ಸಿಕ್ಕಿಂ ರಾಜ್ಯದ ವಿಧಾನಸಭಾ ಚುನಾವಣೆ ಫಲಿತಾಂಶ ಇಂದು ಪ್ರಕಟವಾಗಿದ್ದು, ಸಿಕ್ಕಿಂ ಕ್ರಾಂತಿಕಾರಿ ಮೋರ್ಚಾ (ಎಸ್‌ಕೆಂ) ಮತ್ತೊಮ್ಮೆ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಪಕ್ಷದ ಮುಖ್ಯಸ್ಥ ಪ್ರೇಮ್ ಸಿಂಗ್ ತಮಾಂಗ್ ಅವರು ಭಾನುವಾರ ರಾಜ್ಯದ ವಿಧಾನಸಭಾ ಚುನಾವಣೆಯಲ್ಲಿ ಭಾರಿ ಗೆಲುವು ಸಾಧಿಸಿದ್ದು, ಎಸ್‌ಕೆಎಂ ಕಾರ್ಯಕರ್ತರು ಮತ್ತು ರಾಜ್ಯದ ಜನತೆಗೆ ಧನ್ಯವಾದ ಅರ್ಪಿಸಿದ್ದಾರೆ.
ಎಸ್‌ಕೆಎಂ ಕಾರ್ಯಕರ್ತರ ಶ್ರಮ ಮತ್ತು ಅವರ ಸರ್ಕಾರದ ಮೇಲೆ ಜನತೆ ಇಟ್ಟಿರುವ ನಂಬಿಕೆಯಿಂದ ಗೆಲುವು ಸಾಧ್ಯವಾಗಿದೆ ಎಂದರು.
ಎಸ್‌ಕೆಎಂ ಹಿಮಾಲಯ ರಾಜ್ಯದಲ್ಲಿ ಅಧಿಕಾರವನ್ನು ಉಳಿಸಿಕೊಂಡಿದೆ. ಇಲ್ಲಿಯವರೆಗೆ ವಿಧಾನಸಭೆಯ 31 ಸ್ಥಾನಗಳಲ್ಲಿ ಆಡಳಿತ ಪಕ್ಷ 26 ಸ್ಥಾನಗಳನ್ನು ಗೆದ್ದಿದೆ. ಉಳಿದ ಐದು ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಗೆಲುವಿಗಾಗಿ ತಮ್ಮ ಪಕ್ಷದ ಕಾರ್ಯಕರ್ತರಿಗೆ ಮುಖ್ಯಮಂತ್ರಿ ತಮಾಂಗ್ ಧನ್ಯವಾದ ತಿಳಿಸಿದ್ದಾರೆ.
“ಜನರ ಪ್ರೀತಿ ಮತ್ತು ವಿಶ್ವಾಸದಿಂದಾಗಿ ನಾವು ಕಳೆದ ಐದು ವರ್ಷಗಳಲ್ಲಿ ಸರ್ಕಾರವನ್ನು ಭದ್ರಪಡಿಸುವಲ್ಲಿ ಯಶಸ್ವಿಯಾಗಿದ್ದೇವೆ. ಜೊತೆಗೆ, ಪಕ್ಷದ ಕಾರ್ಯಕರ್ತರು ತುಂಬಾ ಶ್ರಮಿಸಿದ್ದಾರೆ. ಈಗ ನಾವು ಮುಂದಿನ ಐದು ವರ್ಷಗಳಲ್ಲಿ ನಮ್ಮ 100 ಪ್ರತಿಶತವನ್ನು ಸಿಕ್ಕಿಂ ಜನರಿಗಾಗಿ ನೀಡುತ್ತೇವೆ” ಎಂದು ಅವರು ಗ್ಯಾಂಗ್ಟಾಕ್‌ನ ಪಾಲ್ಜೋರ್ ಸ್ಟೇಡಿಯಂನಲ್ಲಿ ನಡೆದ ಸಭೆಯಲ್ಲಿ ಹೇಳಿದರು.
ತಮಾಂಗ್ ಸಿಕ್ಕಿಂನ ರೆನಾಕ್ ಮತ್ತು ಸೊರೆಂಗ್-ಚಕುಂಗ್‌ನ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಿ ಗೆದ್ದರು. 2019 ರ ಸಾರ್ವತ್ರಿಕ ಚುನಾವಣೆಯಲ್ಲಿ, ಎಸ್‌ಕೆಂ 17 ಸ್ಥಾನಗಳನ್ನು ಗೆದ್ದು, 25 ವರ್ಷಗಳ ನಂತರ ಸಿಕ್ಕಿಂ ಡೆಮಾಕ್ರಟಿಕ್ ಫ್ರಂಟ್ ಪಕ್ಷವನ್ನು (ಎಸ್‌ಡಿಎಂ) ಅಧಿಕಾರದಿಂದ ಉರುಳಿಸಿತು. ಈ ಬಾರಿ, ಆಡಳಿತ ಪಕ್ಷವು ತನ್ನ ಹಿಂದಿನ ಕಾರ್ಯಕ್ಷಮತೆಯನ್ನು ಉತ್ತಮಗೊಳಿಸಿದೆ.
ಆದರೆ, ಎಸ್‌ಡಿಎಫ್ ಅಧ್ಯಕ್ಷ ಮತ್ತು ಮಾಜಿ ಸಿಎಂ ಪವನ್ ಚಾಮ್ಲಿಂಗ್ ಎರಡೂ ಸ್ಥಾನಗಳಿಂದ ಸೋತಿದ್ದಾರೆ. ತಮಾಂಗ್ ಅವರ ಪತ್ನಿ ಕೃಷ್ಣ ಕುಮಾರಿ ರೈ ಕೂಡ ನಾಮ್ಚಿ-ಸಿಂಘಿತಂಗ್ ವಿಧಾನಸಭಾ ಕ್ಷೇತ್ರದಿಂದ ಗೆದ್ದಿದ್ದಾರೆ. ಅವರು ಎಸ್‌ಡಿಎಫ್‌ನ ಬಿಮಲ್ ರೈ ಅವರನ್ನು 5000 ಮತಗಳಿಂದ ಸೋಲಿಸಿದರು.
ಎಸ್‌ಕೆಎಂ ಅಭ್ಯರ್ಥಿ 7,605 ಮತಗಳನ್ನು ಪಡೆದರೆ, ಅವರ ಎಸ್‌ಡಿಎಫ್ ಎದುರಾಳಿ 2,605 ಮತಗಳನ್ನು ಗಳಿಸಿದರು. ಮಹೇಶ್ ರೈ (ಸಿಎಪಿ-ಎಸ್) ಮತ್ತು ಅರುಣಾ ಮಾಂಗರ್ (ಬಿಜೆಪಿ) 136 ಮತ್ತು 233 ಮತಗಳನ್ನು ಪಡೆದರು. ಸಿಕ್ಕಿಂ ಕ್ರಾಂತಿಕಾರಿ ಮೋರ್ಚಾ (ಎಸ್‌ಕೆಂ) ಸತತವಾಗಿ ಎರಡನೇ ಅವಧಿಗೆ ತನ್ನ ಸರ್ಕಾರವನ್ನು ರಚಿಸಲಿದೆ.
ಆರಂಭದಿಂದಲೂ ಸಿಕ್ಕಿಂ ಮುನ್ನಡೆ:
ವಿಧಾನಸಭಾ ಚುನಾವಣೆ ಮತ ಎಣಿಕೆಯ ಆರಂಭದಿಂದಲೂ ಆಡಳಿತಾರೂಢ ಸಿಕ್ಕಿಂ ಕ್ರಾಂತಿಕಾರಿ ಮೋರ್ಚಾ (ಎಸ್‌ಕೆಂ) ಮುನ್ನಡೆ ಕಾಯ್ದುಕೊಂಡಿತ್ತು. 32 ಸ್ಥಾನಗಳಲ್ಲಿ ಎಸ್‌ಕೆಎಂ 31 ಸ್ಥಾನಗಳನ್ನು ಗೆದ್ದಿದ್ದರೆ, ಸಿಕ್ಕಿಂ ಡೆಮಾಕ್ರಟಿಕ್ ಫ್ರಂಟ್ (ಎಸ್‌ಡಿಎಫ್) ಒಂದನ್ನು ಪಡೆದುಕೊಂಡಿದೆ. 2019 ರ ಚುನಾವಣೆಯಲ್ಲಿ ಎಸ್‌ಕೆಎಂ ಜೊತೆ ಮೈತ್ರಿ ಮಾಡಿಕೊಂಡು ಸ್ಪರ್ಧಿಸಿದ್ದ ಭಾರತೀಯ ಜನತಾ ಪಕ್ಷವು ರಾಜ್ಯದಲ್ಲಿ ಯಾವುದೇ ಸ್ಥಾನಗಳಲ್ಲಿ ಮುನ್ನಡೆ ಸಾಧಿಸುತ್ತಿಲ್ಲ. ಸರ್ಕಾರ ರಚಿಸಲು ಪಕ್ಷ ಅಥವಾ ಮೈತ್ರಿಕೂಟ 16ರ ಗಡಿ ದಾಟಬೇಕಾಗುತ್ತದೆ.
ಸಿಕ್ಕಿಂನ ಹಾಲಿ ಮುಖ್ಯಮಂತ್ರಿ ಮತ್ತು ಸಿಕ್ಕಿಂ ಕ್ರಾಂತಿಕಾರಿ ಮೋರ್ಚಾ (ಎಸ್‌ಕೆಎಂ) ನಾಯಕ ಪ್ರೇಮ್ ಸಿಂಗ್ ತಮಾಂಗ್ ಅವರು ರೆನಾಕ್ ಅಸೆಂಬ್ಲಿ ಸ್ಥಾನದಿಂದ ಚುನಾವಣೆಯಲ್ಲಿ ಗೆದ್ದಿದ್ದಾರೆ. ತಮಾಂಗ್ ಅವರು ಸೋಮ್ ನಾಥ್ ಪೌಡ್ಯಾಲ್ ಅವರನ್ನು 7,000 ಮತಗಳಿಂದ ಸೋಲಿಸಿದರು.
ಇದನ್ನೂ ಓದಿ; ‘ಇದು ಮೋದಿ ಸಮೀಕ್ಷೆ, ಎಕ್ಸಿಟ್ ಪೋಲ್ ಅಲ್ಲ’: ರಾಹುಲ್ ಗಾಂಧಿ


