ರಾಜ್ಯ ಗೃಹಸಚಿವ ಬಸವರಾಜ ಬೊಮ್ಮಾಯಿ ರಾಜಿನಾಮೆ ನೀಡುವಂತೆ ಆಗ್ರಹಿಸಿ ಟ್ವಿಟ್ಟರ್‌ನಲ್ಲಿ #ResignBSBommai ಟ್ರಂಡ್ ಆಗಿದೆ.
‘ನಿಮ್ಮ ಮೇಲೆ ಯಾವುದೇ ಕೇಸಿದ್ದರೂ, ಎಲ್ಲಾ ತೆಗೆದು ಹಾಕುತ್ತೇವೆʼ ಎಂದು ಸ್ವತಃ ಗೃಹ ಸಚಿವ ಬಸವರಾಜ ಬೊಮ್ಮಾಯಿಯವರು ಹೇಳಿರುವ ವಿವಾದಾತ್ಮಕ ವಿಡಿಯೋವೊಂದನ್ನು ಅಕಸ್ಮಾತಾಗಿ ವಿಎಚ್‌ಪಿ ಮುಖಂಡ ಶರಣ್ ಪಂಪ್‌ವೆಲ್ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದು, ಇದನ್ನು ನಾನುಗೌರಿ.ಕಾಮ್ ಬಯಲಿಗೆಳೆದಿತ್ತು, ಪ್ರಸ್ತುತ ವಿಡಿಯೊ ವೈರಲಾಗಿದೆ.
#ResignBSBommai ಎಂಬ ಹ್ಯಾಷ್ ಟ್ಯಾಗ್‌ನೊಂದಿಗೆ ಸುಮಾರು ಏಳು ಸಾವಿರಕ್ಕೂ ಅಧಿಕ ಮಂದಿ ಟ್ವೀಟ್ ಮಾಡಿದ್ದು, ಕರ್ನಾಟಕ ಟ್ರೆಂಡಿಂಗ್‌ಲ್ಲಿ ಮೂರನೇ ಸ್ಥಾನದಲ್ಲಿದೆ.
ವಕೀಲರಾದ ವಿನಯ ಶ್ರೀನಿವಾಸ ಅವರು ಟ್ವೀಟ್ ಮಾಡಿದ್ದು, “ಕರ್ನಾಟಕ ಗೃಹಸಚಿವರು ನಿಮ್ಮ ಮೇಲೆ ಯಾವುದೆ ಕೇಸಿದ್ದರೂ ತೆಗೆದು ಹಾಕುತ್ತೇವೆ ಎಂದು ವಿಎಚ್‌ಪಿ ಮುಖಂಡರಿಗೆ ಹೇಳುತ್ತಿದ್ದಾರೆ? ಏನಿದರ ಅರ್ಥ? ಬೊಮ್ಮಾಯಿ ರಾಜಿನಾಮೆ ನೀಡಲೇ ಬೇಕು” ಎಂದು ಟ್ವೀಟ್ ಮಾಡಿದ್ದಾರಲ್ಲದೆ, ವರದಿಯನ್ನು ಸುದ್ದಿ ಮಾಡಿದ್ದಕ್ಕೆ ನಾನುಗೌರಿ.ಕಾಮ್ ಸೇರಿದಂತೆ ಇರತ ಪತ್ರಿಕೆಗೂ ಧನ್ಯವಾದ ಹೇಳಿದ್ದಾರೆ.
Ktaka Home Min. @BSBommai tells VHP leader "Nimma mele yaavude case iddaru tegedu hakkutteve" (we will remove any criminal cases against you) !
What does this mean @BSYBJP ? Bommai should resign!
Thx to @PrabhuM_journo for spotting and @prajavani , @naanugauri for covering! pic.twitter.com/8t2NvpqxdG
— vinaysreenivasa ವಿನಯ (@vinaysreeni) August 14, 2020
ಇರ್ಷಾ ಮಾಝ್ ಎಂಬವರು, “ಏನ್ರೀ ಇದು ಸರ್ವಾಧಿಕಾರನಾ ?ಗೂಂಡಾಗಳಿಗೆ ಬೆಂಬಲ ನೀಡುತ್ತಿರುವ ಗೃಹಸಚಿವರು. ಸಾರ್ವಜನಿಕವಾಗಿ ಕೋಮು ಗಲಭೆಯ ಆರೋಪಿಗೆ ಬೇಷರತ್ ಭರವಸೆ ನೀಡಿದ ಗೃಹ ಸಚಿವರು ಕೂಡಲೇ ರಾಜೀನಾಮೆ ನೀಡಬೇಕು.” ಎಂದು ಟ್ವೀಟ್ ಮಾಡಿದ್ದಾರೆ.
ಏನ್ರೀ ಇದು ಸರ್ವಾಧಿಕಾರನಾ ???ಗೂಂಡಾಗಳಿಗೆ ಬೆಂಬಲ ನೀಡುತ್ತಿರುವ @BSBommai
ಸಾರ್ವಜನಿಕವಾಗಿ ಕೋಮು ಗಲಭೆಯ ಆರೋಪಿಗೆ ಬೇಷರತ್ ಭರವಸೆ ನೀಡಿದ ಗೃಹ ಸಚಿವರು ಕೂಡಲೇ ರಾಜೀನಾಮೆ ನೀಡಬೇಕು.#ResignBSBommai @Tv9kannadanews @H_D_Devegowda @siddaramaiah @DKShivakumar @CMofKarnataka @DKShivakumar
— Irsha Maaz (@IrshaMaaz) August 14, 2020
ಚೈತ್ರ ವಿ. ಗಿರೀಶ್ ಕುಮಾರ್, “ಅತ್ಯಂತ ಸಮರ್ಥ ಗೃಹಸಚಿವರುಗಳನ್ನು ಕಂಡ ಕರ್ನಾಟಕ ರಾಜ್ಯಕ್ಕೆ ಇಂತಹ ಬೇಜವಾಬ್ದಾರಿ ಹೇಳಿಕೆ ನೀಡುವ ಗೃಹ ಸಚಿವರು ಸಿಕ್ಕಿರುವುದು ದುರಾದೃಷ್ಟಕರ. ತಕ್ಷಣ ರಾಜೀನಾಮೆ ನೀಡಿ” ಎಂದು ಆಗ್ರಹಿಸಿದ್ದಾರೆ.
ಅತ್ಯಂತ ಸಮರ್ಥ ಗೃಹಸಚಿವರುಗಳನ್ನು ಕಂಡ ಕರ್ನಾಟಕ ರಾಜ್ಯಕ್ಕೆ ಇಂತಹ ಬೇಜವಾಬ್ದಾರಿ ಹೇಳಿಕೆ ನೀಡುವ ಗೃಹ ಸಚಿವರು ಸಿಕ್ಕಿರುವುದು ದುರಾದೃಷ್ಟಕರ
ತಕ್ಷಣ ರಾಜೀನಾಮೆ ನೀಡಿ #ResignBSBommai
— Chaithra V Girishkumar (@Chaithravgiris2) August 14, 2020
ಎ.ಕೆ. ಅಶ್ರಫ್ ಟ್ವೀಟ್ ಮಾಡಿ, “ಗೃಹ ಸಚಿವ ಬೊಮ್ಮಾಯಿಯವರೇ, ಕೋಮುಗಲಭೆಯಯಿಂದ ಕರಾವಳಿ ಹೇಗೆ ಹೊತ್ತಿ ಉರಿದಿತ್ತು ನಿಮಗೆ ಗೊತ್ತಿಲ್ಲವೇ? ಅಂತಹ ಗಂಭೀರ ಆರೋಪ ಹೊತ್ತವರ ಕೇಸು ನೀವು ತೆಗೆದು ಹಾಕುವಿರಾ?” ಎಂದು ಪ್ರಶ್ನಿಸಿ ರಾಜಿನಾಮೆ ಕೊಡುವಂತೆ ಆಗ್ರಹಿಸಿದ್ದಾರೆ.
ಗೃಹ ಸಚಿವ ಬೊಮ್ಮಾಯಿಯವರೇ…!
ಕೋಮುಗಲಭೆಯಯಿಂದ ಕರಾವಳಿ ಹೇಗೆ ಹೊತ್ತಿ ಉರಿದಿತ್ತು ನಿಮಗೆ ಗೊತ್ತಿಲ್ಲವೇ? ಅಂತಹ ಗಂಭೀರ ಆರೋಪ ಹೊತ್ತವರ ಕೇಸು ನೀವು ತೆಗೆದು ಹಾಕುವಿರಾ?#ResignBSBommai
— A K Ashraf (@AK_AshrafJkt) August 14, 2020
ನೌಫಲ್ ಮೊಹಮ್ಮದ್ ಎಂಬವರು, “ಅಧಿಕಾರವನ್ನು ದುರುಪಯೋಗಪಡಿಸಿ ಬಜರಂಗದಳದ ಪುಂಡರ ಕೇಸ್ಗಳನ್ನು ಹಿಂಪಡೆಯುವ ವಾಗ್ದಾನವನ್ನು ನೀಡಿದ ಗೃಹಸಚಿವ ಬೊಮ್ಮಾಯಿ ರಾಜೀನಾಮೆ ನೀಡಲಿ” ಎಂದು ಆಗ್ರಹಿಸಿದ್ದಾರೆ.
ಅಧಿಕಾರವನ್ನು ದುರುಪಯೋಗಪಡಿಸಿ ಬಜರಂಗದಳದ ಪುಂಡರ ಕೇಸ್ಗಳನ್ನು ಹಿಂಪಡೆಯುವ ವಾಗ್ದಾನವನ್ನು ನೀಡಿದ ಗೃಹಸಚಿವ ಬೊಮ್ಮಾಯಿ ರಾಜೀನಾಮೆ ನೀಡಲಿ..#ResignBSBommai pic.twitter.com/XwBq4AMkm2
— Noufal muhammad (@Noufal49151618) August 14, 2020
ಶಿವಾಜಿ ನಗರದ ಕಾಂಗ್ರಸ್ ಟ್ವಿಟ್ಟರ್ ಖಾತೆ ಟ್ವೀಟ್ ಮಾಡಿ, “ಬೀಲ ಮುದುಡಿಕೊಂಡು ಬಿಲದೊಳಗಿದ್ದ ಗಲಭೆಕೋರರಿಗೆ ಈ ರೀತಿ ಸಾರ್ವಜನಿಕವಾಗಿ ಕ್ಲೀನ್ ಚಿಟ್ ನೀಡಿದರೆ ಅವರು ಮತ್ತೆ ಕರಾವಳಿಯಲ್ಲಿ ಶಾಂತಿ ಕದಡುವರು. ಕರಾವಳಿ ಜಿಲ್ಲೆಯಲ್ಲಿ ಶಾಂತಿ ಕಾಪಾಡಿ. ಗೃಹ ಸಚಿವರೇ, ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿ.” ಎಂದು ಆಗ್ರಹಿಸಿದ್ದಾರೆ.
ಬೀಲ ಮುದುಡಿಕೊಂಡು ಬಿಲದೊಳಗಿದ್ದ ಗಲಭೆಕೋರರಿಗೆ ಈ ರೀತಿ ಸಾರ್ವಜನಿಕವಾಗಿ ಕ್ಲೀನ್ ಚಿಟ್ ನೀಡಿದರೆ ಅವರು ಮತ್ತೆ ಕರಾವಳಿಯಲ್ಲಿ ಶಾಂತಿ ಕದಡುವರು
ಕರಾವಳಿ ಜಿಲ್ಲೆಯಲ್ಲಿ ಶಾಂತಿ ಕಾಪಾಡಿ
ಗೃಹ ಸಚಿವರೇ, ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿ #ResignBSBommai
— INC SHIVAJINAGAR SM (@ShivajinagarSM) August 14, 2020
ಓದಿ: ನಾನುಗೌರಿ ಬಯಲಿಗೆಳೆದ ಗೃಹಸಚಿವರ ವಿವಾದಾತ್ಮಕ ವೀಡಿಯೊ ಟ್ವೀಟ್ ಡಿಲಿಟ್ ಮಾಡಿದ ವಿಎಚ್‌ಪಿ ಮುಖಂಡ; ಇಲ್ಲಿದೆ ನೋಡಿ ವಿಡಿಯೋ


