Homeಮುಖಪುಟದೇಶದ್ರೋಹ: ಪ್ರತಿಯೊಬ್ಬ ಪತ್ರಕರ್ತನು ರಕ್ಷಣೆಗೆ ಅರ್ಹನಾಗಿರುತ್ತಾನೆ ಎಂದ ಸುಪ್ರೀಂ ಕೋರ್ಟ್

ದೇಶದ್ರೋಹ: ಪ್ರತಿಯೊಬ್ಬ ಪತ್ರಕರ್ತನು ರಕ್ಷಣೆಗೆ ಅರ್ಹನಾಗಿರುತ್ತಾನೆ ಎಂದ ಸುಪ್ರೀಂ ಕೋರ್ಟ್

- Advertisement -
- Advertisement -

ಪ್ರತಿಯೊಬ್ಬ ಪತ್ರಕರ್ತನನ್ನು ದೇಶದ್ರೋಹ ಆರೋಪಗಳಿಂದ 1962 ರ ಆದೇಶವು ರಕ್ಷಿಸುತ್ತದೆ ಎಂದು ಹೇಳಿರುವ ಸುಪ್ರೀಂ ಕೋರ್ಟ್, ಪತ್ರಕರ್ತ ವಿನೋದ್ ದುವಾ ವಿರುದ್ಧದ ದೇಶದ್ರೋಹ ಪ್ರಕರಣವನ್ನು ಗುರುವಾರ ರದ್ದುಗೊಳಿಸಿದೆ.

ಬಿಜೆಪಿ ಮುಖಂಡರ ದೂರಿನ ಆಧಾರದ ಮೇಲೆ ವಿನೋದ್ ದುವಾ ಅವರ ಮೇಲೆ ಕಳೆದ ವರ್ಷ ನಡೆದಿದ್ದ ದೆಹಲಿ ಗಲಭೆ ಕುರಿತು ಹಿಮಾಚಲ ಪ್ರದೇಶದಲ್ಲಿ ದೇಶದ್ರೋಹದ ಆರೋಪವನ್ನು ಹೊರಿಸಲಾಗಿತ್ತು. ನಕಲಿ ಸುದ್ದಿಗಳನ್ನು ಹರಡುವುದು, ಸಾರ್ವಜನಿಕ ಗಲಭೆಗೆ ಕಾರಣವಾಗುವುದು, ಮಾನಹಾನಿಕರ ವಿಷಯಗಳನ್ನು ಮುದ್ರಿಸುವುದು ಮತ್ತು ಸಾರ್ವಜನಿಕವಾಗಿ ದ್ವೇಷಪೂರಿತ ಹೇಳಿಕೆಗಳನ್ನು ನೀಡುವುದು ಎಂಬ ಆರೋಪಗಳಲ್ಲಿ ಪತ್ರಕರ್ತ ವಿನೋದ್ ದುವಾ ವಿರುದ್ಧ ಪ್ರಕರಣ ದಾಖಲಾಗಿತ್ತು.

ಬಿಜೆಪಿ ಮುಖಂಡನ ದೂರಿನ ವಿರುದ್ಧ ಹಿರಿಯ ಪತ್ರಕರ್ತ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. “ದೇಶದ್ರೋಹದ ಕುರಿತಾದ ಕೇದಾರ ನಾಥ್ ಸಿಂಗ್ ತೀರ್ಪಿನಡಿಯಲ್ಲಿ ಪ್ರತಿಯೊಬ್ಬ ಪತ್ರಕರ್ತರಿಗೂ ರಕ್ಷಣೆಗೆ ಅರ್ಹತೆ ಇರುತ್ತದೆ” ಎಂದು ನ್ಯಾಯಾಧೀಶರು ಹೇಳಿದ್ದಾರೆ.

ಇದನ್ನೂ ಓದಿ: ರಾಜ್ಯದ ಪ್ರತಿ ಹಳ್ಳಿ, ವಾರ್ಡ್‌ಗಳಿಗೂ ಕೆಸಿವಿಟಿ ಕೊರೊನಾ ವಾಲಂಟಿಯರ್‌ ತಂಡ, ನೀವು ಕೈಜೋಡಿಸಬಹುದು

ಹೈಕೋರ್ಟ್ ನ್ಯಾಯಾಧೀಶರ ನೇತೃತ್ವದ ಸಮಿತಿಯು ಅನುಮತಿ ನೀಡದ ಹೊರತು 10 ವರ್ಷಗಳ ಅನುಭವ ಹೊಂದಿರುವ ಯಾವುದೇ ಪತ್ರಕರ್ತರ ವಿರುದ್ಧ ಎಫ್‌ಐಆರ್ ದಾಖಲಿಸಬಾರದು ಎಂದು ವಿನೋದ್ ದುವಾ ಮನವಿ ಮಾಡಿದ್ದರು. ಆದರೆ  ಅವರ ಮನವಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿತು.

ಈ ಮನವಿಯನ್ನು ಅಂಗೀಕರಿಸಿದರೇ ಶಾಸಕಾಂಗದ ಅಧಿಕಾರವನ್ನು ಅತಿಕ್ರಮಿಸುತ್ತದೆ ಎಂದು ನ್ಯಾಯಮೂರ್ತಿಗಳಾದ ಯು ಯು ಲಲಿತ್ ಮತ್ತು ವಿನೀತ್ ಸರಣ್ ಹೇಳಿದ್ದಾರೆ.

ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರುದ್ಧದ ಪ್ರತಿಭಟನೆಯ ಸಂದರ್ಭದಲ್ಲಿ ದೆಹಲಿಯ ಕೆಲವು ಭಾಗಗಳಲ್ಲಿ ನಡೆದ ಹಿಂಸಾಚಾರದ ಬಗ್ಗೆ ಬಿಜೆಪಿ ಮುಖಂಡರು ವಿನೋದ್ ದುವಾ ಅವರ ಕಾರ್ಯಕ್ರಮದ ವಿರುದ್ಧ ದೂರು ನೀಡಿದ್ದರು. ಫೆಬ್ರವರಿ 24, 2020 ರಂದು ನಡೆದ ದೆಹಲಿ ಘರ್ಷಣೆಯಲ್ಲಿ 50 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದರು ಮತ್ತು 200 ಮಂದಿ ಗಾಯಗೊಂಡಿದ್ದರು.

1962 ರ ಸುಪ್ರೀಂ ಕೋರ್ಟ್ ತೀರ್ಪು ಪ್ರಕಾರ  “ಸರ್ಕಾರದ ಕಾರ್ಯಗಳಲ್ಲಿ ಸುಧಾರಣೆ ಅಥವಾ ಕಾನೂನುಬದ್ಧ ವಿಧಾನಗಳಿಂದ ಮಾರ್ಪಾಡು ಮಾಡುವ ಉದ್ದೇಶಕ್ಕಾಗಿ ತೀಕ್ಷ್ಣವಾದ ಪದಗಳನ್ನು ಬಳಸುವುದು ದೇಶದ್ರೋಹವಲ್ಲ”.


ಇದನ್ನೂ ಓದಿ: ಮಾನವ ಹಕ್ಕು ಆಯೋಗದ ಅಧ್ಯಕ್ಷ, ಸದಸ್ಯರ ನೇಮಕ: ಎಸ್‌ಸಿ/ಎಸ್‌ಟಿಗಳಿಗೆ ಪ್ರಾಧಾನ್ಯವಿಲ್ಲವೇಕೆ ಎಂದ ಖರ್ಗೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಅರವಿಂದ್ ಕೇಜ್ರಿವಾಲ್, ಕೆ. ಕವಿತಾಗೆ ನೋ ರಿಲೀಫ್‌: ನ್ಯಾಯಾಂಗ ಬಂಧನ ಮೇ 7ರವರೆಗೆ ವಿಸ್ತರಣೆ

0
ದೆಹಲಿ ಅಬಕಾರಿ ನೀತಿಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಭಾರತ್ ರಾಷ್ಟ್ರ ಸಮಿತಿ (ಬಿಆರ್‌ಎಸ್) ನಾಯಕಿ ಕೆ ಕವಿತಾ ಅವರ ನ್ಯಾಯಾಂಗ ಬಂಧನವನ್ನು...