Homeಮುಖಪುಟನಭಕ್ಕೆ ಜಿಗಿದ ಮೋದಿ ಫೋಟೊ, ಭಗವದ್ಗೀತೆ ಕಾಪಿ: ಇಲ್ಲೇ ಉಳಿದ 'ಆನಂದ್' ಉಪಗ್ರಹ!

ನಭಕ್ಕೆ ಜಿಗಿದ ಮೋದಿ ಫೋಟೊ, ಭಗವದ್ಗೀತೆ ಕಾಪಿ: ಇಲ್ಲೇ ಉಳಿದ ‘ಆನಂದ್’ ಉಪಗ್ರಹ!

- Advertisement -
- Advertisement -

ಇಂದಿನ ಉಡಾವಣೆಯಲ್ಲಿ ಮೋದಿ ಚಿತ್ರ ಮತ್ತು ಭಗವದ್ಗೀತೆಯ ಇ-ಕಾಪಿಯೇನೋ ನಭಕ್ಕೆ ಜಿಗಿದವು. ಆದರೆ, ತುಂಬ ನಿರೀಕ್ಷಿತ ಭಾರತದ ಮೊದಲ ಖಾಸಗಿ ಉಪಗ್ರಹ ‘ಆನಂದ್’ ಮಾತ್ರ ಇಲ್ಲೆ ಉಳಿದಿದೆ.

ಪಿಎಸ್‌ಎಲ್‌ವಿ-ಸಿ 51 ಘೋಷಿಸಿದಾಗ, ಈ ಆನಂದ್ ಉಪಗ್ರಹದ ಬಗ್ಗೆ ಸಾಕಷ್ಟು ಪ್ರಶಂಸೆ ಕೇಳಿಬಂದಿತ್ತು. ಅದು ಅಂತಿಮವಾಗಿ ಇಂದು ಉಡಾವಣೆಯ ಭಾಗವಾಗಲು ಸಾಧ್ಯವಾಗಲಿಲ್ಲ. ಎಂದು ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.

ಇಂದಿನ ಉಡಾವಣೆ ಬೆಂಗಳೂರು ಮೂಲದ ಪಿಕ್ಸೆಲ್ ಕಂಪನಿಯ ಉಪಗ್ರಹ ‘ಆನಂದ್’ ಅನ್ನು ಸಾಗಿಸಬೇಕಿತ್ತು. ಪಿಕ್ಸೆಲ್ ಖಾಸಗಿ ಕ್ಷೇತ್ರದ ಹೊಸ ಸ್ಟಾರ್ಟ್ ಅಪ್‌ಗಳಲ್ಲಿ ಒಂದಾಗಿದ್ದು, ಸ್ಪೇಸ್‌ಎಕ್ಸ್ ಅಥವಾ ಪ್ಲಾನೆಟ್ ಲ್ಯಾಬ್‌ಗಳಂತಹ ಕಂಪನಿಗಳು ಅಮೆರಿಕದಲ್ಲಿ ಏನು ಮಾಡುತ್ತಿವೆಯೋ ಅದನ್ನು ಮಾಡುತ್ತಿದೆ.

ಶನಿವಾರ ಎರಡು ವರ್ಷಗಳನ್ನು ಪೂರ್ಣಗೊಳಿಸಿದ ಬೆಂಗಳೂರು ಮೂಲದ ಪಿಕ್ಸೆಲ್ ಇಂಡಿಯಾ, ಜಗತ್ತಿನ ಪ್ರತಿಯೊಂದು ಭಾಗವನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡಲು ಹೆಚ್ಚಿನ ರೆಸಲ್ಯೂಶನ್ ಚಿತ್ರಣಗಳನ್ನು ಒದಗಿಸುವ ವ್ಯವಸ್ಥೆಯನ್ನು ಉಪಗ್ರಹದಲ್ಲಿ ಅಳವಡಿಸಿದೆ. ಹವಾಮಾನ ಬದಲಾವಣೆ, ಕೃಷಿ ಮತ್ತು ನಗರ ಯೋಜನೆಯಲ್ಲಿ ಈ ಅನ್ವಯಿಕೆಗಳನ್ನು ಬಳಸಿಕೊಳ್ಳಬಹುದು. ಆನಂದ್ ಎಂದು ಕರೆಯಲ್ಪಡುವ ಅದರ ಮೊದಲ ಉಪಗ್ರಹಗಳು ಇಂದು ಬೆಳಿಗ್ಗೆ ಶ್ರೀಹರಿಕೋಟ ಉಡಾವಣಾ ಶ್ರೇಣಿಯಿಂದ ಹೊರಟ ಈ ಪಿಎಸ್‌ಎಲ್‌ವಿ-ಸಿ 51 ರಾಕೆಟ್‌ನಲ್ಲಿ ಇರಬೇಕಿತ್ತು.

ಆದರೆ ಉಡಾವಣೆಗೆ ಒಂದು ವಾರಕ್ಕಿಂತಲೂ ಮೊದಲು, ಕಂಪನಿಯು, ‘ಪರೀಕ್ಷೆಯ ಸಮಯದಲ್ಲಿ “ಕೆಲವು ಸಾಫ್ಟ್‌ವೇರ್ ಸಮಸ್ಯೆಗಳ’ ಕಾರಣದಿಂದಾಗಿ, ಈ ಸಮಯದಲ್ಲಿ ಉಪಗ್ರಹವನ್ನು ಉಡಾಯಿಸುವುದಿಲ್ಲ ಎಂದು ಘೋಷಿಸಿತು. “ಉಪಗ್ರಹವನ್ನು ತಯಾರಿಸಲು ವ್ಯಯಿಸಿದ ಸಮಯ ಮತ್ತು ಶ್ರಮವನ್ನು ಗಮನಿಸಿದರೆ, ಉಪಗ್ರಹವನ್ನು ಉಡಾಯಿಸಲು ಮುಂದಾಗುವುದರಲ್ಲಿ ಅರ್ಥವಿಲ್ಲ, ಈ ಸಮಯದಲ್ಲಿ ನಮಗೆ ಸಂಪೂರ್ಣ ವಿಶ್ವಾಸವಿಲ್ಲ’ ಎಂದು ಕಂಪನಿಯು ಹೇಳಿಕೆಯಲ್ಲಿ ತಿಳಿಸಿತ್ತು.

ಪಿಕ್ಸೆಲ್ ಉಪಗ್ರಹದಿಂದಾಗಿ ಪಿಎಸ್‌ಎಲ್‌ವಿ-ಸಿ 51 ಉಡಾವಣೆಯು “ವಿಶೇಷ” ಎಂದು ಇಸ್ರೋ ಅಧ್ಯಕ್ಷ ಕೆ.ಶಿವನ್ ಕೂಡ ಹೇಳಿದ್ದರು, ‘ಏಕೆಂದರೆ ಇದು ಹೊಸ ಯುಗದ ಆರಂಭದ ಪ್ರತೀಕವಾಗಿದ್ದು, ಖಾಸಗಿ ಕಂಪನಿಗಳು ಭಾರತದ ಬಾಹ್ಯಾಕಾಶ ಕ್ಷೇತ್ರದಲ್ಲಿ ಸಮಾನ ಪಾಲುದಾರರಾಗುವ ಅಪೂರ್ವ ಸಂದರ್ಭ’ ಎಂದು ಅವರು ಡಿಸೆಂಬರ್‌ನಲ್ಲಿ ಹೇಳಿದ್ದರು.

‘ಭಾರತ ಸರ್ಕಾರವು ಸುಧಾರಣೆಗಳನ್ನು ಪ್ರಾರಂಭಿಸಿದ (ಖಾಸಗಿ ಕಂಪನಿಗಳ ಭಾಗವಹಿಸುವಿಕೆಗೆ ಅನುಕೂಲವಾಗುವಂತೆ ಬಾಹ್ಯಾಕಾಶ ಕ್ಷೇತ್ರವನ್ನು ತೆರೆದಿದ್ದು) ಎಂಟು ತಿಂಗಳಲ್ಲಿ, ಪಿಕ್ಸೆಲ್ ಇಂಡಿಯಾ ಎಂಬ ಸ್ಟಾರ್ಟ್ ಅಪ್‌ನಿಂದ ಆನಂದ್ ಎಂಬ ಮೊದಲ ಉಪಗ್ರಹವನ್ನು ಉಡಾವಣೆ ಮಾಡಲಾಗುವುದು, ” ಎಂದು ಶಿವನ್ ಹೆಮ್ಮೆ ಪಟ್ಟಿದ್ದರು.

ಉಡಾವಣೆಯು ಅಂತಿಮವಾಗಿ ಪಿಕ್ಸೆಲ್ ಇಂಡಿಯಾ ಉಪಗ್ರಹವಿಲ್ಲದೆ ಸಂಭವಿಸಿತು, ಇಂದು ಉಡಾಯಿಸಲ್ಪಟ್ಟ ದೇಸಿ ಉಪಗ್ರಹಗಳನ್ನು ವಿವಿಧ ಇಂಜಿನಿಯರಿಂಗ್ ಕಾಲೇಜುಗಳು ಸಹಯೋಗದಲ್ಲಿ ಅಭಿವೃದ್ಧಿಪಡಿಸಿವೆ.


ಇದನ್ನೂ ಓದಿ: SD ಕಾರ್ಡ್‌ನಲ್ಲಿನ ಭಗವದ್ಗೀತೆ ಹೊತ್ತೊಯ್ದ ಉಪಗ್ರಹ: ಲೈವ್ ವೀಡಿಯೋ ನೋಡಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪಂಜಾಬ್‌| ಎಲ್‌ಪಿಜಿ ಸಿಲಿಂಡರ್‌ಗಾಗಿ ಸರತಿ ಸಾಲಿನಲ್ಲಿ ನಿಂತಿದ್ದಾಗಲೇ ಕುಸಿದು ಬಿದ್ದು ಸಾವನ್ನಪ್ಪಿದ ವೃದ್ಧ

ಪಂಜಾಬ್‌ನ ಬರ್ನಾಲಾ ಜಿಲ್ಲೆಯಲ್ಲಿ, ಎಲ್‌ಪಿಜಿ ಸಿಲಿಂಡರ್‌ಗಾಗಿ ಸರತಿ ಸಾಲಿನಲ್ಲಿ ಕಾಯುತ್ತಿದ್ದಾಗ 66 ವರ್ಷದ ವ್ಯಕ್ತಿಯೊಬ್ಬರು ಹೃದಯಾಘಾತದಿಂದ ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ಶುಕ್ರವಾರ ನಡೆದಿದೆ. ದೇಶದಲ್ಲಿ ಪ್ರಸ್ತುತ ನಡೆಯುತ್ತಿರುವ ಅನಿಲ ಕೊರತೆಯಿಂದ ಉಂಟಾಗುತ್ತಿರುವ...

ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಪದಚ್ಯುತಿಗೆ ಉಭಯ ಸದನಗಳಲ್ಲಿ ನೋಟಿಸ್ ಸಲ್ಲಿಸಿದ ವಿಪಕ್ಷಗಳು

ನವದೆಹಲಿ: ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್ ಕುಮಾರ್ ಅವರನ್ನು ಪದಚ್ಯುತಗೊಳಿಸುವಂತೆ ಕೋರಿ ವಿರೋಧ ಪಕ್ಷದ ಸಂಸದರು ಸಂಸತ್ತಿನ ಉಭಯ ಸದನಗಳಲ್ಲಿ ನೋಟಿಸ್ ಸಲ್ಲಿಸಿರುವುದಾಗಿ ಶುಕ್ರವಾರ ವರದಿಯಾಗಿದೆ.  ಈ ನೋಟಿಸ್‌ಗೆ 130 ಲೋಕಸಭಾ ಸದಸ್ಯರು...

ಹಿಂದೂಯೇತರರಿಗೆ ದೇಗುಲ ಪ್ರವೇಶಕ್ಕೆ ನಿಷೇಧ ಹೇರಿದ ಬದರೀನಾಥ್-ಕೇದಾರನಾಥ ದೇವಾಲಯಗಳ ಸಮಿತಿ

ಮುಂಬರುವ ತೀರ್ಥಯಾತ್ರೆಯ ಋತುವಿನಿಂದ ಜಾರಿಗೆ ಬರುವಂತೆ ಬದರೀನಾಥ್ ಮತ್ತು ಕೇದಾರನಾಥ ದೇವಾಲಯಗಳು ಸೇರಿದಂತೆ ಅದರ ವ್ಯಾಪ್ತಿಯಲ್ಲಿರುವ 47 ಇತರ ದೇವಾಲಯಗಳಿಗೆ ಹಿಂದೂಯೇತರರ ಪ್ರವೇಶವನ್ನು ನಿಷೇಧಿಸುವ ನಿರ್ಣಯವನ್ನು ಸರ್ವಾನುಮತದಿಂದ ದೇವಾಲಯ ಸಮಿತಿಯು ಅಂಗೀಕರಿಸಿದೆ. ಬಿಕೆಟಿಸಿ ಅಧ್ಯಕ್ಷ...

‘ಮಹಿಳೆಯರನ್ನು ಯಾರೂ ಕೆಲಸಕ್ಕೆ ನೇಮಿಸಿಕೊಳ್ಳುವುದಿಲ್ಲ..’; ಕಡ್ಡಾಯ ಮುಟ್ಟಿನ ರಜೆ ಕುರಿತ ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್ 

ಮಹಿಳೆಯರಿಗೆ ಕಡ್ಡಾಯ ಮುಟ್ಟಿನ ರಜೆ 'ಅವರ ಉದ್ಯೋಗದ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು'. ಏಕೆಂದರೆ, ನಾವು ಅಂತಹ ಕಾನೂನನ್ನು ಜಾರಿಗೆ ತಂದರೆ ಉದ್ಯೋಗದಾತರು ಮಹಿಳೆಯರನ್ನು ಕೆಲಸಕ್ಕೆ ನೇಮಿಸಿಕೊಳ್ಳುವುದಿಲ್ಲ' ಎಂದು ಸುಪ್ರೀಂ ಕೋರ್ಟ್‌ ಮುಖ್ಯ...

ಪ್ಯಾಲೆಸ್ತೀನಿಯನ್ ಬಂಧಿತನ ಮೇಲೆ ಲೈಂಗಿಕ ದೌರ್ಜನ್ಯ; ಇಸ್ರೇಲ್ ಸೈನಿಕರ ವಿರುದ್ಧದ ಆರೋಪ ಕೈಬಿಟ್ಟ ಸೇನೆ

ಕ್ಯಾಮೆರಾದಲ್ಲಿ ಭಾಗಶಃ ಸೆರೆಹಿಡಿಯಲಾದ ಹಲ್ಲೆಯಲ್ಲಿ, ಬಂಧಿತ ಪ್ಯಾಲೆಸ್ತೀನಿಯನ್ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಹೊತ್ತಿರುವ ಐದು ಸೈನಿಕರ ವಿರುದ್ಧದ ಆರೋಪಗಳನ್ನು ಕೈಬಿಡುತ್ತಿರುವುದಾಗಿ ಇಸ್ರೇಲ್ ಸೇನೆ (ಮಾರ್ಚ್ 12) ತಿಳಿಸಿದೆ. ಈ ಘೋಷಣೆಯನ್ನು ಪ್ರಧಾನಿ...

‘ಇರಾನ್ ಸರ್ವೋಚ್ಚ ನಾಯಕ ಜೀವಂತವಾಗಿರಬಹುದು, ಆದರೆ ಗಂಭೀರವಾಗಿ ಗಾಯಗೊಂಡಿದ್ದಾರೆ’: ಡೊನಾಲ್ಡ್ ಟ್ರಂಪ್

ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಮೊಜ್ತಬಾ ಖಮೇನಿ(56) "ಬಹುಶಃ ಜೀವಂತವಾಗಿದ್ದಾರೆ ಆದರೆ ಗಂಭೀರವಾಗಿ ಗಾಯಗೊಂಡಿದ್ದಾರೆ" ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಶುಕ್ರವಾರ ಪ್ರಸಾರವಾದ ಫಾಕ್ಸ್ ನ್ಯೂಸ್ ರೇಡಿಯೋದ ಬ್ರಿಯಾನ್ ಕಿಲ್ಮೀಡ್ ಅವರ...

ಬಾಗಲಕೋಟೆ| ಜನರ ಮೇಲೆ ಕಲ್ಲು ಎಸೆದ ಆರೋಪ; ಸಾವಳಗಿಯಲ್ಲಿ ದಲಿತ ಯುವಕನನ್ನು ಕೊಂದ ಗುಂಪು

ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲ್ಲೂಕಿನ ಸಾವಳಗಿ ಗ್ರಾಮದಲ್ಲಿ ದಲಿತ ದೌರ್ಜನ್ಯದ ಆಘಾತಕಾರಿ ಘಟನೆಯೊಂದು ನಡೆದಿದೆ. ಶಾಲಾ ಕಾರ್ಯಕ್ರಮವೊಂದರಲ್ಲಿ ಜನರ ಮಲೆ ಸಣ್ಣ ಕಲ್ಲು ಎಸೆದ ಎಂಬ ಆರೋಪದ ಮೇಲೆ ದಲಿತ ಯುವಕನನ್ನು ಕ್ರೂರವಾಗಿ...

ಒಳಮೀಸಲಾತಿ ಇಲ್ಲದೆ 56 ಸಾವಿರ ಹುದ್ದೆಗಳ ನೇಮಕಾತಿ ಇಲ್ಲ: ಸಚಿವ ಮುನಿಯಪ್ಪ

“ಒಳಮೀಸಲಾತಿ ಇಲ್ಲದೆ ಒಂದೇ ಒಂದು ಹುದ್ದೆಯನ್ನೂ ನೇಮಕ ಮಾಡಲು ಬಿಡುವುದಿಲ್ಲ, ಮುಖ್ಯಮಂತ್ರಿಗಳು ಈ ಬಗ್ಗೆ ಒಪ್ಪಿಕೊಂಡಿದ್ದಾರೆ. 27ರಂದು ನಡೆಯುವ ಸಚಿವ ಸಂಪುಟ ಸಭೆ ನಮಗೆ ಚಾರಿತ್ರಿಕವಾಗಲಿದೆ. ಮುಖ್ಯಮಂತ್ರಿಗಳ ಮೇಲೆ ವಿಶ್ವಾಸ ಇರಲಿ” ಎಂದು...

ಪಶ್ಚಿಮ ಏಷ್ಯಾ ಸಂಘರ್ಷ| ‘ಈ ಯುದ್ಧವನ್ನು ಕೊನೆಗೊಳಿಸಲು ಒಂದೇ ಮಾರ್ಗ…’: ಮೂರು ಷರತ್ತುಗಳನ್ನು ಮುಂದಿಟ್ಟ ಇರಾನ್

ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಅವರು ಅಮೆರಿಕ ಮತ್ತು ಇಸ್ರೇಲ್ ಜೊತೆಗಿನ ನಡೆಯುತ್ತಿರುವ ಸಂಘರ್ಷವನ್ನು ಕೊನೆಗೊಳಿಸಲು ಮೂರು ಷರತ್ತುಗಳನ್ನು ನಿಗದಿಪಡಿಸಿದ್ದಾರೆ. ಇದರಲ್ಲಿ ದೇಶವು ಭವಿಷ್ಯದ ದಾಳಿಗಳನ್ನು ಎದುರಿಸುವುದಿಲ್ಲ ಎಂಬ ಖಾತರಿಗಳು ಸೇರಿವೆ. ಬುಧವಾರ ತಮ್ಮ...

ಖಾಸಗಿ ಜಾಗದ ನಮಾಝ್‌ಗೆ ಅಧಿಕಾರಿಗಳಿಂದ ಅಡ್ಡಿ : ಮುಸ್ಲಿಂ ವ್ಯಕ್ತಿಗೆ ಭದ್ರತೆ ಒದಗಿಸಲು ಕೋರ್ಟ್ ಆದೇಶ

ಉತ್ತರ ಪ್ರದೇಶದ ಬರೇಲಿ ಜಿಲ್ಲೆಯ ಮುಸ್ಲಿಂ ವ್ಯಕ್ತಿಯೊಬ್ಬರು ತಮ್ಮ ಖಾಸಗಿ ಜಾಗದಲ್ಲಿ ಇತರರೊಂದಿಗೆ ನಮಾಝ್ ಮಾಡುವುದಕ್ಕೆ ಅಡ್ಡಿಪಡಿಸಲಾಗಿದೆ ಎಂದು ಆರೋಪಿಸಿದ ಹಿನ್ನೆಲೆ, ಅವರಿಗೆ ದಿನದ 24 ಗಂಟೆಯೂ ರಕ್ಷಣೆ ನೀಡಲು ಇಬ್ಬರು ಭದ್ರತಾ...