Homeಮುಖಪುಟ‘ಮೇಕೆದಾಟು’ ಮಾತ್ರವಲ್ಲ, ವಿವಿಧ ರಾಜ್ಯಗಳಲ್ಲಿವೆ ಹಲವು ಜಲ ವಿವಾದ

‘ಮೇಕೆದಾಟು’ ಮಾತ್ರವಲ್ಲ, ವಿವಿಧ ರಾಜ್ಯಗಳಲ್ಲಿವೆ ಹಲವು ಜಲ ವಿವಾದ

- Advertisement -
- Advertisement -

ಬೆಂಗಳೂರಿಗೆ ಕುಡಿಯುವ ನೀರು ಸರಬರಾಜು ಮಾಡುವ ಸಲುವಾಗಿ ಕರ್ನಾಟಕ ಸರ್ಕಾರ ಮೇಕೆದಾಟು ಯೋಜನೆಯನ್ನು ರೂಪಿಸಿ ದಶಕವೇ ಕಳೆದಿದೆ. ಆದರೂ ಈ ಯೋಜನೆ ಕಾರ್ಯರೂಪಕ್ಕೆ ಬಂದಿಲ್ಲ. ಯೋಜನೆಯ ವಿಳಂಬಕ್ಕೆ ತಮಿಳುನಾಡಿನ ತಗಾದೆ, ಪರಿಸರವಾದಿಗಳ ಹೋರಾಟ, ಯೋಜನೆಯನ್ನು ವಿವಾದವನ್ನಾಗಿಸುತ್ತಿರುವ ರಾಜಕಾರಣ – ಹೀಗೆ ನಾನಾ ಕಾರಣ ಇರಬಹುದು. ಆದರೆ, ಮೇಕೆದಾಟು ವಿವಾದದ ಹೊರತಾಗಿಯೂ ಕರ್ನಾಟಕ-ತಮಿಳುನಾಡಿನ ನಡುವಿನ ಕಾವೇರಿ ನದಿ ನೀರು ಹಂಚಿಕೆ ವಿವಾದಕ್ಕೆ ಕನಿಷ್ಟ ಒಂದು ಶತಮಾನ ಅರ್ಥಾತ್ 100 ವರ್ಷಗಳ ಇತಿಹಾಸ ಇದೆ.

ಪ್ರತಿವರ್ಷದ ಮಳೆಗಾಲ ಮತ್ತು ಬೇಸಿಗೆಯ ಸಂದರ್ಭದಲ್ಲಿ ಕಾವೇರಿ ನೀರಿಗಾಗಿ ತಮಿಳುನಾಡು ಕ್ಯಾತೆ ತೆಗೆಯುವುದು ಮತ್ತು ಪ್ರಕರಣ ಸುಪ್ರೀಂ ಕೋರ್ಟ್‌ನ ಕಾವೇರಿ ಟ್ರಿಬ್ಯೂನಲ್ ಮೆಟ್ಟಿಲೇರುವುದು ಸಾಮಾನ್ಯ. ಕಾವೇರಿ ವಿವಾದಕ್ಕೆ ಸಂಬಂಧಿಸಿದಂತೆ ಹಲವಾರು ಸಂದರ್ಭಗಳಲ್ಲಿ ಎರಡೂ ರಾಜ್ಯಗಳಲ್ಲಿ ಅದರಲ್ಲೂ ಗಡಿಭಾಗಗಳಲ್ಲಿ ಗಲಭೆಗಳು, ಹಿಂಸಾಚಾರಗಳು ಉಂಟಾಗುವುದು. ಹೊಸೂರು-ಬೆಂಗಳೂರು ಗಡಿ ಮುಚ್ಚುವುದು ಸಾಮಾನ್ಯ ಎಂಬಂತಾಗಿರುವುದು ದುರಾದೃಷ್ಟಕರ.

ಕಾವೇರಿ ವಿಚಾರವಾಗಿ ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಈವರೆಗೆ ಸಾಕಷ್ಟು ಹಿಂಸಾಚಾರಗಳು ಸಂಭವಿಸಿರುವುದಂತೂ ನಿಜ. ಆದರೆ, ನದಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ಜಟಾಪಟಿ ಇರುವುದು ಕೇವಲ ತಮಿಳುನಾಡು ಮತ್ತು ಕರ್ನಾಟಕದ ನಡುವೆ ಮಾತ್ರವಲ್ಲ. ಬದಲಾಗಿ ದೇಶದಲ್ಲಿ ಹಲವಾರು ರಾಜ್ಯಗಳ ನಡುವೆ ನದಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ಹತ್ತಾರು ವ್ಯಾಜ್ಯಗಳಿವೆ. ಈ ವಿಚಾರವಾಗಿ ಅನೇಕ ಹಿಂಸಾಚಾರಗಳನ್ನು ಎದುರಿಸಿರುವ ರಾಜ್ಯಗಳ ದೊಡ್ಡ ಪಟ್ಟಿಯೇ ಭಾರತದಲ್ಲಿದೆ. ಆ ಕುರಿತು ಸಂಕ್ಷಿಪ್ತ ಮಾಹಿತಿ ಮಾಹಿತಿ ಇಲ್ಲಿದೆ.

ಇದನ್ನೂ ಓದಿರಿ: ಕಾವೇರಿಯ ಉಳಿವಿಗೆ ‘ಮೇಕೆದಾಟು ಅಣೆಕಟ್ಟು’ ಪ್ರಸ್ತಾಪ ಕೈಬಿಡಬೇಕು: ಮೇಧಾ ಪಾಟ್ಕರ್‌‌

ನರ್ಮದಾ ನದಿ ವಿವಾದ

ನರ್ಮದಾ ನದಿ ನೀರಿನ ಹಂಚಿಕೆ ಗುಜರಾತ್ ಮತ್ತು ಮಧ್ಯಪ್ರದೇಶ ರಾಜ್ಯಗಳ ನಡುವಿನ ವ್ಯಾಜ್ಯವಾಗಿದೆ. ಮಧ್ಯಪ್ರದೇಶದ ಅಮರ್ಕಾಂತಕದಲ್ಲಿ ಹುಟ್ಟಿ ಹರಿಯುವ ಈ ನದಿಯ ಉದ್ದ 1,300 ಕಿ.ಮೀ. ಮತ್ತು ನದಿಪಾತ್ರ 98,796 ಚದರ ಕಿ.ಮೀ. ಇದೆ. ನರ್ಮದಾ ನದಿ ವಿವಾದವು ಮಹಾರಾಷ್ಟ್ರ, ಗುಜರಾತ್ ಮಾತ್ರವಲ್ಲದೇ ಮಧ್ಯಪ್ರದೇಶಕ್ಕೂ ಸಂಬಂಧಿಸಿದೆ. ಸರ್ದಾರ್ ಸರೋವರ್ ಅಣೆಕಟ್ಟು ನರ್ಮದಾ ನದಿಯ ಮೇಲೆ ಕಟ್ಟಲ್ಪಟ್ಟಿದೆ.

1956ರ ಅಂತರರಾಜ್ಯ ಜಲ ವಿವಾದ ಕಾಯ್ದೆಯ ಸೆಕ್ಷನ್ 4ರ ಅಡಿಯಲ್ಲಿ, ಕೇಂದ್ರ ಸರ್ಕಾರವು ನರ್ಮದಾ ಜಲ ವಿವಾದ ನ್ಯಾಯಾಧೀಕರಣವನ್ನು ಸ್ಥಾಪಿಸಿತು. ನ್ಯಾಯಮೂರ್ತಿ ವಿ.ರಾಮಸ್ವಾಮಿ ಅಧ್ಯಕ್ಷರಾಗಿದ್ದರು. ರಾಮಸ್ವಾಮಿ ನ್ಯಾಯಾಧೀಕರಣ ಡಿಸೆಂಬರ್ 7, 1979ರಂದು ತೀರ್ಪು ನೀಡಿತು. ಆದರೂ ಇದು ಇನ್ನೂ ವಿವಾದಾತ್ಮಕವಾಗಿಯೇ ಉಳಿದಿದೆ.

ಯಮುನಾ ನದಿ ವಿವಾದ

ಯಮುನಾ ನದಿ ನೀರಿನ ವಿವಾದವು ತುಂಬಾ ಹಳೆಯದು. ಇದು ಒಟ್ಟು ಐದು ರಾಜ್ಯಗಳಿಗೆ ಸಂಬಂಧಿಸಿದೆ. ಹರಿಯಾಣ, ಉತ್ತರ ಪ್ರದೇಶ, ರಾಜಸ್ಥಾನ, ದೆಹಲಿ ಮತ್ತು ಹಿಮಾಚಲ ಪ್ರದೇಶ ರಾಜ್ಯಗಳಲ್ಲಿ ಯಮುನಾ ನದಿ ಹರಿಯುತ್ತದೆ. 1954ರಲ್ಲಿ ಮೊದಲನೆಯದಾಗಿ ಹರಿಯಾಣ ಮತ್ತು ಉತ್ತರಪ್ರದೇಶ ರಾಜ್ಯಗಳ ನಡುವೆ ಯಮುನಾ ನದಿ ಒಪ್ಪಂದವಾಯಿತು.

ಯಮುನಾ ನದಿಯಲ್ಲಿ ಹರಿಯಾಣದ ಪಾಲು ಶೇ.77ರಷ್ಟು ಮತ್ತು ಉತ್ತರ ಪ್ರದೇಶದ ಪಾಲು ಶೇ.23ರಷ್ಟಿತ್ತು. ರಾಜಸ್ಥಾನ, ದೆಹಲಿ ಮತ್ತು ಹಿಮಾಚಲ ಪ್ರದೇಶದ ಉಲ್ಲೇಖಗಳು ಬಂದಿಲ್ಲ. ಈ ರಾಜ್ಯಗಳು ತಮ್ಮ ಪಾಲಿನ ಬೇಡಿಕೆಗಾಗಿ ತೀವ್ರ ವಿವಾದವನ್ನು ಪ್ರಾರಂಭಿಸಿವೆ.

ಇದನ್ನೂ ಓದಿರಿ: ಕನ್ನಡ ದಿನಪತ್ರಿಕೆಗಳಿಗೆ ‘ಮೇಕೆದಾಟು’ ಜಾಹೀರಾತು ಕೊಟ್ಟವರ್‍ಯಾರು? ಪತ್ರಿಕೆಗಳು ಹೇಳಿದ್ದೇನು?

ಸೋನಾ ನದಿ ವಿವಾದ

ಸೋನಾ ನದಿ ನೀರಿನ ವಿವಾದವು ಮೂರು ರಾಜ್ಯಗಳಾದ ಬಿಹಾರ, ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶದ ನಡುವೆ ಇದೆ. 1973ರಲ್ಲಿ, ಸೋನಾ ಮತ್ತು ರಿಹಂದ್ ನದಿಗಳ ನಡುವಿನ ನೀರಿನ ವಿವಾದವನ್ನು ಪರಿಹರಿಸಲು ಬನ್ಸಾಗರ್ ಒಪ್ಪಂದವನ್ನು ಮಾಡಿಕೊಳ್ಳಲಾಯಿತು.

ಆರಂಭದಿಂದಲೂ ಈ ಒಪ್ಪಂದವನ್ನು ಸರಿಯಾಗಿ ಜಾರಿಗೊಳಿಸಿಲ್ಲ ಎಂದು ಬಿಹಾರ ಆರೋಪಿಸಿದೆ. ಈ ಒಪ್ಪಂದದ ಪ್ರಕಾರ, ರಿಹಾಂಡ್ ನದಿಯ ಸಂಪೂರ್ಣ ನೀರನ್ನು ಬಿಹಾರಕ್ಕೆ ಹಂಚಲಾಗಿತ್ತು. ಆದರೆ ಎನ್ಟಿಪಿಸಿ ಮತ್ತು ಉತ್ತರ ಪ್ರದೇಶ ಸರಕಾರವು ಬಿಹಾರ್ ನದಿಯ ಹಿಂಭಾಗದ ಜಲಾಶಯದಿಂದ ನೀರು ಬಳಸುತ್ತಿವೆ.

ಕೃಷ್ಣಾ ನದಿ ವಿವಾದ

ಕೃಷ್ಣಾ ನದಿ ನೀರು ಕರ್ನಾಟಕ ಮತ್ತು ಆಂಧ್ರಪ್ರದೇಶದ ನಡುವಿನ ವಿವಾದಕ್ಕೆ ಕಾರಣವಾಗಿದೆ. ಈ ನದಿಯು ಮಹಾಬಲೇಶ್ವರದಲ್ಲಿ ಹುಟ್ಟಿ ಮಹಾರಾಷ್ಟ್ರದ ಸತಾರ ಮತ್ತು ಸಾಂಗ್ಲಿ ಜಿಲ್ಲೆಗಳ ನಡುವೆ ಹಾಗೂ ಕರ್ನಾಟಕ, ದಕ್ಷಿಣ ಆಂಧ್ರಪ್ರದೇಶದ ನಡುವೆ ಹರಿಯುತ್ತದೆ. ಕೃಷ್ಣಾ ನದಿಯು ಕರ್ನಾಟಕದ 60 ಪ್ರತಿಶತದಷ್ಟು 3 ದಶಲಕ್ಷ ಹೆಕ್ಟೇರ್ ಭೂಮಿಗೆ ನೀರು ಒದಗಿಸುತ್ತದೆ.

ಈ ನದಿಯ ವಿವಾದವನ್ನು ಪರಿಹರಿಸಲು, 1969ರಲ್ಲಿ ಬಚ್ಚವತ್ ಟ್ರಿಬ್ಯೂನಲ್ ಸ್ಥಾಪನೆಯಾಯಿತು. ಅದು 1976ರಲ್ಲಿ ತೀರ್ಪು ನೀಡಿತು. ಈ ತೀರ್ಪಿನಲ್ಲಿ ಕರ್ನಾಟಕ 700 ಬಿಲಿಯನ್ ಕ್ಯೂಸೆಕ್, ಆಂಧ್ರ ಪ್ರದೇಶ 800 ಬಿಲಿಯನ್ ಕ್ಯೂಸೆಕ್ ಮತ್ತು ಮಹಾರಾಷ್ಟ್ರ 560 ಬಿಲಿಯನ್ ಕ್ಯೂಸೆಕ್ ನೀರನ್ನು ಬಳಸಲು ಅನುಮತಿ ನೀಡಿತು.

ಗೋದಾವರಿ ನದಿ ನೀರಿನ ವಿವಾದ

ಗೋದಾವರಿ ಭಾರತದ ದೊಡ್ಡ ನದಿ. ಇದು ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯಲ್ಲಿ ಹುಟ್ಟುತ್ತದೆ. ಅದರ ಉದ್ದ 1,465 ಕಿ.ಮೀ . ಮಹಾರಾಷ್ಟ್ರ, ಮಧ್ಯಪ್ರದೇಶ, ಕರ್ನಾಟಕ, ಒಡಿಶಾ ಮತ್ತು ಆಂಧ್ರಪ್ರದೇಶದ ನಡುವೆ ಗೋದಾವರಿ ನೀರಿಗಾಗಿ ಸಾಕಷ್ಟು ವಿವಾದಗಳಾಗಿವೆ. ಇದನ್ನು ಪರಿಹರಿಸಲು, ಏಪ್ರಿಲ್ 1969ರಲ್ಲಿ ಸರ್ಕಾರ ಸಮಿತಿಯು ರಚನೆಯಾಯಿತು. ಈ ಸಂದರ್ಭದಲ್ಲಿ, ಸಮಿತಿಯು ತನ್ನ ವರದಿಯನ್ನು ಸಲ್ಲಿಸಿದರೂ, ಗೋದಾವರಿ ನದಿ ನೀರಿನ ವಿವಾದ ಸಂಪೂರ್ಣವಾಗಿ ಬಗೆಹರಿದಿಲ್ಲ.

ಸಟ್ಲೇಜ್-ರಾವಿ- ವ್ಯಾಸ ನದಿ ವಿವಾದ

ಪಂಜಾಬ್‌ನಲ್ಲಿ ನದಿ ನೀರಿನ ವಿವಾದದ ವಿಷಯ ಇತ್ತು. ನವೆಂಬರ್ 1966ರಲ್ಲಿ ಪಂಜಾಬ್‌ನ ಒಂದು ಭಾಗವನ್ನು ಪ್ರತ್ಯೇಕಿಸಿ ಹೊಸ ರಾಜ್ಯ ಹರಿಯಾಣವನ್ನು ಸ್ಥಾಪಿಸಲಾಯಿತು. ಸಟ್ಲೆಜ್, ರಾವಿ ಮತ್ತು ವ್ಯಾಸ ನದಿಗಳ ನೀರಿನ ಹಂಚಿಕೆಗೆ ಸಂಬಂಧಿಸಿದ ವಿವಾದವು ಪಂಜಾಬ್ ಮತ್ತು ಹರಿಯಾಣ ರಾಜ್ಯಗಳ ನಡುವೆ ನಡೆಯುತ್ತಿದೆ.

ಇತರ ನದಿ ನೀರಿನ ವಿವಾದಗಳು

– ಮಹಾನದಿ ನೀರಿನ ವಿವಾದ – ಗುಜರಾತ್, ರಾಜಸ್ಥಾನ ಮತ್ತು ಮಧ್ಯ ಪ್ರದೇಶ
– ಕರ್ಮನಾಶ ನದಿ ನೀರಿನ ವಿವಾದ – ಉತ್ತರ ಪ್ರದೇಶ ಮತ್ತು ಬಿಹಾರ
– ಬರಾಕ್ ನದಿ ನೀರಿನ ವಿವಾದ – ಅಸ್ಸಾಂ ಮತ್ತು ಮಣಿಪುರ
– ಅಲಿಯಾರ್ ಮತ್ತು ಭವಾನಿ ನದಿಯ ನೀರಿನ ವಿವಾದಗಳು – ತಮಿಳುನಾಡು ಮತ್ತು ಕೇರಳ
– ತುಂಗಭದ್ರ ನದಿ ನೀರಿನ ವಿವಾದ – ಆಂಧ್ರಪ್ರದೇಶ ಮತ್ತು ಕರ್ನಾಟಕ.


ಇದನ್ನೂ ಓದಿರಿ: ಅಂತಾರಾಜ್ಯ ಜಲವಿವಾದ ಸಂಬಂಧ ಫೆಬ್ರವರಿಯಲ್ಲಿ ಸರ್ವ ಪಕ್ಷ ಸಭೆ: ಸಿಎಂ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...

ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮುಂದೂಡಿದ NLSIU ವಿದ್ಯಾರ್ಥಿ ಸಂಘ; ಯಾವುದೇ ಒತ್ತಡಕ್ಕೆ ಮಣಿದಿಲ್ಲವೆಂದು ಸ್ಪಷ್ಟನೆ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಲಾ ಅಂಡ್ ಸೊಸೈಟಿ ಕಮಿಟಿಯು (LawSoc) ಉಮರ್ ಖಾಲಿದ್ ಅವರ ಜೈಲುವಾಸದ ಕುರಿತು ಲಲಿತ್ ವಾಚಾನಿ ನಿರ್ಮಿಸಿರುವ 'ಪ್ರಿಸನರ್ ನಂ. 626710...