Homeಕರೋನಾ ತಲ್ಲಣ74 ನೇ ಸ್ವಾತಂತ್ರ್ಯ ದಿನಾಚರಣೆ; ರಾಷ್ಟ್ರಪತಿ ರಾಮನಾಥ್ ಕೋವಿಂದ್ ಭಾಷಣ

74 ನೇ ಸ್ವಾತಂತ್ರ್ಯ ದಿನಾಚರಣೆ; ರಾಷ್ಟ್ರಪತಿ ರಾಮನಾಥ್ ಕೋವಿಂದ್ ಭಾಷಣ

ಕೊರೊನಾ ಯೋಧರಿಗೆ ಧನ್ಯವಾದ ಹೇಳಿರುವ ರಾಷ್ಟ್ರಪತಿಯವರ ಭಾಷಣದ ಮುಖ್ಯಾಂಶಗಳು ಇಲ್ಲಿದೆ

- Advertisement -
- Advertisement -

74 ನೇ ಸ್ವಾತಂತ್ರ್ಯ ದಿನಾಚರಣೆಯ ಹಿಂದಿನವಾದ ಇಂದು ರಾಷ್ಟ್ರಪತಿ ರಾಮ್‌ನಾಥ್ ಕೋವಿಂದ್ ಭಾಷಣ ಮಾಡಿದರು.

ಅವರ ಭಾಷಣದ ಮುಖ್ಯಾಂಶಗಳು ಇಲ್ಲಿವೆ:

  1. ಈ ವರ್ಷದ ಸ್ವಾತಂತ್ರ್ಯ ದಿನಾಚರಣೆಯ ಎಲ್ಲಾ ಚಟುವಟಿಕೆಗಳಿಗೆ ಮಾರಣಾಂತಿಕ ವೈರಸ್  ಅಡ್ಡಿಪಡಿಸಿದೆ. ಹಾಗೆಯೇ ಭಾರಿ ನಷ್ಟವನ್ನು ಉಂಟುಮಾಡಿದೆ.
  2. ಕೊರೊನಾ ಸಾಂಕ್ರಾಮಿಕ ರೋಗದಿಂದಾಗಿ ಸವಾಲುಗಳನ್ನು ಎದುರಿಸುವಲ್ಲಿ ಪರಿಣಾಮಕಾರಿಯಾಗಿ ಸ್ಪಂದಿಸುವುದು ಸರ್ಕಾರ ವತಿಯಿಂದ ನಡೆದ ಅತಿಮಾನುಷ ಪ್ರಯತ್ನವಾಗಿತ್ತು.
  3. ಈ ಪ್ರಯತ್ನಗಳಿಂದ, ನಾವು ಜಾಗತಿಕವಾಗಿ ಸಾಂಕ್ರಾಮಿಕ ರೋಗದ ಮೇಲೆ ಹಿಡಿತ ಸಾಧಿಸಿದ್ದೇವೆ ಮತ್ತು ಹೆಚ್ಚಿನ ಸಂಖ್ಯೆಯ ಜನರ ಜೀವಗಳನ್ನು ಉಳಿಸುವಲ್ಲಿ ಯಶಸ್ವಿಯಾಗಿದ್ದೇವೆ. ಇದು ಇಡೀ ಜಗತ್ತಿಗೆ ಒಂದು ಉದಾಹರಣೆಯಾಗಿದೆ.
  4. ಕೊರೊನಾ ವೈರಸ್ ವಿರುದ್ಧದ ಈ ಹೋರಾಟದಲ್ಲಿ ಮುಂಚೂಣಿ ಯೋಧರಾಗಿರುವ ಎಲ್ಲಾ ವೈದ್ಯರು, ದಾದಿಯರು ಮತ್ತು ಇತರ ಆರೋಗ್ಯ ಕಾರ್ಯಕರ್ತರಿಗೆ ರಾಷ್ಟ್ರವು ಋಣಿಯಾಗಿದೆ.
  5. ಈ ಎಲ್ಲಾ ಯೋಧರು ತಮ್ಮ ಕರ್ತವ್ಯದ ಮಿತಿಗಳನ್ನು ಮೀರಿ, ಜೀವಗಳನ್ನು ಉಳಿಸಿದ್ದಾರೆ.
  6. ಬಡವರು ಮತ್ತು ದೈನಂದಿನ ಜೀವನೋಪಾಯವನ್ನು ಗಳಿಸುವವರು ಈ ಸಾಂಕ್ರಾಮಿಕ ರೋಗದಿಂದ ಹೆಚ್ಚು ಹಾನಿಗೊಳಗಾಗಿದ್ದಾರೆ.
  7. ಯಾವುದೇ ಕುಟುಂಬವು ಹಸಿವಿನಿಂದ ಬಳಲುವುದಿಲ್ಲ ಎಂದು ಖಚಿತಪಡಿಸಿಕೊಳ್ಳಲು ಅಗತ್ಯವಿರುವವರಿಗೆ ಉಚಿತ ಆಹಾರ ಧಾನ್ಯಗಳನ್ನು ನೀಡಲಾಗುತ್ತಿದೆ.
  8. ಲಡಾಖ್‌ನಲ್ಲಿ ದೇಶಕ್ಕಾಗಿ ಮರಣ ಹೊಂದಿದವರಿಗೆ ಇಡೀ ರಾಷ್ಟ್ರ ಗೌರವ ಸಲ್ಲಿಸುತ್ತದೆ.
  9. ಭಾರತದ ಸ್ವಾವಲಂಬನೆ ಎಂದರೆ ಪ್ರಪಂಚದಿಂದ ದೂರವಾಗದೆ ಅಥವಾ ದೂರವನ್ನು ಸೃಷ್ಟಿಸದೆ ಸ್ವಾವಲಂಬಿಯಾಗುವುದು.
  10. ಭಾರತವು ತನ್ನ ಗುರುತನ್ನು ಉಳಿಸಿಕೊಂಡು ವಿಶ್ವ ಆರ್ಥಿಕತೆಯೊಂದಿಗೆ ತೊಡಗಿಸಿಕೊಳ್ಳುವುದನ್ನು ಮುಂದುವರಿಸುತ್ತದೆ.

ಇದನ್ನೂ ಓದಿ: ಕೋವಿಡ್‌ನಿಂದ ಸ್ವಾತಂತ್ರ್ಯ: ಆಗಸ್ಟ್ 15 ರಂದು ಪಣತೊಡಲು ಮೋದಿ ಒತ್ತಾಯ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ವಿಜಯಪುರ: ಗೋ ಸಾಗಾಟಗಾರನ ಮೇಲೆ ಬಜರಂಗದಳದಿಂದ ಥಳಿತ

0
ರಾಜ್ಯದಲ್ಲಿ ಮತ್ತೆ ಗೂಂಡಾಗಿರಿ ವರದಿಯಾಗಿದ್ದು, ದನ-ಕರುಗಳನ್ನು ಸಾಗಾಟ ಮಾಡುವಾಗ ವಾಹನ ತಡೆದು ಯುವಕನಿಗೆ ಬಜರಂಗದಳ ಕಾರ್ಯಕರ್ತರು ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಘಟನೆ ವಿಜಯಪುರ ಜಿಲ್ಲೆ ಬಬಲೇಶ್ವರ ತಾಲ್ಲೂಕಿನ ಸಾರವಾಡ ಬ್ರಿಡ್ಜ್ ಬಳಿ ನಡೆದಿದೆ. ಬಂದೇನವಾಝ್‌...