಯಮಂತ್ರಿಗಳಿಬ್ಬರಿಗೆ ಪತ್ರ ಬರೆದಿದ್ದಾರೆ.

ಇದನ್ನೂ ಓದಿ:ನಾರಾಯಣ ಗುರುಗಳ ಟ್ಯಾಬ್ಲೊ ನಿರಾಕರಣೆ ವಿವಾದ: ಸುಳ್ಳು ಹೇಳಿದ ಸಚಿವ ಸುನಿಲ್ ಕುಮಾರ್‌?

ಪಶ್ಚಿಮ ಬಂಗಾಳವು ನೇತಾಜಿ ಸುಭಾಸ್ ಚಂದ್ರ ಬೋಸ್ ಮತ್ತು ಸ್ವಾತಂತ್ರ್ಯ ಚಳುವಳಿಗೆ ಭಾರತೀಯ ರಾಷ್ಟ್ರೀಯ ಸೇನೆಯ ಕೊಡುಗೆಯ ಬಗ್ಗೆಗಿನ ಟ್ಯಾಬ್ಲೋಗಳನ್ನು ಪ್ರದರ್ಶಿಸಿದರೆ, ತಮಿಳುನಾಡು ಸಲ್ಲಿಸಿದ ವಿನ್ಯಾಸದಲ್ಲಿ ಸ್ವಾತಂತ್ಯ್ರ ಹೋರಾಟಗಾರ ಸುಬ್ರಮಣ್ಯ ಭಾರತಿ, ವಿ.ಒ. ಚಿದಂಬರನಾರ್ ಮತ್ತು ವೇಲು ನಾಚಿಯಾರ್‌ ಅವರಂತಹ ಪ್ರಮುಖ ಸ್ವಾತಂತ್ರ್ಯ ಹೋರಾಟಗಾರರ ಚಿತ್ರಣ ಒಳಗೊಂಡಿತ್ತು.

ರಕ್ಷಣಾ ಸಚಿವರು ಮಮತಾ ಬ್ಯಾನರ್ಜಿ ಅವರಿಗೆ ಬರೆದ ಪತ್ರದಲ್ಲಿ, “ನರೇಂದ್ರ ಮೋದಿ ಸರ್ಕಾರವು ನೇತಾಜಿಯನ್ನು ಹೆಚ್ಚು ಗೌರವಿಸುತ್ತದೆ. ಅವರ ಜನ್ಮದಿನವಾದ ಜನವರಿ 23 ಅನ್ನು ‘ಪರಾಕ್ರಮ್ ದಿವಸ್’ ಎಂದು ಆಚರಿಸುತ್ತದೆ. ಇನ್ನು ಮುಂದೆ ಅವರ ಜನ್ಮ ದಿನಾಚರಣೆಯೊಂದಿಗೆ ಗಣರಾಜ್ಯೋತ್ಸವ ಆಚರಣೆಗಳು ಆರಂಭಗೊಂಡು ಜನವರಿ 30 ರಂದು ಮುಕ್ತಾಯಗೊಳ್ಳಲಿದೆ” ಎಂದು ಹೇಳಿದ್ದಾರೆ.

ಗಣರಾಜ್ಯೋತ್ಸವ ಪರೇಡ್‌ಗಾಗಿ ಟ್ಯಾಬ್ಲೊಗಳನ್ನು ಆಯ್ಕೆ ಮಾಡುವ ಪ್ರಕ್ರಿಯೆಯು ಪಾರದರ್ಶಕವಾಗಿದೆ ಮತ್ತು ಸೂಕ್ತ ಮಾರ್ಗಸೂಚಿಗಳನ್ನು ಅನುಸರಿಸುತ್ತದೆ ಎಂದು ರಾಜನಾಥ್‌ ಸಿಂಗ್ ಹೇಳಿದ್ದಾರೆ.

ಇದನ್ನೂ ಓದಿ:ಗಣರಾಜ್ಯೋತ್ಸವ ಟ್ಯಾಬ್ಲೊ: ತಮಿಳುನಾಡಿಗೂ ನಿರಾಕರಣೆ; ಸ್ವಾತಂತ್ಯ್ರ ಹೋರಾಟಗಾರನನ್ನು ‘ವ್ಯಾಪಾರಿ’ ಎಂದು ಕರೆದ ಒಕ್ಕೂಟ ಸರ್ಕಾರ

ಕಲೆ, ಸಂಸ್ಕೃತಿ, ಸಂಗೀತ ಮತ್ತು ನೃತ್ಯ ಕ್ಷೇತ್ರಗಳ ವ್ಯಕ್ತಿಗಳನ್ನು ಒಳಗೊಂಡ ಸಮಿತಿಯು ರಾಜ್ಯಗಳು ಕಳುಹಿಸಿರುವ ವಿನ್ಯಾಸ ಪ್ರಸ್ತಾವನೆಗಳನ್ನು ಪರಿಶೀಲಿಸುತ್ತದೆ ಮತ್ತು ಯಾವುದನ್ನು ಆಯ್ಕೆ ಮಾಡಬೇಕೆಂದು ನಿರ್ಧರಿಸುತ್ತದೆ ಎಂದು ಅವರು ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.

ಈ ವರ್ಷ 29 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಕಳುಹಿಸಿದ ವಿನ್ಯಾಸಗಳಲ್ಲಿ 12 ವಿನ್ಯಾಸ ಪ್ರಸ್ತಾವನೆಗಳನ್ನು ಆಯ್ಕೆ ಮಾಡಲಾಗಿದೆ ಎಂದು ರಾಜನಾಥ್‌ ಸಿಂಗ್ ಹೇಳಿದ್ದಾರೆ.

ನೇತಾಜಿಯವರ 125ನೇ ಜನ್ಮದಿನಾಚರಣೆಯಂದು ಒಕ್ಕೂಟ ಸರ್ಕಾರದ ಲೋಕೋಪಯೋಗಿ ಇಲಾಖೆಯ ಟ್ಯಾಬ್ಲೋ ಕೂಡ ನೇತಾಜಿ ಅವರಿಗೆ ಗೌರವ ಸಲ್ಲಿಸುತ್ತದೆ ಎಂದು ಅವರು ಹೇಳಿದ್ದಾರೆ.

ತಮಿಳುನಾಡು ಮುಖ್ಯಮಂತ್ರಿಗೆ ಬರೆದ ಪತ್ರದಲ್ಲಿ, “ಟ್ಯಾಬ್ಲೊ ಆಯ್ಕೆಯನ್ನು ನಿಗದಿಪಡಿಸಿದ ಮಾರ್ಗಸೂಚಿಗಳ ಪ್ರಕಾರ ಮಾಡಲಾಗುತ್ತದೆ. ತಮಿಳುನಾಡಿನ ವಿನ್ಯಾಸವು ಮೊದಲ ಮೂರು ಸುತ್ತಿನ ಸಭೆಗಳಲ್ಲಿ ಆಯ್ಕೆಯಾಗಿದ್ದರೂ, ಅದನ್ನು ಅಂತಿಮವಾಗಿ ಆಯ್ಕೆ ಮಾಡಿದ 12 ಟ್ಯಾಬ್ಲೊಗಳಲ್ಲಿ ಅದನ್ನು ಆಯ್ಕೆ ಮಾಡಲು ಸಾಧ್ಯವಾಗಲಿಲ್ಲ” ಎಂದು ಹೇಳಿದ್ದಾರೆ.

ಇದನ್ನೂ ಓದಿ:ಸತತ 3 ನೇ ಬಾರಿ ಗಣರಾಜ್ಯೋತ್ಸವ ಪರೇಡ್‌ನಿಂದ ಕೇರಳ ಹೊರಕ್ಕೆ: ನಾರಾಯಣ ಗುರು ಸ್ತಬ್ಧಚಿತ್ರ ಪ್ರದರ್ಶನಕ್ಕೆ ಕೇಂದ್ರದ ನಿರಾಕರಣೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಸಿದ್ದರಾಮಯ್ಯ ಸರ್ಕಾರ ಮುಸ್ಲಿಮರನ್ನು ಒಬಿಸಿ ಪಟ್ಟಿಗೆ ಸೇರಿಸಿದ್ದು ನಿಜಾನಾ?

0
ಕರ್ನಾಟಕದಲ್ಲಿ ಮುಸ್ಲಿಮರನ್ನು ಹಿಂದುಳಿದ ವರ್ಗಕ್ಕೆ ಸೇರಿಸುವ ಮೂಲಕ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಿಂದುಳಿದ ವರ್ಗಗಳ 36 ಜಾತಿಗಳಿಗೆ ಅನ್ಯಾಯ ಮಾಡಿದೆ ಎಂದು ಬಿಜೆಪಿ ಆರೋಪಿಸಿದೆ. ಸಿದ್ದರಾಮಯ್ಯ ಸರ್ಕಾರ ಹಿಂದುಳಿದ ವರ್ಗಗಳಿಗೆ...