ದೆಹಲಿಯಲ್ಲಿ ನಡೆಯುತ್ತಿರುವ ರೈತರ ಹೋರಾಟವು ದಲ್ಲಾಳಿಗಳ, ಮಧ್ಯವರ್ತಿಗಳ ಹೋರಾಟ. ರೈತರನ್ನು ಮನವೊಲಿಸಬಹುದು, ರೈತರಂತೆ ನಟಿಸುವವರ ಮನವೂಲಿಸಲು ಆಗದು ಎಂದಿದ್ದ ಕೇಂದ್ರ ಸಚಿವ ಶೋಭಾ ಕರಂದ್ಲಾಜೆ ವಿರುದ್ಧ ವಿಪಕ್ಷ ನಾಯಕ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
‘ಬಿಜೆಪಿ ಸರ್ಕಾರದ ಕರಾಳ ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೆಹಲಿಯಲ್ಲಿ ಹೋರಾಟ ನಡೆಸುತ್ತಿರುವ ರೈತರನ್ನು ‘ದಲ್ಲಾಳಿಗಳು’, ‘ಮಧ್ಯವರ್ತಿಗಳು’ ಎಂದು ಅವಮಾನಿಸಿರುವ ಕೃಷಿ ಸಚಿವೆ ಶೋಭಾ ಕರಂದ್ಲಾಜೆ ಹೇಳಿಕೆ ಖಂಡನೀಯ’ ಎಂದು ಟ್ವೀಟ್ ಮಾಡಿದ್ದಾರೆ.
“ಶೋಭಾ ಕರಂದ್ಲಾಜೆ ತಕ್ಷಣ ತಮ್ಮ ಹೇಳಿಕೆಯನ್ನು ವಾಪಸು ಪಡೆದು, ರೈತರ ಕ್ಷಮೆ ಯಾಚಿಸಬೇಕು.
ಶೋಭಾ ಕರಂದ್ಲಾಜೆ ಅವರ ಹೇಳಿಕೆ ಕೇಂದ್ರ ಬಿಜೆಪಿ ಸರ್ಕಾರದ ಅಧಿಕೃತ ನಿಲುವಾಗಿದ್ದರೆ ಪ್ರಧಾನಿ ನರೇಂದ್ರ ಮೋದಿ ಅವರು ಒಪ್ಪಿಕೊಳ್ಳಬೇಕು, ಇಲ್ಲವಾದರೆ, ಈ ಬಗ್ಗೆ ಸ್ಪಷ್ಟನೆ ನೀಡಿ ಅಧಿಕಪ್ರಸಂಗಿ ಸಚಿವೆಯ ವಿರುದ್ಧ ಕ್ರಮಕೈಗೊಳ್ಳಬೇಕು” ಎಂದು ಒತ್ತಾಯಿಸಿದಾರೆ.
ಇದನ್ನೂ ಓದಿ: ನೆರೆ ಸಂತ್ರಸ್ತರಿಗೆ ಕೂಡಲೇ ಪರಿಹಾರ ಬಿಡುಗಡೆ ಮಾಡಿ: ಸಿಎಂಗೆ ಸಿದ್ದರಾಮಯ್ಯ ಪತ್ರ
ಕರ್ನಾಟಕದಲ್ಲಿ ಪ್ರೊ.ಎಂ.ಡಿ.ನಂಜುಂಡ ಸ್ವಾಮಿಯವರಂತಹ ಹಿರಿಯರು ಮುನ್ನಡೆಸಿದ್ದ
ರೈತ ಹೋರಾಟಕ್ಕೆ
ಹೆಮ್ಮೆಯ ಪರಂಪರೆ ಇದೆ.ಇದೇನು ಅಧಿಕಾರಕ್ಕಾಗಿ, ಸಚಿವಸ್ಥಾನಕ್ಕಾಗಿ ನಡೆಸುವ ರಾಜಕೀಯ ದಲ್ಲಾಳಿಗಿರಿ ಹೋರಾಟ ಅಲ್ಲ ಎನ್ನುವುದನ್ನು @ShobhaBJP ಅವರಂತಹವರು ತಿಳಿದುಕೊಳ್ಳುವುದು
ಒಳಿತು.#FarmersProtest
#3/3 pic.twitter.com/tEMpRA9Ug9— Siddaramaiah (@siddaramaiah) August 18, 2021
“ಕರ್ನಾಟಕದಲ್ಲಿ ಪ್ರೊ.ಎಂ.ಡಿ.ನಂಜುಂಡ ಸ್ವಾಮಿಯವರಂತಹ ಹಿರಿಯರು ಮುನ್ನಡೆಸಿದ್ದ ಕರ್ನಾಟಕದಲ್ಲಿ ರೈತ ಹೋರಾಟಕ್ಕೆ ಹೆಮ್ಮೆಯ ಪರಂಪರೆ ಇದೆ. ಅದೇನು ಆಧಿಕಾರಕ್ಕಾಗಿ, ಸಚಿವರಾಗಲು ನಡೆಸುವ ದಲ್ಲಾಳಿಗಿರಿ ಹೋರಾಟ ಅಲ್ಲ ಎನ್ನುವುದನ್ನು ಶೋಭಾ ಕರಂದ್ಲಾಜೆಯಂತಹವರು ತಿಳಿದುಕೊಳ್ಳಬೇಕು” ಎಂದು ಸಿದ್ದರಾಮಯ್ಯ ಕಿಡಿ ಕಾರಿದ್ದಾರೆ.
ಕರ್ನಾಟಕ ಕಾಂಗ್ರೆಸ್ ಕೂಡ ಈ ಬಗ್ಗೆ ಟ್ವೀಟ್ ಮಾಡಿದ್ದು, “ಪ್ರತಿಭಟಿಸುತ್ತಿರುವವರು ರೈತರೇ ಅಲ್ಲ ದಲ್ಲಾಳಿಗಳು ಎಂದ ರೈತರನ್ನು ಅಪಮಾನಿಸಿದ ಶೋಭಾ ಕರಂದ್ಲಾಜೆ ಅವರು ಎಲುಬಿಲ್ಲದ ನಾಲಿಗೆ ಹರಿಬಿಟ್ಟಿದ್ದು ಖಂಡನೀಯ. ರೈತರಲ್ಲದಿದ್ದರೆ ಅವರೊಂದಿಗೆ ಹಲವು ಬಾರಿ ಸಭೆ ನಡೆಸಿದ್ದೇಕೆ..? ಕಂಪೆನಿಗಳ ದಲ್ಲಾಳಿ ಸರ್ಕಾರಕ್ಕೆ ಇತರರನ್ನ ದಲ್ಲಾಳಿಗಳು ಎಂದು ಕರೆದೇ ಅಭ್ಯಾಸ. ಈ ಬಗ್ಗೆ ರೈತರಲ್ಲಿ ಬಿಜೆಪಿ ಕ್ಷಮೆ ಕೇಳಬೇಕು” ಎಂದು ಒತ್ತಾಯಿಸಿದೆ.
ಪ್ರತಿಭಟಿಸುತ್ತಿರುವವರು ರೈತರೇ ಅಲ್ಲ ದಲ್ಲಾಳಿಗಳು ಎಂದ ರೈತರನ್ನು ಅಪಮಾನಿಸಿದ @ShobhaBJP ಅವರು ಎಲುಬಿಲ್ಲದ ನಾಲಿಗೆ ಹರಿಬಿಟ್ಟಿದ್ದು ಖಂಡನೀಯ.
ರೈತರಲ್ಲದಿದ್ದರೆ ಅವರೊಂದಿಗೆ ಹಲವು ಬಾರಿ ಸಭೆ ನಡೆಸಿದ್ದೇಕೆ?
ಕಂಪೆನಿಗಳ ದಲ್ಲಾಳಿ ಸರ್ಕಾರಕ್ಕೆ ಇತರರನ್ನ ದಲ್ಲಾಳಿಗಳು ಎಂದು ಕರೆದೇ ಅಭ್ಯಾಸ.ಈ ಬಗ್ಗೆ ರೈತರಲ್ಲಿ ಬಿಜೆಪಿ ಕ್ಷಮೆ ಕೇಳಬೇಕು. pic.twitter.com/lfIKysCV99
— Karnataka Congress (@INCKarnataka) August 18, 2021
ಇದನ್ನೂ ಓದಿ: ಒಬ್ಬ ಭ್ರಷ್ಟನ ಬದಲು ಮತ್ತೊಬ್ಬ ಭ್ರಷ್ಟ: ಸಿಎಂ ಬದಲಾವಣೆ ಕುರಿತು ಸಿದ್ದರಾಮಯ್ಯ ಪ್ರತಿಕ್ರಿಯೆ


