ಕೊರೋನಾ ಎರಡೆನೇ ಅಲೆಯಿಂದ ಉದ್ಭವಿಸುತ್ತಿರುವ ತೀವ್ರ ಆರೋಗ್ಯ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಶೀಘ್ರ ಸಂಸತ್ ಅಧಿಬೇಶನ ಕರೆದು ಉಂಟಾಗಿರುವ ಅಸ್ತವ್ಯಸ್ತತೆಯನ್ನು ಸರಿಪಡಿಸಲು ನಯತ್ನಿಸಬೇಕು ಎಂದು ಶಿವಸೇನೆ ನಾಯಕ ಸಂಜಯ ರಾವತ್ ಆಗ್ರಹಿಸಿದ್ದಾರೆ. ದೇಶವು ಕಳೆದ 24 ಗಂಟೆಗಳಲ್ಲಿ 2.73 ಲಕ್ಷ ಹೊಸ ಸೋಂಕುಗಳ ಅತಿದೊಡ್ಡ ಏರಿಕೆ ಮತ್ತು 1,619 ಸಾವುನೋವುಗಳನ್ನು ಕಂಡಿದೆ ಎಂಬುದನ್ನು ಅವರು ಉಲ್ಲೇಖಿಸಿದ್ದಾರೆ.
“ಇದು ಭೀಕರ ಯುದ್ಧದಂತಹ ಪರಿಸ್ಥಿತಿಯಾಗಿದೆ. ಎಲ್ಲೆಡೆ ಅತ್ಯಂತ ಗೊಂದಲ ಮತ್ತು ಉದ್ವಿಗ್ನತೆ ಉಂಟಾಗಿದೆ. ಹಾಸಿಗೆಗಳಿಲ್ಲ, ಆಮ್ಲಜನಕವಿಲ್ಲ ಮತ್ತು ವ್ಯಾಕ್ಸಿನೇಷನ್ ಇಲ್ಲ. ಇದು ಒಟ್ಟು ಅಸ್ತವ್ಯಸ್ತತೆ ವಿನಃ ಬೇರೆನೂ ಅಲ್ಲ! ಈ ಬಿಕ್ಕಟ್ಟು ಕುರಿತು ಚರ್ಚಿಸಲು ಕನಿಷ್ಠ 2 ದಿನಗಳ ಕಾಲ ಸಂಸತ್ತಿನ ಅಧಿವೇಶನವನ್ನು ಕರೆಯಬೇಕು ಎಂದು ಶಿವಸೇನೆಯ ಸಂಸದ ಸಂಜಯ ರಾವತ್ ಟ್ವೀಟ್ ಮಾಡಿದ್ದಾರೆ.
ಕೊರೊನಾ ಉಲ್ಬಣಗೊಳ್ಳುವಿಕೆಯ ನಡುವೆ ಮಹಾರಾಷ್ಟ್ರ ಸೇರಿದಂತೆ ವಿವಿಧ ರಾಜ್ಯಗಲ್ಲಿ ಆಮ್ಲಜನಕ ಸಿಲಿಂಡರ್‌ಗಳು, ಹಾಸಿಗೆಗಳು, ಔಷಧಗಳು ಮತ್ತು ಮಾನವಶಕ್ತಿಯ ತೀವ್ರ ಕೊರತೆಯ ವರದಿಗಳನ್ನು ಅವರು ಉಲ್ಲೇಖಿಸಿದ್ದಾರೆ.
ಈ ವಿಷಯದ ಬಗ್ಗೆ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಕಳೆದ ವಾರ ಪ್ರಧಾನಿ ನರೇಂದ್ರ ಮೋದಿಯವರನ್ನು ಸಂಪರ್ಕಿಸಲು ಯತ್ನಿಸಿದ್ದರು. ಆದರೆ ಅವರು ಪಶ್ಚಿಮ ಬಂಗಾಳದಲ್ಲಿ ಪ್ರಚಾರದಲ್ಲಿ ನಿರತರಾಗಿದ್ದಾರೆಂದು ಪಿಎಂಒ ಹೇಳಿದ್ದು ರಾಜಕೀಯ ವಿವಾದಕ್ಕೆ ನಾಂದಿ ಹಾಡಿದೆ.
ನಂತರ ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷ್ ವರ್ಧನ್ ಸೇರಿದಂತೆ ಹಲವಾರು ಕೇಂದ್ರ ನಾಯಕರು ಠಾಕ್ರೆ ಅವರಿಗೆ ರಾಜ್ಯಕ್ಕೆ ಸಾಕಷ್ಟು ಔಷಧಿ ಮತ್ತು ಆಮ್ಲಜನಕವನ್ನು ಪೂರೈಸುವ ಭರವಸೆ ನೀಡಿದರು.
ಇದನ್ನೂ ಓದಿ: ಕೋವಿಡ್ ಬಿಕ್ಕಟ್ಟಿಗೆ ಪ್ರಧಾನಿಯೇ ಕಾರಣ: ‘ಮೋದಿ ರಾಜೀನಾಮೆ ನೀಡಿ’ ಟ್ವಿಟರ್ ಟ್ರೆಂಡಿಂಗ್


