Homeಅಂಕಣಗಳುಕನ್ನಡದ ನಟರ ಮೇಲೇಕೆ ಐಟಿ ಕಣ್ಣು

ಕನ್ನಡದ ನಟರ ಮೇಲೇಕೆ ಐಟಿ ಕಣ್ಣು

- Advertisement -
- Advertisement -

ಸುನೀಲ್ ಗಿರಿಗೌಡರ್ |

ನಟ ಪುನೀತ್ ರಾಜಕುಮಾರ್ ಹೇಳಿದ್ದಾರೆ, ತೆರಿಗೆ ಇಲಾಖೆ ದಾಳಿಯಿಂದ ಅವರೇನೂ ಹೆದರಿಲ್ಲವಂತೆ, ಅವರ ಲೆಕ್ಕಪತ್ರ ಸರಿಯಾಗಿಯೇ ಇದೆಯಂತೆ, ಐಟಿ ಅಧಿಕಾರಿಗಳು ಅವರ ಕೆಲಸ ಅವರು ಮಾಡಿದ್ದಾರಂತೆ…..
ಅದಕ್ಕೂ ಹಿಂದಿನ ದಿನ ಸುದೀಪ್ ಹೇಳುತ್ತಾರೆ: ದೊಡ್ಡ ಬಜೆಟ್‍ನ ಸಿನಿಮಾಗಳ ಹಿಂದಿನ ಹೂಡಿಕೆಯ ರಹಸ್ಯ ಅರಿಯಲು ಈ ದಾಳಿ ನಡೆದಿದೆ… ನಾನಂತೂ ಕರೆಕ್ಟಾಗಿ ತೆರಿಗೆ ಪಾವತಿ ಮಾಡಿದ್ದೇನೆ….
ಮನದಲ್ಲಿ ಒಂದಿಷ್ಟು ಆತಂಕ ಇಟ್ಟುಕೊಂಡೇ ಮಾತಬಾಡಿದ ಶಿವರಾಜಕುಮಾರ್, ನಮ್ಮ ಆಡಿಟರ್ ಇದಕ್ಕೆಲ್ಲ ಉತ್ತರ ಕೊಡುತ್ತಾರೆ ಅಂದರು.
‘ನಾನಂತೂ ಒಂದಿಷ್ಟೂ ತೆರಿಗೆ ವಂಚನೆ ಮಾಡಿಲ್ಲ. ದೊಡ್ಡ ಬಜೆಟ್ ಸಿನಿಮಾಗಳ ಕುರಿತಂತೆ ಡೌಟ್ ಇರುವುದರಿಂದ ಈ ಐಟಿ ದಾಳಿ ನಡೆಸಿದ್ದಾರೆ ಅನಿಸುತ್ತದೆ’ ಎಂದು ನಟ ಯಶ್ ‘ವಿಶ್ಲೇಷಿಸಿದ್ದಾರೆ’…
* * * * * *
ಜನವರಿ 3ರಂದು ಐಟಿ ದಾಳಿ ನಡೆದದ್ದು ಕೇವಲ ಮೇಲೆ ಉಲ್ಲೇಖಿಸಿದ ನಟರ ಮೇಲಷ್ಟೇ ಅಲ್ಲ. ಅವರ ‘ಅತ್ಯಾತ್ಮೀಯ’ ನಿರ್ಮಾಪಕರ ಮೇಲೂ ಎಂಬುದನ್ನು ನೆನಪಿನಲ್ಲಿ ಇಟ್ಟುಕೊಳ್ಳೋಣ. ಇದುವರೆಗೆ ಈ ನಿರ್ಮಾಪಕರು ಮೇಲಿನ ತರಹದ ಯಾವ ಹೇಳಿಕೆಯನ್ನು ನೀಡಿದ್ದು ಕಂಡುಬಂದಿಲ್ಲ. ಆದರೆ ನಟರ ಹೇಳಿಕೆಗಳು ತಾವೂ ಶುದ್ಧ, ತಮ್ಮ ನಿರ್ಮಾಪಕರೂ ಶುದ್ಧ, ದೊಡ್ಡ ಬಜೆಟ್ ಚಿತ್ರ ಬಂದಾಗ ಇವೆಲ್ಲ ಕಾಮನ್ ಎಂಬ ಲಹರಿಯಲ್ಲಿ ಇವೆ ತಾನೇ?
ಈ ನಿರ್ಮಾಪಕರೆಲ್ಲ, ಒಂದಿಲ್ಲೊಂದು ರಾಜಕೀಯ ನಂಟು ಹೊಂದಿದವರು. ಇವರ ಬಳಿ ತೆರಿಗೆ ಕಟ್ಟದ ಅಂದರೆ ಕಪ್ಪುಹಣ ಇರಬಹುದಾದ ಸಾಧ್ಯತೆಗಳಿಗೇನೂ ಕಮ್ಮಿ ಇಲ್ಲ. ಆದರೆ ನಮ್ಮ ಪ್ರಶ್ನೆ ಇರುವುದು ತಮ್ಮ ದಂಧೆಗಳ ಕಪ್ಪು ವ್ಯವಹಾರವನ್ನು ಮುಚ್ಚಿಡಲು, ಸಾರ್ವಜನಿಕರ ಕಣ್ಣಲ್ಲಿ ಹೀರೋಗಳಾಗಿಯೇ ಇರುವ ಈ ನಟರನ್ನು ಅವರು ಬಳಸಿಕೊಳ್ಳುತ್ತಿರಬಹುದೇ? ಶೋಧಿಸುತ್ತ ಹೋದರೆ, ಇದು ಸತ್ಯವೇ ಅನಿಸುತ್ತದೆ. ಎಲ್ಲೂ ನಮ್ಮ ನಟ ದಿಗ್ಗಜರು ತಮ್ಮ ನಿರ್ಮಾಪಕರ ಬಗ್ಗೆ ಒಂದೇ ಒಂದು ಬೇಸರ ಆಗುವಂತಹ ಮಾತನ್ನು ಹೇಳಿಯೇ ಇಲ್ಲವಲ್ಲ?
ಐಟಿ ದಾಳಿ: ನಟ-ನಿರ್ಮಾಪಕ-ವಿತರಕ ಲಿಂಕ್
ಜನವರಿ 3 ರಂದು ಕರ್ನಾಟಕ ಹಾಗೂ ಗೋವಾದ ಸುಮಾರು 180 ಅಧಿಕಾರಿಗಳು 21 ಸ್ಥಳಗಳಲ್ಲಿ ಐಟಿ ದಾಳಿ ನಡೆಸಿದ್ದರು. 3 ತಿಂಗಳ ಕಾಲ ಇಲಾಖೆ ತನಿಖೆ ನಡೆಸಿ ಅಧಿಕಾರಿಗಳ ಮಾಹಿತಿ ಕಲೆ ಹಾಕಿದ್ದರು. ಪ್ರೊಡಕ್ಷನ್ ಕಂಪನಿಗಳು, ನಿರ್ಮಾಪಕರು, ಸಿನಿಮಾ ಫೈನಾನ್ಶಿಯರ್ಸ್ ಹಾಗೂ ನಟರ ಮನೆಗಳ ಮೇಲೆ ದಾಳಿ ನಡೆಯಿತು. ದಾಳಿಗೆ ಕಾರಣ ತೆರಿಗೆ ವಂಚನೆಯಾಗಿತ್ತು ಎಂಬುದನ್ನು ನಂಬಲು ಸಾಧ್ಯವೇ?
ದಾಳಿ ವೇಳೆ ಸಿನಿಮಾ ನಿರ್ಮಾಣ ಹಾಗೂ ವಿತರಣೆಯಲ್ಲಿ ದಾಖಲೆಯಿಲ್ಲದ ಖರ್ಚು ವೆಚ್ಚದ ಕುರಿತು ಸಾಕ್ಷಿ ಸಿಕ್ಕಿದೆ. ಅದರಲ್ಲೂ ದಾಖಲೆಯಿಲ್ಲದ ಥಿಯೇಟರ್ ಕಲೆಕ್ಷನ್ ಹಾಗೂ ತೆರಿಗೆ ವಂಚನೆ ಎಸಗಿರುವುದು ಪತ್ತೆಯಾಗಿದೆ.
ಈ ಅಪರಾಧಕ್ಕೆ ನಿರ್ಮಾಪಕರು ಮತ್ತು ವಿತರಕರಷ್ಟೇ ಜವಾಬ್ದಾರರಲ್ಲವೇ? ಆದರೆ ನಮ್ಮ ಸಿನಿಮಾ ನಟರು ತಮ್ಮ ಕೋಟಿ ಕೋಟಿ ಹಣವನ್ನು ನಿರ್ಮಾಣದಲ್ಲೂ, ವಿತರಣೆಯಲ್ಲೂ (ಇದು ಎಲ್ಲ ಭಾಷೆಗಳ ಸಿನಿಮಾದಲ್ಲಿ ನಡೆಯುತ್ತಿರುವ ವಿದ್ಯಮಾನವೇ ಆಗಿದೆ) ಹೂಡುತ್ತಿದ್ದಾರೆ. ಅವರು ಹೂಡುತ್ತಿರುವ ಹಣ ಪ್ರಾಮಾಣಿಕ ದುಡಿಮೆಯದ್ದೇ ಎಂಬ ಸಂಶಯಗಳಿವೆ. ನಮ್ಮ ನಟರಿಗೂ ಕೆಲವು ತೆರಿಗೆ ವಂಚಕ ಆಗರ್ಭ ಶ್ರೀಮಂತ ರಾಜಕಾರಣಿಗಳ ನಡುವೆ ತುಂಬ ಆಪ್ತವಾದ ಸಂಬಂಧವಿದೆ. ಈ ವಂಚಕ ರಾಜಕಾರಣಿಗಳು, ನಿರ್ಮಾಪಕರು, ವಿತರಕರು ಈ ನಟರÀನ್ನು ಬಳಸಿಕೊಳ್ಳುತ್ತಿರುವ ಸಾಧ್ಯತೆ ಇದ್ದೇ ಇವೆ.
ದಿನಪತ್ರಿಕೆಯೊಂದು, ತನ್ನ ಸಂಗಡ ಮಾತಾಡಿರುವ ಐಟಿ ಅಧಿಕಾರಿಯೊಬ್ಬರು ಈ ದಾಳಿಯ ಅಗತ್ಯವೇ ಇರಲಿಲ್ಲ ಎಂದಿದ್ದಾರೆ ಎಂಬ ವರದಿ ಪ್ರಕಟಿಸಿದೆ. ಐಟಿ ಅಧಿಕಾರಿಗಳ ನಡುವೆಯೇ ಒಮ್ಮತವಿರದಿದ್ದ, ಬಹಳ ದೊಡ್ಡ ಮಟ್ಟದ ದೋಷಗಳು ಸಿಕ್ಕಿಬೀಳುವ ಸಂಭವ ಇಲ್ಲದ ಖಾತ್ರಿಯಿದ್ದೂ ದಾಳಿಯನ್ನೂ ಎಂಜಿನಿಯರಿಂಗ್ ಮಾಡಲಾಗಿದೆ ಅಂದರೆ ಅದರ ಹಿಂದೆ ರಾಜಕೀಯದ ಲೆಕ್ಕಾಚಾರಗಳು ಇರಬೇಕೆನ್ನುವ ಗುಮಾನಿಗಳು ಮೂಡುತ್ತವೆ. ಐಟಿ ಇಲಾಖೆ ಬಹಿರಂಗ ಮಾಡಿದ ವಿವರದ ಪ್ರಕಾರ, ಒಟ್ಟಾರೆ 25.3 ಕೆಜಿ ಚಿನ್ನಾಭರಣ, 2.85 ರೂ. ಕೋಟಿ ನಗದು ಸೇರಿದಂತೆ 11 ಕೋಟಿ ರೂ. ಮೊತ್ತದ ಅಘೋಷಿತ ಆಸ್ತಿಯನ್ನು ಜಪ್ತಿ ಮಾಡಲಾಗಿದೆ. ಅಲ್ಲದೇ 109 ಕೋಟಿ ರೂ. ಮೊತ್ತದ ದಾಖಲೆ ರಹಿತ ಆದಾಯ ಪತ್ತೆಯಾಗಿದೆ ಎನ್ನಲಾಗಿದೆ. ಅಲ್ಲದೇ ತೆರಿಗೆ ಪಾವತಿಸದೆ ಬಚ್ಚಿಟ್ಟ ಆಸ್ತಿ ಮೌಲ್ಯ ಇನ್ನೂ ಅಧಿಕವಾಗಿದ್ದು, ನಟರು, ನಿರ್ಮಾಪಕರು ಒಪ್ಪಿಕೊಳ್ಳದೆ ಇರುವುದರಿಂದ ಜಾರಿ ನಿರ್ದೇಶನಾಲಯ (ಇ.ಡಿ) ಮತ್ತಿತರ ಹಣಕಾಸು ತನಿಖಾ ಸಂಸ್ಥೆಗಳ ತನಿಖೆಗೆ ಪ್ರಕರಣ ವಹಿಸಲಾಗುವುದು ಎಂದು ಐ.ಟಿ ತಿಳಿಸಿದೆ.
ಯಾರ ಮನೆಯಲ್ಲಿ ಎಷ್ಟು ಅಘೋಷಿತ ಆಸ್ತಿಪಾಸ್ತಿ ಸಿಕ್ಕಿದೆ ಎಂಬ ವಿವರಗಳನ್ನು ಐ.ಟಿ ನೀಡಿಲ್ಲ. ಶೀಘ್ರ ಈ ಬಗ್ಗೆ ಮಾಹಿತಿ ನೀಡುವುದಾಗಿ ತಿಳಿಸಿದೆ. ಇದರ ಅರ್ಥ ಇಷ್ಟೇ: ನೀವು ನಮ್ಮ ಪರ ಇರದಿದ್ದರೆ ನಾವೂ ಇ.ಡಿ. ದಾಳಿಯ ಮೂಲಕ ನಿಮ್ಮನ್ನು ಹಣಿಯುತ್ತೇವೆ ಎಂದು ಅಸಹಾಯಕ ಮೋದಿ ಟೀಮ್ ಸೂಚನೆ ನೀಡುತ್ತಿರಬಹುದೇ?
ಹರಿದಾಡುತ್ತಿದೆ ಹೀಗೊಂದು ವಾದ
ಕನ್ನಡ ಸ್ಟಾರ್ ನಟರ ಮೇಲೆ ಐಟಿ ದಾಳಿ ಮಾಡಿರೋದಕ್ಕೆ ವಾಸ್ತವಗಳು ಅದೇನೇ ಇರಬಹುದು, ಅವುಗಳ ಜೊತೆಗೆ ಒಂದು ಇಂಟರೆಸ್ಟಿಂಗ್ ವಾದವೂ ಹರಿದಾಡುತ್ತಿದೆ. ಸಿಬಿಐ, ಐಟಿ, ಇಡಿಗಳಂತಹ ಸ್ವಾಯತ್ತ ಸಂಸ್ಥೆಗಳು ಆಳುವ ಪಕ್ಷಗಳ ಕೈಗೊಂಬೆಗಳಂತೆ ವರ್ತಿಸುತ್ತಾ ಬಂದಿರೋದು ಹೊಸದೇನೂ ಅಲ್ಲ. ಖುದ್ದು ಸುಪ್ರೀಂ ನ್ಯಾಯಾಲಯವೇ ಸಿಬಿಐ ಅನ್ನು ಕೇಂದ್ರ ಸರ್ಕಾರದ ಪಂಜರದ ಗಿಳಿ ಅಂತ ದೂರಿದ್ದು ಇದೇ ಕಾರಣಕ್ಕೆ. ಮೋದಿಯವರ ನೇತೃತ್ವದ ಬಿಜೆಪಿ, ಕೇಂದ್ರದ ಅಧಿಕಾರ ಗದ್ದುಗೆ ಏರಿದ ಮೇಲಂತೂ ಈ ಹಸ್ತಕ್ಷೇಪ ವಿಪರೀತ ಎನ್ನುವಂತಾಗಿದೆ. ಸುಪ್ರೀಂ ಕೋರ್ಟ್ ನ್ಯಾಯಾಧೀಶರೇ ಪ್ರೆಸ್‍ಮೀಟ್ ಮಾಡಿದ್ದಾಗಲಿ, ಸಿಬಿಐ ಅಧಿಕಾರಿಗಳು ಬೀದಿಕಾಳಗ ನಡೆಸಿದ್ದಾಗಲಿ, ಆರ್‍ಬಿಐ ಗವರ್ನರ್ ಅರ್ಧಕ್ಕೇ ಎದ್ದುಹೋದದ್ದಾಗಲಿ, ಡಿಕೆ ಶಿವಕುಮಾರ್‍ನಂತಹ ವಿರೋಧ ಪಕ್ಷಗಳ ಪ್ರಭಾವಿ ನಾಯಕರ ಮೇಲೆ ಆಯಕಟ್ಟಿನ ಸಂದರ್ಭದಲ್ಲಿ ಐಟಿ, ಇಡಿಗಳನ್ನು ಛೂಬಿಟ್ಟಿದ್ದಾಗಲಿ ಇದನ್ನು ಸಾಬೀತು ಮಾಡುತ್ತವೆ. 2019ರ ಎಂಪಿ ಎಲೆಕ್ಷನ್ ಹತ್ತಿರವಿರುವ ಈ ಹೊತ್ತಿನಲ್ಲಿ ಕನ್ನಡದ ಸ್ಟಾರ್ ನಟರ ಮೇಲೆ ಐಟಿ ರೇಡು ಮಾಡಿರುವುದರ ಹಿಂದೆಯೂ ಮೋದಿ ಅರ್ಥಾತ್ ಬಿಜೆಪಿಯ ಹುನ್ನಾರವಿರಬಹುದಾ ಎನ್ನುವುದೇ ಆ ವಾದ!
ಅರೆ, ಸ್ಟಾರ್ ನಟರುಗಳಿಗೂ ಎಲೆಕ್ಷನ್‍ಗೂ ಏನು ಸಂಬಂಧ? ಅವರ ಮೇಲೆ ದಾಳಿ ಮಾಡಿ ಬಿಜೆಪಿ ಹೇಗೆ ತಾನೇ ಲಾಭ ಮಾಡಿಕೊಂಡೀತು? ರೇಡ್‍ಗೆ ತುತ್ತಾದವರಲ್ಲಿ ಶಿವರಾಜ್ ಕುಮಾರ್ ಹೊರತುಪಡಿಸಿ ಯಾರೂ ಸಕ್ರಿಯ ರಾಜಕಾರಣದಲ್ಲಿಲ್ಲ, ಶಿವಣ್ಣ ಕೂಡಾ ತಮ್ಮ ಮಡದಿ ಗೀತಕ್ಕ ಹಾಗೂ ಬಾಮೈದ ಮಧು ಬಂಗಾರಪ್ಪನ ಜೆಡಿಎಸ್ ರಾಜಕಾರಣದ ಬೆನ್ನಿಗೆ ನಿಂತಿದ್ದಾರೆಯೇ ವಿನಾಃ ಖುಲ್ಲಂಖುಲ್ಲ ಅಖಾಡಕ್ಕಿಳಿದಿಲ್ಲ. ಅಂತದ್ದರಲ್ಲಿ ಈ ನಟರುಗಳ ಮೇಲಿನ ದಾಳಿಯಿಂದ ಬಿಜೆಪಿ ಯಾವ ಸೀಮೆಯ ರಾಜಕೀಯ ಜಿದ್ದು ತೀರಿಸಿಕೊಂಡೀತು? ಈ ಎಲ್ಲಾ ಪ್ರಶ್ನೆಗಳಲ್ಲಿ ಖಂಡಿತ ವಜನ್ನು ಇದೆ. ಆದರೆ ಈ ವಾದವನ್ನು ಮುಂದಿಡುತ್ತಿರುವವರ ಪ್ರಕಾರ ಬಿಜೆಪಿ ಮೇಲೆ ಜನರ ಒಲವು ಕಡಿಮೆಯಾಗಿರೋದಲ್ಲದೆ, ನಾಲ್ಕೂವರೆ ವರ್ಷದಲ್ಲಿ ಯಾವೊಂದು ಜನಪರ ಕೆಲಸ ಮಾಡದೆ ಅಂಬಾನಿ-ಅದಾನಿಗಳ ಬಾಲಬುಡಕನಂತೆ ವರ್ತಿಸಿದ ಸ್ವತಃ ಮೋದಿಯವರ ಜನಪ್ರಿಯತೆಯೂ ಕುಸಿದಿದೆ. ಮೊನ್ನೆ ಮುಕ್ತಾಯವಾದ ಪಂಚರಾಜ್ಯ ಫಲಿತಾಂಶಗಳೇ ಇದಕ್ಕೆ ಸಾಕ್ಷಿ.
ಹಾಗಾಗಿ ಬಿಜೆಪಿ ಮತ್ತೆ ಅಧಿಕಾರಕ್ಕೇರಲು ಯಾವ ಸಮರ್ಥ ಕಾರಣಗಳೂ ಕಾಣುತ್ತಿಲ್ಲ್ಲ. ಈಗ ದಿಢೀರ್ ಜನಪ್ರಿಯತೆ ಏರಿಸಿಕೊಳ್ಳುವುದೊಂದೇ ಉಳಿದಿರುವ ಮಾರ್ಗ. ಯಾಕೆಂದರೆ ಬಿಜೆಪಿಯ ಫೇವರಿಟ್ ರಾಮಮಂದಿರ ಇಶ್ಯೂ ಕೂಡಾ ಪಂಚರಾಜ್ಯ ಎಲೆಕ್ಷನ್‍ನಲ್ಲಿ ವರ್ಕ್‍ಔಟ್ ಆಗಿಲ್ಲ. ಶಬರಿಮಲೆ ವಿವಾದವೂ ದೊಡ್ಡಮಟ್ಟದಲ್ಲಿ ಕೈಹಿಡಿಯುವಂತೆ ಕಾಣುತ್ತಿಲ್ಲ. ಮಲೆಯಾಳಿ ಮಹಿಳೆಯರು ನಡೆಸಿದ 650 ಕಿಮೀ ಉದ್ದದ ಮಾನವಸರಪಳಿ ಬಿಜೆಪಿಗರನ್ನು ಆತಂಕಕ್ಕೆ ತಳ್ಳಿದೆ. ಇನ್ನು ಬಿಜೆಪಿಯ ಐಟಿ ವಿಂಗು ನಡೆಸುತ್ತಿರುವ ಹಿಂದೂ-ಮುಸ್ಲಿಂ ದ್ವೇಷದ ಫೋಟೊಶಾಪ್ ಮೆಸೇಜುಗಳೂ ಜನರನ್ನು ಇಬ್ಬಾಗಿಸುತ್ತಿಲ್ಲ. ಇಂಥಾ ಹೊತ್ತಲ್ಲಿ ದಿಢೀರ್ ಜನಪ್ರಿಯತೆಯ ಹೊರತಾಗಿ ಬೇರಾವ ಮಾರ್ಗಗಳೂ ಬಿಜೆಪಿಯನ್ನು ಬಚಾವು ಮಾಡಲು ಸಾಧ್ಯವಿಲ್ಲ. ಇದನ್ನು ಸಾಧಿಸಬೇಕೆಂದರೆ ಏನೇನು ಮಾರ್ಗಗಳಿವೆ ಅನ್ನೋದನ್ನು ಈಗ ಬಿಜೆಪಿ ದಿಗ್ಗಜರು ಹುಡುಕಾಡುತ್ತಿದ್ದಾರೆ. ಜನಪ್ರಿಯ ಯೋಜನೆಗಳನ್ನು ಘೋಷಿಸೋದು ಅಂತವುಗಳಲ್ಲಿ ಒಂದು. ಅದು ಮಾಡಬೇಕೆಂದರೆ ಬೊಕ್ಕಸದಲ್ಲಿ ಹಣವಿರಬೇಕು. ಆದರೆ ನೀರವ್ ಮೋದಿ, ಮೆಹುಲ್ ಚೋಸ್ಕಿ, ವಿಜಯ್ ಮಲ್ಯರಂತ ಬ್ಯಾಂಕುಗಳ್ಳರು ಜನರ ಹಣ ದೋಚಿಕೊಂಡು ನಿರಾಯಾಸವಾಗಿ ಪರಾರಿಯಾದದ್ದಲ್ಲದೆ ಅಂಬಾನಿ, ಅದಾನಿಗಳಂತಹ ಕಾರ್ಪೊರೇಟ್ ಕುಳಗಳಿಗೆ ಕೇಂದ್ರ ಸರ್ಕಾರವೇ ಪೌರೋಹಿತ್ಯ ವಹಿಸಿ ತೆರಿಗೆ ಹಣವನ್ನು ಧಾರೆ ಎರೆದಿರೋದ್ರಿಂದ ಈಗ ಬೊಕ್ಕಸವೂ ಖಾಲಿ. ಹಾಗಾಗಿಯೇ ರಿಸರ್ವ್ ಬ್ಯಾಂಕಿನ ಆಪತ್ಕಾಲದ ನಿಧಿ ಮೇಲೂ ಮೋದಿ ಕಣ್ಣು ಹಾಕಿದ್ದಾರೆ. ಹಾಗೆ ಮಾಡಿದರೆ ಮುಂದೆ ತಾನೆಲ್ಲಿ ಸಿಕ್ಕಿಬೀಳುತ್ತೇನೊ ಎಂಬ ಭಯದಿಂದಲೇ ಆರ್‍ಬಿಐ ಗವರ್ನರ್ ಊರ್ಜಿತ್ ಸದ್ದಿಲ್ಲದೆ ರಾಜೀನಾಮೆ ಬಿಸಾಕಿ ಹೋದದ್ದು.
ಇನ್ನು ದಿಢೀರ್ ಜನಪ್ರಿಯತೆ ಗಿಟ್ಟಿಸಿಕೊಳ್ಳುವ ಲೆಕ್ಕಾಚಾರದಲ್ಲಿ ಅಮಿತ್ ಶಾ ಟೀಮಿಗೆ ಹೊಳೆದಿರೋದು ಜನಪ್ರಿಯ ವ್ಯಕ್ತಿಗಳನ್ನು ಮುಂದಿಟ್ಟುಕೊಂಡು ಪ್ರಚಾರ ನಡೆಸೋದು. ಸುಲಭಕ್ಕೆ ಸಿಗುವ ಮತ್ತು ಹೆಚ್ಚು ಪರಿಣಾಮಕಾರಿಯಾದ ಅಂಥಾ ವ್ಯಕ್ತಿಗಳೆಂದರೆ ಅದು ಸಿನಿಮಾ ಮಂದಿ. ಅತ್ತ ತಮಿಳುನಾಡಿನಲ್ಲಿ ಸೂಪರ್‍ಸ್ಟಾರ್ ರಜನೀಕಾಂತ್‍ರನ್ನೇ ಖೆಡ್ಡಾಕ್ಕೆ ಕೆಡವಿಕೊಳ್ಳಲು ತಯಾರಿ ನಡೆಸಿರುವ ಬಿಜೆಪಿಗೆ ದಕ್ಷಿಣ ರಾಜ್ಯಗಳಲ್ಲಿ ಸಿನಿಮಾ ನಟರ ಪ್ರಭಾವ ಎಂತದ್ದು ಅನ್ನೋದು ಅರ್ಥವಾಗಿದೆ. ಅದರಲ್ಲೂ ಎಂಪಿ ಎಲೆಕ್ಷನ್‍ನ ಜೊತೆಜೊತೆಗೆ ಸಾಧ್ಯವಾದರೆ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರವನ್ನು ಧ್ವಂಸ ಮಾಡಿ ಬಿಜೆಪಿ ಸರ್ಕಾರ ರಚಿಸುವ ಮೂಲಕ ದೇಶದಲ್ಲಿ ಕುಗ್ಗಿರುವ ತನ್ನ ಅಧಿಕಾರ ಬಲವನ್ನು ಹಿಗ್ಗಿಸಿಕೊಳ್ಳಲು ಅವಕಾಶವಿರುವ ಕರ್ನಾಟಕದಲ್ಲಿ ಸಿನಿಮಾ ನಟರುಗಳನ್ನು ಅಂಕೆಯಲ್ಲಿಟ್ಟುಕೊಳ್ಳುವುದು ಬಿಜೆಪಿಯ ಹುನ್ನಾರ ಎನ್ನುತ್ತೆ ಆ ವಾದ.
ಯಶ್ ಮತ್ತು ಸುದೀಪ್ ಕೇವಲ ಸಿನಿಮಾ ಪ್ರಭಾವದಲ್ಲಿ ಮಾತ್ರವಲ್ಲದೆ ಜಾತಿ ಹಿನ್ನೆಲೆಯಲ್ಲೂ ಪ್ರಭಾವಿಗಳು. ಕಳೆದ ಅಸೆಂಬ್ಲಿ ಎಲೆಕ್ಷನ್‍ನಲ್ಲಿ ಈ ಇಬ್ಬರೂ ಕೆಲ ಅಭ್ಯರ್ಥಿಗಳ ಪರ ಭರ್ಜರಿ ಪ್ರಚಾರ ನಡೆಸಿದ್ದರು. ಅವರು ಪ್ರಚಾರ ಮಾಡಿದ ಬಹುಪಾಲು ಕಡೆ ಅಭ್ಯರ್ಥಿಗಳು ಗೆದ್ದಿದ್ದಾರೆ. ಆದರೆ ಒಂದು ಐಡಿಯಾಲಜಿಕಲ್ ಫ್ರೇಮ್ ಇಲ್ಲದ ಇವರು ಯಾವ ಪಕ್ಷದ ಅಭ್ಯರ್ಥಿಗಳು ಕರೆದರೂ ಹೋಗಿ ಕೈಬೀಸಾಡಿ ಬರುತ್ತಾರೆ. ಯಶ್ ಬಿಜೆಪಿ ಮತ್ತು ಜೆಡಿಎಸ್ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿದ್ದರೆ, ಸುದೀಪ್ ಬಿಜೆಪಿಯ ಶ್ರೀರಾಮುಲು ಪರ ಮೊಳಕಾಲ್ಮೂರಿನಲ್ಲಿ ಪ್ರಚಾರ ಮಾಡಿದರು ಕಾಂಗ್ರೆಸಿನ ಸಿದ್ದರಾಮಯ್ಯ ಮೇಲಿನ ಅಭಿಮಾನದಿಂದ ಬಾದಾಮಿ ಕಣದಲ್ಲಿ ರಾಮುಲು ಪರ ಕೈಬೀಸದೆ ಹಿಂದೆ ಸರಿದಿದ್ದರು. ಇನ್ನು ರಾಜ್ ಕುಟುಂಬದ ಶಿವಣ್ಣ, ಪುನೀತ್‍ಗೆ ರಾಜ್ಯಾದ್ಯಂತ ಅಭಿಮಾನಿ ಸಮೂಹವಿದೆ. ಎಲೆಕ್ಷನ್‍ಗು ಮುನ್ನ ಇಂತಿಪ್ಪ ಸ್ಟಾರ್‍ವ್ಯಾಲ್ಯು ನಟರನ್ನು ತನ್ನ ಅಂಕೆಯಲ್ಲಿಟ್ಟುಕೊಂಡರೆ ಎಲೆಕ್ಷನ್ ಸಮಯದಲ್ಲಿ ತಮ್ಮ ಪರ ಪ್ರಚಾರಕ್ಕೆ ಬಳಸಿಕೊಳ್ಳಬಹುದು, ಕಡೇಪಕ್ಷ ವಿರೋಧಿಗಳ ಪರವಾಗಿ ಪ್ರಚಾರಕ್ಕೆ ಹೋಗದಂತೆ ನಿಯಂತ್ರಿಸಬಹುದು ಎನ್ನುವ ಲೆಕ್ಕಾಚಾರದಿಂದಲೇ ಐಟಿಯನ್ನು ಛೂಬಿಟ್ಟು ಬೆದರಿಸಿದೆ ಎಂಬ ಷರಾ ಬರೆಯುತ್ತಿದೆ ಆ ವಾದ.
ಕನ್ನಡದಲ್ಲಿ ದಿ ವಿಲನ್, ಕೆಜೆಎಫ್‍ನಂತಹ ದೊಡ್ಡ ಬಜೆಟ್‍ನ ಸಿನಿಮಾ ನಿರ್ಮಾಣವಾದ್ದರಿಂದ ಈ ರೇಡು ನಡೆಸಲಾಗಿದೆ ಎಂಬ ಸಮರ್ಥನೆ ಕೇಳಿಬರುತ್ತಿದೆಯಾದರು ಅದು ಅಷ್ಟೊಂದು ಗಟ್ಟಿ ನೆಪವಲ್ಲ. ಯಾಕೆಂದರೆ ಇವುಗಳಿಗಿಂತ ದೊಡ್ಡ ಬಜೆಟ್ಟಿನ ಸಿನಿಮಾಗಳು ತೆಲುಗು, ತಮಿಳು ಚಿತ್ರರಂಗದಲ್ಲಿ ಮಾಮೂಲಿ ಎನ್ನುವಷ್ಟು ಸಹಜವಾಗಿ ನಿರ್ಮಾಣವಾಗುತ್ತಿವೆ. ರಾಜಮೌಳಿಯ ಬಾಹುಬಲಿ, ರಜನೀಕಾಂತ್‍ರ 2.0 ಸಿನಿಮಾಗಳ ಬಜೆಟ್ಟಿನ ಮುಂದೆ ಕನ್ನಡ ಸಿನಿಮಾಗಳ ಬಜೆಟ್ಟಾಗಲಿ, ಮಾರುಕಟ್ಟೆಯಾಗಲಿ ದೊಡ್ಡ ಪ್ರತಿಸ್ಪರ್ಧಿಗಳಲ್ಲ ಅನ್ನೋದು ವಾಸ್ತವ. ಆ ಸಿನಿಮಾ ನಿರ್ಮಾತೃಗಳ ಮೇಲಿಲ್ಲದ ಐಟಿ ಇಲಾಖೆಯ ಕಣ್ಣು, ಕನ್ನಡ ಸಿನಿಮಾಗಳನ್ನೇಕೆ ಕೆಕ್ಕರಿಸಿ ನೋಡಬೇಕು?
ರಾಜಕೀಯ ಲೆಕ್ಕಾಚಾರದಿಂದ ಕನ್ನಡದ ನಟರುಗಳ ಮೇಲೆ ಐಟಿ ರೇಡು ನಡೆದಿದೆ ಅನ್ನೋ ಈ ವಾದದಲ್ಲಿ ಅಷ್ಟಾಗಿ ಲಾಜಿಕ್ಕು ಕಾಣದಿರಬಹುದು, ಆದರೆ ಮೋದಿ-ಅಮಿತ್ ಶಾ ರಾಜಕಾರಣದ ವೈಖರಿ ನೋಡಿದರೆ ಯಾವುದನ್ನೂ ಅಷ್ಟು ಸುಲಭಕ್ಕೆ ತಳ್ಳಿಹಾಕಲಾಗುವುದಿಲ್ಲ ಅನ್ನೋದು ಮಾತ್ರ ಸತ್ಯ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ವಿಮಾನ ಪತನ : ಸಂಸದ ಸೇರಿ 15 ಜನರು ಸಾವು

ಬುಧವಾರ (ಜ.28) ಸರ್ಕಾರಿ ಸ್ವಾಮ್ಯದ ವಿಮಾನಯಾನ ಸಂಸ್ಥೆ ಸಟೇನಾ ನಿರ್ವಹಿಸುತ್ತಿದ್ದ ಸಣ್ಣ ಪ್ರಯಾಣಿಕ ವಿಮಾನವು ಈಶಾನ್ಯ ಕೊಲಂಬಿಯಾದ ಪರ್ವತ ಪ್ರದೇಶದಲ್ಲಿ ಪತನಗೊಂಡು ಎಲ್ಲಾ 15 ಪ್ರಯಾಣಿಕರು ಜನರು ಸಾವಿಗೀಡಾಗಿದ್ದಾರೆ. ದುರಂತದ ಕಾರಣ ಇನ್ನೂ ಸ್ಪಷ್ಟವಾಗಿಲ್ಲ....

‘ವಿಳಂಬವಾದರೂ ಸ್ವಾಗತಾರ್ಹ ಹೆಜ್ಜೆ..’; ಕೇಂದ್ರದ ಯುಜಿಸಿ ನಿಯಮಗಳನ್ನು ಪ್ರಶಂಸಿದ ಸಿಎಂ ಸ್ಟಾಲಿನ್

ಯುಜಿಸಿ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಈಕ್ವಿಟಿ ಪ್ರಚಾರ) ನಿಯಮಗಳು, 2026 "ಆಳವಾಗಿ ಬೇರೂರಿರುವ ತಾರತಮ್ಯ ಮತ್ತು ಸಾಂಸ್ಥಿಕ ನಿರಾಸಕ್ತಿಯಿಂದ ಬಳಲುತ್ತಿರುವ ಉನ್ನತ ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸುವಲ್ಲಿ ವಿಳಂಬವಾದರೂ ಸ್ವಾಗತಾರ್ಹ ಹೆಜ್ಜೆಯಾಗಿದೆ" ಎಂದು ತಮಿಳುನಾಡು...

ಹಿರಿಯ ಕಾರ್ಮಿಕ ಮುಖಂಡ ಅನಂತ ಸುಬ್ಬರಾವ್ ನಿಧನ

ಕಳೆದ ನಾಲ್ಕು ದಶಕಗಳಿಂದ ಸಾರಿಗೆ ಕ್ಷೇತ್ರದ ಕಾರ್ಮಿಕರ ಪರವಾಗಿ ಧ್ವನಿ ಎತ್ತುತ್ತಿದ್ದ, ಕಾರ್ಮಿಕರ ಹಿತರಕ್ಷಣೆಗಾಗಿ ನಿರಂತರ ಹೋರಾಟ ನಡೆಸುತ್ತಿದ್ದ ಹಿರಿಯ ಕಾರ್ಮಿಕ ಮುಖಂಡ ಎಚ್‌.ವಿ ಅನಂತ ಸುಬ್ಬರಾವ್ ಅವರು ಜನವರಿ 28ರಂದು, ನಿಧನರಾಗಿದ್ದಾರೆ....

ಮುಡಾ ಪ್ರಕರಣ: ಸಿದ್ದರಾಮಯ್ಯಗೆ ಬಿಗ್ ರಿಲೀಫ್, ಲೋಕಾಯುಕ್ತ ಬಿ ರಿಪೋರ್ಟ್ ಪುರಸ್ಕರಿಸಿದ ಕೋರ್ಟ್

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಕುಟುಂಬದ ವಿರುದ್ಧ ಪುರಾವೆಗಳಿಲ್ಲ ಎಂದು ಹೇಳಿ ‘ಕ್ಲೀನ್ ಚೀಟ್’ ನೀಡಿ ‘ಬಿ’ ರಿಪೋರ್ಟ್ ಅನ್ನು ಸಲ್ಲಿಸಿತ್ತು....

ಪಿಟಿಸಿಎಲ್‌ ಕಾಯ್ದೆ ತಿದ್ದುಪಡಿ- ಕೋರ್ಟ್‌ಗಳಲ್ಲಿ ದಲಿತರಿಗೆ ಆಗುತ್ತಿರುವ ಅನ್ಯಾಯ ಖಂಡಿಸಿ ರಾಜ್ಯದಾದ್ಯಂತ ಪ್ರತಿಭಟನೆ

ಪಿಟಿಸಿಎಲ್‌ ಕಾಯ್ದೆ, 1978ರ 2023ರ ತಿದ್ದುಪಡಿ ಕಾಯ್ದೆಯ ವಿರೋಧಿಸಿ ಹಾಗೂ ಕಂದಾಯ ಇಲಾಖೆಯ ಎಸಿ, ಡಿಸಿ ನ್ಯಾಯಾಲಯಗಳು ಹಾಗೂ ಹೈಕೋರ್ಟ್, ಸುಪ್ರೀಂ ಕೋರ್ಟ್‌ಗಳಲ್ಲಿ ಆಗುತ್ತಿರುವ ಅನ್ಯಾಯವನ್ನು ಖಂಡಿಸಿ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ...

ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಉಚ್ಚಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಮ್‌ಕೂಟತಿಲ್‌ಗೆ ಜಾಮೀನು

ಪತ್ತನಂತಿಟ್ಟ: ಈ ತಿಂಗಳ ಆರಂಭದಲ್ಲಿ ಬಂಧಿಸಲ್ಪಟ್ಟ ಮೂರನೇ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಉಚ್ಚಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಮ್‌ಕೂಟತಿಲ್ ಅವರಿಗೆ ಕೇರಳ ನ್ಯಾಯಾಲಯ ಬುಧವಾರ ಜಾಮೀನು ನೀಡಿದೆ. ಶಾಸಕರು ಸಲ್ಲಿಸಿದ್ದ ಮೇಲ್ಮನವಿಯನ್ನು ಪರಿಗಣಿಸಿದ್ದ ಪತ್ತನಂತಿಟ್ಟ...

ವಿಮಾನ ಅಪಘಾತದಲ್ಲಿ ಅಜಿತ್ ಪವಾರ್ ಸಾವು : ಪಿತೂರಿ ಶಂಕೆ ವ್ಯಕ್ತಪಡಿಸಿದ ಮಮತಾ ಬ್ಯಾನರ್ಜಿ, ಉನ್ನತ ಮಟ್ಟದ ತನಿಖೆಗೆ ಒತ್ತಾಯಿಸಿದ ರಾಜಕೀಯ ನಾಯಕರು

ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರ ಸಾವಿಗೆ ಕಾರಣವಾದ ಬಾರಾಮತಿ ವಿಮಾನ ಪತನದ ಕುರಿತು ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಸಬೇಕೆಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬುಧವಾರ (ಜ.28) ಒತ್ತಾಯಿಸಿದ್ದಾರೆ....

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ತಾರತಮ್ಯ ತಡೆಯಲು ಯುಜಿಸಿ ಹೊಸ ನಿಯಮ; ಮುಂದುವರೆದ ಪ್ರಬಲಜಾತಿ ಗುಂಪಿನ ವಿರೋಧ

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ಪರಿಹರಿಸುವ ಗುರಿಯನ್ನು ಹೊಂದಿರುವ ವಿಶ್ವವಿದ್ಯಾಲಯ ಅನುದಾನ ಆಯೋಗದ (ಯುಜಿಸಿ) ಪರಿಷ್ಕೃತ ನಿಯಮಗಳ ಕುರಿತು ದೇಶದಲ್ಲಿ ಭಾರಿ ರಾಜಕೀಯ ವಾಗ್ವಾದ ಭುಗಿಲೆದ್ದಿದೆ. ಹೊಸ ಮಾರ್ಗಸೂಚಿಗಳ ಕುರಿತು...

ಜನಸೇನಾ ಶಾಸಕನಿಂದ ಅತ್ಯಾಚಾರ, ಬಲವಂತದ ಗರ್ಭಪಾತ : ಮಹಿಳೆ ಆರೋಪ

ಆಂಧ್ರ ಪ್ರದೇಶದ ರೈಲ್ವೆ ಕೊಡೂರು ವಿಧಾನಸಭಾ ಕ್ಷೇತ್ರದ ಜನ ಸೇನಾ ಶಾಸಕ ಮತ್ತು ಸರ್ಕಾರಿ ಸಚೇತಕ ಅರವ ಶ್ರೀಧರ್ ವಿರುದ್ಧ ಮಹಿಳೆಯೊಬ್ಬರು ಅತ್ಯಾಚಾರ ಮತ್ತು ಬಲವಂತದ ಗರ್ಭಪಾತ ಆರೋಪ ಮಾಡಿದ್ದಾರೆ. ಈ ಕುರಿತು ವಿಡಿಯೋ...

ಬಾರಾಮತಿ ವಿಮಾನ ಅಪಘಾತದಲ್ಲಿ ಅಜಿತ್ ಪವಾರ್ ನಿಧನ; ಸಂತಾಪ ಸೂಚಿಸಿದ ಪ್ರಮುಖರು

ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಮತ್ತು ಇತರ ಐವರು ಜನರು ಪ್ರಯಾಣಿಸುತ್ತಿದ್ದ ವಿಮಾನ ಬುಧವಾರ ಬೆಳಿಗ್ಗೆ ಪುಣೆ ಜಿಲ್ಲೆಯಲ್ಲಿ ಪತನಗೊಂಡು ಸಾವನ್ನಪ್ಪಿದ್ದಾರೆ. ಎನ್‌ಸಿಪಿ ನಾಯಕರಾದ ಅಜಿತ್ ಪವಾರ್ (66) ಮತ್ತು ಇತರರನ್ನು ಹೊತ್ತೊಯ್ಯುತ್ತಿದ್ದ...