Homeಮುಖಪುಟಕೊರೋನಾ ತೀವ್ರತೆ, ಲಾಕ್‌ಡೌನ್ ಭೀತಿ: ಸೆನ್ಸೆಕ್ಸ್, ರೂಪಾಯಿ ಮೌಲ್ಯ ಕುಸಿತ

ಕೊರೋನಾ ತೀವ್ರತೆ, ಲಾಕ್‌ಡೌನ್ ಭೀತಿ: ಸೆನ್ಸೆಕ್ಸ್, ರೂಪಾಯಿ ಮೌಲ್ಯ ಕುಸಿತ

- Advertisement -
- Advertisement -

ವಾರಾಂತ್ಯದಲ್ಲಿ ಕೋವಿಡ್ ಪ್ರಕರಣಗಳ ಹೆಚ್ಚಳದಿಂದಾಗಿ ಬಿಎಸ್‌ಇನಲ್ಲಿ (ಬಾಂಬೆ ಸ್ಟಾಕ್ ಎಕ್ಸ್‌ಚೆಂಜ್‌) ಸೆನ್ಸೆಕ್ಸ್ ಸೋಮವಾರ ಸತತ ಮೂರನೇ ವಾರ 1,000 ಪಾಯಿಂಟ್‌ಗಳಷ್ಟು ಕುಸಿದಿದೆ. ಕೋವಿಡ್ ಸಂಖ್ಯೆಗಳು ವಾರಾಂತ್ಯದಲ್ಲಿ ಅಬಾಧಿತವಾಗಿ ಏರಿಕೆಯಾಗಿದ್ದು, ಭಾನುವಾರ ಸಾರ್ವಕಾಲಿಕ ಗರಿಷ್ಠ 2.6 ಲಕ್ಷ ಪ್ರಕರಣಗಳನ್ನು ಮುಟ್ಟಿದ ನಂತರ, ಸೆನ್ಸೆಕ್ಸ್ 1,470 ಪಾಯಿಂಟ್ ಅಥವಾ ಶೇಕಡಾ 3ರಷ್ಟು ಇಳಿಕೆಯಾಗಿ 47,362 ಕ್ಕೆ ತಲುಪಿದೆ. ಜೊತೆಗೆ ಡಾಲರ್ ಎದುರು ರೂಪಾಯಿ ಮೌಲ್ಯವೂ ಕುಸಿತ ಕಂಡಿದೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್‌ ವರದಿ ಮಾಡಿದೆ.

ಈ ಪ್ರಕ್ರಿಯೆಯನ್ನು ‘ಮಂಡೇ ಬ್ಲೂಸ್’ ಎನ್ನುತ್ತಾರೆ. ವಾರಾಂತ್ಯದ ಅಹಿತಕರ ಬೆಳವಣಿಗೆಗಳು ಸೋಮವಾರ ಮುಂಜಾನೆ ಶೇರು ಮಾರುಕಟ್ಟೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸನ್ನಿವೇಶ ಇದಾಗಿದೆ.

ಸೋಮವಾರದ ಆರಂಭಿಕ ವಹಿವಾಟಿನ ವೇಳೆಯಲ್ಲಿ ರೂಪಾಯಿ ಸಹ ಡಾಲರ್ ಎದುರು 47 ಪೈಸೆ ಅಥವಾ ಶೇ. 0.63 ರಷ್ಟು ತೀವ್ರವಾಗಿ ಕುಸಿದು 74.82 ಕ್ಕೆ ವಹಿವಾಟು ನಡೆಸಿತು.
ಭಾರತದಲ್ಲಿ ಕೋವಿಡ್ ಪ್ರಕರಣಗಳ ತೀವ್ರ ಏರಿಕೆ ಕಳೆದ ಎರಡು ವಾರಗಳಲ್ಲಿ ಪ್ರಮುಖ ಕಳವಳವಾಗಿದೆ. ಹೊಸ ಕೋವಿಡ್ ಪ್ರಕರಣಗಳು ಏಪ್ರಿಲ್ 4 ರಂದು (ಭಾನುವಾರ) ಸುಮಾರು 1 ಲಕ್ಷವಾಗಿದ್ದರೆ, ಏಪ್ರಿಲ್ 11 ರಂದು (ಭಾನುವಾರ) ಇದು ಸುಮಾರು 1.7 ಲಕ್ಷಕ್ಕೆ ಏರಿತು ಮತ್ತು ಇದು ನಿನ್ನೆ ಭಾನುವಾರ ಹೊಸ ಗರಿಷ್ಠ 2.6 ಲಕ್ಷಕ್ಕೆ ತಲುಪಿದೆ.

ಭಾರತದಲ್ಲಿ, ಹಲವಾರು ರಾಜ್ಯಗಳು ಈಗ ಹೆಚ್ಚು ಕಠಿಣವಾದ ಲಾಕ್‌ಡೌನ್‌ಗೆ ಹೋಗಲು ಯೋಚಿಸುತ್ತಿವೆ ಮತ್ತು ಪ್ರಸಕ್ತ ಹಣಕಾಸು ವರ್ಷದಲ್ಲಿ ಆರ್ಥಿಕ ಚಟುವಟಿಕೆ ಮತ್ತು ಜಿಡಿಪಿ ಬೆಳವಣಿಗೆಯ ಮೇಲೆ ಅದರ ಪ್ರಭಾವದ ಬಗ್ಗೆ ಮಾರುಕಟ್ಟೆಗಳು ಕಳವಳ ವ್ಯಕ್ತಪಡಿಸಿವೆ.

ಮಾರ್ಚ್ ಆರಂಭದಿಂದಲೂ ಕೋವಿಡ್ ಪ್ರಕರಣಗಳ ಹೆಚ್ಚಳವು ಕೈಗಾರಿಕಾ ಮನೋಭಾವದ ಮೇಲೆ ಪರಿಣಾಮ ಬೀರಿತು ಮತ್ತು ಮಾರ್ಚ್‌ನಲ್ಲಿ ಭಾರತದ ಉತ್ಪಾದನಾ ವಲಯದ ಚಟುವಟಿಕೆಗಳು ತೀವ್ರವಾಗಿ ದುರ್ಬಲಗೊಂಡವು. ಐಎಚ್‌ಎಸ್ ಮಾರ್ಕೆಟ್ ಇಂಡಿಯಾ ಉತ್ಪಾದನಾ ಖರೀದಿ ವ್ಯವಸ್ಥಾಪಕರ ಸೂಚ್ಯಂಕ (ಪಿಎಂಐ) ಏಳು ತಿಂಗಳ ಕನಿಷ್ಠ 55.4 ಕ್ಕೆ ಇಳಿದಿದೆ.

ಕೋವಿಡ್ ಪ್ರಕರಣಗಳ ಉಲ್ಬಣ ಮತ್ತು ಆರೋಗ್ಯ ಮೂಲಸೌಕರ್ಯಗಳ ಕೊರತೆಯು ಒಂದು ದೊಡ್ಡ ಕಳವಳವಾಗಿ ಹೊರಹೊಮ್ಮಿದೆ ಮತ್ತು ಮಾರುಕಟ್ಟೆಗಳು ಸೇರಿದಂತೆ ಎಲ್ಲೆಡೆ ಇರುವ ಭಾವನೆಗಳ ಮೇಲೆ ಇದು ಪರಿಣಾಮ ಬೀರುತ್ತಿದೆ. ಹಣಕಾಸು ಸಚಿವರು ಭಾನುವಾರ ಕೈಗಾರಿಕಾ ಸಂಘ ಮತ್ತು ಇಂಡಿಯಾ ಇಂಕ್‌ನ ಮುಖಂಡರನ್ನು ಸಂಪರ್ಕಿಸಿ ರಾಷ್ಟ್ರವ್ಯಾಪಿ ಲಾಕ್‌ಡೌನ್ ಆಗುವುದಿಲ್ಲ ಎಂದು ಭರವಸೆ ನೀಡಿದರೂ, ಮಾರುಕಟ್ಟೆಯಲ್ಲಿ ಭಾಗವಹಿಸುವವರು ಕೊರೋನಾ ಪ್ರಕರಣಗಳ ಸಂಖ್ಯೆಯಲ್ಲಿನ ಏರಿಕೆ ಮಾರುಕಟ್ಟೆ ಚೇತರಿಕೆ ಪ್ರಕ್ರಿಯೆಯನ್ನು ಹಳಿ ತಪ್ಪಿಸುತ್ತದೆ ಮತ್ತು ವೇಗದ ಮೇಲೆ ಪರಿಣಾಮ ಬೀರುತ್ತದೆ ಎಂದು ಭಾವಿಸುತ್ತಾರೆ.

ಸದ್ಯದಲ್ಲಿ ಜೀವನೋಪಾಯ ಮತ್ತು ಆರ್ಥಿಕತೆಯ ಮೇಲೆ ಅದು ಉಂಟುಮಾಡುವ ಪ್ರಕರಣಗಳ ಹೆಚ್ಚಳದ ಬಗ್ಗೆ ಮಾರುಕಟ್ಟೆಯು ಚಿಂತಿತವಾಗಿದೆ. ಹೆಚ್ಚಳದ ವೇಗದಲ್ಲಿ ಕುಸಿತ ಕಾಣುವವರೆಗೆ ಅಥವಾ ಹಿಂದಿನ ದಿನಕ್ಕಿಂತ ದೈನಂದಿನ ಉಲ್ಬಣವು ಕ್ಷೀಣಿಸಲು ಪ್ರಾರಂಭವಾಗುವವರೆಗೆ ಮಾರುಕಟ್ಟೆಗಳು ಒತ್ತಡದಲ್ಲಿ ಉಳಿಯುತ್ತವೆ ಎಂದು ಹಲವರು ಭಾವಿಸುತ್ತಾರೆ.


ಇದನ್ನೂ ಓದಿ: ಕೋವಿಡ್ ಬಿಕ್ಕಟ್ಟಿಗೆ ಪ್ರಧಾನಿಯೇ ಕಾರಣ: ‘ಮೋದಿ ರಾಜೀನಾಮೆ ನೀಡಿ’ ಟ್ವಿಟರ್‌ ಟ್ರೆಂಡಿಂಗ್‌

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...