ದೆಹಲಿ ಮದ್ಯ ನೀತಿ ಪ್ರಕರಣದಲ್ಲಿ ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರನ್ನು ಸಿಬಿಐ ಅಧಿಕಾರಿಗಳು ಬಂಧನ ಮಾಡಿದ್ದಾರೆ. ಈ ಬಂಧನವನ್ನು ಖಂಡಿಸಿ ಇಂದು ರಾಷ್ಟ್ರದಾದ್ಯಂತ ಪ್ರತಿಭಟನೆ ಮಾಡುವುದಾಗಿ ಆಮ್ ಆದ್ಮಿ ಪಕ್ಷ (ಎಎಪಿ) ಘೋಷಿಸಿದೆ.
ಮದ್ಯ ನೀತಿ ಪ್ರಕರಣದಲ್ಲಿ ಎಂಟು ಗಂಟೆಗಳ ವಿಚಾರಣೆಯ ನಂತರ ಕೇಂದ್ರೀಯ ತನಿಖಾ ದಳವು ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರನ್ನು ಬಂಧಿಸಿದ್ದು, ಸೋಮವಾರ ರೌಸ್ ಅವೆನ್ಯೂದಲ್ಲಿರುವ ವಿಶೇಷ ಸಿಬಿಐ ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ. ಆಮ್ ಆದ್ಮಿ ಪಕ್ಷವೂ (ಎಎಪಿ) ಸಿಸೋಡಿಯಾ ಬಂಧನದ ವಿರುದ್ಧ ದೇಶಾದ್ಯಂತ ಬೀದಿಗಿಳಿಯಲು ನಿರ್ಧರಿಸಿದೆ. ದೇಶಾದ್ಯಂತ ಪ್ರತಿಭಟನೆ ನಡೆಸುವುದಾಗಿ ಎಎಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಂದೀಪ್ ಪಾಠಕ್ ಹೇಳಿದ್ದಾರೆ.
“ದೇಶದ ಲಕ್ಷಾಂತರ ಮಕ್ಕಳ ಭವಿಷ್ಯ ರೂಪಿಸಿದ ಮಹಾನ್ ಶಿಕ್ಷಣ ಸಚಿವ ಮನೀಶ್ ಸಿಸೋಡಿಯಾ ಅವರನ್ನು ಸುಳ್ಳು ಪ್ರಕರಣದಲ್ಲಿ ಬಂಧಿಸಲಾಗಿದೆ. ಇದರ ವಿರುದ್ಧ ಆಮ್ ಆದ್ಮಿ ಪಕ್ಷ ದೇಶಾದ್ಯಂತ ಪ್ರತಿಭಟನೆ ನಡೆಸಲಿದೆ” ಎಂದು ಪಾಠಕ್ ಟ್ವೀಟ್ ಮಾಡಿದ್ದಾರೆ.
देश के लाखों बच्चों का भविष्य संवारने वाले महान शिक्षा मंत्री श्री मनीष सिसोदिया को फ़र्ज़ी केस में गिरफ़्तार कर लिया गया है।
इसके विरोध में आम आदमी पार्टी कल पूरे देश में विरोध प्रदर्शन करेगी।
— Dr. Sandeep Pathak (@SandeepPathak04) February 26, 2023
ರಾಷ್ಟ್ರ ರಾಜಧಾನಿಯ ದೀನ್ ದಯಾಳ್ ಉಪಾಧ್ಯಾಯ ಮಾರ್ಗದಲ್ಲಿರುವ ಭಾರತೀಯ ಜನತಾ ಪಕ್ಷದ ಪ್ರಧಾನ ಕಚೇರಿಯಲ್ಲಿ ಮಧ್ಯಾಹ್ನ 12 ಗಂಟೆಗೆ ಎಎಪಿ ಪ್ರತಿಭಟನೆ ನಡೆಸಲಿದೆ. ಗುಜರಾತ್‌ನ ಗಾಂಧಿನಗರ, ಹರಿಯಾಣದ ರೋಹ್ಟಕ್, ನೋಯ್ಡಾ ಮತ್ತು ಇತರ ಸ್ಥಳಗಳಲ್ಲೂ ಪ್ರತಿಭಟನೆ ನಡೆಸುವ ಸಾಧ್ಯತೆಯಿದೆ ಎಂದು ವರದಿಗಳು ಹೇಳಿವೆ.
ಇದನ್ನೂ ಓದಿ: ಜೈಲಿಗೆ ಹೆದರುವುದಿಲ್ಲ: ಮತ್ತೆ CBI ಮುಂದೆ ವಿಚಾರಣೆಗೆ ಹಾಜರಾಗಲಿರುವ ಮನೀಶ್ ಸಿಸೋಡಿಯಾ
ಸಿಬಿಐ ಕಚೇರಿಗೆ ವಿಚಾರಣೆಗಾಗಿ ಆಗಮಿಸುವ ಸ್ವಲ್ಪ ಸಮಯದ ಮೊದಲು ಸಿಸೋಡಿಯಾ ಅವರು, ”ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‌ಗೆ ಪ್ರಧಾನಿ ನರೇಂದ್ರ ಮೋದಿ “ಹೆದರಿದ್ದಾರೆ.” ನಮ್ಮ ಪಕ್ಷದ ನಾಯಕರ ವಿರುದ್ಧ ಸುಳ್ಳು ಪ್ರಕರಣಗಳನ್ನು ದಾಖಲಿಸಲಾಗುತ್ತಿದೆ” ಎಂದು ಹೇಳಿದ್ದರು.
”ಸಿಎಂ ಅರವಿಂದ್ ಕೇಜ್ರಿವಾಲ್ ಅವರ ಹೆಚ್ಚುತ್ತಿರುವ ಜನಪ್ರಿಯತೆಗೆ ಪ್ರಧಾನಿ ನರೇಂದ್ರ ಮೋದಿ ಹೆದರಿದ್ದಾರೆ. ಹಾಗಾಗಿ ಸಿಬಿಐ ಮತ್ತು ಇಡಿಯಿಂದ ಪಿತೂರಿ ನಡೆಸಲಾಗುತ್ತಿದೆ. ನಮ್ಮ ಪಕ್ಷದ ನಾಯಕರ ವಿರುದ್ಧ ಸುಳ್ಳು ಪ್ರಕರಣಗಳನ್ನು ದಾಖಲಿಸಲಾಗುತ್ತಿದೆ. ಎಎಪಿ ಮತ್ತಷ್ಟು ಬೆಳೆದಂತೆ ಬಿಜೆಪಿ ನಮ್ಮ ಮೇಲೆ ಸುಳ್ಳು ಪ್ರಕರಣಗಳನ್ನು ಹಾಕುತ್ತಲೇ ಇರುತ್ತದೆ. ಸಿಬಿಐ, ಇಡಿ ಮತ್ತು ಅವರ ಸುಳ್ಳು ಪ್ರಕರಣಗಳಿಗೆ ನಾವು ಹೆದರುವುದಿಲ್ಲ” ಎಂದು ಸಿಸೋಡಿಯಾ ಹೇಳಿದ್ದಾರೆ.
”ಯಾವುದೇ ವಿಚಾರಣೆಯ ಸಮಯದಲ್ಲಿ, ಆರೋಪಿ ಅಥವಾ ಶಂಕಿತರು ಸಹಕರಿಸದಿದ್ದರೆ ಮತ್ತು ವ್ಯಕ್ತಿಯ ವಿರುದ್ಧ ಸಾಕಷ್ಟು ಸಾಕ್ಷ್ಯಗಳು ಮತ್ತು ಹೇಳಿಕೆಗಳು ಇದ್ದಲ್ಲಿ ಅವರನ್ನು ಪೊಲೀಸ್ ಕಸ್ಟಡಿಯನ್ನು ಪಡೆದುಕೊಳ್ಳಲು, ಬಂಧನ ಮಾಡಲಾಗುತ್ತದೆ. ನಂತರ ಮತ್ತಷ್ಟು ವಿಚಾರಣೆಯನ್ನು ನಡೆಸಬಹುದು” ಎಂದು ಅಧಿಕಾರಿ ಹೇಳಿದರು.
”ವಾಟ್ಸಾಪ್ ಚಾಟ್‌ಗಳು, ಕರೆ ಡೇಟಾ ದಾಖಲೆಗಳು (ಸಿಡಿಆರ್), ಇಮೇಲ್‌ಗಳು, ಸಿಸೋಡಿಯಾ ಕಾರ್ಯದರ್ಶಿ ಸಿ ಅರವಿಂದ್ ಸೇರಿದಂತೆ ದೆಹಲಿ ಸರ್ಕಾರದ ಪ್ರಮುಖ ಅಧಿಕಾರಿಗಳ ಹೇಳಿಕೆಗಳು, ಸಗಟು ವ್ಯಾಪಾರಿಗಳು ಮತ್ತು ಚಿಲ್ಲರೆ ವ್ಯಾಪಾರಿಗಳು ನಿರ್ಣಾಯಕ ಪಿತೂರಿ ಸಭೆಗಳು, ಹೋಟೆಲ್‌ಗಳ ಬಗ್ಗೆ ಸಾಕಷ್ಟು ಪುರಾವೆಗಳಿವೆ” ಎಂದು ಮತ್ತೊಬ್ಬ ಅಧಿಕಾರಿ ತಿಳಿಸಿದ್ದಾರೆ.
ಸಿಸೋಡಿಯಾ ಅವರು ಭಾನುವಾರ ಸಿಬಿಐ ಪ್ರಧಾನ ಕಛೇರಿಗೆ ಹೋಗುವ ಮುನ್ನ, ಮಹಾತ್ಮ ಗಾಂಧಿಯವರ ಸ್ಮಾರಕ ರಾಜ್‌ಘಾಟ್‌ಗೆ ಭೇಟಿ ನೀಡಿದ್ದರು.
ಈ ಬೆಳವಣಿಗೆಯ ಬಗ್ಗೆ ಪ್ರತಿಕ್ರಿಯಿಸಿದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ” ಈ ಬಂಧನವು ‘ಕೊಳಕು ರಾಜಕೀಯ’ ಎಂದು ಹೇಳಿದರು ಮತ್ತು ಸಿಸೋಡಿಯಾ ಅವರು ನಿರಪರಾಧಿ” ಎಂದು ಹೇಳಿದ್ದಾರೆ.
”ಮನೀಶ್ ಸಿಸೋಡಿಯಾ ಮುಗ್ಧ. ಅವರ ಬಂಧನವು ಕೊಳಕು ರಾಜಕೀಯ. ಮನೀಶ್ ಬಂಧನದಿಂದಾಗಿ ಜನರಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ” ಎಂದು ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ.
मनीष बेक़सूर हैं। उनकी गिरफ़्तारी गंदी राजनीति है। मनीष की गिरफ़्तारी से लोगों में बहुत रोष है। लोग सब देख रहे हैं। लोगों को सब समझ आ रहा है। लोग इसका जवाब देंगे।
इस से हमारे हौसले और बढ़ेंगे। हमारा संघर्ष और मज़बूत होगा।
— Arvind Kejriwal (@ArvindKejriwal) February 26, 2023
”ಸರ್ಕಾರ ಈ ನಡವಳಿಕೆಯನ್ನು ಎಲ್ಲರೂ ನೋಡುತ್ತಿದ್ದಾರೆ. ಜನರು ಎಲ್ಲವನ್ನೂ ಅರ್ಥಮಾಡಿಕೊಳ್ಳುತ್ತಿದ್ದಾರೆ. ಇದಕ್ಕೆ ಜನ ಸ್ಪಂದಿಸುತ್ತಾರೆ. ಇದು ನಮ್ಮ ಉತ್ಸಾಹವನ್ನು ಮತ್ತಷ್ಟು ಹೆಚ್ಚಿಸುತ್ತದೆ. ನಮ್ಮ ಹೋರಾಟವು ಬಲಗೊಳ್ಳುತ್ತದೆ” ಎಂದು ಅವರು ಟ್ವೀಟ್‌ನಲ್ಲಿ ತೀಳಿಸಿದ್ದಾರೆ.


