Homeಮುಖಪುಟ'ಕಣಕಣದಲ್ಲೂ ಕೇಸರಿ' ಖ್ಯಾತಿಯ ಅಜಯ್ ದೇವ್‌ಗನ್ ಕಾರಿಗೆ ಮುತ್ತಿಗೆ ಹಾಕಿದ ಸಿಖ್ಖರು!

‘ಕಣಕಣದಲ್ಲೂ ಕೇಸರಿ’ ಖ್ಯಾತಿಯ ಅಜಯ್ ದೇವ್‌ಗನ್ ಕಾರಿಗೆ ಮುತ್ತಿಗೆ ಹಾಕಿದ ಸಿಖ್ಖರು!

"ಪಂಜಾಬ್ ಅವರಿಗೆ ಆಹಾರವನ್ನು ನೀಡಿದೆ. ಆ ಆಹಾರವನ್ನು ಅವರು ಹೇಗೆ ಜೀರ್ಣಿಸಿಕೊಳ್ಳುತ್ತಾರೆ? ನೀವು ಹೇಗೆ ಪಂಜಾಬ್ ವಿರೋಧಿಯಾಗಬಹುದು? ನಿಮಗೆ ನಾಚಿಕೆಯಾಗಬೇಕು"

- Advertisement -
- Advertisement -

“ಕಣಕಣದಲ್ಲೂ ಕೇಸರಿ” ಖ್ಯಾತಿಯ ಬಾಲಿವುಡ್ ನಟ ಅಜಯ್ ದೇವ್‌ಗನ್ ಅವರ ಕಾರಿಗೆ ಮುಂಬೈನಲ್ಲಿ ರೈತ ಬೆಂಬಲಿಗರು ಮುತ್ತಿಗೆ ಹಾಕಿದ್ದಾರೆ. ಈಗ ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಇದರಲ್ಲಿ ವ್ಯಕ್ತಿಯೊಬ್ಬರು ಅಜಯ್‌ ದೇವ್‌ಗನ್ ಅವರನ್ನು ತರಾಟೆಗೆ ತೆಗೆದುಕೊಂಡಿರುವುದನ್ನು ಕಾಣಬಹುದು.

ರೈತರ ಪ್ರತಿಭಟನೆಯ ಕುರಿತು ಅಮೆರಿಕದ ಪಾಪ್ ಗಾಯಕಿ ರಿಹಾನ್ನಾ ಟ್ವೀಟ್‌ಗೆ ಪ್ರತಿಯಾಗಿ ಅಜಯ್ ದೇವ್‌ಗನ್ ಸೇರಿದಂತೆ ಹಲವರು ಖಂಡನೆ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಅಜಯ್‌ ದೇವ್‌ಗನ್ ಅವರ ಕಾರಿಗೆ ಮುತ್ತಿಗೆ ಹಾಕಿದ ಸಿಖ್ಖರು ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಘಟನೆ ಇಂದು ಬೆಳಿಗ್ಗೆ ಮುಂಬೈನ ಹೊರವಲಯದಲ್ಲಿರುವ ಗೋರೆಗಾಂವ್‌ನ ಫಿಲ್ಮ್ ಸಿಟಿಯ ಬಳಿ ನಡೆದಿದೆ.

ಇದನ್ನೂ ಓದಿ:ರಿಹಾನ್ನಾಳ ಕೃಪೆ: ಮೋದಿ ಸರ್ಕಾರದ ಅಹಂ, ಭ್ರಮೆ, ಭಯ ಬಯಲಿಗೆ! -ರಾಮಚಂದ್ರ ಗುಹಾ

ಇದನ್ನೂ ಓದಿ: ರಿಹಾನ್ನಾ ಟ್ವೀಟ್ ಪರಿಣಾಮ-ರೈತ ಹೋರಾಟಕ್ಕೆ ಜಾಗತಿಕ ಮನ್ನಣೆ!

ಸಿಖ್ಖರೊಬ್ಬರು ಅಜಯ್‌ ದೇವ್‌ಗನ್ ಕಡೆಗೆ ಕೈತೋರಿಸಿ ‘ಆತ ಪಂಜಾಬ್ ವಿರೋಧಿ’ ಎಂದು ಘೋಷಣೆ ಕೂಗುತ್ತಿರುವುದನ್ನು ಕೇಳಬಹುದು. “ಪಂಜಾಬ್ ಅವರಿಗೆ ಆಹಾರವನ್ನು ನೀಡಿದೆ. ಆ ಆಹಾರವನ್ನು ಅವರು ಹೇಗೆ ಜೀರ್ಣಿಸಿಕೊಳ್ಳುತ್ತಾರೆ? ನೀವು ಹೇಗೆ ಪಂಜಾಬ್ ವಿರೋಧಿಯಾಗಬಹುದು? ನಿಮಗೆ ನಾಚಿಕೆಯಾಗಬೇಕು. ನೀವು ತುಂಬಾ ಚಲನಚಿತ್ರಗಳಲ್ಲಿ ಹೆಮ್ಮೆಯಿಂದ ಟರ್ಬನ್ (ಪೇಟ) ಧರಿಸಿದ್ದೀರಿ? ನಿಮಗೆ ನಾಚಿಕೆಯಾಗುವುದಿಲ್ಲವೇ? ನೀವು ನನ್ನನ್ನು ದಾಟಿ ಹೋಗುತ್ತೀರಾ? ಆತ ಕಾರಿನಿಂದ ಹೊರಬಂದು ಮಾತನಾಡಲು ಯಾಕೆ ಸಾಧ್ಯವಿಲ್ಲ?” ಮುಂತಾಗಿ ಪ್ರಶ್ನಿಸುತ್ತಾ ತರಾಟೆಗೆ ತೆಗೆದುಕೊಂಡಿದ್ದಾರೆ.

ಈ ವೀಡಿಯೋದಲ್ಲಿ ಅಜಯ್ ದೇವ್‌ಗನ್ ಒಮ್ಮೆ ಕೈಮುಗಿಯುವುದನ್ನು ಕಾಣಬಹುದು. ಅಜಯ್ ದೇವ್‌ಗನ್ ಅವರ ಭದ್ರತಾ ಸಿಬ್ಬಂದಿಯೊಬ್ಬ ಇದರಲ್ಲಿ ಕಾಣಿಸಿಕೊಂಡಿದ್ದು, ಪ್ರತಿಭಟನಾಕಾರರೊಂದಿಗೆ ವಾದಿಸಲು ಪ್ರಯತ್ನಿಸುತ್ತಾನೆ. ಆದರೆ ಅವರು ಇದಕ್ಕೆ ಬಗ್ಗುವುದಿಲ್ಲ.

ಘಟನೆಯ ಬಗ್ಗೆ ಪ್ರಕರಣ ದಾಖಲಿಸಲಾಗಿದೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.

ಇದನ್ನೂ ಓದಿ: ಕೇಂದ್ರ ಸರ್ಕಾರದ ಪರವಾಗಿ ಕಾಪಿ-ಪೇಸ್ಟ್ ಟ್ವೀಟ್: ಸಿಕ್ಕಿಬಿದ್ದ ಭಾರತೀಯ ಸೆಲೆಬ್ರಿಟಿಗಳು!

ಕಳೆದ 95 ದಿನಗಳಿಂದ ಲಕ್ಷಾಂತರ ರೈತರು ದೆಹಲಿಯ ಗಡಿಗಳಲ್ಲಿ ಹೋರಾಟ ಮಾಡುತ್ತಿದ್ದಾರೆ. ಈ ಹೋರಾಟವನ್ನು ಹತ್ತಿಕ್ಕಲು ಸರ್ಕಾರ ನಾನಾ ರೀತಿಯ ಪ್ರಯತ್ನಗಳನ್ನು ಮಾಡುತ್ತಿದೆ. ಹೋರಾಟ ಮಾಡುತ್ತಿರುವವರು ರೈತರಲ್ಲ; ಖಲೀಸ್ತಾನಿಗಳು, ಭಯೋತ್ಪಾದಕರು, ನಕ್ಸಲರು ಎಂದು ಮುಂತಾಗಿ ಬಿಂಬಿಸಿ ಕೆಲವು ಮಾಧ್ಯಮಗಳಿಂದ ವರದಿ ಮಾಡಿಸಲಾಗುತ್ತಿದೆ. ರೈತ ಹೋರಾಟಕ್ಕೆ ಸಂಬಂಧಿಸಿದಂತೆ ಸುಳ್ಳು ಸುದ್ದಿಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಬಿತ್ತರಿಸಲಾಗುತ್ತಿದೆ. ಆದರೆ ಇದಾವುದಕ್ಕೂ ಮಣಿಯದ ರೈತರು ತಮ್ಮ ಬೇಡಿಕೆಯೊಂದಿಗೆ ಗಟ್ಟಿಯಾಗಿ ನಿಂತಿದ್ದಾರೆ.

ಈ ನಡುವೆ ರೈತರಿಗೆ ಜಾಗತಿಕವಾಗಿ ಬೆಂಬಲ ಹರಿದು ಬಂದಿತ್ತು. ಆದರೆ ಈ ಬೆಂಬಲದ ವಿರುದ್ಧ (ಅಂದರೆ ಸರ್ಕಾರದ ಪರ) ಬಾಲಿವುಡ್‌ ನಟರು ಸೇರಿದಂತೆ ಕೆಲವು ಕ್ರಿಕೆಟಿಗರು, ಕಲಾವಿದರು ಬ್ಯಾಟಿಂಗ್ ಮಾಡಿದ್ದರು.

ಟ್ವಿಟ್ಟರ್‌ನಲ್ಲಿ ಲಕ್ಷಾಂತರ ಅನುಯಾಯಿಗಳನ್ನು ಹೊಂದಿರುವ ರಿಹಾನ್ನಾ, ಕಳೆದ ತಿಂಗಳು ಪ್ರತಿಭಟನಾ ನಿರತ ರೈತರಿಗೆ ಬೆಂಬಲ ಸೂಚಿಸಿ, “ನಾವು ಯಾಕೆ ಈ ಬಗ್ಗೆ ಮಾತನಾಡುತ್ತಿಲ್ಲ” ಎಂದು ಟ್ವೀಟ್ ಮಾಡುವ ಮೂಲಕ ಜಾಗತಿಕ ಮಟ್ಟದಲ್ಲಿ ಬೆಂಬಲವನ್ನು ನೀಡಿದ್ದರು.


ಇದನ್ನೂ ಓದಿ:ಗಾಲ್ವಾನ್ ಗಡಿ ಘರ್ಷಣೆ ಕುರಿತು ಸಿನಿಮಾ ಮಾಡಲು ಮುಂದಾದ ಅಜಯ್ ದೇವ್‌ಗನ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಅರವಿಂದ್ ಕೇಜ್ರಿವಾಲ್, ಕೆ. ಕವಿತಾಗೆ ನೋ ರಿಲೀಫ್‌: ನ್ಯಾಯಾಂಗ ಬಂಧನ ಮೇ 7ರವರೆಗೆ ವಿಸ್ತರಣೆ

0
ದೆಹಲಿ ಅಬಕಾರಿ ನೀತಿಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಭಾರತ್ ರಾಷ್ಟ್ರ ಸಮಿತಿ (ಬಿಆರ್‌ಎಸ್) ನಾಯಕಿ ಕೆ ಕವಿತಾ ಅವರ ನ್ಯಾಯಾಂಗ ಬಂಧನವನ್ನು...