Homeಕರ್ನಾಟಕಸಂಸ್ಕೃತ ವಿವಿ ಬೇಡ, ಮಾಗಡಿಯಾದ್ಯಂತ ಪ್ರಚಾರಾಂದೋಲನಕ್ಕೆ ಕೆವಿಎಸ್‌ ನಿರ್ಧಾರ

ಸಂಸ್ಕೃತ ವಿವಿ ಬೇಡ, ಮಾಗಡಿಯಾದ್ಯಂತ ಪ್ರಚಾರಾಂದೋಲನಕ್ಕೆ ಕೆವಿಎಸ್‌ ನಿರ್ಧಾರ

ಸಂಸ್ಕೃತ ಸತ್ತ ಭಾಷೆ ಮಾತ್ರವಲ್ಲ, ಅದು ಕನ್ನಡದ ಕತ್ತು ಹಿಸುಕುತ್ತಿರುವ ಭಾಷೆಯಾಗಿದೆ - ಹರ್ಷಕುಮಾರ್ ಕುಗ್ವೆ

- Advertisement -
- Advertisement -

ಸಂಸ್ಕೃತ ಭಾಷೆ ಯಾವುದೇ ಪ್ರದೇಶದಲ್ಲಿಯೂ ಬಳಕೆಯಲ್ಲಿಲ್ಲದ ಭಾಷೆ. ಆ ಭಾಷೆಗೂ ಈಗಾಗಲೇ 16 ವಿವಿಗಳು ಇವೆ. ಇದೀಗ ಮತ್ತೊಂದು ಸಂಸ್ಕೃತ ವಿವಿಯ ಅಗತ್ಯವಿಲ್ಲ. ಬದಲಾಗಿ ಕನ್ನಡ ವಿವಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕು ಎಂದು ಕರ್ನಾಟಕ ವಿದ್ಯಾರ್ಥಿ ಸಂಘಟನೆ ಒತ್ತಾಯಿಸಿದೆ. ಸಂಸ್ಕೃತ ವಿವಿ ಯಾಕೆ ಬೇಡ ಎಂದು ಮಾಗಡಿ ತಾಲ್ಲೂಕಿನಾದ್ಯಂತ ಪ್ರಚಾರಾಂದೋಲನ ಮಾಡಿ, ಜನರಿಗೆ ಈ ಬಗ್ಗೆ ಅರಿವು ಮೂಡಿಸಲು ಕೆವಿಎಸ್ ನಿರ್ಧರಿಸಿದೆ.

ಕ್ಲಬ್‌ ಹೌಸ್‌ನಲ್ಲಿ ‘ಸಂಸ್ಕೃತ ವಿವಿ ಯಾಕೆ ಬೇಡ?’ ಎಂಬ ವಿಷಯದ ಬಗ್ಗೆ ಕೆವಿಎಸ್‌ ಚರ್ಚೆಯನ್ನು ಆಯೋಜಿಸಿತ್ತು. ಈ ವೇಳೆ, ಮಾತನಾಡಿದ ಸಂಘಟನೆಯ ರಾಜ್ಯ ಸಂಚಾಲಕ ಸರೋವರ್ ಬೆಂಕಿಕೆರೆ, ಕೆವಿಎಸ್‌ ಸಂಘಟನೆಯು ಕರವೇ ಜೊತೆಗೂಡಿ ಪ್ರಚಾರಾಂದೋಲನ ನಡೆಸುವುದಾಗಿ ಘೋಷಿಸಿದ್ದಾರೆ.

ಚರ್ಚೆಯಲ್ಲಿ ಮಾತನಾಡಿದ ಕರವೇ ಸಮಾಜಿಕ ಜಾಲತಾಣ ಸಂಚಾಲಕ ಸಜಿತ್, “ದೇಶದಲ್ಲಿ ಒಟ್ಟು 16 ಸಂಸ್ಕೃತ ವಿವಿಗಳಿವೆ. ಕರ್ನಾಟಕದಲ್ಲಿ 35 ಸಂಸ್ಕೃತ ಶಾಲೆ ಮತ್ತು ಅಧ್ಯಯನ ಕೇಂದ್ರಗಳಿವೆ. ಆದರೆ ಇಡೀ ಭಾರತದಲ್ಲಿ ಕೇವಲ 1 ಕನ್ನಡ ವಿವಿ ಇದೆ. ನಮ್ಮ ಹಂಪಿಯ ಕನ್ನಡ ವಿವಿ ಗಾಗಿ ಆರು ಕೋಟಿ ಅನುದಾನ ಕೊಡಲು ಹೊರಾಟ ಮಾಡಲಾಗಿತ್ತು. ಆದರೆ ಅದನ್ನು ಕೊಡದ ಸರ್ಕಾರ ಸಂಸ್ಕೃತ ವಿವಿ ಗೆ ಪೋಷಣೆ ಮಾಡುತ್ತಿರುವುದು ಕನ್ನಡ ಕೊಲ್ಲುವ ಹುನ್ನಾರ” ಎಂದು ಸರ್ಕಾರದ ವಿರುದ್ದ ಕಿಡಿಕಾರಿದರು.

ಕಾಲೇಜುಗಳಲ್ಲಿ ಕನ್ನಡ ಕಡ್ಡಾಯಕ್ಕೆ ತಕರಾರು ಎತ್ತಿದವರು ಮುಂದೆ ಶಾಲೆಯಲ್ಲಿ ಕನ್ನಡ ಕಡ್ಡಾಯಕ್ಕೂ ಕೂಡ ತಕರಾರು ಎತ್ತುತ್ತಾರೆ. ಕನ್ನಡದ ಭಾಷೆಯಲ್ಲಿ ಸಂಸ್ಕೃತವನ್ನು ತುರುಕುವ ಕೆಲಸ ನಡೆಯುತ್ತಿದೆ. ಕನ್ನಡದ ಮೇಲೆ ಸಂಸ್ಕೃತದ ಹೇರಿಕೆ ಮಾಡುತ್ತಾ ದೇವನಾಗರಿಗೆ ಉತ್ತೇಜನ ನೀಡುತ್ತಿದೆ. ಕನ್ನಡವನ್ನು ಉಪಯೋಗದ ಭಾಷೆಯನ್ನಾಗಿ ಮಾಡಬೇಕು ಅದರಿಂದ ಕನ್ನಡವನ್ನು ಗಟ್ಟಿಯಾಗಿಸಬಹುದು ಎಂದು ಅವರು ಒತ್ತಾಯಿಸಿದ್ದಾರೆ.

ಇದೇ ವೇಳೆ ಕರವೇ ರಾಜ್ಯ ಸಂಘಟನಾ ಕಾರ್ಯದರ್ಶಿ ಅರುಣ್ ಜಾವಗಲ್ ಮಾತನಾಡಿ, “ಕನ್ನಡ ಮತ್ತು ಕನ್ನಡ ವಿವಿಗಾಗಿ ರಾಜ್ಯ ಮತ್ತು ಕೇಂದ್ರ ಸರಕಾರದಿಂದ ಯಾವುದೇ ತರಹದ ಅನುದಾನ ಸಿಗುತ್ತಿಲ್ಲ. ವಿವಿಗಳಲ್ಲಿ ಕನ್ನಡವನ್ನು ಕಡ್ಡಾಯಗೊಳಿಸುವ ಸರ್ಕಾರದ ನಿರ್ಧಾರದ ವಿರುದ್ದ ಸಂಸ್ಕೃತಪರ ಸಂಘಟನೆಗಳು ಕೋರ್ಟಿಗೆ ಹೋಗುತ್ತಿವೆ. ಕನ್ನಡ ಕಡ್ಡಾಯವಲ್ಲ ಎಂದು ಕೊರ್ಟಿಗೆ ಹೋಗಿರುವ ಸಂಘಟನೆಗಳೊಂದಿಗೆ ಬಿಜೆಪಿ-ಆರ್‌ಎಸ್‌ಎಸ್‌ ಸೇರಿಕೊಂಡಿವೆ. ಮಾತೃಭಾಷೆ ಕಲಿಕೆಯ ವಿಷಯದಲ್ಲಿ ಸರಕಾರ ಹಿಂಜರಿಯುತ್ತಿದೆ. ಕಾಲೇಜುಗಳಲ್ಲಿ ಕನ್ನಡ ಕಡ್ಡಾಯಕ್ಕೆ ತಕರಾರು ಎತ್ತಿದವರು ಮುಂದೆ ಶಾಲೆಯಲ್ಲಿ ಕನ್ನಡ ಕಡ್ಡಾಯಕ್ಕೆ ವಿರುದ್ದ ಬರಬಹುದು. ಪ್ರಾದೇಶಿಕ ಭಾಷೆಗಳನ್ನು ಕೊಲ್ಲುವ ಪ್ರಯತ್ನ ನಡೆಯುತ್ತಿದ್ದು, ಅದರ ಪ್ರಯೋಗ ನಡೆಯುತ್ತಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜಾನಪದ ವಿವಿ, ಹಂಪಿ ಕನ್ನಡ ವಿವಿ, ಮೈಸೂರು ವಿವಿ ಗಳಲ್ಲಿನ ಸಿಬ್ಬಂದಿ ಮತ್ತು ಉಪನ್ಯಾಸಕರಿಗೆ ಸಂಬಳ ಕೊಡಲು ಸಹ ದುಡ್ಡಿಲ್ಲ. ಆದರೆ, ಭಾರತ ಸರಕಾರ 1200 ಕೋಟಿ ಸಂಸ್ಕೃತಕ್ಕೆ ಕೊಟ್ಟಿದೆ. ಇದರಿಂದ ಜನಸಾಮಾನ್ಯರಿಗೆ ಏನಾದರೂ ಉಪಯೋಗ ಆಗಿದೆಯೇ ಎಂದು ಅವರು ಪ್ರಶ್ನಿಸಿದರು.

ಚರ್ಚೆಯಲ್ಲಿ ಮಾತನಾಡಿದ ಕರವೇ ರಾಜ್ಯ ಮುಖಂಡರಾದ ದಿನೇಶ್ ಕುಮಾರ್ ದಿನೂ, “ಆಡಳಿತ ಭಾಷೆ ಒಂದೇ ಇರಬೇಕು ಎಂದು ಹೇಳುವ ಸಂವಿಧಾನದ 343 ರಿಂದ 351ರ ವಿಧಿಯವರೆಗೂ ಇವೆಲ್ಲವೂ ಕನ್ನಡ/ಪ್ರಾದೆಶಿಕ ಬಾಷೆಗಳನ್ನು ಕೊಲ್ಲುವ ವಿಧಿಗಳಾಗಿವೆ. ಕನ್ನಡಿಗರಿಗೆ ತಲೆಮೇಲೆ ಸಂಸ್ಕೃತವನ್ನು ಕೂರಿಸುವುದು ಮೊದಲಿನಿಂದ ನಡೆದುಬಂದಿದೆ. ‘ಒಂದು ದೇಶ, ಒಂದು ಭಾಷೆ’ ಎಂಬುದು ನಾಗಪುರದ ಆರ್ ಎಸ್ ಎಸ್ ಅಜೆಂಡ. ಅದನ್ನು ಜಾರಿಗೆ ತರಲು ಸಂಸ್ಕೃತ ವಿವಿಯ ನಿರ್ಮಾಣಕ್ಕೆ ಬಿಜೆಪಿ ಸರ್ಕಾರ ಮುಂದಾಗಿದೆ” ಎಂದು ಆರೋಪಿಸಿದ್ದಾರೆ.

ಜನರ ನುಡಿಯನ್ನ ಕೊಂದರೆ ಜನರನ್ನೇ ಕೊಂದಂತೆ. ದೆಹಲಿಯಲ್ಲಿ ನಡೆದ ರೈತ ಹೊರಾಟದ ಮಾದರಿಯಲ್ಲಿ ಕನ್ನಡಕ್ಕಾಗಿ ಕರವೇಯಿಂದ ಹೋರಾಟ ನಡೆಯಲ್ಲಿದೆ ಎಂದು ನಾರಾಯಣ ಗೌಡ ರವರು ಕರೆ ಕೊಟ್ಟಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಸಾಮಾಜಿಕ ಕಾರ್ಯಕರ್ತ ಹರ್ಷಕುಮಾರ ಕುಗ್ವೆ, ಕಳೆದ 40-50 ವರ್ಷಗಳಿಂದ ಸಂಸ್ಕೃತ ವಿವಿಗಳು ಕೆಲಸ ಮಾಡಿವೆ. ಆದರೆ, ಅದರಿಂದ ಯಾವುದಾದರೂ ಮಹತ್ವದ ಕೆಲಸವಾಗಿದೆಯೇ? ಕೇವಲ ಭಾಷಾ ಅಭಿಮಾನದಿಂದ ಸಂಸ್ಕೃತ ವಿವಿ ಸ್ಥಾಪಿಸುತ್ತಿರುವುದೇಕೆ? ಸಂಸ್ಕೃತದಿಂದ ಜನರಿಗೆ ಜ್ಞಾನವನ್ನು ಹಂಚಿಕೆ ಮಾಡುವ ಉದ್ದೆಶವಲ್ಲ ಇದರ ಹಿಂದೆ ಒಂದು ಅಜೆಂಡವಿದೆ ಎಂದು ಆರೋಪಿಸಿದರು.

ಈಗಾಗಲೇ ಚಾಲ್ತಿಯಲಿಲ್ಲದ ಬಾಷೆಯನ್ನು ಇಸ್ರೇಲ್‌ನಲ್ಲಿ ಹಿಬ್ರೋ ರಾಷ್ಟ್ರಭಾಷೆಯನ್ನಾಗಿ ಮಾಡಿದೆ. ಅದೇ ರೀತಿಯಲ್ಲಿ ಸಂಘ ಪರಿವಾರ ಸಂಸ್ಕೃತ ವನ್ನು ರಾಷ್ಟ್ರಭಾಷೆ ಮಾಡುವ ಹುನ್ನಾರ ನಡೆಸುತ್ತಿದೆ. ಸಂಸ್ಕೃತ ಸತ್ತ ಭಾಷೆ ಮಾತ್ರವಲ್ಲ, ಅದು ಕನ್ನಡದ ಕತ್ತು ಹಿಸುಕುತ್ತಿರುವ ಭಾಷೆಯಾಗಿದೆ. ಈ ಬಗ್ಗೆ ಮಾಗಡಿಯ ಜನರಿಗೆ ಮತ್ತು ರಾಜಕಾರಣಿಗಳಿಗೆ ಅರಿವು ಮೂಡಿಸುವ ಕೆಲಸ ಆಗಬೇಕಿದೆ ಎಂದು ಅವರು ತಿಳಿಸಿದರು.


ಇದನ್ನೂ ಓದಿ: ’ಸಂಸ್ಕೃತ’ ಪುನರುತ್ಥಾನ ಮತ್ತು ನೆಲದ ’ನುಡಿ’ಗಳ ಕೂಗು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

2 COMMENTS

  1. ಸಂಸ್ಕೃತ ವಿ.ವಿ.ಸ್ಥಾಪನೆಯಿಂದ ಕನ್ನಡ ಜನತೆಗೆ ಯಾವ ಪ್ರಯೋಜನವೂ ಇಲ್ಲ. ಆದ್ದರಿಂದ ಅದು ಬೇಡ.

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...