Homeಕರೋನಾ ತಲ್ಲಣಕೊರೊನಾ ಉಲ್ಬಣ: ದೆಹಲಿಯಲ್ಲಿ ಇಂದಿನಿಂದ ಒಂದು ವಾರ ಕರ್ಫ್ಯೂ

ಕೊರೊನಾ ಉಲ್ಬಣ: ದೆಹಲಿಯಲ್ಲಿ ಇಂದಿನಿಂದ ಒಂದು ವಾರ ಕರ್ಫ್ಯೂ

- Advertisement -
- Advertisement -

ಕೊರೊನಾ ಪ್ರಕರಣ ತೀವ್ರವಾಗಿ ಏರುತ್ತಿರುವ ಮಧ್ಯೆ ದೆಹಲಿ ಸರ್ಕಾರವು ಸೋಮವಾರ(ಇಂದು) ರಾತ್ರಿಯಿಂದ ಮುಂದಿನ ಸೋಮವಾರದವರೆಗೂ ಒಂದು ವಾರ ಪೂರ್ತಿ ಕರ್ಫ್ಯೂಗೆ ಒಳಗಾಗಳಿದೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.

ಸೋಮವಾರ ಬೆಳಿಗ್ಗೆ, ದೆಹಲಿ ಸರ್ಕಾರವು ಎರಡು ತಂಡಗಳ ಅಧಿಕಾರಿಗಳನ್ನು ನಿಯೋಜಿಸಿ, ರಾಜ್ಯದಲ್ಲಿ ತೀವ್ರ ರೀತಿಯಲ್ಲಿ ಕೊರೊನಾ ಏರಿಕೆಯ ನಂತರ ಆಕ್ಸಿಜನ್‌ ಸಂಗ್ರಹ, ಸರಬರಾಜು ಹಾಗೂ ರೆಮ್‌ಡೆಸಿವಿರ್‌ ಔಷಧದ ಕೊರತೆಯನ್ನು ಮೇಲ್ವಿಚಾರಣೆ ಮಾಡಿದೆ.

ಇದನ್ನೂ ಓದಿ: ದೆಹಲಿಗೆ ಮೀಸಲಿದ್ದ ಆಕ್ಸಿಜನ್ ಕೊಡದೇ ಕೇಂದ್ರ ವಂಚಿಸುತ್ತಿದೆ: ಕೇಜ್ರಿವಾಲ್ ಹೇಳಿಕೆ

ದೆಹಲಿಯಲ್ಲಿ ಭಾನುವಾರ ಒಂದೆ ದಿನ 25,462 ಹೊಸ ಕೊರೊನಾ ಪ್ರಕರಣಗಲು ದಾಖಲಾಗಿದೆ. ಹೆಚ್ಚುತ್ತಿರುವ ಪ್ರಕರಣಗಳು ದೆಹಲಿಯ ಆರೋಗ್ಯ ಮೂಲಸೌಕರ್ಯಗಳ ಮೇಲೆ ಭಾರಿ ಒತ್ತಡವನ್ನು ಬೀರುತ್ತಿವೆ ಎಂದು ಕೇಜ್ರಿವಾಲ್ ಹೇಳಿದ್ದರು.

ಈ ಹಿಂದೆ, ಮುಖ್ಯಮಂತ್ರಿ ಕೇಜ್ರಿವಾಲ್ ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಅವರಿಗೆ ಪತ್ರ ಬರೆದಿದ್ದು, ಕೇಂದ್ರ ಸರ್ಕಾರಿ ಆಸ್ಪತ್ರೆಗಳಲ್ಲಿ ಹಾಸಿಗೆಯ ಸಾಮರ್ಥ್ಯವನ್ನು ಹೆಚ್ಚಿಸಲು ಮತ್ತು ವೈದ್ಯಕೀಯ ಆಕ್ಸಿಜನ್‌‌ನ “ತಡೆರಹಿತ” ಪೂರೈಕೆಯನ್ನು ಖಚಿತಪಡಿಸಿಕೊಳ್ಳುವಂತೆ ಒತ್ತಾಯಿಸಿದ್ದರು.

“ದೆಹಲಿಯಲ್ಲಿ ಕೊರೊನಾ ಪರಿಸ್ಥಿತಿ ತುಂಬಾ ಗಂಭೀರವಾಗಿದೆ. ಹಾಸಿಗೆಗಳು ಮತ್ತು ಆಕ್ಸಿಜನ್‌ನ ಕೊರತೆಯಿದೆ. ದೆಹಲಿಯ ಕೇಂದ್ರ ಸರ್ಕಾರಿ ಆಸ್ಪತ್ರೆಗಳಲ್ಲಿನ 10,000 ಹಾಸಿಗೆಗಳಲ್ಲಿ ಕನಿಷ್ಠ 7,000 ಕೊರೊನಾ ರೋಗಿಗಳಿಗೆ ಮೀಸಲಿಡಬೇಕು. ತಕ್ಷಣ ದೆಹಲಿಯಲ್ಲಿ ಆಕ್ಸಿಜನ್‌ ಒದಗಿಸಬೇಕೆಂದು ನಾನು ವಿನಂತಿಸುತ್ತೇನೆ” ಎಂದು ಅವರು ಪ್ರಧಾನ ಮಂತ್ರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: ಫ್ಯಾಕ್ಟ್‌ಚೆಕ್: ಕೊರೊನಾ ಸಮಯದಲ್ಲಿ ಕುಂಭಮೇಳಕ್ಕೆ ಆಕ್ಷೇಪ; ಪತ್ರಕರ್ತೆಯ ಇರಿದು ಕೊಲೆ ಎಂಬುದು ಸುಳ್ಳು

ವಿಡಿಯೊ ನೋಡಿ: ಸಭಾ ಮರ್ಯಾದೆ ಉಲ್ಲಂಘಿಸಿದ ಸುವರ್ಣ ನ್ಯೂಸ್ ಪತ್ರಕರ್ತೆ. ರೈತರಿಂದ ಗೋದಿ ಮೀಡಿಯಾ ಎಂದು ಛೀಮಾರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಹಾಸನ ಪೆನ್‌ಡ್ರೈವ್ ಪ್ರಕರಣ: ಎಸ್‌ಐಟಿ ರಚಿಸಲು ಕೋರಿ ಮಹಿಳಾ ಆಯೋಗದಿಂದ ಸಿಎಂಗೆ ಪತ್ರ

0
ಹಾಸನ ಜಿಲ್ಲೆಯಲ್ಲಿ ಹರಿದಾಡುತ್ತಿರುವ ಪೆನ್‌ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗೆ ವಿಶೇಷ ತಂಡ ರಚನೆ ಮಾಡುವಂತೆ ಕೋರಿ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌದರಿ ಅವರು ಸಿಎಂ ಸಿದ್ದರಾಮಯ್ಯ, ಗೃಹ ಸಚಿವ...