Homeಮುಖಪುಟಜಾತಿ, ಧರ್ಮದ ಕುರಿತ ಸಂಶೋಧನೆ ಸೂಕ್ಷ್ಮವಾದುದು: ಇಂಗ್ಲೆಂಡ್ ಮಾನವಶಾಸ್ತ್ರಜ್ಞರ ಗಡೀಪಾರು ಸಮರ್ಥಿಸಿಕೊಂಡ ಕೇಂದ್ರ

ಜಾತಿ, ಧರ್ಮದ ಕುರಿತ ಸಂಶೋಧನೆ ಸೂಕ್ಷ್ಮವಾದುದು: ಇಂಗ್ಲೆಂಡ್ ಮಾನವಶಾಸ್ತ್ರಜ್ಞರ ಗಡೀಪಾರು ಸಮರ್ಥಿಸಿಕೊಂಡ ಕೇಂದ್ರ

- Advertisement -
- Advertisement -

ಇಂಗ್ಲೆಂಡ್ ಮೂಲದ ಮಾನವಶಾಸ್ತ್ರಜ್ಞ ಫಿಲಿಪ್ಪೊ ಒಸೆಲ್ಲಾ ಅವರನ್ನು ಕಳೆದ ವರ್ಷ ಗಡೀಪಾರು ಮಾಡಿರುವುದನ್ನು ಕೇಂದ್ರ ಸರ್ಕಾರ ಸಮರ್ಥಿಸಿಕೊಂಡಿದೆ. ‘ಜಾತಿ ಮತ್ತು ಧರ್ಮದಂತಹ ವಿಷಯಗಳ ಕುರಿತಾದ ಸಂಶೋಧನೆಯು ಸೂಕ್ಷ್ಮವಾದುದ್ದಾಗಿದ್ದು ಮತ್ತು ಅಂತಹ ಸಂಶೋಧನೆಗಳನ್ನು ನಡೆಸುವುದು ವೀಸಾ ನಿಯಮಗಳ ಉಲ್ಲಂಘನೆಯಾಗಿದೆ’ ಎಂದು ದೆಹಲಿ ಹೈಕೋರ್ಟ್‌ಗೆ ತಿಳಿಸಿದೆ.

ಒಸೆಲ್ಲಾ ಇಂಗ್ಲೆಂಡ್‌ನ ಸಸೆಕ್ಸ್ ವಿಶ್ವವಿದ್ಯಾನಿಲಯದಲ್ಲಿ ಮಾನವಶಾಸ್ತ್ರ ಮತ್ತು ದಕ್ಷಿಣ ಏಷ್ಯಾದ ಅಧ್ಯಯನಗಳ ಪ್ರಾಧ್ಯಾಪಕರಾಗಿದ್ದಾರೆ. ಅವರು ಕಳೆದ 30 ವರ್ಷಗಳಿಂದ ಕೇರಳದ ಬಗ್ಗೆ ಸಾಕಷ್ಟು ಸಂಶೋಧನೆ ನಡೆಸಿ ಹಲವು ಪ್ರಬಂಧಗಳನ್ನು ಬರೆದಿದ್ದಾರೆ. ಕಳೆದ ವರ್ಷ ಮಾರ್ಚ್ 23ರಂದು ಅವರು ತಿರುವನಂತಪುರಂನಲ್ಲಿ ಸಮಾವೇಶವೊಂದರಲ್ಲಿ ಪಾಲ್ಗೊಳ್ಳಲು ವಿಮಾನ ನಿಲ್ದಾಣಕ್ಕೆ ಬಂದಾಗ ಯಾವುದೇ ಸ್ಪಷ್ಟ ಕಾರಣ ನೀಡದೆ ಅವರನ್ನು ವಾಪಸ್ ಕಳಿಸಲಾಗಿತ್ತು. ಈ ಕ್ರಮವನ್ನು ಅವರು ದೆಹಲಿ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದಾರೆ.

ಭಾರತದಲ್ಲಿ ಅಧಿಕಾರಿಗಳು ತನ್ನನ್ನು ಕಠಿಣ ಅಪರಾಧಿ ಎಂದು ಪರಿಗಣಿಸಿದ್ದಾರೆ ಮತ್ತು ಅವರ ಗಡೀಪಾರು ಅಸಂವಿಧಾನಿಕ ಮತ್ತು ಅನಿಯಂತ್ರಿತವಾಗಿದೆ. ನನ್ನ ಪರವಾಗಿ ವಿವರಿಸಲು ಯಾವುದೇ ಅವಕಾಶವನ್ನು ನೀಡಲಿಲ್ಲ ಮತ್ತು ನಾನು ಭಾರತಕ್ಕೆ ಹಿಂದೆ ಬಹಳಷ್ಟು ಸಲ ಭೇಟಿ ನೀಡಿದ್ದು ಯಾವುದೇ ಸಮಸ್ಯೆ ಎದುರಾಗಿರಲಿಲ್ಲ ಎಂದು ಅರ್ಜಿಯಲ್ಲಿ ದೂರಿದ್ದಾರೆ.

ಜಾತಿ, ಧರ್ಮ ಮತ್ತು ಆರ್ಥಿಕತೆಯಂತಹ ವಿಷಯಗಳು ಸೂಕ್ಷ್ಮವಾಗಿದ್ದು ಮತ್ತು ಅವುಗಳ ಮೇಲಿನ ಸಂಶೋಧನೆಯು ವೀಸಾ ನಿಯಮಗಳನ್ನು ಉಲ್ಲಂಘಿಸಿದೆ. ಅರ್ಜಿದಾರರು ಪ್ರವಾಸಿ ವೀಸಾದಲ್ಲಿ ಭೇಟಿ ನೀಡಿದಾಗ ಜಾತಿ, ಧರ್ಮ ಮತ್ತು ಆರ್ಥಿಕತೆಗೆ ಸಂಬಂಧಿಸಿದ ಸೂಕ್ಷ್ಮ ಸಂಶೋಧನಾ ಚಟುವಟಿಕೆಗಳಲ್ಲಿ ಹಾಗಾಗಿ ವೀಸಾ ನಿಯಮಗಳನ್ನು ಉಲ್ಲಂಘಿಸಲಾಗಿದೆ ಎಂದು ಸರ್ಕಾರ ಹೈಕೋರ್ಟ್‌ಗೆ ಅಫಿಡವಿಟ್ ಸಲ್ಲಿಸಿದೆ.

“ಕೇರಳದಲ್ಲಿ ತನ್ನ ಸಂಶೋಧನಾ ಕಾರ್ಯವನ್ನು ಕೈಗೊಳ್ಳಲು ಅರ್ಜಿದಾರರಿಗೆ ವಿದೇಶಿ ಧನಸಹಾಯ ಹರಿದುಬರುವುದು ರಾಷ್ಟ್ರೀಯ ಭದ್ರತೆಯ ಕಾಳಜಿಯ ಕ್ಷೇತ್ರವಾಗಿದೆ. ಏಕೆಂದರೆ ಅರ್ಜಿದಾರರು ಭಾರತದಲ್ಲಿ ತಮ್ಮ ಸಂಶೋಧನಾ ಕಾರ್ಯ ಅಧ್ಯಯನಕ್ಕಾಗಿ ಸ್ವೀಕರಿಸಿದ ಈ ನಿಧಿಯ ಬಳಕೆಯು ಲೆಕ್ಕಕ್ಕೆ ಸಿಗುವುದಿಲ್ಲ ಎಂದು ಕೇಂದ್ರ ಸರ್ಕಾರ ವಾದಿಸಿದೆ.

ಅರ್ಜಿಯ ವಿಚಾರಣೆಯನ್ನು 2023ರ ಮೇ 14ಕ್ಕೆ ಮುಂದೂಡಿದೆ.

ಇದನ್ನೂ ಓದಿ: ಟಿಪ್ಪು v/s ಸಾವರ್ಕರ್‌ ಎಂಬುದಕ್ಕೆ ನನ್ನ ಒಪ್ಪಿಗೆ ಇಲ್ಲ: ಯಡಿಯೂರಪ್ಪ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...