Homeಮುಖಪುಟಮೋದಿ ಸರ್ಕಾರಕ್ಕೆ ಏಳು ವರ್ಷ: ಜನವಿರೋಧಿ ರಾಷ್ಟ್ರವಾದ ಮತ್ತು ಬಂಡವಾಳಶಾಹಿಯ ಮೆರವಣಿಗೆ

ಮೋದಿ ಸರ್ಕಾರಕ್ಕೆ ಏಳು ವರ್ಷ: ಜನವಿರೋಧಿ ರಾಷ್ಟ್ರವಾದ ಮತ್ತು ಬಂಡವಾಳಶಾಹಿಯ ಮೆರವಣಿಗೆ

- Advertisement -
- Advertisement -

ಮೋದಿ ಸರ್ಕಾರಕ್ಕೆ ಏಳು ವರ್ಷವೋ, ಬಿಜೆಪಿ ಸರ್ಕಾರಕ್ಕೋ ಇಲ್ಲ ಎನ್‌ಡಿಎ ಸರ್ಕಾರಕ್ಕೋ? ಅಥವಾ ಸಂಘ ಪರಿವಾರದ ಹಿಡನ್ ಅಜೆಂಡಾ ಸ್ವತಂತ್ರ ಭಾರತದಲ್ಲಿ ಗರಿಷ್ಠ ಮಟ್ಟದಲ್ಲಿ ಕಾರ್ಯರೂಪಕ್ಕೆ ಇಳಿದ ಏಳು ವರ್ಷಗಳು ಎನ್ನುವುದೋ ಅಥವಾ ಅತಿ ವೇಗದಲ್ಲಿ ಬಂಡವಾಳಶಾಹಿಗಳ ಸಂಪತ್ತು ವೃದ್ಧಿ ಮತ್ತು ಅಷ್ಟೇ ಹಿಮ್ಮುಖ ವೇಗದಲ್ಲಿ ದೇಶದ ಆರ್ಥಿಕ ಅಭಿವೃದ್ಧಿ ಎಂದು ಈ ಏಳು ವರ್ಷಗಳ ಅವಧಿಯನ್ನು ನೋಡುವುದೋ?

ಮೇಲಿನ ಎಲ್ಲದರ ಒಂದು ಕಲಸುಮೋಲೊಗರದ ಚಿತ್ರಣವೇ ನಿಜವಾದ ಸ್ಥಿತಿ. ಕರ್ನಾಟಕ ಕೋವಿಡ್ ವಾಲಂಟಿಯರ್ಸ್ ತಂಡ ಬೆಂಗಳೂರಿನಲ್ಲಿ ಮಧ್ಯಪ್ರದೇಶದ ಆದಿವಾಸಿ ಗುಂಪೊಂದಕ್ಕೆ ನೆರವು ನೀಡುವ ಸಂದರ್ಭದಲ್ಲಿ, ಆ ಗುಂಪಿನ ಹಿರಿಯ ಸದಸ್ಯರೊಬ್ಬರು, ‘ಮೋದಿ ಇರುವವರೆಗೂ ಕೊರೋನಾ ಇರುತ್ತೆ’ ಎಂದು ಹೇಳಿದ್ದನ್ನು ಈ ಏಳು ವರ್ಷಗಳ ಆಡಳಿತದ ಪ್ರಬುದ್ಧ ವಿಮರ್ಶೆ ಎನ್ನಬಹುದು.

ಬ್ಯಾಂಕುಗಳ ಮುಂದೆ ತಮ್ಮದೇ ಹಣಕ್ಕಾಗಿ ನಿಂತ ಸರದಿ ಸಾಲುಗಳು ಈಗ ಆಸ್ಪತ್ರೆ ಮತ್ತು ಸ್ಮಶಾನಗಳ ಎದುರು ಕಾಣಿಸುತ್ತಿವೆ. ಇವೆರಡರ ನಡುವೆ ಕೆಲವೇ ಕೆಲವು ಅತಿ ಶ್ರೀಮಂತರು ಅಪರಿಮಿತ ಸಂಪತ್ತನ್ನು ಗುಡ್ಡ ಹಾಕಿದ್ದಾರೆ. ಬಿಜೆಪಿಯ ಪಾರ್ಟಿ ಫಂಡ್ ಕೂಡ ಭರ್ಜರಿ ಕಲೆಕ್ಷನ್ ಕಂಡಿದೆ, ಬಡವರು ಕಡು ಬಡವರಾಗಿದ್ದಾರೆ ಮತ್ತು ಮುಖ್ಯವಾಗಿ ಬಿಜೆಪಿ ಬೆಂಬಲಿಸುವ ವರ್ಗ ಎನ್ನಲಾದ ಮಧ್ಯಮವರ್ಗ ಈಗ ಸಂಕಷ್ಟಕ್ಕೆ ಸಿಲುಕುತ್ತಿದೆ.

ಎರಡು ವರ್ಷಗಳ ಹಿಂದೆ, 2019 ರ ಮೇ 30 ರಂದು ನರೇಂದ್ರ ಮೋದಿ ಎರಡನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಅದಕ್ಕೂ ಐದು ವರ್ಷಗಳ ಮೊದಲು, ಅವರು 2014 ರ ಚುನಾವಣೆಯಲ್ಲಿ ಅಧಿಕಾರಕ್ಕೆ ಬಂದಿದ್ದು, ಆರ್ಥಿಕ ಸಮೃದ್ಧಿ, ಸಾಮಾಜಿಕ ಐಕ್ಯತೆ ಮತ್ತು ಸಮಗ್ರ ಅಭಿವೃದ್ಧಿಯ ಭರವಸೆ ನೀಡಿದ್ದರು. ಅವರ ಘೋಷಣೆಗಳು – “ಅಚ್ಚೆ ದಿನ್. ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಒಂದು ಕೋಟಿ ಉದ್ಯೋಗಗಳು, ಕಪ್ಪುಹಣ ವಾಪಸ್‌ ತರುವುದು ಮತ್ತು ಎಲ್ಲರ ಅಕೌಂಟಿಗೆ 15 ಲಕ್ಷ ಹಣ ಇತ್ಯಾದಿ.

ಆದರೆ ಈಗ ಇವೆಲ್ಲವೂ ಜುಮ್ಲಾ ಎಂದು ದೃಢಪಟ್ಟಿದೆ. ಮಾಧ್ಯಮಗಳು ಮತ್ತು ಸಾಮಾಜಿಕ ಮಾಧ್ಯಮಗಳ ನೆರವಿನಿಂದ ಅಸ್ತಿತ್ವದಲ್ಲಿಯೇ ಇಲ್ಲದ ಗುಜರಾತ್ ಮಾಡೆಲ್ ಎಂಬ ಮರಿಚೀಕೆಯನ್ನು ಬಿತ್ತಿ ಯುವಜನತೆ ಮತ್ತು ಮಧ್ಯಮವರ್ಗವನ್ನು ದಾರಿ ತಪ್ಪಿಸುತ್ತ ಬರಲಾಗಿತು.

ಇದನ್ನೂ ಓದಿ: ಗುಜರಾತ್ ಮಾಡೆಲ್: ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳು & ಕೊಬ್ಬುತ್ತಿರುವ ಉದ್ಯಮಿಗಳು!

ಈಗ ಬಹುತೇಕ ಜನರು ಭ್ರಮನಿರಸನ ಹೊಂದಿದ್ದಾರೆ ಮತ್ತು ಸಿನಿಕರಾಗಿದ್ದಾರೆ. ಆದರೂ ಈ ಏಳು ವರ್ಷಗಳಲ್ಲಿ ಸೃಷ್ಟಿಯಾದ ಭಕ್ತಗಣ ಎಂಬ ವಿಕ್ಷಿಪ್ತ ಪ್ರಭೇಧವೊಂದು ಅಂಧಾನುಕರಣೆಯಲ್ಲಿ ತೊಡಗಿದೆ. ಈ ಪ್ರಭೇದಕ್ಕೆ ಬೆಂಬಲವಾಗಿ ವಿಷಯವಸ್ತು ಒದಗಿಸಲು ಗೋದಿ ಮೀಡಿಯಾ ಎಂಬ ವಿಕೃತ ಪ್ರಭೇಧವೊಂದೂ ಜನ್ಮ ತಾಳಿದೆ. ಲೋಕಸಭೆಯಲ್ಲಿ ಆರಾಮದಾಯಕ ಬಹುಮತದ ಬೆಂಬಲವಿದೆ ಮತ್ತು ಹಲವಾರು ರಾಜ್ಯ ಸರ್ಕಾರಗಳು ಬಿಜೆಪಿಯ ನಿಯಂತ್ರಣದಲ್ಲಿವೆ. (ಇತ್ತೀಚಿನ ಪಶ್ಚಿಮ ಬಂಗಾಳ ಚುನಾವಣಾ ಫಲಿತಾಂಶ ಮೋದಿ-ಶಾಗಳ ಗರ್ವಭಂಗ ಮಾಡಿದೆ).

ಮೊದಲ ಬಾರಿಗೆ, 2014ರಲ್ಲಿ, ಬಿಜೆಪಿ ಮತ್ತು ಅದರ ಮಿತ್ರ ಪಕ್ಷಗಳು ಸುಮಾರು ಶೇ. 38 ಮತಗಳನ್ನು ಪಡೆದಿವೆ, ಅದು 2019ರಲ್ಲಿ ಸುಮಾರು ಶೇ. 43ಕ್ಕೆ ಏರಿದೆ. ಮತ ಚಲಾಯಿಸಿದವರಲ್ಲಿ ಹೆಚ್ಚಿನವರು ಇನ್ನೂ ಬಿಜೆಪಿಯನ್ನು ವಿರೋಧಿಸಿದ್ದಾರೆ ಎಂದು ಇದು ತೋರಿಸಿದರೂ, ಪ್ರಜಾಪ್ರಭುತ್ವದ ನಿಯಮಗಳ ಪ್ರಕಾರ ಬಿಜೆಪಿಯೇ ವಿಜಯಶಾಲಿ ಹೌದು.

ಮೋದಿಯ ಆಡಳಿತದ ಎರಡು ನಿರ್ಣಾಯಕ ಲಕ್ಷಣಗಳು ಒಂದು ನವ-ಉದಾರವಾದಿ ಸಿದ್ಧಾಂತ. ಇದು ಅಂಬಾನಿ-ಅದಾನಿ ತರಹದವರಿಗೆ ಎಲ್ಲ ನೆರವು ನೀಡುವ ಪಾಲಿಸಿ. ಎರಡನೆಯದು ಭಾರತವು ಹಿಂದೂ ರಾಷ್ಟ್ರ ಅಥವಾ ಕೇವಲ ಹಿಂದೂಗಳ ರಾಷ್ಟ್ರ ಎಂಬ ಕಲ್ಪನೆ. ಈ ಎರಡೂ ಸಿದ್ದಾಂತಗಳು ಕೈ ಜೋಡಿಸಿವೆ. ಹೀಗಾಗಿ ಇಲ್ಲಿ ಅಕ್ರಮ ಸಂಪತ್ತು ಮತ್ತು ಜನವಿರೋಧಿ ರಾಷ್ಟ್ರವಾದದ ನಡುವೆ ಸಹಜವಾಗಿಯೇ ಹೊಂದಾಣಿಕೆಯಾಗಿದೆ. ಈ ಏಳು ವರ್ಷಗಳಲ್ಲಿ ಈ ಎರಡರ ನಡುವಿನ ಪ್ರೀತಿ-ಪ್ರೇಮ, ಕೊಡುಕೊಳ್ಳುವಿಕೆ ತುಂಬ ಆಪ್ತವಾಗಿದೆ. ಇವತ್ತು ದೇಶದ ಎದುರು ಈ ಮೈತ್ರಿಯೇ ದುಸ್ವಪ್ನವಾಗಿದೆ. ಮೋದಿ ಎಂಬ ಕೃತಕ ಸೃಷ್ಟಿತ ಇಮೇಜ್ ಅನ್ನು ಬಳಸಿಕೊಂಡು ಈ ಶಕ್ತಿಗಳು ತಮ್ಮ ತಮ್ಮ ಹಿಡೆನ್ ಅಜೆಂಡಾ ಜಾರಿ ಮಾಡುತ್ತಿವೆ.

  • ಪಿ.ಕೆ. ಮಲ್ಲನಗೌಡರ್

ಇದನ್ನೂ ಓದಿ: “ನನ್ನನ್ನು ಈ ರೀತಿ ಅವಮಾನಿಸಬೇಡಿ”: ಪಿಎಂ ಜೊತೆಗಿನ ಭೇಟಿ ನಂತರ ಮಮತಾ ಅಸಮಾಧಾನ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮಹಾರಾಷ್ಟ್ರದ ಉಪ ಮುಖ್ಯಮಂತ್ರಿಯಾಗಿ ಅಜಿತ್ ಪವಾರ್ ಪತ್ನಿ ಸುನೇತ್ರಾ ಪವಾರ್ ಪ್ರಮಾಣ ವಚನ ಸ್ವೀಕಾರ

ಜನವರಿ 28ರಂದು ವಿಮಾನ ಅಪಘಾತದಲ್ಲಿ ನಿಧನರಾದ ಎನ್‌ಸಿಪಿ ನಾಯಕ ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ಅವರು ಮಹಾರಾಷ್ಟ್ರದ ಉಪಮುಖ್ಯಮಂತ್ರಿಯಾಗಿ ಶನಿವಾರ (ಜ.31) ಪ್ರಮಾಣವಚನ ಸ್ವೀಕರಿಸಿದರು. ಮುಂಬೈನ ಲೋಕಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ...

ಡೊನಾಲ್ಡ್ ಟ್ರಂಪ್, ಎಲಾನ್ ಮಸ್ಕ್‌ನಿಂದ ಬಿಲ್ ಗೇಟ್ಸ್‌ವರೆಗೆ : ಅಂತಿಮ ಎಪ್‌ಸ್ಟೀನ್‌ ಫೈಲ್‌ಗಳಲ್ಲಿ ಹಲವು ಪ್ರಮುಖರ ಹೆಸರು

ಅಮೆರಿಕದ ಸಂಸತ್ತು ಅಂಗೀಕರಿಸಿದ ಎಪ್‌ಸ್ಟೀನ್ ಫೈಲ್ಸ್ ಟ್ರಾನ್ಸ್‌ಪೆರೆನ್ಸಿ ಆಕ್ಟ್ (Epstein Files Transparency Act) ನಿಯಮದಂತೆ ಅಮೆರಿಕದ ನ್ಯಾಯ ಇಲಾಖೆ (ಡಿಒಜಿ) ಲೈಂಗಿಕ ದೌರ್ಜನ್ಯ ಪ್ರಕರಣದ ಅಪರಾಧಿ ಜೆಫ್ರಿ ಎಪ್‌ಸ್ಟೀನ್‌ಗೆ ಸಂಬಂಧಿಸಿದ ಅಂತಿಮ...

ಲಂಚ ಪ್ರಕರಣ : ಎಸ್‌ಇಸಿ ಸಮನ್ಸ್ ಸ್ವೀಕರಿಸಲು ಅದಾನಿ ಒಪ್ಪಿಗೆ

ಲಂಚ ಪ್ರಕರಣದಲ್ಲಿ ಅಮೆರಿಕದ ಸೆಕ್ಯುರಿಟೀಸ್ ಆ್ಯಂಡ್ ಎಕ್ಸ್‌ಚೇಂಜ್ ಕಮಿಷನ್ (ಎಸ್‌ಇಸಿ) ನ ಸಮನ್ಸ್‌ಗಳನ್ನು ಸ್ವೀಕರಿಸಲು ಉದ್ಯಮಿ ಗೌತಮ್ ಅದಾನಿ ಮತ್ತು ಅವರ ಸೋದರಳಿಯ ಸಾಗರ್ ಅದಾನಿ ಒಪ್ಪಿಕೊಂಡಿದ್ದಾರೆ ಎಂದು ವರದಿಯಾಗಿದೆ. ನ್ಯೂಯಾರ್ಕ್‌ನ ಬ್ರೂಕ್ಲಿನ್‌ನಲ್ಲಿರುವ ಫೆಡರಲ್...

ಬೀದರ್‌ : ಮೊಳಕೇರಾ ಗ್ರಾಮದಲ್ಲಿ ಸ್ಫೋಟ ಪ್ರಕರಣ ; ಸಮಗ್ರ ತನಿಖೆಗೆ ಸಚಿವ ಈಶ್ವರ್ ಖಂಡ್ರೆ ಆದೇಶ

ಬೀದರ್ ಜಿಲ್ಲೆ ಹುಮನಾಬಾದ್ ತಾಲೂಕಿನ ಮೊಳಕೇರಾ ಗ್ರಾಮದ ಮೋಳಗಿ ಮಾರಯ್ಯ ದೇವಸ್ಥಾನ ರಸ್ತೆಯಲ್ಲಿ ಅನುಮಾನಾಸ್ಪದ ವಸ್ತು ಸ್ಫೋಟಗೊಂಡು, ಶಾಲೆಗೆ ತೆರಳುತ್ತಿದ್ದ ಮಕ್ಕಳೂ ಸೇರಿ 6 ಜನರು ಗಾಯಗೊಂಡಿರುವ ಘಟನೆ ಬಗ್ಗೆ ಆಘಾತ ವ್ಯಕ್ತಪಡಿಸಿರುವ...

ಜೈಲಿನಲ್ಲಿರುವ ಹೋರಾಟಗಾರ ಸೋನಮ್ ವಾಂಗ್‌ಚುಕ್‌ಗೆ ಅನಾರೋಗ್ಯ : ಜೋಧ್‌ಪುರದ ಏಮ್ಸ್‌ನಲ್ಲಿ ವೈದ್ಯಕೀಯ ಪರೀಕ್ಷೆ

ನ್ಯಾಯಾಂಗ ಬಂಧನದಲ್ಲಿರುವ ಲಡಾಖ್‌ನ ಹೋರಾಟಗಾರ ಹಾಗೂ ವಿಜ್ಞಾನಿ ಸೋನಮ್ ವಾಂಗ್‌ಚುಕ್ ಅವರ ಆರೋಗ್ಯ ಹದೆಗೆಟ್ಟಿದ್ದು, ಸುಪ್ರೀಂ ಕೋರ್ಟ್ ನಿರ್ದೇಶನ ಅನುಸಾರ ಜೋಧ್‌ಪುರದ ಏಮ್ಸ್‌ನಲ್ಲಿ ಅವರಿಗೆ ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ. ಪೊಲೀಸರು ವಾಂಗ್‌ಚುಕ್ ಅವರನ್ನು ಜೋಧ್‌ಪುರ...

ಉತ್ತರಾಖಂಡ ಏಕರೂಪ ನಾಗರಿಕ ಸಂಹಿತೆ ತಿದ್ದುಪಡಿ : ಬಲವಂತದ ವಿವಾಹ, ಲಿವ್‌ಇನ್ ಸಂಬಂಧಕ್ಕೆ 7 ವರ್ಷ ಜೈಲು

ಉತ್ತರಾಖಂಡ ಏಕರೂಪ ನಾಗರಿಕ ಸಂಹಿತೆ (ತಿದ್ದುಪಡಿ) ಸುಗ್ರೀವಾಜ್ಞೆಗೆ ರಾಜ್ಯಪಾಲ ಹಾಗೂ ನಿವೃತ್ತ ಲೆಫ್ಟಿನೆಂಟ್ ಜನರಲ್ ಗುರ್ಮೀತ್ ಸಿಂಗ್ ಅವರು ಅಂಕಿತ ಹಾಕಿದ್ದಾರೆ. ಈ ತಿದ್ದುಪಡಿಯ ಪರಿಣಾಮ, ರಾಜ್ಯದಲ್ಲಿ ವಿವಾಹ ಹಾಗೂ ಲಿವ್‌ಇನ್ ಸಂಬಂಧಗಳಿಗೆ...

ಮಹಾರಾಷ್ಟ್ರದ ಡಿಸಿಎಂ ಆಗಿ ಅಜಿತ್ ಪವಾರ್ ಪತ್ನಿ ಸುನೇತ್ರಾ ಪವಾರ್ ಆಯ್ಕೆ : ಇಂದು ಸಂಜೆ ಪ್ರಮಾಣ ವಚನ ಸ್ವೀಕಾರ; ವರದಿ

ಅಜಿತ್ ಪವಾರ್ ಅವರ ಅಕಾಲಿಕ ಸಾವಿನಿಂದ ತೆರವಾದ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಸ್ಥಾನಕ್ಕೆ ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ಅವರನ್ನು ನೇಮಿಸಲು ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ) ನಿರ್ಧರಿಸಿದೆ ಎಂದು ವರದಿಯಾಗಿದೆ....

ಶೂಟ್ ಮಾಡಿಕೊಂಡು ಪ್ರಾಣ ಬಿಟ್ಟ ಕಾನ್ಫಿಡೆಂಟ್ ಗ್ರೂಪ್ ಸಂಸ್ಥಾಪಕ ಸಿ.ಜೆ. ರಾಯ್: ಐಟಿ ದಾಳಿ ಒತ್ತಡದಿಂದ ಆತ್ಮಹತ್ಯೆ ಶಂಕೆ

ಬೆಂಗಳೂರು: ಖ್ಯಾತ ರಿಯಲ್ ಎಸ್ಟೇಟ್ ಉದ್ಯಮಿ, ಕಾನ್ಫಿಡೆಂಟ್ ಗ್ರೂಪ್ (Confident Group) ಅಧ್ಯಕ್ಷ ಡಾ. ಸಿ.ಜೆ. ರಾಯ್ ಅವರು ಶುಕ್ರವಾರ ಬೆಂಗಳೂರಿನ ತಮ್ಮ ಕಚೇರಿಯಲ್ಲಿ ಗನ್ ನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.  ಕೇರಳ...

ಕಾಂಗ್ರೆಸ್ ಆಳ್ವಿಕೆಯಲ್ಲಿ ನುಸುಳಲುಕೋರರು ಬಹುಸಂಖ್ಯಾತರಾದರು; ನುಸುಳುಕೋರರಿಂದ ಅಸ್ಸಾಂ ರಕ್ಷಿಸಲು ಬಿಜೆಪಿಗೆ ಮತ ಹಾಕಿ: ಅಮಿತ್ ಶಾ

ಧೇಮಾಜಿ (ಅಸ್ಸಾಂ): ಕಾಂಗ್ರೆಸ್ ಆಳ್ವಿಕೆಯಲ್ಲಿ ಅಸ್ಸಾಂನ ಜನಸಂಖ್ಯಾಶಾಸ್ತ್ರ ಬದಲಾಗಿದೆ ಎಂದು ಹೇಳಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ , ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ನೇತೃತ್ವದ ಸರ್ಕಾರ ಈ ಪ್ರವೃತ್ತಿಯನ್ನು...

ಕೊಲ್ಕತ್ತಾ ಅಗ್ನಿ ಅವಘಡ| ಈವರೆಗೆ ವಾವ್ ಮೊಮೋ ಕಂಪನಿ ಗೋದಾಮು ಸೇರಿದಂತೆ ಇತರೆಡೆ 21 ಜನರು ಸಾವನ್ನಪ್ಪಿರುವ ಮಾಹಿತಿ ಲಭ್ಯ  

ಜನವರಿ 26 ರ ಮುಂಜಾನೆ ಕೋಲ್ಕತ್ತಾದ ಆನಂದಪುರ ಪ್ರದೇಶದಲ್ಲಿ ಸಂಭವಿಸಿದ ಭೀಕರ ಬೆಂಕಿ ಅಪಘಾತದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಗುರುವಾರ 21 ಕ್ಕೆ ಏರಿದ್ದು, 28 ಜನರು ಇನ್ನೂ ನಾಪತ್ತೆಯಾಗಿದ್ದಾರೆ.  ಬೆಂಕಿಯ ಅವಘಡದಲ್ಲಿ ಎರಡು ಗೋದಾಮುಗಳು...