Homeನ್ಯಾಯ ಪಥಡೇವಿಡ್ ಮ್ಯಾಮೆಟ್ ಮತ್ತು ಅವರ ಉಗ್ರವಾದಿ ಸಿನೆಮಾ ಸಿದ್ಧಾಂತ

ಡೇವಿಡ್ ಮ್ಯಾಮೆಟ್ ಮತ್ತು ಅವರ ಉಗ್ರವಾದಿ ಸಿನೆಮಾ ಸಿದ್ಧಾಂತ

- Advertisement -
- Advertisement -

ಸಿನಿಯಾನ:03

| ರಾಜಶೇಖರ್ ಅಕ್ಕಿ |

`ಮೊದಲ ಶಾಟ್ -ಒಬ್ಬ ಮಹಿಳೆ ಅಳುತ್ತ ಕುಳಿತಿದ್ದಾಳೆ, ಎರಡನೇ ಶಾಟ್- ನೇಣುಗಂಬದ ಪಕ್ಕ ನಿಂತಿರುವ ವ್ಯಕ್ತಿ ತನ್ನ ಗಡಿಯಾರ ನೋಡಿ, ಕ್ಯಾಮರಾ ಕಡೆ ನೋಡುತ್ತಾನೆ

ಪ್ರೇಕ್ಷಕರ ಮನದಲ್ಲಿ ಮೂಡುವುದು- ಓಹ್ ಈ ಮಹಿಳೆಯನ್ನು ಗಲ್ಲಿಗೇರಿಸುವ ಸಮಯ, ಅದಕ್ಕೇ ಅಳುತ್ತಿದ್ದಾಳೆ.

ಈಗ ಇನ್ನೊಂದು ಚಿತ್ರ; ಮೊದಲ ಶಾಟ್ – ಮಹಿಳೆ ಅಳುತ್ತ ಕುಳಿತಿದ್ದ ಅದೇ ಶಾಟ್; ಯಾವುದೇ ಬದಲಾವಣೆ ಇಲ್ಲ. ಎರಡನೇ ಶಾಟ್- ಒಬ್ಬ ನಾಲ್ಕೈದು ವರ್ಷದ ಮಗು ಬ್ಯಾಗ್ ಹಾಕಿಕೊಂಡು ಅಳುತ್ತ ಸ್ಕೂಲ್ ಬಸ್ ಹತ್ತುತ್ತಿದ್ದಾನೆ

ಪ್ರೇಕ್ಷಕರ ಮನದಲ್ಲಿ ಮೂಡುವುದು? ಹೇಳುವ ಅಗತ್ಯವಿಲ್ಲ’

ಡೇವಿಡ್ ಮ್ಯಾಮೆಟ್, ಸಿನೆಮಾ ನಿರ್ದೇಶನದ ಬಗ್ಗೆ ಮಾತನಾಡುತ್ತ.

ಇದನ್ನು ಜಕ್ಸ್ಟಾಪೊಸಿಷನ್ ಎನ್ನುತ್ತಾರೆ. ಇದು ಮೋಂಟಾಜ್ ಥಿಯರಿಯ ಒಂದು ಉದಾಹರಣೆ. ಇದನ್ನು ಮೊದಲ ಸಲ ಪ್ರತಿಪಾದಿಸಿದ್ದು ರಷಿಯಾದ ಚಿತ್ರನಿರ್ದೇಶಕ ಸರ್ಗೇಯ್ ಐಸಿನ್‍ಸ್ಟೇನ್. 1925 ರಲ್ಲಿ ಬಂದ ಬ್ಯಾಟಲ್‍ಶಿಪ್ ಪೊಟಮ್ಕಿನ್ ಎನ್ನುವ ಐತಿಹಾಸಿಕ ಸಿನೆಮಾ ನಿರ್ದೇಶಿಸಿದ್ದು ಇದೇ ಐಸಿನ್‍ಸ್ಟೇನ್.

ಐಸಿನ್‍ಸ್ಟೇನ್‍ನಿಂದ ಪ್ರಭಾವಿತರಾದ ಡೇವಿಡ್ ಮ್ಯಾಮೆಟ್ ಹುಟ್ಟಿದ್ದು 1947ರಲ್ಲಿ. ಶಿಕಾಗೋದಲ್ಲಿ ಹುಟ್ಟಿ ಬೆಳೆದ ಇವರು ಒಬ್ಬ ನಟನಾಗಿ ತನ್ನ ಕಲಾಜೀವನ ಶುರು ಮಾಡಿದರು, ಅದು ಸರಿಹೊಂದಲಿಲ್ಲ ಎಂದು ನಾಟಕಗಳ ನಿರ್ದೇಶನಕ್ಕಿಳಿದರು. ನಂತರ ನಾಟಕ ಬರೆಯೋಕ್ಕೆ ಶುರು ಮಾಡಿದರು. ಸೆಕ್ಷುವಲ್ ಪರ್ವರ್ಸಿಟಿ ಇನ್ ಷಿಕಾಗೋ, ಗ್ಲೆನ್‍ಗೆರಿ ಗ್ಲೆನ್ ರಾಸ್,  ಎ ಲೈಫ್ ಇನ ಥಿಯೇಟರ್ ಎನ್ನುವ ಅನೇಕ ಯಶಸ್ವೀ ನಾಟಕಗಳನ್ನು ಬರೆದರು. ಬರಹ ಮುಂದುವರೆಸುತ್ತ ಸಿನೆಮಾ ಬರೆಯಲು ಶುರು ಮಾಡಿದರು. ಸಿಡ್ನಿ ಲುಮೆಟ್‍ಯ ವರ್ಡಿಕ್ಟ್‍ನ ಚಿತ್ರಕಥೆಯನ್ನು ಬರೆದದ್ದು ಇವರೆ. ಅನೇಕ ಸಿನೆಮಾಗಳಿಗೆ ಬರೆದರೂ ಅದರ ಕ್ರೆಡಿಟ್ ತೆಗೆದುಕೊಳ್ಳಲಿಲ್ಲ. ಹಾಲಿವುಡ್‍ನ ಸ್ಕ್ರಿಪ್ಟ್ ಡಾಕ್ಟರ್ ಆಗಿಯೂ ಪ್ರಸಿದ್ಧರಾದವರು.  1989 ರಲ್ಲಿ ಶಾನ್ ಪೆನ್ ಮತ್ತು ರಾಬರ್ಟ್ ಡಿನೀರೊ ಅಭಿನಯದ ‘ವಿ ಆರ್ ನೋ ಏಂಜೆಲ್ಸ್’ ಎನ್ನುವ ಚಿತ್ರ ನೋಡಿದರೆ ಇವರ ಬರಹದಲ್ಲಿರುವ ನಿಷ್ಠುರತೆ ಎದ್ದು ಕಾಣುತ್ತದೆ.

ಮ್ಯಾಮೆಟ್ ಅವರು ತಮ್ಮ ಸಂಭಾಷಣೆಯ ಶೈಲಿಗಾಗಿಯೇ ವಿಖ್ಯಾತರಾದವರು.

‘ನೀವು ಸಂಭಾಷಣೆ ಚೆನ್ನಾಗಿ ಬರೆಯುತ್ತೀರಿ ಎಂತಿದ್ದರೆ, ಆ ಸಂಭಾಷಣೆಗಳನ್ನು ಸಿನೆಮಾದಲ್ಲಿ ಬಳಸದಿರುವುದೇ ಉತ್ತಮ.’ ಇದು ಸಂಭಾಷಣೆ ಬಗ್ಗೆ ಮ್ಯಾಮೆಟ್ ಹೇಳಿದ್ದು.  ಇಷ್ಟು ನಿಷ್ಠುರವಾಗಿ ಸಂಭಾಷಣೆ ಹೇಗೆ ಬರೆಯುತ್ತೀರಿ ಎಂದು ಕೇಳಿದಾಗ ‘‘ಆಗಿನ್ನೂ ನಮ್ಮ ಮನೆಗಳಲ್ಲಿ ಟಿವಿ ಬಂದಿರದ ಸಮಯ, ಸಂಜೆ ಮನೆಯ ಎಲ್ಲಾ ಸದಸ್ಯರು ಕುಳಿತುಕೊಂಡು ನಾವೆಷ್ಟು ದುಷ್ಟತನದ ಮಾತುಗಳನ್ನು ಆಡಬಹುದೋ ಎನ್ನುವ ಸಾಮಥ್ರ್ಯದ ಆಧಾರದ ಮೇಲೆ ನಮ್ಮನ್ನು ನಾವು ಶೋಚನೀಯ ಮಾಡಿಕೊಳ್ಳುತ್ತ ನಮ್ಮ ಸಮಯ ಕಳೆಯುತಿದ್ದೆವು. ‘ 

ಬರಹಕ್ಕಷ್ಟೇ ನಿಲ್ಲದೇ ಸಿನೆಮಾ ನಿರ್ದೇಶನಕ್ಕೂ ಲಗ್ಗೆ ಇಟ್ಟರು ಮ್ಯಾಮೆಟ್. ಹೌಸ್ ಆಫ್ ಗೇಮ್ಸ್ ಇವರ ನಿರ್ದೇಶನದ ಮೊದಲ ಚಿತ್ರ. ನಂತರ ಹೋಮಿಸೈಡ್, ಸ್ಪಾರ್ಟನ್, ಒಲಿಯಾನಾ, ಸ್ಪ್ಯಾನಿಷ್ ಪ್ರಿಸನರ್ ಇವರು ನಿದೇಶಿಸಿದ ಕೆಲವು ಚಿತ್ರಗಳು. ಇವುಗಳಲ್ಲಿ ಹೆಚ್ಚಿನ ಚಿತ್ರಗಳು ಬಾಕ್ಸಾಫೀಸಿನಲ್ಲಿ ಗೆಲ್ಲಲಿಲ್ಲ.

1991 ರಲ್ಲಿ ಮ್ಯಾಮೆಟ್  ಸಿನೆಮಾ ನಿರ್ದೇಶನದ ಬಗ್ಗೆ ‘ಆನ್ ಡಿರೆಕ್ಟಿಂಗ್ ಫಿಲ್ಮ್’ ಎನ್ನುವ ಪುಸ್ತಕ ಬರೆದರು. ನಮಗೆಲ್ಲಾ ಡೇವಿಡ್ ಮ್ಯಾಮೆಟ್ ಪರಿಚಯವಾಗಿದ್ದು ಈ ಪುಸ್ತಕದಿಂದಲೇ. ಸಿನೆಮಾ ನಿರ್ದೇಶನ ಕಲಿಯುವಾಗ ಓದಲೇಬೇಕಾದ ಪುಸ್ತಕಗಳಾದ ಟಾರ್ಕೋವಸ್ಕಿಯ ‘ಸ್ಕಲ್ಪ್ಟಿಂಗ್ ಇನ್ ಟೈಮ್’, ಸ್ಟೀವನ್ ಕಾಟ್ಜ್‍ನ ‘ಶಾಟ್ ಬೈ ಶಾಟ್’, ಆ್ಯಂಡ್ರಿ ವೈಯದಾ ಅವರ ‘ವೈಯದಾ ಆನ್ ಫಿಲ್ಮ್ಸ್’, ವಾಲ್ಟರ್ ಮರ್ಚ್‍ನ ‘ಇನ್ ದಿ ಬ್ಲಿಂಕ್ ಆಫ್ ಅ್ಯನ್ ಐ’ ಐಸಿನ್‍ಸ್ಟೇನ್ ನ ‘ಫಿಲ್ಮ್ ಸೆನ್ಸ್’ ಇವೆಲ್ಲವುಗಳಲ್ಲಿ ಡೇವಿಡ್ ಮ್ಯಾಮೆಟ್ ಅವರ ಪುಸ್ತಕ ಎಲ್ಲಕ್ಕಿಂತ ಅತಿರೇಕದ ನಿಲುವುಗಳನ್ನು ಹೊಂದಿದ ಪುಸ್ತಕ. ಇವರ ಪುಸ್ತಕದಲ್ಲಿರುವ ಥಿಯರಿ ಮತ್ತು ಇವರು ಪ್ರತಿಪಾದಿಸುವ ಥಿಯರಿಗಳನ್ನು ಅನುಷ್ಠಾನಗೊಳಿಸಿಕೊಳ್ಳಬೇಕೋ ಇಲ್ಲವೋ ಎನ್ನುವದನ್ನು ಚರ್ಚಿಸಬಹುದು ಆದರೆ ಇವರ ಥಿಯರಿಗಳನ್ನು ತಿಳಿದುಕೊಳ್ಳದೇ ಇರುವುದು ಒಬ್ಬ ನಿರ್ದೇಶಕನಿಗೆ ದೊಡ್ಡ ಲಾಸ್.

ಮುಂದೇನಾಗಬೇಕು ಎಂದು ತಿಳಿದುಕೊಳ್ಳಲು ಪ್ರೇಕ್ಷಕನನ್ನು ತುದಿಗಾಲಲ್ಲಿ ನಿಲ್ಲಿಸಬೇಕು, ಪ್ರತಿಯೊಂದು ಶಾಟ್ ಕೂಡ ಅದರ ಮುಂಚಿನ ಶಾಟ್‍ದಿಂದ ಕಥೆಯನ್ನು ಮುಂದುವರೆಸುವಂತಿರಬೇಕು, ಪ್ರೇಕ್ಷಕರಿಗೆ ಎಲ್ಲವನ್ನೂ ಹೇಳುವ ಅವಶ್ಯಕತೆ ಇಲ್ಲ,  ‘ಯಾವುದೇ ಸಿನೆಮಾದ ಮೊದಲ ಹತ್ತು ನಿಮಿಷಗಳನ್ನು ಕತ್ತರಿಸಿಬಿಡಿ, ಚೆನ್ನಾಗಾಗುತ್ತೆ.’ ‘ಸಿನೆಮಾ ಮಾಡುವುದು ಒಂದು ಜೋಕ್ ಇದ್ದಂತೆ, ಪ್ರೇಕ್ಷಕರು ಇನ್ನೇನೋ ನಿರೀಕ್ಸಿಸುತ್ತಿದ್ದಾಗ ಬೇರೇನೋ ಆಗುತ್ತೆ. ಹಾಗಿಲ್ಲದಿದ್ದರೆ ಏನಕ್ಕೆ ನೋಡಬೇಕು ನಿಮ್ಮ ಸಿನೆಮಾ?’

2003ರಲ್ಲಿ ಇರ್ಫಾನ್ ಮತ್ತು ನವಾಝುದ್ದಿನ್ ಸಿದ್ದಿಕಿ ಅಭಿನಯದ ‘ದಿ ಬೈಪಾಸ್’ ಎನ್ನುವ ಕಿರುಚಿತ್ರ ಬಿಡುಗಡೆಯಾಯಿತು. ಆ ಸಿನೆಮಾ ನೋಡಿದರೆ ಅದರ ನಿರ್ದೇಶಕ ಡೇವಿಡ್ ಮ್ಯಾಮೆಟ್‍ನಿಂದ ಎಷ್ಟು ಪ್ರಭಾವಿತರಾಗಿದ್ದಾರೆ ಎಂದು ಸುಲಭವಾಗಿ ತಿಳಿಯುತ್ತದೆ. ಆ ಚಿತ್ರಕ್ಕೆ ನೋಡುಗರಿಂದ, ವಿಮರ್ಶಕರಿಂದ ಮೆಚ್ಚುಗೆಯ ಸುರಿಮಳೆಯಾಯಿತು. ಅನೇಕ ಸಿನಿಹಬ್ಬಗಳಲ್ಲಿ ಪ್ರದರ್ಶಿತವಾಯಿತು. ಆಗತಾನೇ ಮ್ಯಾಮೆಟ್ ಅವರ ಪುಸ್ತಕ ಓದಿ ಪ್ರಭಾವಿತನಾಗಿದ್ದ ನನಗೆ ಆ ಚಿತ್ರ ನೋಡಿ ವಾಕರಿಗೆ ಬಂತು. ನಮಗೆಲ್ಲರಿಗೂ ಗೊತ್ತಿರುವಂತೆ ಸಿನೆಮಾ ಎನ್ನುವುದು ಕಥೆ ಹೇಳುವ ಒಂದು ಮಾಧ್ಯಮ. ದಿ ಬ್ಯಪಾಸ್ ಎನ್ನುವ ಚಿತ್ರದಲ್ಲಿ ಅದನ್ನು ಬಿಟ್ಟು ಆ ಮತಿಗೆಟ್ಟ ನಿರ್ದೇಶಕ ತನ್ನ ಕೌಶಲ್ಯವನ್ನು ಪ್ರದರ್ಶಿಸಲೆಂದೇ ಆ ಚಿತ್ರ ಮಾಡಿದ್ದು.

ಇಂತಹದ್ದೇ ದೌರ್ಬಲ್ಯವನ್ನು ಸ್ವತಃ ಮ್ಯಾಮೆಟ್ ಕೂಡ 2008ರಲ್ಲಿ ಬಂದ ತಮ್ಮ ‘ರೆಡ್‍ಬೆಲ್ಟ್’ ಮಿಕ್ಸಡ್ ಮಾರ್ಷಿಯಲ್ ಆರ್ಟ್‍ನ ಚಿತ್ರದಲ್ಲಿ ಪ್ರದರ್ಶಿಸಿದರು. ಅದು ಒಬ್ಬ ಮಾರ್ಷಿಯಲ್ ಆರ್ಟ್ ತರಬೇತುದಾರನ ಕಥೆ. ಅವನು ಬಿಕ್ಕಟ್ಟಿಗೆ ಸಿಕ್ಕಿಹಾಕಿಕೊಳ್ಳುವುದು, ಅವನ ಹೆಂಡತಿ ಮಾಡಿಕೊಳ್ಳುವ ಸಾಲ, ಇವನ ಸಣ್ಣ ತಪ್ಪಿನಿಂದಾಗಿ ಒಬ್ಬ ಪೋಲೀಸ್ ಅಧಿಕಾರಿಯ ಆತ್ಮಹತ್ಯೆ, ಬಿಕ್ಕಟ್ಟಿನಿಂದ ಹೊರಬರುವ ಯಾವುದೇ ದಾರಿಕಾಣದಿದ್ದಾಗ ಇವನೇನು ಮಾಡುತ್ತಾನೆ ಎನ್ನವುದು ಚಿತ್ರದ ಸಾರಾಂಶ. ಚಿತ್ರ ಒಂದು ಕ್ಷಣವೂ ಬೋರ್ ಹೊಡೆಸುವುದಿಲ್ಲ, ಪ್ರತಯೊಂದು ಶಾಟ್‍ಗೆ ತನ್ನದೇ ಆದ ಉದ್ದೇಶವಿದ್ದು ಕಥೆಯನ್ನು ಯಶಸ್ವಿಯಾಗಿ ಮುಂದೊಯ್ಯುತ್ತದೆ.  ಚಿತ್ರಕಥೆ, ಅಭಿನಯ, ತಾಂತ್ರಿಕತೆ, ನಿರ್ದೇಶನ ಎಲ್ಲವೂ ಸರಿಯಾಗಿಯೇ ಇದ್ದರೂ ಮ್ಯಾಮೆಟ್ ಅವರು ತಮ್ಮ ಬರಹ ಮತ್ತು ನಿರ್ದೇಶನದ ತಮ್ಮದೇ ಸಿದ್ಧಾಂತಗಳಿಗೆ ಜೋತುಬೀಳುವುದರಿಂದ ಚಿತ್ರ ಸೋಲುತ್ತದೆ.

ಆದರೆ ಡೇವಿಡ್ ಮ್ಯಾಮೆಟ್ ಸಿನೆಮಾ ಇತಿಹಾಸದಲ್ಲಿ ಬಹುಮುಖ್ಯ ವ್ಯಕ್ತಿ.  ಸಂಭಾಷಣೆಗಳಲ್ಲಿ, ನಿರ್ದೇಶನದಲ್ಲಿ, ಚಿತ್ರಕಥೆಯಲ್ಲಿ ನಿಷ್ಠುರತೆಯನ್ನು ಕಲಿಸುತ್ತಿರುವ ಮ್ಯಾಮೆಟ್ ಇಂದಿಗೂ ಸಕ್ರಿಯವಾಗಿದ್ದಾರೆ. ವಿಶ್ವಾದ್ಯಂತ ಸಾವಿರಾರು ವಿದ್ಯಾರ್ಥಿಗಳನ್ನು ಒಳ್ಳೇ ಸಿನೆಮಾ ಮಾಡಲು ತಮ್ಮ ವಿಶಿಷ್ಟ್ ‘ಮ್ಯಾಮೆಟ್‍ಸ್ಪೀಕ್’ ನಿಂದ ಹುರಿದುಂಬಿಸುತ್ತಲೇ ಇದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಐ-ಪ್ಯಾಕ್ ಮೇಲೆ ಇಡಿ ದಾಳಿ: ಕೋಲ್ಕತ್ತಾದಲ್ಲಿ ಮಮತಾ ಪ್ರತಿಭಟನೆ: ಅಮಿತ್ ಶಾ ಕಚೇರಿಯ ಹೊರಗೆ ಪ್ರತಿಭಟಿಸುತ್ತಿದ್ದ ಟಿಎಂಸಿ ಶಾಸಕರ ಬಂಧನ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ನಡೆಸಿದ...

ಮಹಾರಾಷ್ಟ್ರ ಜಲ್ನಾ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಸ್ಪರ್ಧೆ!

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಆರೋಪಿ ಶ್ರೀಕಾಂತ್ ಪಂಗಾರ್ಕರ್ ಮುಂಬರುವ ಜಲ್ನಾ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ ಎಂಬ ಸುದ್ದಿ  ಹಲವು ರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿದೆ.  ಗೌರಿ ಲಂಕೇಶ್ ಹತ್ಯೆ ಸೇರಿದಂತೆ...

‘ಮೋದಿ ಟ್ರಂಪ್‌ಗೆ ಕರೆ ಮಾಡದ ಕಾರಣ ಭಾರತ-ಯುಎಸ್ ವ್ಯಾಪಾರ ಒಪ್ಪಂದ ನಡೆಯಲಿಲ್ಲ’: ಹೊವಾರ್ಡ್ ಲುಟ್ನಿಕ್ 

ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಸರಿಯಾದ ಸಮಯಕ್ಕೆ ಕರೆ ಮಾಡದ ಕಾರಣ ಭಾರತದೊಂದಿಗಿನ ವ್ಯಾಪಾರ ಒಪ್ಪಂದ ನಡೆಯಲಿಲ್ಲ ಎಂದು ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್...

‘ರೈಲ್ವೆ ಸಚಿವಾಲಯವನ್ನು ವೈಯಕ್ತಿಕ ಆಸ್ತಿಯಾಗಿ ಬಳಸಿಕೊಳ್ಳಲಾಗಿದೆ’: ಲಾಲು ಮತ್ತು ಕುಟುಂಬದ ವಿರುದ್ಧ ದೆಹಲಿ ನ್ಯಾಯಾಲಯ ಆರೋಪ

ನವದೆಹಲಿ: ಉದ್ಯೋಗಕ್ಕಾಗಿ ಭೂಮಿ ಹಗರಣದಲ್ಲಿ ಆರ್‌ಜೆಡಿ ಮುಖ್ಯಸ್ಥ ಮತ್ತು ಮಾಜಿ ರೈಲ್ವೆ ಸಚಿವ ಲಾಲು ಪ್ರಸಾದ್ ಯಾದವ್, ಅವರ ಕುಟುಂಬದ ಸದಸ್ಯರು ಮತ್ತು ಇತರರ ವಿರುದ್ಧ ದೆಹಲಿ ನ್ಯಾಯಾಲಯ ಗಂಭೀರ ಆರೋಪಗಳನ್ನು ಮಾಡಿದೆ.  ಯಾದವ್...

‘ಕೇರಳದ ಮಲಯಾಳಂ ಮಸೂದೆಯನ್ನು ವಿರೋಧಿಸಲು ಸಾಧ್ಯವಿರುವ ಎಲ್ಲವನ್ನೂ ಮಾಡುತ್ತೇವೆ’: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಕನ್ನಡ ಮಾಧ್ಯಮ ಶಾಲೆಗಳಲ್ಲಿಯೂ ಮಲಯಾಳಂ ಅನ್ನು ಪ್ರಥಮ ಭಾಷೆಯನ್ನಾಗಿ ಮಾಡುವ ಕೇರಳದ ಪ್ರಸ್ತಾವಿತ ಕಾನೂನನ್ನು ವಿರೋಧಿಸಲು ಕರ್ನಾಟಕ "ಸಾಧ್ಯವಾದಷ್ಟು ಪ್ರಯತ್ನಿಸುತ್ತದೆ" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.   ಪ್ರಸ್ತಾವಿತ ಮಲಯಾಳಂ ಭಾಷಾ ಮಸೂದೆಯು "ಕೇರಳದ...

ಜಾರ್ಖಂಡ್‌ನಲ್ಲಿ ಮತ್ತೊಂದು ಗುಂಪುಹತ್ಯೆ: ದನ ಕಳ್ಳತನದ ಶಂಕೆಯಲ್ಲಿ ಮುಸ್ಲಿಂ ವ್ಯಕ್ತಿಯನ್ನು ಥಳಿಸಿ ಕೊಂದ ಗುಂಪು

ಜಾರ್ಖಂಡ್‌ನ ಗೊಡ್ಡಾ ಜಿಲ್ಲೆಯಲ್ಲಿ ಬುಧವಾರ ದನಗಳನ್ನು ಕದ್ದಿದ್ದಾನೆ ಎಂಬ ಶಂಕೆಯಲ್ಲಿ 45 ವರ್ಷದ ಮುಸ್ಲಿಂ ವ್ಯಕ್ತಿಯನ್ನು ಅಪರಿಚಿತ ಜನರ ಗುಂಪೊಂದು ಹೊಡೆದು ಕೊಂದಿದೆ ಎಂದು ಪಿಟಿಐ ವರದಿ ಮಾಡಿದೆ. ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ...

ನ್ಯಾಷನಲ್ ಹೆರಾಲ್ಡ್ ಜಾಹೀರಾತು ವಿವಾದ: ಹಣಕಾಸಿನ ದಾಖಲೆ ಕೇಳಿ ಡಿಕೆ ಸಹೋದರರಿಗೆ ನೋಟಿಸ್  

ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರದಿಂದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಬೇರೆ ಯಾವುದೇ ರಾಷ್ಟ್ರೀಯ ದಿನಪತ್ರಿಕೆಗಿಂತ ಹೆಚ್ಚಿನ ಜಾಹೀರಾತು ನಿಧಿ ದೊರೆತಿದೆ ಎಂದು ವರದಿಯಾಗಿದೆ, ಇದು ಸಾರ್ವಜನಿಕ ಹಣದ ಬಳಕೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ....

ಬಿಹಾರ: ಸರ್ಕಾರಿ ಶಾಲಾ ಶಿಕ್ಷಕರಿಗೆ ಬೀದಿ ನಾಯಿಗಳನ್ನು ಎಣಿಸುವ ಹೆಚ್ಚುವರಿ ಕರ್ತವ್ಯ ವಹಿಸಿದ ಪುರಸಭೆ  

ಪಾಟ್ನಾ: ಸುಪ್ರೀಂ ಕೋರ್ಟ್ ಬೀದಿ ನಾಯಿಗಳ ವಿಚಾರದಲ್ಲಿ ಮಹತ್ವದ ಆದೇಶ ನೀಡಿದೆ. ಸಾರ್ವಜನಿಕ ರಸ್ತೆಗಳು, ಬೀದಿಗಳು ಬೀದಿನಾಯಿ ಮುಕ್ತವಾಗಿರಬೇಕು ಎಂದು ಹೇಳಿದೆ. ಆದರೆ ಈ ಆದೇಶ ಸರ್ಕಾರಿ ಶಾಲಾ ಶಿಕ್ಷಕರ ಪಾಲಿಗೆ ದೊಡ್ಡ...

ಮಮತಾ ಬ್ಯಾನರ್ಜಿಯ ರಾಜಕೀಯ ಸಲಹಾ ಸಂಸ್ಥೆ ಐ-ಪ್ಯಾಕ್, ಅದರ ಮುಖ್ಯಸ್ಥ ಪ್ರತೀಕ್ ಜೈನ್ ಮನೆ ಮೇಲೆ ಇಡಿ ದಾಳಿ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ...

ಉತ್ತರಪ್ರದೇಶ: ಕಬ್ಬಿನ ಗದ್ದೆಯಲ್ಲಿ ಸುಟ್ಟ, ಅರೆನಗ್ನ ಮಹಿಳೆಯ ಮೃತದೇಹ ಪತ್ತೆ: ಅತ್ಯಾಚಾರ ಮಾಡಿ ಬೆಂಕಿ ಹಚ್ಚಿರುವ ಶಂಕೆ

ಹಾಪುರ್: ಉತ್ತರ ಪ್ರದೇಶದ ಹಾಪುರ್ ಜಿಲ್ಲೆಯಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದ್ದು, ಬಹದ್ದೂರ್‌ಗಢ ಪೊಲೀಸ್ ಠಾಣೆ ವ್ಯಾಪ್ತಿಯ ಲಹಾದ್ರಾ ಗ್ರಾಮದ ಇಟ್ಟಿಗೆ ಗೂಡುಗಳ ಹಿಂದಿನ ಕಬ್ಬಿನ ಗದ್ದೆಯಲ್ಲಿ ಸುಮಾರು 30 ವರ್ಷ ವಯಸ್ಸಿನ...