Homeಕರ್ನಾಟಕ‘ನಾವು ಮನುಷ್ಯರಲ್ಲವೇ?’- ಬೆಂಗಳೂರಿನಲ್ಲಿ ಲೈಂಗಿಕ ಕಾರ್ಯಕರ್ತರ ಪ್ರತಿಭಟನೆ

‘ನಾವು ಮನುಷ್ಯರಲ್ಲವೇ?’- ಬೆಂಗಳೂರಿನಲ್ಲಿ ಲೈಂಗಿಕ ಕಾರ್ಯಕರ್ತರ ಪ್ರತಿಭಟನೆ

ಭಾರತ ಸಂವಿಧಾನದ 21 ನೇ ಪರಿಚ್ಛೇದದ ಅಡಿಯಲ್ಲಿ ಪ್ರತಿಯೊಬ್ಬ ಮಹಿಳೆಗೆ ಜೀವನೋಪಾಯವನ್ನು ಆಯ್ಕೆ ಮಾಡುವ ಹಕ್ಕಿದೆ ಎಂದು ಅವರು ಪ್ರತಿಪಾದಿಸಿದ್ದಾರೆ

- Advertisement -
- Advertisement -

ತಮ್ಮ ವಿರುದ್ಧದ ಪೊಲೀಸ್ ಹಿಂಸಾಚಾರವನ್ನು ವಿರೋಧಿಸಿ ಬೆಂಗಳೂರಿನ ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಮುಂದೆ ಮಂಗಳವಾರ ಪ್ರತಿಭಟನೆ ನಡೆಸಿದ ಲೈಂಗಿಕ ಕಾರ್ಯಕರ್ತರು, ಮಹಿಳಾ ಆಯೋಗದ ಅಧ್ಯಕ್ಷರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.

‘‘ಒಂದು ಕಡೆ ಮಹಿಳೆಯರನ್ನು ವೈಭವೀಕರಿಸಲಾಗುತ್ತಿದೆ. ಮತ್ತೊಂದೆಡೆ ಲೈಂಗಿಕ ಕಾರ್ಯಕರ್ತರನ್ನು ಪೊಲೀಸರು ಬೆಂಗಳೂರಿನ ಬೀದಿಗಳಲ್ಲಿ ಕ್ರೂರವಾಗಿ ಥಳಿಸುತ್ತಿದ್ದಾರೆ. ಲೈಂಗಿಕ ಕೆಲಸ ಅಪರಾಧ ಎಂಬ ನಂಬಿಕೆಯನ್ನು ಇಲ್ಲವಾಗಿಸುವ ಅವಶ್ಯಕತೆಯಿದೆ. ‘ಲೈಂಗಿಕ ಕೆಲಸ ಅಪರಾಧವಲ್ಲ’ ಎಂದು ಕಾನೂನು ಹೇಳುತ್ತದೆ. ಆದರೆ ಲೈಂಗಿಕ ಕಾರ್ಯಕರ್ತರನ್ನು ಅಪರಾಧೀಕರಿಸುವುದು ಮುಂದುವರಿಯುತ್ತಿದೆ. ನಾವು ಮನುಷ್ಯರಲ್ಲವೆ, ನಮಗೆ ಬದುಕುವ ಹಕ್ಕಿಲ್ಲವೆ” ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಭಾರತ ಸಂವಿಧಾನದ 21 ನೇ ಪರಿಚ್ಛೇದದ ಅಡಿಯಲ್ಲಿ ಪ್ರತಿಯೊಬ್ಬ ಮಹಿಳೆಗೆ ತನ್ನ ಜೀವನೋಪಾಯವನ್ನು ಆಯ್ಕೆ ಮಾಡುವ ಹಕ್ಕಿದೆ. ಲೈಂಗಿಕ ಕಾರ್ಯಕರ್ತ ಕೆಲಸದಲ್ಲಿರುವ ಮಹಿಳೆಯರೂ ಎಲ್ಲಾ ಕಾರ್ಮಿಕರಂತೆಯೇ. ಸುಪ್ರೀಂ ಕೋರ್ಟ್ ಪ್ರಕಾರ “ಲೈಂಗಿಕ ಕಾರ್ಯಕರ್ತರು ಅಪರಾಧಿಗಳಲ್ಲ, ಆದರೆ ಆರ್ಥಿಕ ಅವಶ್ಯಕತೆ ಮತ್ತು ಸಂದರ್ಭಗಳಿಗೆ ಬಲಿಯಾಗುತ್ತಾರೆ” ಎಂದು ಹೇಳಿದೆ. ಲೈಂಗಿಕ ಕಾರ್ಯಕರ್ತೆಯರ ಮೇಲಿನ ದೌರ್ಜನ್ಯವನ್ನು ನಿಷೇಧಿಸಿ ಕರ್ನಾಟಕ ಪೊಲೀಸ್ ಇಲಾಖೆ 2004 ರಲ್ಲಿ ಸುತ್ತೋಲೆಗಳನ್ನು ಹೊರಡಿಸಿತ್ತು ಎಂದು ಪ್ರತಿಭಟನಾಕಾರರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: ಅಕ್ರಮ ಪರಿಸರ ಲೂಟಿಗೆ ವಿರೋಧ: ಹೋರಾಟಗಾರ ಗಿರೀಶ್ ಆಚಾರ್ ಮೇಲಿನ ಹಲ್ಲೆಗೆ ತೀವ್ರ ಖಂಡನೆ

ಕಳೆದ ಎರಡು ವರ್ಷಗಳಲ್ಲಿ, ಲೈಂಗಿಕ ಕಾರ್ಯಕರ್ತೆಯರ ವಿರುದ್ಧ ದೈಹಿಕ ಮತ್ತು ಮಾನಸಿಕ ಹಿಂಸೆ ಹೆಚ್ಚುತ್ತಿದೆ. ಲೈಂಗಿಕ ಕಾರ್ಯಕರ್ತೆಯರೊಂದಿಗೆ ಕೆಲಸ ಮಾಡುವ ಸಾಮಾಜಿಕ ಕಾರ್ಯಕರ್ತರನ್ನು ಸಹ ಗುರಿಯಾಗಿಸಲಾಗುತ್ತಿದ್ದು, ತೀವ್ರ ಪೊಲೀಸ್ ಹಿಂಸಾಚಾರ ನಡೆಸಿ, ಸಾರ್ವಜನಿಕವಾಗಿ ಅವಮಾನಿಸಲಾಗುತ್ತಿದೆ. ಆದರೆ ಪೊಲೀಸ್ ಅಧಿಕಾರಿಗಳ ವಿರುದ್ಧ ಯಾವುದೇ ದೂರು ದಾಖಲಾಗಿಲ್ಲ ಮತ್ತು ಹಿಂಸಾಚಾರ ನಿತಂತರವಾಗಿ ಮುಂದುವರಿಯುತ್ತಿದೆ ಎಂದು ಪತ್ರಿಕಾ ಹೇಳಿಕೆ ತಿಳಿಸಿದೆ.

ಪ್ರತಿಭಟನೆ ನಡೆಸಿದ ಲೈಂಗಿಕ ಕಾರ್ಯಕರ್ತೆಯರು, “ಲೈಂಗಿಕ ಕಾರ್ಯಕರ್ತೆಯರು ಮಹಿಳೆಯರಲ್ಲವೇ?
ಲೈಂಗಿಕ ಕಾರ್ಯಕರ್ತರು ಮನುಷ್ಯರಲ್ಲವೇ? ಲೈಂಗಿಕ ಕೆಲಸ ಕಾನೂನುಬಾಹಿರವಲ್ಲದಿದ್ದಾಗ, ಲೈಂಗಿಕ ಕಾರ್ಯಕರ್ತರನ್ನ ಮೇಲೆ ಪ್ರತಿದಿನ ಪೊಲೀಸರು ಏಕೆ ಹಲ್ಲೆ ಮಾಡುತ್ತಾರೆ? ಲೈಂಗಿಕ ಕಾರ್ಯಕರ್ತರಿಗೆ ಜೀವನೋಪಾಯವನ್ನು ಗಳಿಸುವ ಹಕ್ಕಿಲ್ಲವೇ? ಲೈಂಗಿಕ ವೃತ್ತಿಯನ್ನು ಆಯ್ದುಕೊಳ್ಳುವಂತಹ ಪರಿಸ್ಥಿತಿಗೆ ದೂಡುವ ಸಾಮಾಜಿಕ ವ್ಯವಸ್ಥೆ ಹಾಗೂ ಅದನ್ನು ಪರಿಹರಿಸದ ರಾಜ್ಯದ ರಾಜಕೀಯ ವ್ಯವಸ್ಥೆಗೆ, ಲೈಂಗಿಕ ಕಾರ್ಯಕರ್ತೆಯರ ಜೀವನೋಪಾಯವನ್ನು ನಿರಾಕರಿಸಲು ಯಾವ ಹಕ್ಕಿದೆ?” ಎಂದು ಪ್ರಶ್ನಿಸಿದ್ದಾರೆ.

ಪ್ರತಿಭಟನೆಯಲ್ಲಿ ಮಾತನಾಡಿದ ಸಾಧನಾ ಮಹಿಳಾ ಸಂಘದ ಕಾರ್ಯದರ್ಶಿ ಗೀತಾ, “ಸಾರ್ವಜನಿಕವಾಗಿಯೆ ಪೊಲೀಸರು ಬೀದಿಗಳಲ್ಲಿ ದೌರ್ಜನ್ಯವನ್ನು ಎಸಗುತ್ತಾರೆ. ಲೈಂಗಿಕ ಕಾಯಕರ್ತೆಯರು ಮಹಿಳೆಯರಲ್ಲವೆ? ಅವರನ್ನು ಮನುಷ್ಯರಂತೆ ಪರಿಗಣಿಸಿ, ಅವರಿಗೂ ಹಕ್ಕುಗಳಿವೆ” ಎಂದು ಹೇಳಿದ್ದಾರೆ.

ಇದನ್ನೂ ಓದಿ: ಸಿಡಿ ಪ್ರಕರಣ: ಸಿಡಿ ನಕಲಿ, ನಾನು ನಿರಪರಾಧಿ ಎಂದು ರಮೇಶ್ ಜಾರಕಿಹೊಳಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

2023ರಲ್ಲಿ ತೀವ್ರ ಹಸಿವಿನಿಂದ ತತ್ತರಿಸಿದ 282 ಮಿಲಿಯನ್ ಜನರು: ಆಹಾರದ ಅಭಾವಕ್ಕೆ ವಿಶ್ವಸಂಸ್ಥೆ ಉಲ್ಲೇಖಿಸಿದ...

0
ಕಳೆದ ವರ್ಷ ಪ್ರಪಂಚದಾದ್ಯಂತ ಆಹಾರ ಅಭದ್ರತೆ ಸ್ಥಿತಿ ಭಾರೀ ಹದಗೆಟ್ಟಿದೆ, 2023ರಲ್ಲಿ ಸುಮಾರು 282 ಮಿಲಿಯನ್ ಜನರು ತೀವ್ರ ಹಸಿವಿನಿಂದ ಬಳಲಿದ್ದಾರೆ, ಇದರಲ್ಲಿ ವಿಶೇಷವಾಗಿ ಯುದ್ಧಪೀಡಿತ ಗಾಝಾ ಮತ್ತು ಸುಡಾನ್‌ನಲ್ಲಿ ಹೆಚ್ಚಿನ ಜನರು...