Homeರಂಜನೆಕ್ರೀಡೆಭಾರತೀಯ ಕ್ರಿಕೆಟ್ ತಂಡದ ಭವಿಷ್ಯದ ನಾಯಕನಾಗುವ ಹುರುಪಿನಲ್ಲಿರುವ ರಿಷಬ್ ಪಂತ್‌

ಭಾರತೀಯ ಕ್ರಿಕೆಟ್ ತಂಡದ ಭವಿಷ್ಯದ ನಾಯಕನಾಗುವ ಹುರುಪಿನಲ್ಲಿರುವ ರಿಷಬ್ ಪಂತ್‌

- Advertisement -
- Advertisement -

ವೆಸ್ಟ್ ಇಂಡೀಸ್‌ನ ಮೊದಲ ಏಕದಿನ ಪಂದ್ಯದಿಂದ ಕೆ.ಎಲ್‌.ರಾಹುಲ್ ಹೊರಗುಳಿದ ಸಂದರ್ಭದಲ್ಲೇ ಧೋನಿ ನುಡಿದ 2017 ರ ಭವಿಷ್ಯ ನಿಜವಾಗಿದೆ. ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುವ ಮೊದಲ ಪಂದ್ಯಕ್ಕೆ ತಂಡದ ಉಪನಾಯಕ ಕೆ.ಎಲ್.ರಾಹುಲ್, ಅನುಪಸ್ಥಿತಿಯಲ್ಲಿ ವಿಕೆಟ್-ಕೀಪರ್‌ ರಿಷಬ್‌ ಪಂತ್‌ರನ್ನು ಉಪನಾಯಕನೆಂದು ಘೋಷಿಸಲಾಗಿದೆ.

ರಿಷಬ್ ಪಂತ್ ಉಪನಾಯಕನ ಪಾತ್ರ ನಿರ್ವಹಿಸುತ್ತಿದ್ದಂತೆ ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್‌ ಧೋನಿ 2017 ರಲ್ಲಿ ಪತ್ರಿಕಾಗೋಷ್ಠಿಯಲ್ಲಿಆಡಿದ ಮಾತುಗಳು ಸಾಮಾಜಿಕ ಜಾಲತಾಣಗಳಲ್ಲಿ ಮತ್ತೆ ಮುನ್ನೆಲೆಗೆ ಬಂದಿವೆ. ಕ್ರಿಕೆಟ್‌ ಮಂಡಳಿ ಯಾರನ್ನೇ ತಂಡದ ನಾಯಕನೆಂದು ಅಧಿಕೃತವಾಗಿ ಘೋಷಿಸದಿದ್ದರೂ, ತಂಡದ ವಿಕೆಟ್-ಕೀಪರ್ ಉಪನಾಯಕನಂತೆಯೇ ಕಾರ್ಯನಿರ್ವಹಿಸುತ್ತಾನೆ. ಪಂದ್ಯದ ಸಮಯದಲ್ಲಿ ಮೈದಾನ ಸಿದ್ಧಪಡಿಸುವ ಜವಾಬ್ದಾರಿ ವಿಕೆಟ್-ಕೀಪರ್‌ ಮೇಲಿರುತ್ತದೆ. ನಾಯಕನ ಸಲಹೆಗಳಿಗೆ ಅನುಗುಣವಾಗಿ ಅಗತ್ಯ ಬದಲಾವಣೆಗಳನ್ನು ಆತನೇ ಮಾಡುತ್ತಾನೆ ಎಂದು ಧೋನಿ ಹೇಳಿದ್ದರು.

ಇದನ್ನೂ ಓದಿ: ಕ್ರಿಕೆಟ್ ಜಗತ್ತು ಕಂಡ ಕೆಚ್ಚೆದೆಯ ನಾಯಕ ಕೊಹ್ಲಿ

ವೆಸ್ಟ್ಇಂಡೀಸ್‌ ವಿರುದ್ಧದ ಏಕದಿನ ಸರಣಿಯ ಮೂರು ಪಂದ್ಯ ಆಡಲು ಭಾರತ ತಂಡವನ್ನು ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ಪ್ರಕಟಿಸಿದ್ದು, ರಿಷಬ್ ಪಂತ್ ಉಪನಾಯಕರಾಗಿದ್ದಾರೆ. ಆದರೆ 2ನೇ ಏಕದಿನ ಪಂದ್ಯದಿಂದ ರಾಹುಲ್‌ ತಮ್ಮ ಕರ್ತವ್ಯಕ್ಕೆ ಮರಳಲಿದ್ದಾರೆ.

ಸೀಮಿತ ಓವರ್‌ಗಳ ಕ್ರಿಕೆಟ್‌ ಪಂದ್ಯದಲ್ಲಿ ನಾಯಕತ್ವದ ಭಾಗವಾಗಿ ಪಂತ್‌ರನ್ನು ಪರಿಗಣಿಸಿರುವುದು ತಾತ್ಕಾಲಿಕ ನಿರ್ಧಾರವಾದರೂ, ಭವಿಷ್ಯದಲ್ಲಿ ಟೆಸ್ಟ್‌ ಕ್ರಿಕೆಟ್‌ನಲ್ಲಿ ಅವರನ್ನು ಭಾರತ ಕ್ರಿಕೆಟ್ ತಂಡದ ಮುಂದಿನ ನಾಯಕನನ್ನಾಗಿ ಮಾಡುವ ಬಗ್ಗೆ ಚರ್ಚೆಗಳು ಬಲವಾಗಿ ನಡೆಯುತ್ತಿವೆ.

ಕ್ರಿಕೆಟ್‌ ಅಭಿಮಾನಿಗಳು ಮತ್ತು ಪರಿಣಿತರ ಅಭಿಪ್ರಾಯದಂತೆ ತಂಡದ ನಾಯಕ ಸ್ಥಾನವನ್ನುಅಲಂಕರಿಸುವ ಓಟದಲ್ಲಿ ರೋಹಿತ್‌ ಶರ್ಮಾ ಮೊದಲ ಸ್ಥಾನದಲ್ಲಿದ್ದಂತೆ, ಮುಂದಿನ ದಿನಗಳಲ್ಲಿ ಪಂತ್‌ ಸಹ ಸ್ಥಾನ ಗಿಟ್ಟಿಸುವ ಸಾಲಿನಲ್ಲಿ ಪ್ರಮುಖರಾಗಲಿರುವ ಕಾಲ ದೂರವಿಲ್ಲಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಇದನ್ನೂ ಓದಿ: ಫುಟ್‌ಬಾಲ್, ನೃತ್ಯ ಈಗ ಕ್ರಿಕೆಟ್ ಆಡಿದ ಬಿಜೆಪಿ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್

ಅನೇಕ ಕ್ರಿಕೆಟ್‌ ವಿಶ್ಲೇಷಕರ ಅಭಿಪ್ರಾಯದಂತೆ ಮುಂದಿನ ಏಪ್ರಿಲ್‌ಗೆ ರೋಹಿತ್‌ ಶರ್ಮಾ ಅವರಿಗೆ 35 ವರ್ಷವಾಗಲಿದ್ದು, ಕೆಲ ವರ್ಷಗಳವರೆಗೆ ಅವರು ಕ್ಯಾಪ್ಟನ್‌ ಸ್ಥಾನದಲ್ಲಿರಬಹುದು. ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಹೆಸರುಗಳನ್ನು ಹಿಂದಿಕ್ಕುವ ಸಾಮರ್ಥ್ಯವಿರುವ, ಭವಿಷ್ಯದಲ್ಲಿ ಭಾರತೀಯ ಕ್ರಿಕೆಟ್ ಮುನ್ನೆಡೆಸುವಂಥ ನಾಯಕನನ್ನುಗುರುತಿಸುವ ಜವಾಬ್ದಾರಿಯೂ ಬಿಸಿಸಿಐ ಮುಂದಿದೆ. ಇದೇ ಕಾರಣಕ್ಕೆ 25 ವರ್ಷದ ಪಂತ್‌ರಂತಹ ಯುವ ಆಟಗಾರರನ್ನು ಪ್ರೋತ್ಸಾಹಿಸಲಾಗುತ್ತಿದೆ.

ಇಂಡಿಯನ್‌ ಪ್ರೀಮಿಯರ್‌ ಲೀಗ್‌ನ 2021 ರ ಆವೃತ್ತಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ನಾಯಕ ಸ್ಥಾನವನ್ನು ಉತ್ತಮವಾಗಿ ನಿರ್ವಹಿಸಿದ ಅನುಭವ ರಿಷಬ್‌ ಪಂತ್‌ಗಿದೆ. ದೆಹಲಿ ತಂಡವನ್ನು ಅಂಕಪಟ್ಟಿಯಲ್ಲಿ ನಂಬರ್‌ 1 ಆಗಿ ಪ್ಲೇ ಆಫ್‌ಗೆ ತಂದು ನಿಲ್ಲಿಸಿದ್ದರು.

ಮಾರ್ಚ್ 27 ರಲ್ಲಿ ಪ್ರಸಕ್ತ ಸಾಲಿನ ಕ್ರಿಕೆಟ್‌ ಸೀಸನ್ ಆರಂಭವಾಗುವ ನಿರೀಕ್ಷೆ ಇದ್ದು, ಪಂತ್ ನಾಯಕ ಸ್ಥಾನಕ್ಕೆ ಹಿಂದಿರುಗುವ ಹಾಗೂ ಮತ್ತೊಮ್ಮೆ ದೆಹಲಿಗೆ ಟ್ರೋಫಿ ತರಲು ಪ್ರಯತ್ನಿಸುವ ನಿರೀಕ್ಷೆ ಅವರ ಅಭಿಮಾನಿಗಳಿಗಿದೆ.

ಇದನ್ನೂ ಓದಿ: ಎಲ್ಲಾ ಮಾದರಿಯ ಕ್ರಿಕೆಟ್‌‌‌ಗೆ ವಿದಾಯ ಹೇಳಿದ ಹರ್ಭಜನ್‌ ಸಿಂಗ್‌‌

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ರೋಹಿತ್ ವೇಮುಲಾ ಪ್ರಕರಣ: ಪೊಲೀಸರ ವರದಿ ಸಂಪೂರ್ಣವಾಗಿ ಸುಳ್ಳಿನಿಂದ ಕೂಡಿದೆ; ಪ್ರತಿಕ್ರಿಯಿಸಿದ ಕುಟುಂಬ

0
ಹೈದರಾಬಾದ್ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ರೋಹಿತ್ ವೇಮುಲಾ ಅವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ತೆಲಂಗಾಣ ಪೊಲೀಸರು ಮುಕ್ತಾಯದ ವರದಿಯನ್ನು ಸಲ್ಲಿಸಿದ್ದಾರೆ. ಇದಲ್ಲದೆ ವರದಿಯಲ್ಲಿ ರೋಹಿತ್‌ ವೇಮುಲಾ 'ದಲಿತ ಅಲ್ಲ', ತನ್ನ “ನಿಜವಾದ ಜಾತಿಯ ಗುರುತು”...