Homeಅಂಕಣಗಳುಶಾಲೆಗಳು ಸಮಾಜ ಒಡೆಯುತ್ತಿವೆ: ಶಿಕ್ಷಣ ವ್ಯವಸ್ಥೆಯನ್ನು ತಲೆಕೆಳಗು ಮಾಡಬೇಕಿದೆ- ಇವಾನ್ ಡೊಮಿನಿಕ್ ಇಲ್ಲಿಯಚ್

ಶಾಲೆಗಳು ಸಮಾಜ ಒಡೆಯುತ್ತಿವೆ: ಶಿಕ್ಷಣ ವ್ಯವಸ್ಥೆಯನ್ನು ತಲೆಕೆಳಗು ಮಾಡಬೇಕಿದೆ- ಇವಾನ್ ಡೊಮಿನಿಕ್ ಇಲ್ಲಿಯಚ್

ಪ್ರತಿಯೊಬ್ಬರಿಗೂ ಶಿಕ್ಷಣದ ಅವಕಾಶ ಇರಬೇಕು ಎಂಬುದನ್ನು ಒಪ್ಪುವ ಇವಾನ್ ನಿರಾಕರಿಸುವುದೇನೆಂದರೆ ಕುರುಡು ಕಟ್ಟಳೆಗಳ ಶಾಲಾಕ್ರಮಗಳನ್ನು. ಚರ್ಚಿಗೆ ಬಂದರೇನೇ ನಿಮಗೆ ಮೋಕ್ಷ ಎಂದು ನಂಬಿಸುವ ಹಾಗೆ ಶಾಲೆಗೆ ಬಂದರೇನೇ ನಿಮಗೆ ವಿದ್ಯೆ ಎಂದು ನಂಬಿಸಿರುವ ಭ್ರಮೆಯ ಬಗ್ಗೆ ಅವರ ಆಕ್ಷೇಪ.

- Advertisement -
- Advertisement -

ಶಾಲೆ ಎಂಬುದು ಒಂದು ಜಾಹಿರಾತು ಸಂಸ್ಥೆ. ಈ ಸಮಾಜವು ಇರುವ ಹಾಗೆಯೇ ಇರಬೇಕು ಎಂದು ನಿಮ್ಮನ್ನು ನಂಬಿಸುವುದು ಆ ಜಾಹಿರಾತು ಸಂಸ್ಥೆಯ ಕೆಲಸ” ಎಂದು ತಮ್ಮ ಡಿಸ್ಕೂಲಿಂಗ್ ಸೊಸೈಟಿ (1971) ಪುಸ್ತಕದಲ್ಲಿ ಎಚ್ಚರಿಸುತ್ತಾರೆ ಇವಾನ್ ಇಲ್ಲಿಯಚ್.

ಈ ಸಮಾಜದಲ್ಲಿ ನಮಗೆ ಶೈಕ್ಷಣಿಕ ಭ್ರಮೆಗಳನ್ನು ಹುಟ್ಟಿಸಲಾಗಿದ್ದು, ಶಾಲಾ ಸಂಪ್ರದಾಯವು ಅದನ್ನು ಜೀವಂತವಾಗಿರಿಸಲು ಇರುವ ಒಂದು ಸಾಧನ ಎಂದು ಗಟ್ಟಿಯಾಗಿ ಹೇಳುವರು ಇವಾನ್. ಮೌಲ್ಯಗಳನ್ನು ಸಾಂಸ್ಥಿಕ ರೂಪಗೊಳಿಸುವುದು, ಆ ಮೌಲ್ಯಗಳನ್ನು ತೂಗಲು ಮಾನದಂಡಗಳು, ಮೌಲ್ಯಗಳ ಒಂದಷ್ಟು ಮೊತ್ತ ಮತ್ತು ಆ ಮೌಲ್ಯಗಳಿಂದ ತನ್ನನ್ನು ತಾನು ಶಾಶ್ವತವಾಗಿ ಉದ್ಧರಿಸಿಕೊಳ್ಳಲು ಸಾಧ್ಯ; ಇವೆಲ್ಲವೂ ಈ ಸಮಾಜ ಹುಟ್ಟಿಸಿರುವ ಭ್ರಮೆಗಳು.

ಸಮಾಜದಲ್ಲಿ ಅನಿವಾರ್ಯವೆನಿಸುವ ಮೌಲ್ಯಗಳನ್ನು ಸೃಷ್ಟಿಸುವ ಪ್ರಕ್ರಿಯೆಯ ಭಾಗ ಶಾಲೆಗಳು. ಅದರ ಒಡೆತನ ಸಾಂಸ್ಥಿಕ ರೂಪದಲ್ಲಿರುವ ಶೈಕ್ಷಣಿಕ ವ್ಯವಸ್ಥೆಯದು. ಅಂತಹ ಮೌಲ್ಯಗಳ ಬೇಡಿಕೆಯು ಇರುವುದರಿಂದ ಉತ್ಪಾದನೆಯೂ ಆಗುತ್ತಿದೆ. ಈ ಪ್ರಕ್ರಿಯೆಯ ವರ್ತುಲವನ್ನು ತಿಳಿದರೆ ಸಾಂಸ್ಥಿಕ ರೂಪದಲ್ಲಿರುವ ಮೌಲ್ಯಗಳ ಭ್ರಮೆಗಳನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗುತ್ತದೆ.

ಮೌಲ್ಯಗಳ ಮಿಥ್ ಅನ್ನು ಸೃಷ್ಟಿಸುವ ಈ ವಿಷಯದ ಬಗ್ಗೆ ಇನ್ನೂ ಸರಳವಾಗಿ ತಾಂತ್ರಿಕ ಹಿನ್ನೆಲೆಯಲ್ಲಿಯೇ ತಿಳಿಯೋಣ. ಶಾಲೆಯು ಬೋಧನೆಯಿಂದ ಕಲಿಕೆಯುಂಟಾಗುತ್ತದೆ ಎಂದು ಪ್ರತಿಪಾದಿಸುತ್ತದೆ. ಆಗ ಶಾಲೆಗೆ ಬರಲೇಬೇಕು ಮತ್ತು ತರಗತಿಗಳಲ್ಲಿ ಕುಳಿತುಕೊಳ್ಳಲೇಬೇಕು ಎಂಬ ಒತ್ತಡವನ್ನು ಕೂಡಾ ಸೃಷ್ಟಿಸುತ್ತದೆ. ಕಂಪಸ್ಲರಿ ಅಟೆಂಡೆನ್ಸ್ ಎನ್ನುವುದು ಒಂದು ಮೌಲಿಕವಾದ ಅಂಶವಾಗಿದೆ. ಆದರೆ ಅದೊಂದು ಭ್ರಮೆಯೇ ಹೊರತು ನಿಜವೇನಿಲ್ಲ. ತಪ್ಪದೇ ಶಾಲೆಗೆ ಹೋಗಬೇಕು ಎಂಬ ಸಂಪ್ರದಾಯವು ಮನುಷ್ಯನು ತನ್ನ ಜೀವನದ ಪರಿಸರದಿಂದ ಕಲಿಯುವ ವಿಷಯಗಳಿಗೆ ವಿರುದ್ಧವಾಗಿದೆ. ಒಂದು ದಿನವೂ ಶಾಲೆಗೆ ತಪ್ಪದೇ ಹೋಗುವವರಿಗೆ ಒಂದು ಹೆಮ್ಮೆ ಮತ್ತು ಬಹುಮಾನಕ್ಕೂ ಭಾಜನರಾಗುತ್ತಾರೆ. ಇದರೊಟ್ಟಿಗೆ ಶಾಲೆಗೆ ಬರದಿರುವವರ ಸಾಚಾ ಮತ್ತು ತಾಜಾ ಚಟುವಟಿಕೆಗಳನ್ನು ಅಮಾನ್ಯ ಮಾಡುತ್ತಾರೆ. ಬೋಧನೆಗಳನ್ನು ಕೇಳದೇ ತಾವೇ ಕಲಿಯಲು ಸಾಧ್ಯವೇ ಎಂದು ಅನುಮಾನಿಸುತ್ತಾರೆ. ಬೋಧನೆ ಇಲ್ಲದೆ ಕಲಿಕೆಯಿಲ್ಲ ಎಂಬ ಮಹಾಭ್ರಮೆ ಸೃಷ್ಟಿಯಾಗುತ್ತದೆ. ಹೀಗಾಗಿ ವ್ಯಕ್ತಿಯೊಬ್ಬನು ತಾನೇ ಸ್ವಸಾಮರ್ಥ್ಯದಿಂದ ಮತ್ತು ಪ್ರಯೋಗಶೀಲತೆಯಿಂದ ವೃತ್ತಿಪರನಾಗುವ ಬಗೆಯನ್ನು ಅನುಮಾನಿಸುತ್ತಾ ಮತ್ತು ಅಪಮಾನಿಸುತ್ತಾ ಸಾಂಸ್ಥಿಕ ರೂಪದ ಶಿಕ್ಷಣ ಪಡೆದರೇನೇ ಅವನು ವಿದ್ಯಾವಂತ ಎಂಬ ಮಿಥ್ ಅನ್ನು ನಂಬಿ ಸಾಧಾರಣ ಜನರೆಲ್ಲರೂ ಶಿಕ್ಷಣ ಸಂಸ್ಥೆಗಳಿಗೆ ಅಧೀನರಾಗುತ್ತಾರೆ ಮತ್ತು ಅವರ ವಾಣಿಜ್ಯ ಉದ್ದೇಶಗಳಿಗೆ ಗಿರಾಕಿಗಳಾಗುತ್ತಾರೆ.

ತಾವು ಪಡೆಯುತ್ತಿರುವ ಶಿಕ್ಷಣ ಶಾಶ್ವತ ಮತ್ತು ಅದು ತಮ್ಮ ಸಂಪೂರ್ಣ ಜೀವನಕ್ಕೆ ಎಂಬಂತಹ ಮತ್ತೊಂದು ಮಿಥ್ ಈ ಶಿಕ್ಷಣ ಸಂಸ್ಥೆಗಳು ಸೃಷ್ಟಿಸಿರುವವು. ಅದಕ್ಕೆ ಉನ್ನತ ಶಿಕ್ಷಣಕ್ಕೇರುತ್ತಿರಬೇಕೆಂಬ ಭ್ರಮೆಯಿಂದ ಸ್ಪರ್ಧಾತ್ಮಕವಾಗಿ ಪಠ್ಯಕ್ರಮವನ್ನು ಅನುಸರಿಸುತ್ತಾ ಹೋಗುತ್ತದೆ. ವಾಸ್ತವವಾಗಿ ಪದವಿ ಪಡೆದ ವ್ಯಕ್ತಿ ಏನನ್ನು ಪಡೆಯುತ್ತಾನೆಂದು ಆಶ್ವಾಸನೆ ಕೊಟ್ಟಿರುತ್ತದೆಯೋ ವಾಸ್ತವದಲ್ಲಿ ಅವನು ಅದನ್ನೇನೂ ಪಡೆದಿರುವುದಿಲ್ಲ. ಆದರೆ ಶಾಲೆಯ ಸಾಂಪ್ರದಾಯಕ ಭಾಷೆಯು ಅಲಂಕಾರಿಕವಾಗಿ ಅವನನ್ನು ಮತ್ತು ಸಮಾಜವನ್ನು ಅವನ್ನೆಲ್ಲಾ ಪಡೆದಿರುವ ಹಾಗೆ ಶೈಕ್ಷಣಿಕ ಭ್ರಮೆಯನ್ನು ಹುಟ್ಟಿಸುತ್ತವೆ. ಇವನ್ನು ನಾವು ಯಾವುದೇ ಶಾಲೆಯ ಸಮಾರಂಭದಲ್ಲಿ ಓದುವ ವಾರ್ಷಿಕ ವರದಿಯನ್ನು ಕೇಳಿದರೆ ಇವಾನ್ ಹೇಳುವುದು ಅರ್ಥವಾಗುತ್ತದೆ. ಶೈಕ್ಷಣಿಕ ಪ್ರಗತಿ ಎಂದು ಹೆಚ್ಚಿನ ಅಂಕಗಳನ್ನು ಪಡೆದುಕೊಂಡಿರುವವರ ಬಿಂಕವನ್ನು ಮತ್ತು ಜಂಭವನ್ನು ನೋಡಿದರೆ ಅವರು ಪಡೆದಿರುವ ಶಾಲಾ ಶಿಕ್ಷಣ ಎಂತಹ ಪೊಳ್ಳು ವ್ಯಕ್ತಿತ್ವವನ್ನು ರೂಪಿಸಿದೆ ಎಂದು ತಿಳಿಯಬಹುದು. ಪಠ್ಯಕ್ರಮದ ಅನುಸರಣೆ ಮಾಡುತ್ತಾ ಅತ್ಯುತ್ತಮ ಶ್ರೇಣಿಯನ್ನು ಪಡೆದು ಉನ್ನತಸ್ಥಾನವನ್ನು ಪಡೆದಿರುವ ವಿದ್ಯಾರ್ಥಿಯು ಶಾಲೆಯನ್ನು ಬಿಟ್ಟು (ಡ್ರಾಪೌಟ್) ತನ್ನ ಇಚ್ಛೆಗೆ ಮತ್ತು ಬದುಕಿಗೆ ಏನಾದರೂ ಮಾಡಿಕೊಂಡಿರುವವನ ಕಿಂಚಿತ್ತಿಗೂ ಸಮವಿರದಿದ್ದರೂ ತಾನೇನೋ ಸಾಧಿಸಿರುವ ಭ್ರಮೆಗೆ ಒಳಗಾಗಿರುತ್ತಾನೆ. ಅವನ ಶಾಲಾ ಸಂಪ್ರದಾಯದ ಪೊಳ್ಳು ಅಲಂಕಾರಿಕ ಮಾತುಗಳ ಗುಂಗಿನಲ್ಲೇ ತೇಲುತ್ತಿರುತ್ತಾನೆ.

ಇವಾನ್ ಹೇಳುವಂತೆ ಶಾಲೆಗಳು ಏನನ್ನು ಒತ್ತರಿಸಿ ಇಟ್ಟುಕೊಂಡಿದೆಯೋ ಆ ಸಾಂಸ್ಥಿಕ ರೂಪವು ತಲೆಗೆಳಗಾಗಬೇಕು. ಸಾಂಪ್ರದಾಯಿಕ ಶಾಲಾ ಕಲಿಕೆಯಿಂದ ಮಕ್ಕಳು ಮುಕ್ತರಾಗಬೇಕು. ಶಿಕ್ಷಣ ಸಂಸ್ಥೆಗಳು ತಮ್ಮ ಕಪಿಮುಷ್ಟಿಯಲ್ಲಿಟ್ಟುಕೊಂಡಿರುವ ವಿದ್ಯೆ ಕಲಿಸುವ ಅಧಿಕಾರವನ್ನು ವ್ಯಕ್ತಿಗಳು ಮರುಪಡೆಯಬೇಕು. ಸಮಾಜೋರಾಜಕೀಯ ಶಕ್ತಿಗಳು ಮಗುವಿನ ವಿದ್ಯಾಭ್ಯಾಸಕ್ಕೆ ಒಂದು ವಿಷ ವರ್ತುಲವನ್ನು ಸೃಷ್ಟಿಸಿದೆ. ಅದರಿಂದ ಬಿಡುಗಡೆ ಪಡೆಯಲು ಸಮಾಜದಲ್ಲಿ ಶಿಕ್ಷಣ ಕ್ರಮವೇ ಬದಲಾಗಬೇಕಿದೆ. ಈ ವಾದವನ್ನು ಮುಂದಿಡುತ್ತಾ ಇವಾನ್ ಕಡ್ಡಾಯ ಸಾರ್ವತ್ರಿಕ ಶಿಕ್ಷಣದ ತಳಪಾಯವನ್ನು ಅಲುಗಾಡಿಸುತ್ತಾರೆ. ಜೊತೆಗೆ ‘ಈ ಶಿಥಿಲಗೊಂಡಿರುವ ಶಾಲೆಯ ವ್ಯವಸ್ಥೆಯನ್ನು ಸರಿಪಡಿಸಲು ಸಾಧ್ಯವೇ ಆಗುವುದಿಲ್ಲ’ ಎಂದು ಅವರು ಹೇಳುತ್ತಾ, ‘ಹಾಗಾಗಿ ಮಾನವ ಸಮುದಾಯದ ಬದುಕು ಛಿದ್ರವಾಗುವುದನ್ನು ತಪ್ಪಿಸಬೇಕೆಂದರೆ ಶಾಲೆಯ ವ್ಯವಸ್ಥೆಯನ್ನೇ ಸಂಪೂರ್ಣ ಕಿತ್ತೊಗೆಯಬೇಕು’ ಎಂದು ದೃಢವಾಗಿ ಹೇಳುತ್ತಾರೆ.

ಶಾಲೆ ಕೈಗೆಟುಕದ ಎಷ್ಟೋ ಬಡ ವಿದ್ಯಾರ್ಥಿಗಳು ತಾವು ಶಾಲೆಗೆ ಹೋಗಿಲ್ಲ ಎಂದು ದುಃಖಿಸುವಷ್ಟು, ಖಿನ್ನತೆಗೆ ಜಾರುವಂತೆ ಶಾಲೆಗಳು ಆಡಂಬರದಿಂದ ಮೆರೆಯುತ್ತವೆ. ಶಾಲೆಯಿಂದಲೇ ವಿದ್ಯಾಭ್ಯಾಸ, ವಿದ್ಯಾಭ್ಯಾಸದಿಂದಲೇ ಬದುಕು ಹಾಗಾಗಿ ಶಾಲೆಯಿಂದಲೇ ಬದುಕು ಎಂಬ ಭ್ರಮೆಯ ಅರವಳಿಕೆಯಲ್ಲಿ ತಮ್ಮ ಮೂಲ ಸಾಮರ್ಥ್ಯವನ್ನೇ ಅನುಮಾನಿಸುತ್ತಾರೆ. ತಮ್ಮ ಸಾಚಾ ಮತ್ತು ತಾಜಾ ಚಟುವಟಿಕೆಗಳನ್ನು ಕಡೆಗಣಿಸಿ ಕೃತಕವಾಗಿರುವುದರ ಕಡೆಗೆ ವಾಲುತ್ತಾರೆ. ಆದರೆ ಇತ್ತ ಕಡೆ ಉತ್ತಮ ಅಂಕಗಳನ್ನು ಪಡೆದು ರ್ಯಾಂಕ್ ಪಡೆದಿರುವ ವಿದ್ಯಾರ್ಥಿಗಳು ಅವರಿಗೆ ಸಮ ಬಾರದವರಾಗಿರುತ್ತಾರೆ. ಇವುಗಳನ್ನು ಗಮನಿಸುವ ವಿದ್ಯಾರ್ಥಿಗಳು ಗೊಂದಲಕ್ಕೀಡಾಗುತ್ತಾರೆ. ಒಟ್ಟಾರೆ ಪರೀಕ್ಷೆ, ಅದರ ಅಂಕಗಳು, ಫಲಿತಾಂಶ, ಶ್ರೇಣಿಗಳು; ಹೀಗೆ ಎಲ್ಲವೂ ಕೂಡಾ ಭ್ರಮಾಧೀನವಾಗಿಯೇ ಇರುವಂತೆ ನೋಡಿಕೊಳ್ಳುತ್ತವೆ.

ಶಾಲೆಗಳು ಸಮಾಜವನ್ನು ಒಡೆಯುತ್ತವೆ ಎಂದು ಇವಾನ್ ನೇರವಾಗಿಯೇ ದೂರುತ್ತಾರೆ. ಮತ್ತು ಅವರು ಕೊಡುವ ಕಾರಣಗಳೂ ಕೂಡಾ ಸಮಾಜದ ಮಾನವೀಯ ಬದುಕಿನ ನೆಲೆಗಟ್ಟಿನಿಂದ ಸಮರ್ಪಕವಾಗಿಯೇ ಇವೆ.

ಪ್ರತಿಯೊಬ್ಬರಿಗೂ ಶಿಕ್ಷಣದ ಅವಕಾಶ ಇರಬೇಕು ಎಂಬುದನ್ನು ಒಪ್ಪುವ ಇವಾನ್ ನಿರಾಕರಿಸುವುದೇನೆಂದರೆ ಕುರುಡು ಕಟ್ಟಳೆಗಳ ಶಾಲಾಕ್ರಮಗಳನ್ನು. ಚರ್ಚಿಗೆ ಬಂದರೇನೇ ನಿಮಗೆ ಮೋಕ್ಷ ಎಂದು ನಂಬಿಸುವ ಹಾಗೆ ಶಾಲೆಗೆ ಬಂದರೇನೇ ನಿಮಗೆ ವಿದ್ಯೆ ಎಂದು ನಂಬಿಸಿರುವ ಭ್ರಮೆಯ ಬಗ್ಗೆ ಅವರ ಆಕ್ಷೇಪ.

ಶಾಲಾ ವ್ಯವಸ್ಥೆಯೂ ಕೂಡಾ ಸ್ಥಾಪಕ ಧರ್ಮಗಳಂತೆ ಶ್ರದ್ಧಾನಂಬಿಕೆಗಳನ್ನು ಹುಟ್ಟಿಸಿಕೊಂಡು ತನ್ನ ವಿದ್ಯಾ ದೇವತೆಯ ಭಕ್ತರನ್ನು ಮಂಕರನ್ನಾಗಿಸುತ್ತಿದೆ. ಒಬ್ಬನ ಕೌಶಲ್ಯ ಮತ್ತು ಪ್ರತಿಭೆಯು ಶೈಕ್ಷಣಿಕ ಸಂಸ್ಥೆಯಿಂದ ಪ್ರಮಾಣಿಸಿದ್ದರೆ ಮಾತ್ರ ಯೋಗ್ಯವಾದುದು ಮತ್ತು ಒಪ್ಪಲು ಅರ್ಹವಾದುದು ಎಂಬ ಸ್ಥಾಪಕ ಭ್ರಮೆಯ ದಾಸರು ಈ ನವೀನ ಯುಗದವರು.

ಇವಾನ್ ಮಂಡಿಸುವ ವಾದದ ಸರಣಿಯಿಂದ ಸಾಂಪ್ರದಾಯಿಕ ಶಾಲಾ ವ್ಯವಸ್ಥೆಯನ್ನು ಕಿತ್ತೆಸೆಯಲಾಗದಿದ್ದರೂ ಪ್ರಾಮಾಣಿಕವಾಗಿ ರಿಪೇರಿ ಮಾಡಿಕೊಳ್ಳಬಹುದಾದ ಅವಕಾಶಗಳನ್ನು ಕೊಡುತ್ತದೆ. ಬೇರೂರಿರುವ ವ್ಯವಸ್ಥೆಯನ್ನು ಬುಡಮೇಲು ಮಾಡಲು ಇವಾನ್ ಕೊಡುವ ಕರೆಗೆ ವ್ಯಕ್ತಿಗತವಾಗಿ ಓಗೊಡಬಹುದು. ಆದರೆ ಸಾಮುದಾಯಿಕವಾಗಿ ಬಹಳ ಕಷ್ಟ. ಏಕೆಂದರೆ ಈ ಸಂಸ್ಥೆಗಳು ರೂಪಿಸಿರುವ ಹೆಚ್ಚು ಅಪಾಯಕಾರಿಯಾದ ಈ ರಚನೆಯನ್ನು ಮುರಿಯಬೇಕಾದರೆ ಮತ್ತೊಂದು ಕಡಿಮೆ ಅಪಾಯಗಳಿರುವ ಪರ್ಯಾಯ ವ್ಯವಸ್ಥೆಯನ್ನು ಕನಿಷ್ಟ ರೂಪಿಸಬೇಕು.

ಇನ್ನೂ ಮುಂದುವರಿದು ಹೇಳುವುದಾದರೆ ‘ಓರ್ವ ವ್ಯಕ್ತಿಯು ಒಂದು ವ್ಯವಸ್ಥೆಯನ್ನು ವಿರೋಧಿಸಲು ಆತನಿಗೆ ಒಂದು ಆಂತರಿಕ ಶಕ್ತಿ ಇರುತ್ತದೆ. ಒಂದು ಹಿನ್ನೆಲೆಯ ಪ್ರಭಾವವು ದೃಢವಾಗಿರುತ್ತದೆ. ಅಂತಹ ಬಂಡಾಯವನ್ನು ಎಲ್ಲರೂ ಮಾಡಲು ಸಾಧ್ಯವಿರದಂತಹ ಸಮಾಜ ನಮ್ಮದು. ಆದರೆ ವ್ಯಕ್ತಿಯೊಬ್ಬನ ತನ್ನತನದ ಸಾಮರ್ಥ್ಯ ಮತ್ತು ಸಾಮಾಜಿಕ ವಿಶ್ಲೇಷಣೆಗಳ ನೆಲೆಗಟ್ಟಿನಲ್ಲಿ ಹೇಳುವ ಶಾಲೆಗಳ ವಿಷಯವಾಗಿ ಅವರು ಹೇಳುವುದರಲ್ಲಿ ತಥ್ಯವಿದೆ.


ಇದನ್ನು ಓದಿ: ಸಂಪಾದಕರ ಸಂಪಾದಕ ವಿನೋದ್ ಮೆಹ್ತಾರ ಆತ್ಮ ಚರಿತ್ರೆ ಲಖನೌ ಹುಡುಗ…
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

3 COMMENTS

  1. ಬಹಳ ಅರ್ಥಪೂರ್ಣ ಲೇಖನ ಶಿಕ್ಷಣವೆಂಬ ಭ್ರಮೆಯೇ ಮತ್ತು ಅದೇ ಬದುಕು ರೂಪಿಸುವ ಮಾರ್ಗ ಎಂಬ ಸತ್ಯಗಳನ್ನು ಸೃಷ್ಟಿಸಿ ವ್ಯಾಪಾರ ಉದ್ದಿಮೆಯನ್ನು ನಡೆಸುತ್ತಿರುವ ಈ ಸಂದರ್ಭದಲ್ಲಿ ಈ ನಿಮ್ಮ ಲೇಖನ ನಮ್ಮ ಕಣ್ಣು ತೆರೆಸುತ್ತದೆ

  2. ಔಪಚಾರಿಕ ಶಿಕ್ಷಣಕಿಂತ ಅನೌಪಚಾರಿಕ
    ಶಿಕ್ಷಣವೆ ನಿಜವಾದ ಶಿಕ್ಷಣ ಮತ್ತು ಮೌಲ್ಯಯುತವಾದ‌ ಶಿಕ್ಷಣ. ಶಿಕ್ಷಣ ಎಂದರೆ ಕೇವಲ ತತ್ವಗಳನ್ನು ಬೋಧಿಸುವ ಪಠ್ಯಕ್ರಮವಲ್ಲಾ ಅದು ಮಾನವ ಸರ್ವಾಂಗೀಣ ಅಭಿವೃದ್ಧಿ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಕಬೇಕು.ಅದು ಜೀವನದಲ್ಲಿ ಮಾರ್ಗ ಸೂಚಕವಾಗಬೇಕು ಅಂದಾಗ ಶಿಕ್ಷಣ ಸಾರ್ಥಕತೆ ಪಡೆಯುತ್ತೆ ಎನ್ನುವುದಕ್ಕೆ ಈ ಅಂಕಣ ಬರಹ ಸಂದರ್ಭುಚಿತವಾಗಿದೆ ಸರ್…..

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...