Homeಅಂಕಣಗಳುಬಹುಜನ ಭಾರತ; ಸ್ವತಂತ್ರ ಅಸ್ಮಿತೆಯಲ್ಲಿ ಅರಳಿದ ಶಿವರಾಣಿ ದೇವಿ

ಬಹುಜನ ಭಾರತ; ಸ್ವತಂತ್ರ ಅಸ್ಮಿತೆಯಲ್ಲಿ ಅರಳಿದ ಶಿವರಾಣಿ ದೇವಿ

- Advertisement -
- Advertisement -

ಪ್ರಚಂಡ ಪ್ರಸಿದ್ಧ ಜೀವನ ಸಂಗಾತಿಯ ನೆರಳಿನಲ್ಲಿ ಕಳೆದೇ ಹೋದ ಪತ್ನಿಯರು, ಪತಿಯರಿಗೆ ಲೆಕ್ಕವಿಲ್ಲ.

ಆದರೆ ಹಿಂದೀ ಉರ್ದುವಿನಲ್ಲಿ ಬರೆದ ಮಾನವತಾವಾದಿ ಲೇಖಕ ಮುನ್ಷಿ ಪ್ರೇಮ್ ಚಂದ್ ಅವರ ಪತ್ನಿ ಶಿವರಾಣಿ ದೇವಿ, ಪತಿಯ ಪ್ರಕಾಶಮಯ ಪ್ರಭಾವಳಿಯಲ್ಲೂ ಕಳೆದುಹೋಗದೆ ಹೊಳೆದವರು. ಸ್ವಂತ ಅಸ್ಮಿತೆ ಉಳಿಸಿಕೊಂಡವರು.

’ನಮ್ಮ ಕನಸಿನ ರಾಷ್ಟ್ರೀಯತೆಯಲ್ಲಿ ಜನ್ಮಜಾತ ವರ್ಣಗಳ ಗಂಧಗಾಳಿಗೂ ಅವಕಾಶ ಇರದು. ಅದು ಶ್ರಮಿಕರು ಮತ್ತು ರೈತರ ಸಾಮ್ರಾಜ್ಯ. ಬ್ರಾಹ್ಮಣ ಕಾಯಸ್ಥ ಕ್ಷತ್ರಿಯರು ಅಲ್ಲಿರುವುದಿಲ್ಲ. ಸಮಸ್ತರೂ ಭಾರತವಾಸಿಗಳು. ಈ ಎಲ್ಲ ಲಡಾಯಿ ಬೆರಳೆಣಿಕೆಯ ವ್ಯಕ್ತಿಗಳದು. ಇವರಿಂದ ದೂರವಿರುವ ರಾಷ್ಟ್ರದಲ್ಲಿ ಹಿಂದೂಗಳೂ ಇಲ್ಲ, ಮುಸಲ್ಮಾನರೂ ಇಲ್ಲ. ಅಲ್ಲಿರುವವರೆಲ್ಲ ಶ್ರಮಿಕರು ಮತ್ತು ರೈತರು. ಒಬ್ಬರಿಗಿಂತ ಮತ್ತೊಬ್ಬರು ದೀನ ದರಿದ್ರ ದಲಿತರು ಮತ್ತು ಶೋಷಣೆಯ ಗಾಣದಲ್ಲಿ ಅರೆಯಲ್ಪಟ್ಟವರು. ಆರತಿ ನಮಾಜು-ಹಿಂದೀ-ಉರ್ದು ಸಮಸ್ಯೆಗಳು ಇಲ್ಲಿ ಇರುವುದೇ ಇಲ್ಲ’ ಎಂದು 90 ವರ್ಷಗಳ ಹಿಂದೆಯೇ ಹೇಳಿದ್ದವರು ಪ್ರೇಮ್ ಚಂದ್.

ಪ್ರೇಮಚಂದ್ ಅವರ 141ನೆಯ ಜಯಂತಿ ಮೊನ್ನೆ ಜುಲೈ 31ರಂದು ಸರಿದುಹೋಯಿತು. ಪತ್ನಿ ಶಿವರಾಣಿ ದೇವಿಯವರ ಬರೆಹದ ಬದುಕಿಗೆ ನೀರೆರೆದು ಮನಸಾರೆ ಪ್ರೋತ್ಸಾಹಿಸಿದ ಪತಿಯಾಗಿದ್ದರು ಅವರು.

ಪ್ರೇಮ್ ಚಂದ್ ಅವರ ಬದುಕು ಬರೆಹಗಳ ಬಿಡಿಸಲಾಗದ ಭಾಗವೇ ಆಗಿಹೋಗಿದ್ದರು ಪತ್ನಿ ಶಿವರಾಣಿದೇವಿ. ಪ್ರೇಮ್ ಚಂದ್ ಎರಡನೆಯ ಮದುವೆಯಲ್ಲಿ ಅವರ ಕೈಹಿಡಿದಾಗ ಶಿವರಾಣಿ ಹನ್ನೊಂದು ವರ್ಷ ವಯಸ್ಸಿನ ಬಾಲವಿಧವೆ. ’ಕಾಯಸ್ಥ ಬಾಲ ವಿಧವಾ ಉದ್ಧಾರಕ ಪುಸ್ತಿಕಾ’ದಲ್ಲಿ ಅಚ್ಚಾಗಿದ್ದ ಜಾಹೀರಾತನ್ನು ಓದಿ ಶಿವರಾಣಿದೇವಿಯವರ ತಂದೆಗೆ ಪತ್ರ ಬರೆದು ಆಕೆಯನ್ನು ವರಿಸಿದ್ದರು ಪ್ರೇಮ್ ಚಂದ್.

ಪತಿಯ ನಿಧನಾನಂತರ ನಲವತ್ತು ವರ್ಷಗಳ ಕಾಲ ಜೀವಿಸಿದ್ದವರು. ಬರವಣಿಗೆಯಲ್ಲಿ ತೊಡಗಿಕೊಂಡವರು. ಅಂದಿನ ಕಾಲಘಟ್ಟದ ಮಹತ್ವದ ಕತೆಗಾರ್ತಿಯಾಗಿದ್ದರು ಆಕೆ. ಸ್ತ್ರೀ ವಿಮುಕ್ತಿಯ ವಿಷಯದಲ್ಲಿ ಪತಿಗಿಂತ ಹೆಚ್ಚು ಮುಂದೆ ಸಾಗಿದ್ದ ಆಲೋಚನೆ ಅವರದಾಗಿತ್ತು.

ಆಕೆಯ ಕಥಾನಾಯಕಿಯರು ಅನ್ಯಾಯದ ವಿರುದ್ಧ ಸಿಡಿದೇಳುವವರು. ದಿಟ್ಟರೂ ಆತ್ಮವಿಶ್ವಾಸಭರಿತರೂ, ಉದ್ಧಟರೂ ಆಗಿರುತ್ತಿದ್ದರು. ಬಾಲವಿಧವೆ ಕಾಂತಿ ತನ್ನ ಗ್ರಾಮದ ಲಂಪಟ ಮೋಹನನ ಮೂಗನ್ನೇ ಕತ್ತರಿಸಿ ಶಿಕ್ಷಿಸುತ್ತಾಳೆ. ನಲವತ್ತರ ವಯಸ್ಸಿನ ನಾಲ್ಕು ಮಕ್ಕಳ ತಂದೆಯನ್ನು ಮದುವೆಯಾಗುವ ಅನಿವಾರ್ಯದ ಕತ್ತರಿಯಲ್ಲಿ ಸಿಕ್ಕಿಹಾಕಿಕೊಳ್ಳುವ ರಾಮ್ ಪ್ಯಾರಿ ಪತ್ರ ಬರೆದು ವರನಿಗೆ ಬುದ್ಧಿ ಹೇಳಲು ಪ್ರಯತ್ನಿಸುತ್ತಾಳೆ. ಅವನು ಲೆಕ್ಕಿಸುವುದಿಲ್ಲ. ಮದುವೆ ಮಂಟಪದಲ್ಲಿ ಘೂಂಘಟ್ ಕಿತ್ತೆಸೆದು ವರನನ್ನು ಚಪ್ಪಲಿಯಿಂದ ಬಾರಿಸುತ್ತಾಳೆ. ತಂದೆಯತ್ತ ಮತ್ತೊಂದು ಚಪ್ಪಲಿಯನ್ನು ಎಸೆದು ಹೊರನಡೆಯುತ್ತಾಳೆ. ಅವರ ಕತೆಗಳು ಎಂಬತ್ತು ವರ್ಷಗಳ ನಂತರ ಹಿಂದೀ ಓದುಗರಿಗೆ ಇದೀಗ ಲಭಿಸತೊಡಗಿವೆ.

ಶಿವರಾಣಿಯವರ ಕತೆಗಳನ್ನು ಪ್ರೇಮ್ ಚಂದ್ ಬರೆದುಕೊಡುತಿದ್ದರು ಎಂಬ ಓದುಗರ ಸಂದೇಹ ಕಾಲಕ್ರಮೇಣ ನಿವಾರಣೆಯಾಗುತ್ತದೆ. ಅದನ್ನು ನಿವಾರಿಸಲು ಖುದ್ದು ಪ್ರೇಮ್ ಚಂದ್ ಹೆಣಗುತ್ತಾರೆ. ತಮ್ಮ ಕತೆಗಳು ಪತಿಯ ಕತೆಗಳ ಅನುಕರಣೆ ಆಗದಂತೆ ಪ್ರಜ್ಞಾಪೂರ್ವಕವಾಗಿ ಎಚ್ಚರ ವಹಿಸುತ್ತಾರೆ ಶಿವರಾಣಿ.

1956ರಲ್ಲಿ ಪ್ರಕಟವಾದ ಅವರ ’ಪ್ರೇಮ್ ಚಂದ್ ಘರ್ ಮೇಂ’ (ಮನೆಯೊಳಗೆ ಪ್ರೇಮ್ ಚಂದ್) ಎಂಬ ಅವರ ಕೃತಿ, ಸಾಹಿತ್ಯ ಇತಿಹಾಸಕಾರರ ಪಾಲಿನ ಅಮೂಲ್ಯ ನಿಧಿ. ಪ್ರೇಮ್ ಚಂದ್ ಮತ್ತು ಶಿವರಾಣಿಯವರ ಸುತ್ತ ಸುತ್ತುವ ಈ ಕೃತಿ ಅಲ್ಲಲ್ಲಿ ಶಿವರಾಣಿಯವರ ಸಾಹಿತ್ಯಾಸಕ್ತಿ ಮತ್ತು ಅಂದಿನ ರಾಜಕೀಯ ವಾತಾವರಣ ಕುರಿತು ಬೆಳಕು ಚೆಲ್ಲುತ್ತದೆ. ಪ್ರೇಮ್ ಚಂದ್ ಕುರಿತ ಅವರ ಕೃತಿಯಲ್ಲಿ ಅವರ ಮನಸ್ಸಾಕ್ಷಿ ಮಾತಾಡುತ್ತದೆ. ಜಗತ್ತಿನ ಕಣ್ಣಿಗೆ ಕಾಣದಿರುವ ಪ್ರೇಮ್ ಚಂದ್ ಅವರಿಗೆ ಮಡದಿಯ ಕಣ್ಣಿನ ಕನ್ನಡಿಯನ್ನು ಹಿಡಿಯುತ್ತದೆ. ಈ ಕೃತಿಯು ಸ್ತ್ರೀವಾದಿ ಕಣ್ಣೋಟವನ್ನು ಕಟ್ಟಿಕೊಡುವ ದಸ್ತಾವೇಜು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಹೊತ್ತಗೆಯು ಕೇವಲ ಪ್ರೇಮ್ ಚಂದ್ ಅವರ ಜೀವನ ಚರಿತ್ರೆಯಲ್ಲ, ಶಿವರಾಣಿಯವರ ಆತ್ಮಕತೆಯೂ ಹೌದು ಎಂಬ ನಿಷ್ಕರ್ಷೆಗೆ ಬರಲಾಗಿದೆ. ಮೇಲ್ನೋಟಕ್ಕೆ ಈ ಪುಸ್ತಕ ಮನೆವಾರ್ತೆಯ ನೆನಪುಗಳನ್ನು ಆಧರಿಸಿದ್ದೆಂದು ತೋರಬಹುದು. ಆದರೆ ಪ್ರೇಮ್ ಚಂದ್ ಅವರ ಒಳ-ಹೊರಗುಗಳನ್ನು ಇಣುಕಿ ನೋಡಿ ಅರ್ಥ ಮಾಡಿಕೊಳ್ಳಲು ಅನುವಾಗುವ ಪ್ರಾಮಾಣಿಕ ಕಿಟಕಿಯಿದು. ಅವರ ಸಾಹಿತ್ಯಕ ಮತ್ತು ಮಾನವೀಯ ಗುಣಗಳ ಮೇಲೆ ಬೆಳಕು ಚೆಲ್ಲುವ ಕಿಟಕಿ. ಪ್ರೇಮ್ ಚಂದ್ ಅವರ ಸಾಹಿತ್ಯವನ್ನು ಅರ್ಥಮಾಡಿಕೊಳ್ಳುವಲ್ಲಿ ನೆರವಾಗುವ ಬರೆಹವಿದು. ಇಲ್ಲಿನ ಪ್ರತಿಯೊಂದು ಪದ ಪದದ ಮೇಲೂ ಅವರ ವ್ಯಕ್ತಿತ್ವದ ಛಾಪು ಮೂಡಿದೆ ಎಂದು ವಿಮರ್ಶಕರು ಹೇಳಿದ್ದಾರೆ.

ದಿನನಿತ್ಯದ ಬದುಕು ಬಾಳುವೆಯ ಸಹಜ ಸರಳ ಮಾತುಕತೆಗಳಲ್ಲೇ ಪ್ರೇಮ್ ಚಂದ್ ಅವರನ್ನು ಶಿವರಾಣಿ ಸಾಕಾರಗೊಳಿಸಿದ್ದಾರೆ. ’ಅವರು ಉಳಿದೆಲ್ಲರಿಗೂ ಮಹಾನ್ ಆಗಿದ್ದಿರಬಹುದು ಆದರೆ ನನ್ನ ಪಾಲಿಗೆ ನನ್ನವರಾಗಿದ್ದರು, ನಾನು ಅವರವಳಾಗಿದ್ದೆ. ನಮ್ಮಿಬ್ಬರ ನಡುವೆ ಮಹಾನತೆಗೆ ಜಾಗವೆಲ್ಲಿಯದು?’ ಎಂಬ ಅವರ ಮಾತುಗಳು ಅರ್ಥಪೂರ್ಣ.

ಪತಿಯ ಮಾನವೀಯತೆಯನ್ನು ಮೆಚ್ಚುತ್ತಲೇ ಕಟಕಟೆಯಲ್ಲಿ ನಿಲ್ಲಿಸಿ ಆತನ ವಿವಾಹೇತರ ಪ್ರೇಮ ಪ್ರಸಂಗವನ್ನು ಪ್ರಶ್ನಿಸಿದ್ದಾರೆ.

ಮೊದಲ ಪತ್ನಿ ಇದ್ದಾಗಲೇ ಮತ್ತೊಬ್ಬ ಹೆಣ್ಣುಮಗಳ ಸಂಗ ಮಾಡಿದ್ದೆ. ನೀನು ಬಂದ ನಂತರವೂ ಈ ಸಂಬಂಧ ಮುಂದುವರೆದಿತ್ತು ಎಂದು ಶಿವರಾಣಿಯವರ ಮುಂದೆ ಪ್ರೇಮ್ ಚಂದ್ ತಪ್ಪೊಪ್ಪಿಕೊಂಡಿದ್ದರು. ಆದರೆ ತಾವು ಪ್ರೇಮ್‌ಚಂದ್ ಬದುಕಿನಲ್ಲಿ ಕಾಲಿಟ್ಟ ನಂತರವೂ ಆತ ಮತ್ತೊಬ್ಬ ಹೆಣ್ಣುಮಗಳ ಸಂಗ ಮುಂದುವರೆಸಿದ್ದ ಶಿವರಾಣಿಯವರಿಗೆ ತಿಳಿದಿತ್ತು. ಆದರೆ ಪತಿಯ ಮುಂದೆ ಆ ಬಗ್ಗೆ ಬಾಯಿ ಬಿಡಲಿಲ್ಲ. ಈ ವಿಷಯ ಪ್ರೇಮ್ ಚಂದ್ ಅವರಿಗೆ ಗೊತ್ತಾಯಿತು. ಹೃದಯವಂತಿಕೆಯಲ್ಲಿ ನೀನು ನನಗಿಂತ ದೊಡ್ಡವಳು ಎಂದು ಪ್ರತಿಕ್ರಿಯಿಸುತ್ತಾರೆ.

ಪ್ರೇಮ್ ಚಂದ್ ಅವರ ಮೇಲೆ ಆದ ಗಾಂಧೀ ಪ್ರಭಾವ ಶಿವರಾಣಿಯವರನ್ನೂ ತಾಗುತ್ತದೆ. ಗಾಂಧೀ ಆಂದೋಲನದಲ್ಲಿ ಭಾಗವಹಿಸುತ್ತಾರೆ. ಗೋರಖಪುರಕ್ಕೆ ಗಾಂಧೀ ಬಂದ ವರ್ಷ ಒಡವೆ ಧರಿಸುವುದಿಲ್ಲವೆಂದು ಮಾಡಿದ ಪ್ರತಿಜ್ಞೆಯನ್ನು ಆಕೆ ಕಡೆಯುಸಿರ ತನಕ ಪಾಲಿಸುತ್ತಾರೆ. 1930ರ ದಶಕದಲ್ಲಿ ಲಕ್ನೋದ ಮಹಿಳಾ ಆಶ್ರಮದ ಸಭೆಯೊಂದರಲ್ಲಿ 12 ಸಾವಿರ ಮಂದಿಯನ್ನು ಉದ್ದೇಶಿಸಿ ಸುಡುಗೆಂಡದ ಭಾಷಣ ಮಾಡುತ್ತಾರೆ. ವಿದೇಶೀ ವಸ್ತ್ರ ಸುಟ್ಟಿದ್ದಕ್ಕಾಗಿ ಬಂಧನಕ್ಕೆ ಒಳಗಾಗುತ್ತಾರೆ.

ಇಂತಹ ವಿಶಿಷ್ಟ ವ್ಯಕ್ತಿತ್ವದ ಶಿವರಾಣಿಯವರ ಹೂತು ಹೋಗಿದ್ದ ಕತೆಗಳು ಇದೀಗ ಬೆಳಕಿಗೆ ಬರತೊಡಗಿವೆ.


ಇದನ್ನೂ ಓದಿ: ಬಹುಜನ ಭಾರತ; ಫ್ಯಾಸಿಸ್ಟ್ ಕನ್ನಡಿಯನ್ನು ಒಡೆಯಿರೆಂಬ ಹರಾರಿ ಕಿವಿಮಾತು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...