Homeಮುಖಪುಟದೆಹಲಿ ಪಾಲಿಕೆ ಉಪಚುನಾವಣೆ: 4 ವಾರ್ಡ್‌ಗಳು ಆಪ್‌ಗೆ, 1 ವಾರ್ಡ್ ಕಾಂಗ್ರೆಸ್ ಪಾಲು

ದೆಹಲಿ ಪಾಲಿಕೆ ಉಪಚುನಾವಣೆ: 4 ವಾರ್ಡ್‌ಗಳು ಆಪ್‌ಗೆ, 1 ವಾರ್ಡ್ ಕಾಂಗ್ರೆಸ್ ಪಾಲು

ತನ್ನ ತೆಕ್ಕೆಯಲ್ಲಿದ್ದ ಒಂದೇ ಒಂದು ಸ್ಥಾನವನ್ನೂ ಕಳೆದುಕೊಂಡ ಬಿಜೆಪಿ

- Advertisement -
- Advertisement -

ದೆಹಲಿ ಮಹಾನಗರ ಪಾಲಿಕೆಯ ಐದು ವಾರ್ಡ್‌ಗಳ ಉಪಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷವು ನಾಲ್ಕು ವಾರ್ಡ್‌ಗಳನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದ್ದು, ಕಾಂಗ್ರೆಸ್ ಒಂದು ಸ್ಥಾನವನ್ನು ಪಡೆದುಕೊಂಡಿದೆ.

ಎಎಪಿ ಅಭ್ಯರ್ಥಿಗಳು ಶಾಲಿಮಾರ್ ಬಾಗ್ ನಾರ್ತ್, ಕಲ್ಯಾಣ್‌ಪುರಿ, ತ್ರಿಲೋಕ್‌ಪುರಿ ಮತ್ತು ರೋಹಿಣಿ- ಸಿ ವಾರ್ಡ್‌ಗಳಲ್ಲಿ ಗೆಲುವು ಸಾಧಿಸಿದ್ದು, ಚೌಹಾಣ್ ಬಂಗಾರ್‌ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ.

ಇದನ್ನೂ ಓದಿ: ರೈತರು ದೇಶದ್ರೋಹಿಗಳಲ್ಲ, ಕೆಂಪು ಕೋಟೆ ಘರ್ಷಣೆಗೆ ಕೇಂದ್ರದ ಪಿತೂರಿಯೇ ಕಾರಣ: ಕೇಜ್ರಿವಾಲ್

ಫೆಬ್ರವರಿ 28 ರಂದು ನಡೆದ ಐದು ಪುರಸಭೆ ವಾರ್ಡ್‌ಗಳಿಗೆ ಉಪಚುನಾವಣೆಯಲ್ಲಿ ಶೇ .50 ಕ್ಕಿಂತ ಹೆಚ್ಚು ಮತದಾನವಾಗಿತ್ತು.

ಈ ಹಿಂದೆ ಐದು ವಾರ್ಡ್‌ಗಳಲ್ಲಿ ನಾಲ್ವರು ಎಎಪಿ ಮತ್ತು ಶಾಲಿಮಾರ್ ಬಾಗ್ ನಾರ್ತ್‌ನಲ್ಲಿ ಒಬ್ಬ ಬಿಜೆಪಿ ಕೌನ್ಸಿಲರ್ ಇದ್ದರು.

ಚುನಾವಣಾ ಫಲಿತಾಂಶದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ, ದೆಹಲಿಯ ಜನರು ನಮ್ಮ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ ಎಂದಿದ್ದಾರೆ.

’ದೆಹಲಿಯ ಜನರು ಅವರು ಬಿಜೆಪಿಯಿಂದ ಬೇಸರಗೊಂಡಿದ್ದಾರೆ. ಅದಕ್ಕೆ ಈ ಚುನಾವಣೆಯೇ ಅದರ ಸೂಚನೆಯಾಗಿದೆ. 2022 ರ ದೆಹಲಿ ಪುರಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಸಂಪೂರ್ಣವಾಗಿ ಅಳಿಸಿಹಾಕಲಾಗುವುದು ಎಂದು ಆಮ್ ಆದ್ಮಿ ಪಕ್ಷದ ಮುಖಂಡ ಮತ್ತು ದೆಹಲಿ ಉಪ ಸಿಎಂ ಮನೀಶ್ ಸಿಸೋಡಿಯಾ ಹೇಳಿದ್ದಾರೆ.

ಎಎಪಿ ಅಭ್ಯರ್ಥಿ ಮೊಹಮ್ಮದ್ ಇಶ್ರಕ್ ಖಾನ್ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿ ಚೌಧರಿ ಜುಬೈರ್ ಅಹ್ಮದ್ ಅವರು  ಚೌಹಾಣ್  ಬಂಗಾರ್‌ ವಾರ್ಡ್‌ನಲ್ಲಿ 10,642 ಮತಗಳಿಂದ ಜಯ ಸಾಧಿಸಿದ್ದಾರೆ ಎಂದು ಎಎನ್‌ಐ ವರದಿ ಮಾಡಿದೆ.

ಶಾಲಿಮಾರ್ ಬಾಗ್ (ಉತ್ತರ) ವಾರ್ಡ್‌ ಮಹಿಳೆ ಮೀಸಲು ಕ್ಷೇತ್ರವಾಗಿತ್ತು. ಎಎಪಿಯ ಸುನೀತಾ ಮಿಶ್ರಾ ವಾರ್ಡ್ ನಂ 62 N, ಶಾಲಿಮಾರ್ ಬಾಗ್ ನಾರ್ತ್‌ನಿಂದ ಬಿಜೆಪಿ ಪ್ರತಿಸ್ಪರ್ಧಿ ಸುರ್ಬಿ ಜಾಜು ಅವರನ್ನು 2705 ಮತಗಳಿಂದ ಸೋಲಿಸಿದ್ದಾರೆ.

ಎಎಪಿ ಅಭ್ಯರ್ಥಿಗಳಾದ ತ್ರಿಲೋಕ್‌ಪುರಿಯಲ್ಲಿ ವಿಜಯ್ ಕುಮಾರ್ ಮತ್ತು ರೋಹಿಣಿ-ಸಿ ಯಲ್ಲಿ ರಾಮ್ ಚಂದರ್ ಕೂಡ ತಮ್ಮ ಹತ್ತಿರದ ಪ್ರತಿಸ್ಪರ್ಧಿಗಳಾದ ಬಿಜೆಪಿ ಅಭ್ಯರ್ಥಿಗಳ ವಿರುದ್ಧ ಆರಾಮದಾಯಕ  ಗೆಲುವು ಸಾಧಿಸಿದ್ದಾರೆ.

2022 ರಲ್ಲಿ ನಡೆಯುವ ದೆಹಲಿ ಮಹಾನಗರ ಪಾಲಿಕೆಯ ಎಲ್ಲಾ 272 ವಾರ್ಡ್‌ಗಳ ಚುನಾವಣೆಗೆ ಈ ಉಪಚುನಾವಣೆಯನ್ನು ಸೆಮಿಫೈನಲ್ ಎಂದು ಪರಿಗಣಿಸಲಾಗಿತ್ತು.


ಇದನ್ನೂ ಓದಿ: ರೈತರು ದೇಶದ್ರೋಹಿಗಳಲ್ಲ, ಕೆಂಪು ಕೋಟೆ ಘರ್ಷಣೆಗೆ ಕೇಂದ್ರದ ಪಿತೂರಿಯೇ ಕಾರಣ: ಕೇಜ್ರಿವಾಲ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಸಿದ್ದರಾಮಯ್ಯ ಸರ್ಕಾರ ಮುಸ್ಲಿಮರನ್ನು ಒಬಿಸಿ ಪಟ್ಟಿಗೆ ಸೇರಿಸಿದ್ದು ನಿಜಾನಾ?

0
ಕರ್ನಾಟಕದಲ್ಲಿ ಮುಸ್ಲಿಮರನ್ನು ಹಿಂದುಳಿದ ವರ್ಗಕ್ಕೆ ಸೇರಿಸುವ ಮೂಲಕ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಿಂದುಳಿದ ವರ್ಗಗಳ 36 ಜಾತಿಗಳಿಗೆ ಅನ್ಯಾಯ ಮಾಡಿದೆ ಎಂದು ಬಿಜೆಪಿ ಆರೋಪಿಸಿದೆ. ಸಿದ್ದರಾಮಯ್ಯ ಸರ್ಕಾರ ಹಿಂದುಳಿದ ವರ್ಗಗಳಿಗೆ...