Homeಮುಖಪುಟಲೈಂಗಿಕ ಕಿರುಕುಳ: ಉತ್ತರಪ್ರದೇಶದ ಬಿಜೆಪಿ ಬೂತ್ ಕಮಿಟಿ ಅಧ್ಯಕ್ಷನ ಬಂಧನ!

ಲೈಂಗಿಕ ಕಿರುಕುಳ: ಉತ್ತರಪ್ರದೇಶದ ಬಿಜೆಪಿ ಬೂತ್ ಕಮಿಟಿ ಅಧ್ಯಕ್ಷನ ಬಂಧನ!

ಘಟನೆಯ ನಂತರ ಸಹಸ್ವಾನ್‌ನ ಬಿಜೆಪಿ ಬೂತ್ ಕಮಿಟಿ ಅಧ್ಯಕ್ಷ ವಿಪಿನ್ ಮಾಲಿ ಪರಾರಿಯಾಗಿದ್ದ. ಆದರೆ ಭಾನುವಾರ ರಾತ್ರಿ ಅವನನ್ನು ಪೊಲೀಸರು ಬಂಧಿಸಿದ್ದಾರೆ.

- Advertisement -
- Advertisement -

ಲೈಂಗಿಕ ಕಿರುಕುಳ ನೀಡಲು ಯತ್ನಿಸಿದ್ದಾನೆಂದು ಮಹಿಳೆಯೊಬ್ಬರು ದೂರು ದಾಖಲಿಸಿದ ನಂತರ ಉತ್ತರಪ್ರದೇಶದ ಬದಾನ್‌ನಲ್ಲಿ ಸ್ಥಳೀಯ ಬಿಜೆಪಿ ಬೂತ್ ಕಮಿಟಿ ಅಧ್ಯಕ್ಷನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಹಿಳೆಯ ದೂರಿನ ನಂತರ, ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 354 (ಮಹಿಳೆಯ ಮೇಲೆ ಹಲ್ಲೆ ಅಥವಾ ಕ್ರಿಮಿನಲ್ ಫೋರ್ಸ್) ಅಡಿಯಲ್ಲಿ ಸಹಸ್ವಾನ್‌ನ ಬೂತ್ ಕಮಿಟಿ ಅಧ್ಯಕ್ಷ ಮತ್ತು ಬಿಜೆಪಿ ಕಾರ್ಯಕರ್ತನಾದ ವಿಪಿನ್ ಮಾಲಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಘಟನೆಯ ನಂತರ ಆತ ಪರಾರಿಯಾಗಿದ್ದ. ಆದರೆ ಭಾನುವಾರ ರಾತ್ರಿ ಅವನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ವಿಪಿನ್ ಮಾಲಿಯನ್ನು ಸೋಮವಾರ ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: BJP ಮುಖಂಡನ ವಿರುದ್ಧ ಲೈಂಗಿಕ ದೌರ್ಜನ್ಯ ದೂರು; ಮಾರಕಾಸ್ತ್ರಗಳಿಂದ JDS ಕಾರ್ಯಕರ್ತರ ಮೇಲೆ ಹಲ್ಲೆ

ಮೂರು ದಿನಗಳ ಹಿಂದೆ ಮಹಿಳೆ ನೀಡಿದ ದೂರು ನೀಡಿದ ನಂತರ ವಿಪಿನ್ ಮಾಲಿ ತಲೆಮರೆಸಿಕೊಂಡಿದ್ದನ್ನು ಎಂದು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

ತನಿಖೆಯ ನಂತರ ಮಾಲಿ ವಿರುದ್ಧ ಐಪಿಸಿಯ ಸೆಕ್ಷನ್ 354 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಸಹಸ್ವಾನ್ ಠಾಣಾಧಿಕಾರಿ ರಾಜೀವ್ ಶರ್ಮಾ ತಿಳಿಸಿದ್ದಾರೆ.

ಇದನ್ನೂ ಓದಿ: ಮಹಾರಾಣಿ ಕಾಲೇಜು: ಲೈಂಗಿಕ ಕಿರುಕುಳ ನಡೆಸಿದ ಆರೋಪಿಯ ಪರ ಬಿಜೆಪಿ ಶಾಸಕ ನಾಗೇಂದ್ರ ವಕಾಲತ್ತು..

ಏತನ್ಮಧ್ಯೆ, ಬದಾನ್‌ನ ಬಿಜೆಪಿ ಅಧ್ಯಕ್ಷ ಅಶೋಕ್ ಭಾರ್ತಿಯಾ ಇದನ್ನು ಸಂಚು ಎಂದು ಕರೆದಿದ್ದು, “ವಿಪಿನ್ ಮಾಲಿ ಹೂಮಾಲೆಯನ್ನು ತರಲು ಶಹವಾಜಪುರ್‌ಗೆ ಹೋಗಿದ್ದಾಗ ಕೆಲವು ಜನರ ಪಿತೂರಿಯಿಂದ ಸಿಕ್ಕಿಬಿದ್ದಿದ್ದಾನೆ. ನ್ಯಾಯಾಂಗದ ಮೇಲೆ ತನಗೆ ಸಂಪೂರ್ಣ ನಂಬಿಕೆ ಇದೆ” ಎಂದು ಹೇಳಿದರು.

ವಿಪಿನ್ ಮಾಲಿ ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದಕ್ಕಾಗಿ ಈ ಹಿಂದೆ ಸಾಮಾಜಿಕ ಮಾಧ್ಯಮಗಳಲ್ಲಿ ಕುಖ್ಯಾತಿ ಪಡೆದಿದ್ದರು.


ಇದನ್ನೂ ಓದಿ: ಕೊರೊನಾ ವಾರ್ಡ್‌ನಲ್ಲಿಯೂ ವೈದ್ಯನಿಂದ ಲೈಂಗಿಕ ಕಿರುಕುಳ: ದೂರು ದಾಖಲು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರತ್ಯೇಕ ರಾಜ್ಯದ ಬೇಡಿಕೆ: ನಾಗಾಲ್ಯಾಂಡ್‌ನ 6 ಜಿಲ್ಲೆಗಳಲ್ಲಿ ಶೂನ್ಯ ಮತದಾನ

0
ನಾಗಾಲ್ಯಾಂಡ್‌ನ ಏಕೈಕ ಲೋಕಸಭಾ ಸ್ಥಾನಕ್ಕೆ ಶುಕ್ರವಾರ ಒಂದೇ ಹಂತದಲ್ಲಿ ಮತದಾನ ನಡೆದಿದೆ. ಆದರೆ, ಈಶಾನ್ಯ ರಾಜ್ಯದ ಆರು ಜಿಲ್ಲೆಗಳಲ್ಲಿ ಪ್ರತ್ಯೇಕ ರಾಜ್ಯದ ಬೇಡಿಕೆ ಮುಂದಿಟ್ಟುಕೊಂಡು ಜನರು ಮತದಾನದಿಂದ ದೂರ ಉಳಿದಿದ್ದಾರೆ ಎಂದು 'ಇಂಡಿಯಾ...