Homeಮುಖಪುಟ’ಮಕ್ಕಳೊಂದಿಗೆ ಮಾಲ್ಡೀವ್ಸ್‌ಗೆ ಹೋಗಿದ್ದೆ’: ನವಾಬ್ ಮಲಿಕ್ ಸುಲಿಗೆ ಆರೋಪಕ್ಕೆ NCB ಅಧಿಕಾರಿ ಸಮೀರ್ ವಾಂಖೆಡೆ ಉತ್ತರ

’ಮಕ್ಕಳೊಂದಿಗೆ ಮಾಲ್ಡೀವ್ಸ್‌ಗೆ ಹೋಗಿದ್ದೆ’: ನವಾಬ್ ಮಲಿಕ್ ಸುಲಿಗೆ ಆರೋಪಕ್ಕೆ NCB ಅಧಿಕಾರಿ ಸಮೀರ್ ವಾಂಖೆಡೆ ಉತ್ತರ

- Advertisement -
- Advertisement -

ಎನ್‌ಸಿಬಿ ಅಧಿಕಾರಿ ಸಮೀರ್ ವಾಂಖೆಡೆ ಬಾಲಿವುಡ್ ಚಿತ್ರೋದ್ಯಮದಲ್ಲಿ ಸುಲಿಗೆ ವಸೂಲಿ ಮಾಡುತ್ತಿದ್ದಾರೆ ಎಂಬ ಮಹಾರಾಷ್ಟ್ರದ ಸಚಿವ ನವಾಬ್ ಮಲಿಕ್ ಆರೋಪಕ್ಕೆ ಪ್ರತಿಕ್ರಿಯಿಸಿರುವ ಅಧಿಕಾರಿ, ’ನಾನು ನನ್ನ ಸ್ವಂತ ಹಣದಲ್ಲಿ, ಮಕ್ಕಳೊಂದಿಗೆ ಮಾಲ್ಡೀವ್ಸ್‌ಗೆ ಹೋಗಿದ್ದೆ’ ಎಂದಿದ್ದಾರೆ.

ಬಾಲಿವುಡ್ ಸೂಪರ್‌ ಸ್ಟಾರ್ ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಖಾನ್ ಸೇರಿದಂತೆ ಹಲವರನ್ನು ಬಂಧಿಸಿರುವ ಎನ್‌ಸಿಬಿ, ಬಾಲಿವುಡ್ ಸೆಲೆಬ್ರಿಟಿಗಳನ್ನು ಡ್ರಗ್ಸ್ ಪ್ರಕರಣದಲ್ಲಿ ತನಿಖೆ ಮಾಡುತ್ತಿದೆ. ಇದು ಮಹಾರಾಷ್ಟ್ರ ಸರ್ಕಾರದ ಹೆಸರು ಹಾಳು ಮಾಡಲು ಒಕ್ಕೂಟ ಸರ್ಕಾರ ನಡೆಸುತ್ತಿರುವ ಪಿತೂರಿ ಎಂದು ಸಚಿವ ಆರೋಪಿಸಿದ್ದಾರೆ.

“ಎನ್‌ಸಿಬಿ ಅಧಿಕಾರಿ ಸಮೀರ್‌ ವಾಂಖೆಡೆ ಬಿಜೆಪಿಯ ಆಜ್ಞೆಯಂತೆ ವರ್ತಿಸುತ್ತಿದ್ದಾರೆ. ಕೋವಿಡ್ ಸಾಂಕ್ರಾಮಿಕದ ಸಮಯದಲ್ಲಿ ಇಡೀ ಚಿತ್ರೋದ್ಯಮ ಮಾಲ್ಡೀವ್ಸ್‌ನಲ್ಲಿತ್ತು. ಈ ವೇಳೆ ಮಾಲ್ಡೀವ್ಸ್ ಮತ್ತು ದುಬೈನಲ್ಲಿ ಅಧಿಕಾರಿ ಮತ್ತು ಅವರ ಕುಟುಂಬ ಏನು ಮಾಡುತ್ತಿತ್ತು? ಇದನ್ನು ಸಮೀರ್ ವಾಂಖೆಡೆ ಸ್ಪಷ್ಟಪಡಿಸಬೇಕು” ಎಂದು ನವಾಬ್ ಮಲಿಕ್ ಗುರುವಾರ ಒತ್ತಾಯಿಸಿದ್ದರು.

ಇದನ್ನೂ ಓದಿ: ಡ್ರಗ್ಸ್ ಕೇಸ್‌ನಲ್ಲಿ ಬಿಜೆಪಿ ಕೈವಾಡವಿದೆ ಎಂದು ಕಿಡಿ ಕಾರಿದ ಎನ್‌ಸಿಪಿ ನಾಯಕ ನವಾಬ್ ಮಲಿಕ್

NDTVಗೆ ನೀಡಿರುವ ವಿಶೇಷ ಸಂದರ್ಶನದಲ್ಲಿ ಮಾತನಾಡಿರು, ಎನ್‌ಸಿಬಿ ಅಧಿಕಾರಿ ಸಮೀರ್‌ ವಾಂಖೆಡೆ, “ನಾನು ದುಬೈಗೆ ಹೋಗಿಲ್ಲ. ನಾನು ಮಾಲ್ಡೀವ್ಸ್‌ಗೆ ಹೋಗಿದ್ದೆ. ನಾನು ನನ್ನ ಮಕ್ಕಳೊಂದಿಗೆ, ಕಾನೂನುಬದ್ಧ ಅನುಮತಿಯೊಂದಿಗೆ ಮತ್ತು ನನ್ನ ಸ್ವಂತ ಹಣದಲ್ಲಿ ಹೋಗಿದ್ದೇನೆ” ಎಂದಿದ್ದಾರೆ.

“ನಾನು ನನ್ನ ಸಹೋದರಿಯೊಂದಿಗೆ ಮಾಲ್ಡೀವ್ಸ್‌ಗೆ ಹೋಗಿಲ್ಲ. ಮಕ್ಕಳೊಂದಿಗೆ ಹೋಗಿದ್ದೆ. ಅದು ಲಾಕ್‌ಡೌನ್ ಸಮಯ ಮುಗಿದ ಮೇಲೆ ಒಂದೆರಡು ತಿಂಗಳ ಹಿಂದೆ ಭೇಟಿ ನೀಡಿದ್ದೆ” ಎಂದಿದ್ದಾರೆ. ಸಚಿವ ನವಾಬ್ ಮಲಿಕ್, ಸಮೀರ್ ವಾಂಖೆಡೆ ಅವರ ಸಹೋದರಿ ಮಾಲ್ಡೀವ್ಸ್‌ನಲ್ಲಿರುವ ಚಿತ್ರಗಳನ್ನು ಟ್ವೀಟ್ ಮಾಡಿದ್ದರು.

’ನವಾಬ್ ಮಲಿಕ್ ಅವರು ರಾಜ್ಯದ ಮಂತ್ರಿಯಾಗಿದ್ದು, ಅವರು ಆಡಳಿತ ವ್ಯವಸ್ಥೆ ಹೊಂದಿದ್ದಾರೆ. ಹೀಗಾಗಿ ತನಿಖೆ ಮಾಡಬಹುದು. ಈ ಆರೋಪಗಳಿಗೆ ಸಾಕ್ಷಿಯಿದ್ದರೆ ಅದನ್ನು ತೋರಿಸಲಿ. ಅದು ಬಿಟ್ಟು ಕುಟುಂಬದ ವಿರುದ್ಧ ಆರೋಪಗಳನ್ನು ಮಾಡಲಾಗುತ್ತಿದೆ ಎಂದು ಅಧಿಕಾರಿ ಹೇಳಿದ್ದಾರೆ.

“ಕಳೆದ 15 ದಿನಗಳಿಂದ ನಮ್ಮ ಮೇಲೆ ವೈಯಕ್ತಿಕ ದಾಳಿ ಮಾಡಲಾಗುತ್ತಿದೆ. ನನ್ನ ಮೃತ ತಾಯಿ, ಸಹೋದರಿ ಮತ್ತು ನಿವೃತ್ತ ತಂದೆಯ ಮೇಲೆ ದಾಳಿ ನಡೆಯುತ್ತಿವೆ. ಇದನ್ನು ನಾನು ಬಲವಾಗಿ ಖಂಡಿಸುತ್ತೇನೆ” ಎಂದು NCB ಅಧಿಕಾರಿ ಸಮೀರ್ ವಾಂಖೆಡೆ ಹೇಳಿದ್ದಾರೆ.

ನಟ ಸುಶಾಂತ್ ಸಿಂಗ್ ರಜಪೂತ್ ಕಳೆದ ವರ್ಷ ಅಸಹಜ ಸಾವಿಗೆ ತುತ್ತಾದ ಬಳಿಕ ಕೇಂದ್ರ ಸರ್ಕಾರ ಎನ್‌ಸಿಬಿಗೆ ಸಮೀರ್ ವಾಂಖೆಡೆ ಅವರನ್ನು ಕರೆ ತಂದಿದೆ ಎಂದು ಆರೋಪಿಸಿದ್ದಾರೆ. ಸುಶಾಂತ ಸಿಂಗ್ ಸಾವಿನ ಬಳಿಕ ಕೇಳಿ ಬಂದ ಡ್ರಗ್ಸ್ ಪ್ರಕರಣದಲ್ಲಿ ಬಾಲಿವುಡ್ ನಟ, ನಟಿಯರನ್ನು ಎನ್‌ಸಿಬಿ ಗುರಿ ಮಾಡಿತ್ತು. ಮೃತ ಸುಶಾಂತ್ ಸಿಂಗ್ ರಜಪೂತ್ ಅವರ ಗೆಳತಿ ರಿಯಾ ಚಕ್ರವರ್ತಿ ಅವರನ್ನು ಎನ್‌ಸಿಬಿ ನಕಲಿ ಪ್ರಕರಣದಲ್ಲಿ ಸೇರಿಸಿದ್ದಾರೆ ಎಂದು ನವಾಬ್ ಮಲ್ಲಿಕ್ ಆರೋಪಿಸಿದ್ದಾರೆ.


ಇದನ್ನೂ ಓದಿ: NCB ಅಧಿಕಾರಿ ಸಮೀರ್ ವಾಂಖೆಡೆ ಚಿತ್ರೋದ್ಯಮವನ್ನು ಸುಲಿಗೆ ಮಾಡುತ್ತಿದ್ದಾರೆ: ನವಾಬ್ ಮಲಿಕ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...