Homeಮುಖಪುಟಗುಜರಾತ್ ಮಾಡೆಲ್: ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳು & ಕೊಬ್ಬುತ್ತಿರುವ ಉದ್ಯಮಿಗಳು!

ಗುಜರಾತ್ ಮಾಡೆಲ್: ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳು & ಕೊಬ್ಬುತ್ತಿರುವ ಉದ್ಯಮಿಗಳು!

- Advertisement -
- Advertisement -

ಇತ್ತೀಚೆಗೆ ಗುಜರಾತ್ ಮಕ್ಕಳಲ್ಲಿನ ಅಪೌಷ್ಟಿಕತೆಯ ಕುರಿತಾದ ಆಘಾತಕಾರಿ ವರದಿಯೊಂದು ಪ್ರಕಟವಾಗಿದೆ. ಅದೇ ರೀತಿ 2019ರ ಅಕ್ಟೋಬರ್‌ನಲ್ಲಿ ಫೋರ್ಬ್ಸ್ ಪ್ರಕಟಿಸಿದ ಶ್ರೀಮಂತರ ಪಟ್ಟಿಯನ್ನು ಗಣನೆಗೆ ತೆಗೆದುಕೊಂಡರೆ, ಅದರಲ್ಲಿ ಐವರು ಟಾಪ್ ಶ್ರೀಮಂತ ಭಾರತೀಯರಲ್ಲಿ ನಾಲ್ವರು ಗುಜರಾತಿಗಳೇ ಆಗಿದ್ದಾರೆ. ಟಾಪ್ ಎರಡು ಸ್ಥಾನಗಳಲ್ಲಿರುವವರು ಮೋದಿಯವರಿಗೆ ಹತ್ತಿರದ ಸ್ನೇಹಿತರಾಗಿದ್ದಾರೆ. ಅಪೌಷ್ಟಿಕತೆ ಮತ್ತು ಕೊಬ್ಬು (FAT) ಸಂಪತ್ತಿನ ಅಸಮಾನ ಹಂಚಿಕೆಗೆ ಒಂದು ರೂಪಕದಂತೆ ಭಾಸವಾಗುತ್ತಿದೆ.

ಗುಜರಾತ್‌ನ ಸಾಮಾಜಿಕ-ಆರ್ಥಿಕ ಪರಿಶೀಲನೆಯ ವರದಿಯ ಪ್ರಕಾರ, ರಾಜ್ಯದ ಅಂಗನವಾಡಿಗಳಲ್ಲಿರುವ 43 ಲಕ್ಷ ಮಕ್ಕಳಲ್ಲಿ 1.47 ಲಕ್ಷ ಮಕ್ಕಳು ತೀವ್ರ ಅಪೌಷ್ಟಿಕತೆಯಿಂದ (severe acute malnutrition- SAM) ನಿಂದ ಬಳಲುತ್ತಿದ್ದಾರೆ ಎಂದು ತಿಳಿದುಬಂದಿದೆ. ‘ಆರ್ಥಿಕವಾಗಿ ಪ್ರಗತಿಪರ’ ರಾಜ್ಯವಾದ ಗುಜರಾತ್‌ನಲ್ಲಿ ಅಪೌಷ್ಟಿಕತೆ ಹೇಗೆ ಒಂದು ಸವಾಲಾಗಿ ಮುಂದುವರೆದಿದೆ ಎಂಬುದನ್ನು ಈ ವರದಿ ಬಹಿರಂಗಪಡಿಸುತ್ತದೆ. ಗುಜರಾತಿನ ಅಭಿವೃದ್ಧಿ ಮಾದರಿಯನ್ನು ಕೇಂದ್ರ ಸರ್ಕಾರವು ಭಾರತದಾದ್ಯಂತ ಪುನರಾವರ್ತಿಸುವ ಮಾತನಾಡುತ್ತಿರುವ ಈ ಸಂದರ್ಭದಲ್ಲಿಯೇ ಈ ವರದಿ ಹೊರಬಿದ್ದಿದೆ.

ಈಗ ನಮಗೆ ಥಟ್ಟನೆ ನೆನಪಾಗುವುದು 2019ರ ಫೋರ್ಬ್ಸ್ ಶ್ರೀಮಂತರ ಪಟ್ಟಿ. ಭಾರತದ ಮೊದಲ ಐವರು ಶ್ರೀಮಂತರ ಪೈಕಿ ನಾಲ್ವರು ಗುಜರಾತಿಗಳು! ಅಸಮಾನ ಸಂಪತ್ತಿನ ಹಂಚಿಕೆಗೆ ಮತ್ತು ಕೇಂದ್ರ, ಗುಜರಾತ್ ಸರ್ಕಾರಗಳ ಪಾಲಿಸಿಗಳಿಗೆ ಇವೆರಡೂ-ಅಪೌಷ್ಟಿಕತೆ ಮತ್ತು ‘ಕೊಬ್ಬು’ ಹೆಚ್ಚಿದವರು- ಕನ್ನಡಿ ಹಿಡಿಯುತ್ತಿವೆ.

ಶೇ. 3.41 ಅಂಗನವಾಡಿ ಮಕ್ಕಳಲ್ಲಿ ತೀವ್ರ ಅಪೌಷ್ಟಿಕತೆ ಇರುವುದು ಕಂಡುಬಂದಿದೆ. ಅಂಗನವಾಡಿ ಹೊರಗಿರುವ ಮಕ್ಕಳನ್ನು ಗಣನೆಗೆ ತೆಗೆದುಕೊಂಡರೆ ಒಟ್ಟು ಅಪೌಷ್ಟಿಕ ಮಕ್ಕಳ ಸಂಖ್ಯೆ ತುಂಬಾ ಹೆಚ್ಚಿರಬಹುದು.

ರಾಜ್ಯ ವಿಧಾನಸಭೆಯಲ್ಲಿ ಬುಧವಾರ ಮಂಡಿಸಲಾದ ಉತ್ತರಗಳ ಪ್ರಕಾರ, ರಾಜ್ಯದ ಐದು ಜಿಲ್ಲೆಗಳ 46 ತಾಲೂಕುಗಳಲ್ಲಿ 1.97 ಲಕ್ಷ ಮಕ್ಕಳು ಅಪೌಷ್ಟಿಕತೆಯಿಂದ ಮತ್ತು 24,762 ಮಕ್ಕಳು ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಬನಸ್ಕಂತ, ಪಟಾನ್, ನವಸಾರಿ, ಜುನಾಗಢ್ ಮತ್ತು ಖೇಡಾ ಜಿಲ್ಲೆಗಳಲ್ಲಿ ಅಪೌಷ್ಟಿಕತೆ ತೀವ್ರವಾಗಿದೆ.

1.97 ಲಕ್ಷ ಅಪೌಷ್ಟಿಕ ಮಕ್ಕಳಲ್ಲಿ 68% ಪಟಾನ್ ಜಿಲ್ಲೆಯ ಎಂಟು ತಾಲೂಕಿನಲ್ಲಿದ್ದಾರೆ. ಈ ಐದು ಜಿಲ್ಲೆಗಳಲ್ಲಿ 24,762 ಮಕ್ಕಳು ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿದ್ದು, ಅದರಲ್ಲಿ 14,371 ಮಕ್ಕಳು ಪಟಾನ್ ಜಿಲ್ಲೆಯವರು.

2015 ರ ಮೇ ತಿಂಗಳಲ್ಲಿ ಗುಜರಾತ್ ಸರ್ಕಾರವು ರಾಜ್ಯವನ್ನು ಅಪೌಷ್ಟಿಕತೆಯಿಂದ ಮುಕ್ತಗೊಳಿಸಲು ನಿರ್ಧರಿಸಿದೆ ಎಂದು ಗುಜರಾತ್‌ನ ಸಾಮಾಜಿಕ-ಆರ್ಥಿಕ ವಿಮರ್ಶೆ (2015-16) ತಿಳಿಸಿತ್ತು. ಆದರೆ ಅದಾಗಲೇ ಇಲ್ಲ. ಗುಜರಾತಿನ ನಾಲ್ವರು ಉದ್ಯಮಿಗಳು ಟಾಪ್ 5 ಶ್ರೀಮಂತರ ಪಟ್ಟಿಗೆ ಸೇರಿದ್ದು ಮಾತ್ರ ಸರಾಗವಾಗಿ ನಡೆಯಿತು ಎಂಬುದು ವಿರೋಧಭಾಸವಲ್ಲವೇ?

ವೈದ್ಯಕೀಯ ತೊಂದರೆಗಳನ್ನು ಹೊಂದಿರುವ ಮತ್ತು ಹಸಿವು ಪರೀಕ್ಷೆಯಲ್ಲಿ ವಿಫಲರಾದ ಅಪೌಷ್ಟಿಕ ಮಕ್ಕಳನ್ನು ಮಕ್ಕಳ ಅಪೌಷ್ಟಿಕತೆ ಚಿಕಿತ್ಸಾ ಕೇಂದ್ರಗಳಿಗೆ ಅಥವಾ ಜಿಲ್ಲಾ ಮಟ್ಟದಲ್ಲಿ ನಡೆಸುತ್ತಿರುವ ಪೌಷ್ಠಿಕಾಂಶ ಪುನರ್ವಸತಿ ಕೇಂದ್ರಗಳಿಗೆ ಸೇರಿಸಲು ಸೂಚಿಸಲಾಗಿದೆ ಎಂದು ವರದಿಗಳು ತಿಳಿಸಿವೆ.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ರಾಜ್ಯ ಸಚಿವ ವಾಸುಬೆನ್ ತ್ರಿವೇದಿ, “ರಾಜ್ಯ ಸರ್ಕಾರವು ಸಹ ಅಷ್ಟೇ ಚಿಂತಿತವಾಗಿದೆ. ಆದ್ದರಿಂದ 2016-17ನೇ ಸಾಲಿನ ಬಜೆಟ್‌ನಲ್ಲಿ ಘೋಷಿಸಲಾದ ದೂಧ್ ಸಂಜೀವಿನಿ ಯೋಜನೆಯನ್ನು ಜಾರಿಗೆ ತರಲು ನಾವು ನಿರ್ಧರಿಸಿದ್ದೇವೆ ಎಂದಿದ್ದಾರೆ. ಈಗ ಅಲ್ಲಿನ ಅಂಗನವಾಡಿಗಳಲ್ಲಿ ವಾರದಲ್ಲಿ ಎರಡು ಸಲ ಮಾತ್ರ ಹಾಲು ನೀಡಲಾಗುತ್ತಿದೆ.

ಕೊಬ್ಬಿದ ಕುಬೇರರು

2019ರಲ್ಲಿ ಫೋರ್ಬ್ಸ್ ಪ್ರಕಟಿಸಿದ ಪಟ್ಟಿ ಪ್ರಕಾರ, 51.4 ಬಿಲಿಯನ್ ಡಾಲರ್‌ಗಳ ಒಡೆಯ ಅಂಬಾನಿ ಮೊದಲ ಸ್ಥಾನದಲ್ಲಿ, 15.7 ಬಿಲಿಯನ್ ಡಾಲರ್ ಹೊಂದಿರುವ ಅದಾನಿ 2ನೆ ಸ್ಥಾನದಲ್ಲಿ, 15 ಬಿಲಿಯನ್ ಡಾಲರ್ ಶ್ರೀಮಂತ ಪಲ್ಲೊಂಜಿ ಮಿಸ್ತ್ರಿ 4ನೆ ಸ್ಥಾನದಲ್ಲಿ ಮತ್ತು 14 ಬಿಲಿಯನ್ ಡಾಲರ್ ಹೊಂದಿರುವ ಉದಯ ಕೊಟಕ್ 5ನೆ ಸ್ಥಾನದಲ್ಲಿದ್ದಾರೆ. ಇವರೆಲ್ಲ ಗುಜರಾತಿಗಳು.

ಕೊರೋನಾ-ಲಾಕ್‌ಡೌನ್ ಸಮಯದಲ್ಲೇ ಅಂಬಾನಿ-ಅದಾನಿ ಗಳಿಕೆ ತೀವ್ರ ಏರಿಕೆಯಾಗಿದೆ!
ಗುಜರಾತ್ ಅಂಗನವಾಡಿಗಳಲ್ಲಿ ವಾರಕ್ಕೆ ಕೇವಲ ಒಂದಿನ ಅಥವಾ ಎರಡು ದಿನ ಹಾಲು ವಿತರಿಸಲಾಗುತ್ತಿದೆ. ಗುಜರಾತಿನಲ್ಲಿ ಸುಪ್ರಸಿದ್ಧ ಅಮುಲ್ ಡೈರಿ ಇದ್ದರೂ ಅಲ್ಲಿನ ಮಕ್ಕಳಿಗೆ ಹಾಲು, ಮೊಟ್ಟೆಯಂತಹ ಪೌಷ್ಠಿಕ ಆಹಾರಗಳನ್ನು ನೀಡಲು ಸರ್ಕಾರ ವಿಫಲವಾಗಿದೆ ಅಂದರೆ ಅದರ ಆದ್ಯತೆ ಯಾವುದಾಗಿದೆ?

  • ಪಿ.ಕೆ. ಮಲ್ಲನಗೌಡರ್

ಇದನ್ನೂ ಓದಿ: ದುಡಿಯೋದು ಯಾರೋ? ಸ್ವಾರ್ಥಕ್ಕೆ ಮಾಡಿಕೊಳ್ಳೋದು ಇನ್ಯಾರೋ?- BSY ವಿರುದ್ಧ ಶ್ರೀನಿವಾಸ್ ಪ್ರಸಾದ್ ಆಕ್ರೋಶ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ದಲಿತ ವಿದ್ಯಾರ್ಥಿನಿ ಕೊಲೆ ಪ್ರಕರಣ: ಪ್ರತಿಭಟನಾಕಾರರ ಮೇಲೆ ಪೊಲೀಸ್ ಲಾಠಿಚಾರ್ಜ್; ಯೋಗಿ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ

ನವದೆಹಲಿ: ಜುಲೈ 8 ರಂದು ಮೀರತ್‌ನಲ್ಲಿ ನಡೆದ ದಲಿತ ವಿದ್ಯಾರ್ಥಿನಿಯ ಹತ್ಯೆಯನ್ನು ಖಂಡಿಸಿ ಪ್ರತಿಭಟನೆ ನಡೆಸುತ್ತಿದ್ದ ದಲಿತ ಕಾರ್ಯಕರ್ತರು ಮತ್ತು ಮೃತರ ಕುಟುಂಬ ಸದಸ್ಯರ ಮೇಲೆ ಉತ್ತರ ಪ್ರದೇಶ ಪೊಲೀಸರು ಭೀಕರ ಹಲ್ಲೆ,...

ಒಮಾನ್ ಕರಾವಳಿಯಲ್ಲಿ ಮತ್ತೊಂದು ಹಡಗಿನ ಮೇಲೆ ದಾಳಿ: ಭಾರತೀಯ ಪ್ರಜೆ ನಾಪತ್ತೆ, 10 ಜನರ ರಕ್ಷಣೆ: ವಿದೇಶಾಂಗ ಸಚಿವಾಲಯ ಮಾಹಿತಿ

ನವದೆಹಲಿ: ಜುಲೈ 12 ರಂದು ಒಮಾನ್ ಕರಾವಳಿಯ ಅಂತರರಾಷ್ಟ್ರೀಯ ಜಲಮಾರ್ಗದಲ್ಲಿ ಸಾಗುತ್ತಿದ್ದ ‘ಜಿಎಫ್‌ಎಸ್ ಗ್ಯಾಲಕ್ಸಿ’ (GFS Galaxy) ಎಂಬ ವಾಣಿಜ್ಯ ಹಡಗಿನ ಮೇಲೆ ನಡೆದ ದಾಳಿಯನ್ನು ಭಾರತ ಸರ್ಕಾರ ತೀವ್ರವಾಗಿ ಖಂಡಿಸಿದೆ. ಭೀಕರ...

SIR ಪ್ರಕ್ರಿಯೆಯಲ್ಲಿ ಎಐ ಬಳಕೆ, ಭಾರೀ ಪ್ರಮಾಣದಲ್ಲಿ ಮತದಾರರ ಹೆಸರು ಡಿಲೀಟ್ : ಕಳವಳ ವ್ಯಕ್ತಪಡಿಸಿದ ವಿಶ್ವಸಂಸ್ಥೆಯ ವಿಶೇಷ ವರದಿಗಾರರು

ಭಾರತೀಯ ಚುನಾವಣಾ ಆಯೋಗ (ಇಸಿಐ) ಕೈಗೊಂಡ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆಯು (ಎಸ್‌ಐಆರ್) ವ್ಯಾಪಕ ಪ್ರಮಾಣದಲ್ಲಿ ಮತದಾರರ ಹೆಸರುಗಳ ಅಳಿಸುವಿಕೆಗೆ ಕಾರಣವಾಗಿದೆ ಮತ್ತು ಇದು ಮುಸ್ಲಿಮರು ಹಾಗೂ ಇತರ ಅಲ್ಪಸಂಖ್ಯಾತ ಸಮುದಾಯಗಳ...

ಮಹಾರಾಷ್ಟ್ರ: ನಂದೂರ್ಬಾರ್‌ನ ಸರ್ಕಾರಿ ಹಾಸ್ಟೆಲ್‌ನಲ್ಲಿ ಕಲುಷಿತ ಆಹಾರ ಸೇವಿಸಿ 40 ವಿದ್ಯಾರ್ಥಿಗಳು ಅಸ್ವಸ್ಥ; ತೀವ್ರಗೊಂಡ ತನಿಖೆ 

ನಂದೂರ್ಬಾರ್ (ಮಹಾರಾಷ್ಟ್ರ): ಮಹಾರಾಷ್ಟ್ರದ ನಂದೂರ್ಬಾರ್ ಜಿಲ್ಲೆಯ ಶಹಾಡಾ ತಾಲೂಕಿನಲ್ಲಿರುವ ಸರ್ಕಾರಿ ಸಮಾಜ ಕಲ್ಯಾಣ ಇಲಾಖೆಯ ವಸತಿನಿಲಯದಲ್ಲಿ ಶಂಕಿತ ವಿಷಪೂರಿತ ಆಹಾರ ಸೇವಿಸಿ ಸುಮಾರು 40 ವಿದ್ಯಾರ್ಥಿಗಳು ತೀವ್ರವಾಗಿ ಅಸ್ವಸ್ಥಗೊಂಡಿರುವ ಕಳವಳಕಾರಿ ಘಟನೆ ವರದಿಯಾಗಿದೆ.  ಹಾಸ್ಟೆಲ್‌ನಲ್ಲಿ...

ಇರಾನ್‌ನ 140 ಸ್ಥಳಗಳನ್ನು ಗುರಿಯಾಗಿಸಿ ಅಮೆರಿಕದಿಂದ ದಾಳಿ : ಬಹ್ರೇನ್, ಕತಾರ್, ಯುಎಇ ಮೇಲೆ ಇರಾನ್‌ನಿಂದ ಪ್ರತಿದಾಳಿ

ಹಾರ್ಮುಝ್ ಜಲಸಂಧಿಯಲ್ಲಿ ಇರಾನ್ ನಡೆಸಿದ ದಾಳಿಯಿಂದಾಗಿ ಸರಕು ಸಾಗಣೆ ಹಡಗೊಂದು ಹೊತ್ತಿ ಉರಿದು, ಅದರಲ್ಲಿದ್ದ ಸಿಬ್ಬಂದಿ ಹಡಗು ಬಿಟ್ಟು ಹೊರಡುವಂತಾಗಿತ್ತು. ಈ ಘಟನೆಯನ್ನು ಖಂಡಿಸಿ ಅಮೆರಿಕ ಭಾನುವಾರ (ಜು.12) ಮುಂಜಾನೆ ಇರಾನ್ ಮೇಲೆ...

31 ವರ್ಷಗಳ ಹಳೇ ಸಾಲ ತೀರಿಸಲು 1200 ಕಿ.ಮೀ ಪ್ರಯಾಣಿಸಿದ ಕೇರಳದ ಇಸ್ಮಾಯಿಲ್

"ನನ್ನ ಕಣ್ಣುಗಳಿಂದ ಆನಂದಬಾಷ್ಪಗಳು ಉದುರಿದವು. ನನ್ನ ಮನಸ್ಸಿಗೆ ಅದೆಷ್ಟು ನೆಮ್ಮದಿ ಸಿಕ್ಕಿತೆಂದರೆ, ಅದನ್ನು ವಿವರಿಸಲು ಪದಗಳೇ ಸಾಲದು. ಆತನಿಗೂ ಅಷ್ಟೇ ದೊಡ್ಡ ಸಮಾಧಾನ." ಹೀಗೆ ಭಾವುಕರಾಗಿ ನುಡಿಯುತ್ತಾರೆ ಮೊಹಮ್ಮದ್ ಇಸ್ಮಾಯಿಲ್. 1995ರಲ್ಲಿ ಸೌದಿ...

ಬಂಡಾಯದ ಬಳಿಕ ಟಿಎಂಸಿಗೆ ಮತ್ತೊಂದು ಸವಾಲು : ಪಕ್ಷದ ಬ್ಯಾಂಕ್ ಖಾತೆಗಳು ಫ್ರೀಝ್

ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಮೂರು ಬ್ಯಾಂಕ್ ಖಾತೆಗಳಲ್ಲಿರುವ 440 ಕೋಟಿ ರೂಪಾಯಿ ಹಣವನ್ನು ಭಾಗಶಃ ಬಳಸಲು ಕಲ್ಕತ್ತಾ ಹೈಕೋರ್ಟ್ ಅನುಮತಿ ನೀಡಿದ ಮರುದಿನವೇ, ಪಶ್ಚಿಮ ಬಂಗಾಳ ಪೊಲೀಸರು...

ಮಂದಿರ ನಿರ್ಮಾಣದ ಕ್ರೆಡಿಟ್‌ಗೆ ಇದ್ದ ಯಜಮಾನಿಕೆ, ಕೊಳ್ಳೆ ಹೊಡೆದಾಗ ಯಾಕಿಲ್ಲ ಸೇವಕರೇ?

ಬಾಲರಾಮನ ಪ್ರಾಣಪ್ರತಿಷ್ಠಾಪನೆಗೆ ಮುನ್ನ ಪ್ರಧಾನಿಯವರು 11 ದಿನಗಳ ಕಾಲ ಕಠಿಣ ಉಪವಾಸ ವ್ರತ ಆಚರಿಸಿದ್ದರು, ಕೇವಲ ಎಳನೀರು ಕುಡಿದರು, ನೆಲದ ಮೇಲೆ ಮಲಗಿದರು ಎಂದು ಇಡೀ ದೇಶಕ್ಕೆ ಸಾರಲಾಗಿತ್ತು. ಅಯೋಧ್ಯೆಯಿಂದ ಹೊಸ ಕಾಲದ...

‘ಫ್ರೀ ಪ್ಯಾಲೆಸ್ತೀನ್’ ಘೋಷಣೆಯನ್ನು ತಮಾಷೆ ಮಾಡಿದ ಸೈಫ್ ಅಲಿ ಖಾನ್ – ನಿರೂಪಕಿ ಅನುಪಮಾ ಚೋಪ್ರಾ

ಸ್ಪ್ಯಾನಿಷ್ ನಟ ಜೇವಿಯರ್ ಬಾರ್ಡೆಮ್ ಅವರ "ಫ್ರೀ ಪ್ಯಾಲೆಸ್ತೀನ್" ಹೇಳಿಕೆ ಕುರಿತು ಸೈಫ್ ಅಲಿ ಖಾನ್ ಮತ್ತು ಚಲನಚಿತ್ರ ಪತ್ರಕರ್ತೆ ಅನುಪಮಾ ಚೋಪ್ರಾ ನಗುತ್ತಿರುವ ಕ್ಲಿಪ್ ಆನ್‌ಲೈನ್‌ನಲ್ಲಿ ವೈರಲ್ ಆಗಿದ್ದು, ನಟನ ಅಸೂಕ್ಷ್ಮ...

ತೆಲಂಗಾಣ : ಪೋಕ್ಸೋ ಪ್ರಕರಣದ ಆರೋಪಿಯಿಂದ ಸಂತ್ರಸ್ತೆ ಸೇರಿ 6 ಜನರ ಹತ್ಯೆ

ಪೋಕ್ಸೋ ಪ್ರಕರಣದ ಆರೋಪಿಯೊಬ್ಬ ಸಂತ್ರಸ್ತೆ ಸೇರಿದಂತೆ ಒಟ್ಟು ಆರು ಜನರನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಶಾಬಾದ್ ಮಂಡಲದಲ್ಲಿ ಶುಕ್ರವಾರ (ಜು.10) ರಾತ್ರಿ ನಡೆದಿದೆ. 28 ವರ್ಷ ವಯಸ್ಸಿನ...