Homeಮುಖಪುಟಗಾಲ್ವಾನ್ ಗಡಿ ಘರ್ಷಣೆ ಕುರಿತು ಸಿನಿಮಾ ಮಾಡಲು ಮುಂದಾದ ಅಜಯ್ ದೇವ್‌ಗನ್

ಗಾಲ್ವಾನ್ ಗಡಿ ಘರ್ಷಣೆ ಕುರಿತು ಸಿನಿಮಾ ಮಾಡಲು ಮುಂದಾದ ಅಜಯ್ ದೇವ್‌ಗನ್

ಭಾರತೀಯ ಸೈನಿಕರ ಶಕ್ತಿ ಮತ್ತು ಶೌರ್ಯವನ್ನು ಚಿತ್ರಿಸುವ ಎಲ್‌ಒಸಿ: ಕಾರ್ಗಿಲ್, ಟ್ಯಾಂಗೋ ಚಾರ್ಲಿ ಮತ್ತು ತನ್ಹಾಜಿ: ದಿ ಅನ್‌ಸಂಗ್ ವಾರಿಯರ್ ಮುಂತಾದ  ಹಲವಾರು ಚಲನಚಿತ್ರಗಳನ್ನು ಅಜಯ್ ದೇವ್‌ಗನ್ ಮಾಡಿದ್ದಾರೆ.

- Advertisement -
- Advertisement -

ಲಡಾಖ್‌ನ ಗಾಲ್ವಾನ್ ಕಣಿವೆಯಲ್ಲಿ ಜೂನ್‌ 15ರಂದು ನಡೆದ ಭಾರತ-ಚೀನಾ ಸೈನಿಕರ ನಡುವಿನ ಘರ್ಷಣೆಯನ್ನಾಧರಿಸಿ ಸಿನಿಮಾ ಮಾಡಲು ಬಾಲಿವುಡ್ ನಟ ಅಜಯ್ ದೇವಗನ್ ಮುಂದಾಗಿದ್ದಾರೆ.

ಈ ಘರ್ಷಣೆಯಲ್ಲಿ 20 ಭಾರತೀಯ ಯೋಧರು ಹುತಾತ್ಮರಾಗಿದ್ದು ಹಲವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಚೀನಾದ ಸೈನಿಕರಿಗಾದ ಸಾವು ನೋವುಗಳನ್ನು ಅದು ವರದಿ ಮಾಡಿಲ್ಲ. ಈ ಕಥಾಹಂದರವನ್ನಿಟ್ಟುಕೊಂಡು ಅಜಯ್ ದೇವಗನ್ ರವರ ಬ್ಯಾನರ್ ಅಜಯ್ ದೇವ್‌ಗನ್ ಎಫ್‌ಫಿಲ್ಮ್ಸ್ – ಮತ್ತು ಸೆಲೆಕ್ಟ್ ಮೀಡಿಯಾ ಹೋಲ್ಡಿಂಗ್ಸ್ ಎಲ್‌ಎಲ್‌ಪಿ ಚಿತ್ರ ನಿರ್ಮಾಣ ಮಾಡಲಿವೆ ಎನ್ನಲಾಗಿದೆ.

ಭಾರತೀಯ ಸೈನಿಕರ ಶಕ್ತಿ ಮತ್ತು ಶೌರ್ಯವನ್ನು ಚಿತ್ರಿಸುವ ಎಲ್‌ಒಸಿ: ಕಾರ್ಗಿಲ್, ಟ್ಯಾಂಗೋ ಚಾರ್ಲಿ ಮತ್ತು ತನ್ಹಾಜಿ: ದಿ ಅನ್‌ಸಂಗ್ ವಾರಿಯರ್ ಮುಂತಾದ  ಹಲವಾರು ಚಲನಚಿತ್ರಗಳನ್ನು ಅಜಯ್ ದೇವ್‌ಗನ್ ಮಾಡಿದ್ದಾರೆ. ಅವರ ಮುಂದಿನ ಭುಜ್: ದಿ ಪ್ರೈಡ್ ಆಫ್ ಇಂಡಿಯಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದು 1971ರ ಇಂಡೋ-ಪಾಕ್ ಯುದ್ಧದ ಸಮಯದಲ್ಲಿ ನಾಶವಾದ ವಾಯುನೆಲೆಯನ್ನು ಪುನರ್ನಿರ್ಮಿಸಲು ಭಾರತೀಯ ವಾಯುಪಡೆಗೆ ಸಹಾಯ ಮಾಡಿದ 300 ಮಹಿಳೆಯರ ಕಥೆ. ಅಭಿಷೇಕ್ ದುಧೈಯಾ ನಿರ್ದೇಶನದ ಈ ಚಿತ್ರ ಡಿಸ್ನಿ + ಹಾಟ್‌ಸ್ಟಾರ್‌ನಲ್ಲಿ ಬಿಡುಗಡೆಯಾಗಲಿದೆ.

ಈ ನಡುವೆ ದೇವಗನ್‌ನ ಮತ್ತೊಂದು ಚಿತ್ರ ಮೈದಾನ್ ಸಹ ಚಿತ್ರಮಂದಿರಗಳ ಬದಲು ನೇರವಾಗಿ ಒಟಿಟಿ ವೇದಿಕೆಯಲ್ಲಿ ಬಿಡುಗಡೆಯಾಗಲಿದೆ. ಅಜಯ್ ಅವರ ಕ್ರೀಡೆಯ ಬಗೆಗಿನ ಚಿತ್ರ ಮೈದಾನ್ ಭಾರತದ ರಾಷ್ಟ್ರೀಯ ಫುಟ್ಬಾಲ್ ತಂಡದ ತರಬೇತುದಾರ ಮತ್ತು ವ್ಯವಸ್ಥಾಪಕ ಸೈಯದ್ ಅಬ್ದುಲ್ ರಹೀಮ್ ಅವರಿಂದ ಸ್ಫೂರ್ತಿ ಪಡೆದಿದೆ.


ಇದನ್ನೂ ಓದಿ: ಧೋನಿ ಹೋದಾಗ ಪಾರ್ಟಿ ಹಾಲ್, ಮೋದಿ ಹೋದರೆ ಆಸ್ಪತ್ರೆ: ಗಾಯಾಳು ಸೈನಿಕರ ಭೇಟಿಗೆ ನೆಟ್ಟಿಗರ ತರಾಟೆ! 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಸಿದ್ದರಾಮಯ್ಯ ಸರ್ಕಾರ ಮುಸ್ಲಿಮರನ್ನು ಒಬಿಸಿ ಪಟ್ಟಿಗೆ ಸೇರಿಸಿದ್ದು ನಿಜಾನಾ?

0
ಕರ್ನಾಟಕದಲ್ಲಿ ಮುಸ್ಲಿಮರನ್ನು ಹಿಂದುಳಿದ ವರ್ಗಕ್ಕೆ ಸೇರಿಸುವ ಮೂಲಕ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಿಂದುಳಿದ ವರ್ಗಗಳ 36 ಜಾತಿಗಳಿಗೆ ಅನ್ಯಾಯ ಮಾಡಿದೆ ಎಂದು ಬಿಜೆಪಿ ಆರೋಪಿಸಿದೆ. ಸಿದ್ದರಾಮಯ್ಯ ಸರ್ಕಾರ ಹಿಂದುಳಿದ ವರ್ಗಗಳಿಗೆ...