ದೇಶದಲ್ಲಿ ಕೋವಿಡ್ ಎರಡನೇ ಅಲೆ ಅಪ್ಪಳಿಸಿದೆ. ಪ್ರತಿದಿನ ಹತ್ತಿರತ್ತಿರ ಮೂರು ಲಕ್ಷದಷ್ಟು ಪ್ರಕರಣಗಳು ದಾಖಲಾಗುತ್ತಿವೆ. ಆಸ್ಪತ್ರೆಗಳಲ್ಲಿ ಬೆಡ್ ಸಿಗದೆ, ಆಮ್ಲಜನಕವಿಲ್ಲದೇ ಸಾವಿರಾರು ಜನರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ರಾಜ್ಯಗಳು ಚಿಕಿತ್ಸೆಗೆ ರೆಮ್‌ಡಿಸಿವಿರ್ ಔಷಧಿಯಿಲ್ಲ, ಲಸಿಕೆ ಇಲ್ಲ ಎಂದು ದೂರುತ್ತಿವೆ. ಆದರೆ ನರೇಂದ್ರ ಮೋದಿ ಮಾತ್ರ ಪಶ್ಚಿಮ ಬಂಗಾಳ ಚುನಾವಣಾ ಪ್ರಚಾರದಲ್ಲಿ ನಿರತರಾಗಿದ್ದಾರೆ. ದೇಶದಲ್ಲಿನ ಅಲ್ಲೋಲಕಲ್ಲೋಲಕ್ಕೆ ಅವರ ಅಸಾಮರ್ಥ್ಯವೇ ಕಾರಣವಾಗಿದ್ದು ಮೋದಿ ಕೂಡಲೇ ರಾಜೀನಾಮೆ ಕೊಡಬೇಕೆಂದು ಕೂಗು ಟ್ವಿಟರ್‌ನಲ್ಲಿ ಜೋರಾಗಿ ಕೇಳಿಬಂದಿದೆ.

#ResignModi (‘ಮೋದಿ ರಾಜೀನಾಮೆ ನೀಡಿ’) ಎಂಬ ಹ್ಯಾಷ್‌ಟ್ಯಾಗ್‌ ಟ್ವಿಟರ್‌ನಲ್ಲಿ ನಂ 1 ಸ್ಥಾನದಲ್ಲಿ‌ ಟ್ರೆಂಡಿಂಗ್‌ ಆಗುತ್ತಿದೆ. ನೆಟ್ಟಿಗರು ಪ್ರಧಾನ ಮಂತ್ರಿ ನರೇಂದ್ರ ಮೋದಿಯವನ್ನು ತರಾಟೆಗೆ ತೆಗೆದುಕೊಂಡಿದ್ದು, ದುರ್ಬಲ ಆಡಳಿತದ ವಿರುದ್ಧ ಕಿಡಿಕಾರಿದ್ದಾರೆ.

ಗಗನಕ್ಕೇರುತ್ತಿರುವ ಕೋವಿಡ್ -19 ಪ್ರಕರಣಗಳಿಗೆ ಪ್ರಧಾನಿ ನರೇಂದ್ರ ಮೋದಿ ಕಾರಣರಾಗಿದ್ದಾರೆ. ಅವನು ಜವಾಬ್ದಾರಿಯುತ ಸ್ಥಾನದಲ್ಲಿದ್ದರು ಅವರ ಬಳಿ ಯಾವುದೇ ಯೋಜನೆ ಇಲ್ಲ, ಆಡಳಿತಾತ್ಮಕ ಸಾಮರ್ಥ್ಯಗಳಿಲ್ಲ. ಅವರು ಮುಂದಾಲೋಚನೆ ಮಾಡಲಿಲ್ಲ ಮತ್ತು ಯಾರಿಗೂ ಹಾಗೆ ಮಾಡಲು ಅವರು ಅವಕಾಶ ನೀಡಲಿಲ್ಲ. ಸಂಪೂರ್ಣ ಅಸಮರ್ಥ ವ್ಯಕ್ತಿಯಾದ ಅವರು ರಾಜೀನಾಮೆ ನೀಡಬೆಕು ಎಂದು ಮಮತಾ ಬ್ಯಾನರ್ಜಿ ಆಗ್ರಹಿಸಿದ್ದಾರೆ.

ಮೋದಿಯವರ ದುರ್ಬಲ ಆಡಳಿತದಿಂದ ಸಾರ್ವಜನಿಕ ಆರೋಗ್ಯ ಬಿಕ್ಕಟ್ಟು ಉಂಟಾಗಿದೆ. ಸಾವಿರಾರು ಜನರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಆದರೆ ಮೋದಿ ಮಾತ್ರ ಬೃಹತ್ ಸಂಖ್ಯೆಯಲ್ಲಿ ಜನರನ್ನು ಸೇರಿಸಿ ಬಂಗಾಳದಲ್ಲಿ ಚುನಾವಣಾ ಪ್ರಚಾರ ಮಾಡುತ್ತಿದ್ದಾರೆ. ಇಂದಿನ ಕೋವಿಡ್‌ ಸಾವುಗಳಿಗೆ ಅವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ನಿನ್ನೆ ತಮಿಳುನಾಡಿನ ವಿಸಿಕೆ ಪಕ್ಷದ ಅಧ್ಯಕ್ಷ ತೋಲ್ ತಿರುಮಾವಲವನ್‌ ಒತ್ತಾಯಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಸಾಮಾಜಿಕ ಕಾರ್ಯಕರ್ತೆ ಮತ್ತು ಲೇಖಕಿ ಮೀನಾ ಕಂದಸ್ವಾಮಿ ಟ್ವೀಟ್ ಮಾಡಿ “ತಮಿಳುನಾಡಿನಲ್ಲಿ ಆರಂಭವಾದರೆ ಅದು ರಾಷ್ಟ್ರಕ್ಕೆ ವ್ಯಾಪಿಸುತ್ತದೆ. ಈ ಪ್ರಧಾನಿ ಮುಂದುವರಿದರೆ, ನಮ್ಮ ರಾಷ್ಟ್ರವು ಕೆಟ್ಟ ದುಃಸ್ವಪ್ನಗಳನ್ನು ಮೀರಿ ವಿಪತ್ತಿನಲ್ಲಿ ಮುಳುಗುತ್ತದೆ” ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

“ಇಂದಿನ ತೀವ್ರ ಬಿಕ್ಕಟ್ಟಿಗೆ ಮೋದಿ ರಾಜೀನಾಮೆ ನೀಡಿ ಎಂದು ಕೇಳುವುದು ಸರಿಯಾದ ಪ್ರತಿಕ್ರಿಯೆಯಾಗಿದೆ. ನರೇಂದ್ರ ಮೋದಿಯವರು ಕೋವಿಡ್ ಬಿಕ್ಕಟ್ಟು ಮುಗಿದಿದೆ ಎಂದು ನಂಬಿ ನಮ್ಮ ಲಸಿಕೆಗಳನ್ನು ವಿದೇಶಗಳಿಗೆ ರಫ್ತು ಮಾಡುತ್ತಿದ್ದಾರೆ. ಯುದ್ದೋಪಾದಿಯಲ್ಲಿ ಆಮ್ಲಜನಕ, ಔಷಧಿಗಳು ಮತ್ತು ಐಸಿಯುಗಳನ್ನು ಸಜ್ಜುಗೊಳಿಸಿಕೊಂಡು ಎರಡನೇ ಅಲೆಗೆ ಅವರು ಸಿದ್ದತೆ ನಡೆಸಿರಲಿಲ್ಲ” ಎಂದು ಪತ್ರಕರ್ತ ಶಿವಂ ವಿಜ್ ಟ್ವೀಟ್‌ ಮಾಡಿದ್ದಾರೆ.

ಟ್ವಿಟರ್‌ನಲ್ಲಿ ಗಮನಸೆಳದ ಇತರ ಟ್ವೀಟ್‌ಗಳು ಕೆಳಗಿನಂತಿವೆ.

#ResignModi ಟ್ವಿಟರ್‌ನಲ್ಲಿ ಟ್ರೆಂಡ್‌ ಆಗುತ್ತಲೆ, ಮೋದಿ ಪರವಾಗಿಯೂ ಕೆಲವರು ಟ್ವೀಟ್ ಮಾಡಲು ಆಂರಭಿಸಿ #Nation_With_Modi ಎಂಬ ಹ್ಯಾಷ್‌ಟ್ಯಾಗ್‌ ಅನ್ನು ಟ್ರೆಂಡ್ ಮಾಡಿದ್ದಾರೆ.


ಇದನ್ನೂ ಓದಿ: ಬಂಗಾಳ ಚುನಾವಣಾ ಪ್ರಚಾರದಲ್ಲಿ ಮಮತಾ ಬ್ಯಾನರ್ಜಿ ಭಾಗವಹಿಸುವುದಿಲ್ಲ: ಡೆರೆಕ್ ಒ’ಬ್ರಿಯೆನ್

 

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
+ posts

2 COMMENTS

  1. ಓರ್ವ ದುರ್ಬಲ ಪ್ರಧಾನಿ. ಕೋವಿಡ್ ಲಸಿಕೆಯನ್ನು ಉಚಿತವಾಗಿ ರಾಜ್ಯಗಳಿಗೆ ಕೊಡಬೇಕಿತ್ತು. ಆದ್ರೆ ಅದರಲ್ಲೂ ವ್ಯಾಪಾರದೃಷ್ಟಿ.

LEAVE A REPLY

Please enter your comment!
Please enter your name here