Homeಕರ್ನಾಟಕಸಾಗರದ ದಲಿತ ವಿದ್ಯಾರ್ಥಿನಿ ಪ್ರಕರಣ; ವಸತಿ ಶಾಲೆ ಮುಖ್ಯಸ್ಥನ ವಿರುದ್ಧ ‘ಪೋಕ್ಸೋ’, ‘ಅಟ್ರಾಸಿಟಿ’ ಕೇಸ್‌ ದಾಖಲು

ಸಾಗರದ ದಲಿತ ವಿದ್ಯಾರ್ಥಿನಿ ಪ್ರಕರಣ; ವಸತಿ ಶಾಲೆ ಮುಖ್ಯಸ್ಥನ ವಿರುದ್ಧ ‘ಪೋಕ್ಸೋ’, ‘ಅಟ್ರಾಸಿಟಿ’ ಕೇಸ್‌ ದಾಖಲು

- Advertisement -
- Advertisement -

ಸಾಗರದ ವನಶ್ರೀ ವಸತಿ ಶಾಲೆಯಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ ದಲಿತ ವಿದ್ಯಾರ್ಥಿನಿ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಲೆಯ ಮುಖ್ಯಸ್ಥನ ವಿರುದ್ಧ ‘ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆ’ (ಪೋಕ್ಸೋ) ಮತ್ತು ‘ಎಸ್‌ಸಿ, ಎಸ್‌ಟಿ ಸಮುದಾಯಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆ’ (ಅಟ್ರಾಸಿಟಿ) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಸೊರಬ ತಾಲ್ಲೂಕಿನ ದಲಿತ ಕುಟುಂಬದ ವಿದ್ಯಾರ್ಥಿನಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಬಳಿಕ ಹಲವು ಸಂಗತಿಗಳು ಹೊರಬೀಳತೊಡಗಿವೆ. ಸಾಗರದ ವನಶ್ರೀ ವಸತಿ ಶಾಲೆಗೆ ಸೇರಿದ ಐದು ದಿನಗಳ ಬಳಿಕ ವಿದ್ಯಾರ್ಥಿ ಸಾವಿಗೀಡಾಗಿದ್ದಳು. ಶಾಲೆಯ ಮುಖ್ಯಸ್ಥ, ಆರ್‌ಎಸ್‌ಎಸ್‌ ಮುಖಂಡ ಮಂಜಪ್ಪ ನೀಡಿದ ಕಿರುಕುಳದಿಂದಾಗಿ ವಿದ್ಯಾರ್ಥಿನಿ ಕೊನೆಯುಸಿರೆಳೆದಿದ್ದು, ಈ ಸಂಬಂಧ ಎರಡು ಎಫ್‌ಐಆರ್‌ಗಳು ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಾಖಲಾಗಿವೆ. ಅನುಮಾನಾಸ್ಪದ ಸಾವಿಗೆ ಸಂಬಂಧಿಸಿದಂತೆ ಮೊದಲ ಎಫ್‌ಐಆರ್‌ ಇದ್ದರೆ, ಪೋಕ್ಸೋ ಮತ್ತು ಅಟ್ರಾಸಿಟಿಗೆ ಸಂಬಂಧಿಸಿದಂತೆ ಎರಡನೇ ಎಫ್‌ಐಆರ್‌ ಇದೆ.

ವಸತಿ ಶಾಲೆಯಲ್ಲಿದ್ದ ವಿದ್ಯಾರ್ಥಿನಿಯರು ನೀಡಿರುವ ಹೇಳಿಕೆಗಳನ್ನು ಆಧರಿಸಿ ಮತ್ತು ಸಂತ್ರಸ್ತ ಪೋಷಕರು ನೀಡಿದ ದೂರಿನ ಅನ್ವಯ ಪೊಲೀಸರು ಕ್ರಮ ಜರುಗಿಸಿದ್ದಾರೆ. ದಲಿತ ವಿದ್ಯಾರ್ಥಿನಿ ಸಾವಿನ ಹಿಂದೆ ಹಲವು ರೀತಿಯ ಕಿರುಕುಳಗಳು ಇರುವುದು ಕಂಡು ಬಂದಿದೆ. ಇದೇ ರೀತಿಯ ಸಮಸ್ಯೆಯನ್ನು ಅನೇಕ ಹೆಣ್ಣುಮಗಳು ಅನುಭವಿಸಿರುವ ಸಂಬಂಧ ಎಫ್‌ಐಆರ್‌ ಉಲ್ಲೇಖಿಸಿದೆ.

ಎರಡನೇ ಎಫ್‌ಐಆರ್‌ನಲ್ಲಿ ಏನಿದೆ?

ಸಾವಿಗೀಡಾದ ವಿದ್ಯಾರ್ಥಿನಿ ಸೇರಿದಂತೆ ಅವರ ಸಂಬಂಧಿಕರಾದ ಇತರ ವಿದ್ಯಾರ್ಥಿನಿಯರು ವನಶ್ರೀ ವಸತಿ ಶಾಲೆಯಲ್ಲಿ ಓದುತ್ತಿದ್ದರು. ಜೂನ್‌ 7ನೇ ತಾರೀಕು, ಮಧ್ಯಾಹ್ನ 2 ಗಂಟೆಯ ವೇಳೆಗೆ ವಿದ್ಯಾರ್ಥಿನಿಯ ಆರೋಗ್ಯದಲ್ಲಿ ವ್ಯತ್ಯಾಸವಾಗಿತ್ತು. ಮಂಜಪ್ಪನ ಗಮನಕ್ಕೆ ತಂದಾಗ ನಿರ್ಲಕ್ಷ್ಯ ತಾಳಿದ್ದಲ್ಲದೆ ತಮಗೆ ತಿಳಿದ ಮಾತ್ರೆ, ಕಷಾಯ ಕುಡಿಸಿದ್ದರು. ತೊಂದರೆಗೆ ಒಳಗಾಗಿದ್ದ ವಿದ್ಯಾರ್ಥಿನಿಯು ತಮ್ಮ ಜೊತೆಯಲ್ಲಿದ್ದ ಇತರ ಹೆಣ್ಣುಮಕ್ಕಳಿಗೆ, “ಕಾಲು ಮತ್ತು ತೊಡೆ ನೋವು ಕಂಡು ಬಂದಿದೆ” ಎಂದು ತಿಳಿಸಿದ್ದಳು. ಈ ವಿಷಯವನ್ನು ಮಂಜಪ್ಪನ ಗಮನಕ್ಕೆ ಬಾಲಕಿಯರು ತಂದಿದ್ದರು.

ಅಸ್ವಸ್ಥಗೊಂಡಿರುವ  ಹೆಣ್ಣಮಗಳನ್ನು ಪ್ರತ್ಯೇಕವಾಗಿ ತಮ್ಮ ರೂಮ್‌ಗೆ ಕರೆದುಕೊಂಡು ಹೋದ ಮಂಜಪ್ಪ, ಮೊಣಕಾಲು, ತೊಡೆ ಹಾಗೂ ಇತರೆ ಕಡೆ ಮುಲಾಮು ಹಚ್ಚಿದ್ದನು. ಸುಮಾರು ಸಮಯದ ನಂತರ ಹೊರಗೆ ಬಂದು ಉಳಿದವರ ಹತ್ತಿರ, “ಅವಳ ಕಾಲಿಗೆ ಮುಲಾಮು ಹಚ್ಚಿದ್ದೇನೆ, ಆಕೆ ಹುಷಾರಾಗುತ್ತಾಳೆ. ನೀವು ಹೋಗಿ” ಎಂದು ತಿಳಿಸಿದ್ದನು. ಆಗಲೂ ಆಸ್ಪತ್ರೆಗೆ ಸೇರಿಸದೆ ಅಲಕ್ಷ್ಯ ತೋರಿದ್ದನು. “ಹುಷಾರಿಲ್ಲದಿರುವ ಕುರಿತು ಪೋಷಕರಿಗೆ ತಿಳಿಸಿ” ಎಂದು ಇತರ ವಿದ್ಯಾರ್ಥಿನಿಯರು ಕೋರಿದ್ದರು.

“ಯಾರಿಗೂ ಫೋನ್ ಮಾಡುವುದು ಬೇಡ. ಆಕೆ ಆರಾಮಾಗುತ್ತಾಳೆ. ನೀವು ಹೋಗಿ ಮಲಗಿಕೊಳ್ಳಿ” ಎಂದು ಗದರಿಸಿದ್ದನು. ವಿದ್ಯಾರ್ಥಿನಿಗೆ ತುಂಬಾ ಆರೋಗ್ಯ ಹದಗೆಟ್ಟಾಗ ಆರೋಪಿ ಮಂಜಪ್ಪ, ವಿದ್ಯಾರ್ಥಿನಿಗೆ ಹೊಟ್ಟೆ ತುಂಬಾ ಬಲವಂತವಾಗಿ ನೀರು ಕುಡಿಸಿ, ಮತ್ತೆ ಮಲಗಿಸಿದ್ದನು. ಅಸ್ವಸ್ಥಗೊಂಡಿರುವ ಹೆಣ್ಣುಮಗಳನ್ನು ಇತರ ವಿದ್ಯಾರ್ಥಿನಿಯರು ಮಾತನಾಡಿಸಲು ಹೋಗಿದ್ದರು. ಆಕೆ ಯಾವುದೇ ಪ್ರತಿಕ್ರಿಯೆಯನ್ನು ನೀಡಲಿಲ್ಲ. ವಿಷಯವನ್ನು ಮತ್ತೆ ಮಂಜಪ್ಪನ ಗಮನಕ್ಕೆ ತರಲಾಯಿತು.

ಮಕ್ಕಳನ್ನು ಹೊರಗೆ ಕಳುಹಿಸಿದ ಮಂಜಪ್ಪ, ವಿದ್ಯಾರ್ಥಿನಿಯನ್ನು ಮಾತನಾಡಿಸಲು ಯತ್ನಿಸಿದ್ದನು. ಆ ಹೆಣ್ಣುಮಗಳು ನಾಲಿಗೆ ಕಚ್ಚಿಕೊಂಡು ಯಾವ ಪ್ರತಿಕ್ರಿಯೆ ನೀಡದ ಸ್ಥಿತಿಯಲ್ಲಿದ್ದಳು. ಆ ನಂತರ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಆಗಲೂ ಮಂಜಪ್ಪ ಪೋಷಕರಿಗೆ ವಿಷಯ ತಿಳಿಸಿರಲಿಲ್ಲ. ಆಸ್ಪತ್ರೆಯ ಆವರಣದಲ್ಲಿದ್ದ ಅಪರಿಚಿತರ ಮೊಬೈಲ್‌ ಸಹಾಯದಿಂದ ವಿಚಾರ ತಿಳಿದ ನಂತರ ಪೋಷಕರು ಸಾಗರ ಆಸ್ಪತ್ರೆಗೆ ಧಾವಿಸಿದ್ದರು. ಅಷ್ಟರಲ್ಲಿ ಮಗಳು ಸಾವನ್ನಪ್ಪಿದ್ದಳು.

ಶವ ಪರೀಕ್ಷೆ ನಂತರ ಅದೇ ದಿನ ರಾತ್ರಿ ವಿದ್ಯಾರ್ಥಿನಿಯನ್ನು ಮಣ್ಣು ಮಾಡಿದರು. ಸಾವಿಗೀಡಾದ ವಿದ್ಯಾರ್ಥಿನಿಯ ಜೊತೆಯಲ್ಲಿದ್ದ ಇತರ ಹೆಣ್ಣುಮಕ್ಕಳಲ್ಲಿ ಸಂತ್ರಸ್ತ ಪೋಷಕರು ಘಟನೆಯ ಕುರಿತು ವಿಚಾರಿಸಿದಾಗ ಆಘಾತಕಾರಿ ಸಂಗತಿಗಳು ತಿಳಿದುಬಂದಿವೆ.

ಇದನ್ನೂ ಓದಿರಿ: ಸಾಗರ: ದಲಿತ ಬಾಲಕಿಯ ಅನುಮಾನಾಸ್ಪದ ಸಾವು; 2 ಬಕೆಟ್‌ ನೀರು ಕುಡಿಸಿದ್ದ ವಸತಿ ಶಾಲೆ ಮುಖ್ಯಸ್ಥ- ಆರೋಪ

ಶಾಲೆಯ ಮುಖ್ಯಸ್ಥ ಮಂಜಪ್ಪ ಅಶ್ಲೀಲವಾಗಿ ವರ್ತಿಸುತ್ತಿದ್ದನು, ಹೆಣ್ಣು ಮಕ್ಕಳ ದೇಹದ ಖಾಸಗಿ ಭಾಗಗಳನ್ನು ಮುಟ್ಟುತ್ತಿದ್ದನು, ಅಪ್ಪಿಕೊಳ್ಳುತ್ತಿದ್ದನು, ಅವ್ಯಾಚ್ಯವಾಗಿ ಮಾತನಾಡುತ್ತಿದ್ದನು- ಎಂದು ತಮಗಾದ ಹಿಂಸೆಯನ್ನು ಮಕ್ಕಳು ಬಿಚ್ಚಿಟ್ಟಿದ್ದಾರೆ.

ಇದೇ ರೀತಿಯ ಲೈಂಗಿಕ ದೌರ್ಜನ್ಯವನ್ನು ತಮ್ಮ ಮಗಳಿಗೆ ಮಂಜಪ್ಪ ನೀಡಬಹುದೆಂದು ಪೋಷಕರು ಪೊಲೀಸರಲ್ಲಿ ತಿಳಿಸಿದ್ದಾರೆ. “ನಮ್ಮ ಮಗಳು ಇದರಿಂದ ಹೆದರಿಕೊಂಡು, ಮಾನಸಿಕವಾಗಿ ದೈಹಿಕವಾಗಿ ಹಿಂಸೆ ಅನುಭವಿಸಿ ಭಯ ಹಾಗೂ ಬೇಸರದಲ್ಲಿದ್ದಳು. ಮನಸಿಗೆ ಹಚ್ಚಿಕೊಂಡಿದ್ದರಿಂದ ಜ್ವರ, ಸುಸ್ತು, ವಾಂತಿ ಪ್ರಾರಂಭವಾಗಿ ಎರಡು ದಿನ ನರಳಾಡಿದ್ದಾಳೆ. ಮಂಜಪ್ಪನ ಮೇಲಿನ ಭಯದಿಂದ ಆರೋಗ್ಯ ಕೆಟ್ಟಿದೆ. ಆಸ್ಪತ್ರೆಗೆ ತೋರಿಸದೇ ತಾನೇ ಮಾತ್ರೆ ಮುಲಾಮು ಕಷಾಯ ಕುಡಿಸಿ ಆಸ್ಪತ್ರೆಗೂ ಸೇರಿಸಿಲ್ಲ. ನಮಗೂ ವಿಚಾರ ತಿಳಿಸದೆ ಕೊನೆ ಗಳಿಗೆಯಲ್ಲಿ, ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರಿಂದ ನಮ್ಮ ಮಗಳು ಮೃತಪಟ್ಟಿರುತ್ತಾಳೆ” ಎಂದು ಪೋಷಕರು ತಿಳಿಸಿರುವುದಾಗಿ ಎಫ್‌ಐಆರ್‌ ತಿಳಿಸಿದೆ.

ದೂರಿನ ಅನ್ವಯ ಐಪಿಸಿ ಸೆಕ್ಷನ್‌ 504, 506, 354(ಎ)(2), ಅಟ್ರಾಸಿಟಿ ಕಾಯ್ದೆಯ ಸೆಕ್ಷನ್‌ 3(1)(ಡಬ್ಲ್ಯ)(ಐ)(ii), 3(2)(ವಿಎ), ಪೋಕ್ಸೋ ಕಾಯ್ದೆಯ ಸೆಕ್ಷನ್‌ -8, 12 ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...

ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು ಬಿಸಿಯೂಟ ಯೋಜನೆಯಿಂದ ಹೊರಕ್ಕೆ : ಸಂಸತ್ತಿಗೆ ತಿಳಿಸಿದ ಕೇಂದ್ರ

ಕಳೆದ ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು 'ಪ್ರಧಾನಮಂತ್ರಿ ಪೋಷಣ್ ಯೋಜನೆ'ಯಿಂದ (ಮಧ್ಯಾಹ್ನದ ಬಿಸಿಯೂಟ) ಹೊರ ಬಿದ್ದಿವೆ. 2020-21ರಲ್ಲಿ 11.19 ಲಕ್ಷ ಇದ್ದ ಶಾಲೆಗಳ ಸಂಖ್ಯೆ 2024-25ರಲ್ಲಿ 10.35ಕ್ಕೆ ಕುಸಿದಿದೆ ಎಂದು...

ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವಲಖಾಗೆ ಜಾಮೀನಿನ ಮೇಲೆ ದೆಹಲಿಗೆ ತೆರಳಲು ಅನುಮತಿ ನೀಡಿದ ಬಾಂಬೆ ಹೈಕೋರ್ಟ್

ಭೀಮಾ ಕೋರೆಗಾಂವ್ ಯುಎಪಿಎ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರಿಗೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನವದೆಹಲಿಯಲ್ಲಿ ವಾಸಿಸಲು ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಆದಾಗಲೂ, ಮಾನವ...

ಕಾರವಾರ ನೌಕಾ ಪ್ರದೇಶದ ಸುತ್ತಮುತ್ತ ಆತಂಕ ಮೂಡಿಸಿದ ‘ಸೀಗಲ್‌’ ಪಕ್ಷಿ; ಚೀನಾ ನಿರ್ಮಿತ ಜಿಪಿಎಸ್ ಸಾಧನ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕರಾವಳಿ ಪ್ರದೇಶದ ಬಳಿ, ಸೂಕ್ಷ್ಮ ನೌಕಾ ವಲಯದ ಬಳಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕಿಂಗ್ ಸಾಧನವೊಂದು 'ಸೀಗಲ್' (ಸಮುದ್ರಹಕ್ಕಿ) ಪಕ್ಷಿಗೆ ಅಳವಡಿಸಿರುವುದು ಕಂಡುಬಂದ ನಂತರ ಭದ್ರತಾ ಸಂಸ್ಥೆಗಳು...

ಅಣು ಶಕ್ತಿಯ ಖಾಸಗೀಕರಣ : ‘ಶಾಂತಿ’ ಮಸೂದೆಗೆ ಲೋಕಸಭೆ ಅಸ್ತು

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, 'ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿತು. ವಿಪಕ್ಷಗಳ ಸದಸ್ಯರು...

ಮಾದಕ ದ್ರವ್ಯ ಸೇವನೆ, ಲೈಂಗಿಕ ಕಿರುಕುಳಕ್ಕೆ 3 ಲಕ್ಷ ರೂ. ದಂಡ ವಸೂಲಿ: ಬೆಂಗಳೂರಿನ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ​​ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಪಶ್ಚಿಮ ಬೆಂಗಳೂರಿನ ದೊಡ್ಡಬೆಲೆ ಬಳಿಯ ವಸತಿ ಸಂಕೀರ್ಣವೊಂದರ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ವಿರುದ್ಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ನಿವಾಸಿಗಳಿಂದ ದಂಡ ವಸೂಲಿ ಮಾಡಿದ ಮತ್ತು ಅಪರಾಧಗಳನ್ನು ಮುಚ್ಚಿಟ್ಟ ಆರೋಪದ ಮೇಲೆ ಕುಂಬಳಗೋಡು...

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...