Homeಮುಖಪುಟಬೆಳ್ಳಿ ಚುಕ್ಕಿ: ಧ್ರುವ ನಕ್ಷತ್ರವನ್ನು ಗುರುತಿಸುವುದು ಹೇಗೆ?

ಬೆಳ್ಳಿ ಚುಕ್ಕಿ: ಧ್ರುವ ನಕ್ಷತ್ರವನ್ನು ಗುರುತಿಸುವುದು ಹೇಗೆ?

- Advertisement -
- Advertisement -

ಭೂಮಂಡಲದ ಹೊರಗಿನ ಲೋಕದ ಎಷ್ಟು ವಿಸ್ಮಯಗಳನ್ನೂ ಭೇದಿಸಿದ್ದರೂ ಅದು ಇನ್ನೂ ಮುಗಿಯದ ಪಯಣ. ಅದೇ ರೀತಿಯಲ್ಲಿ ಆಕಾಶ ವೀಕ್ಷಣೆ ಕೂಡ ಎಂದಿಗೂ ಮುಗಿಯದ, ಎಂದಿಗೂ ಬೇಸರ ತರಿಸದ ಹವ್ಯಾಸ.

ಜನವರಿ 21 ರಂದು ಚಂದಿರನ ಪಕ್ಕದಲ್ಲಿ ಕಾಣುವ ಮಂಗಳ ಗ್ರಹ

ಅಮಾವಾಸ್ಯೆ ಕಳೆದು ಒಂದು ವಾರವಾಗಿದೆ. ಚಂದ್ರ ಈಗ ವೃದ್ಧಿಸುತ್ತಿರುವ ಚಂದ್ರ. ಅಂದರೆ, ದಿನೆ ದಿನೆ ಚಂದ್ರನ ಮೇಲೆ ಸೂರ್ಯನ ಬೆಳಕು ಬೀಳುವ ಪ್ರದೇಶ ಹೆಚ್ಚುತ್ತಾ ಹೋಗುತ್ತದೆ. ಈ ತಿಂಗಳ 20ಕ್ಕೆ ಅಮಾವಾಸ್ಯೆ ಕಳೆದು ಒಂದು ವಾರವಾಗುತ್ತದೆ, ಅಂದರೆ ಏಳನೇ ದಿನ. ಈ ದಿನ ಚಂದ್ರನ ಅಧದಷ್ಟು ಭಾಗ ಕಾಣುತ್ತದೆ. ಅಲ್ಲದೆ, ಸೂರ್ಯ ಪಶ್ಚಿಮದಲ್ಲಿ ಮುಳುಗುತ್ತಿದ್ದರೆ, ಚಂದ್ರ ನೆತ್ತಿಯ ಮೇಲೆ ಕಾಣುತ್ತಾನೆ. 20ರಂದು ಸೂರ್ಯಾಸ್ತದ ಸಮಯದಲ್ಲಿ ನೆತ್ತಿಯ ಮೇಲೆ ಕಾಣುತ್ತಾನಾ? ಇದನ್ನು ನೀವು ಆಕಾಶ ವೀಕ್ಷಣೆ ಮೂಲಕ ಪರೀಕ್ಷಿಸಿ.

ಇಲ್ಲಿ ಮತ್ತೊಂದು ಗಮನಿಸಬೇಕಾದ ಅಂಶ ಏನೆಂದರೆ, ಚಂದ್ರನ ಯಾವ ಭಾಗ ಸೂರ್ಯನ ಬೆಳಕಿನಿಂದ ಹೊಳೆಯುತ್ತಿದೆ ಎಂದು. ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವ ವಿಚಾರವೇನೆಂದರೆ, ಚಂದ್ರನಿಗೆ ತನ್ನದೇ ಆದ ಸ್ವಂತ ಬೆಳಕಿಲ್ಲ. ಚಂದ್ರ ಸೂರ್ಯನ ಬೆಳಕನ್ನು ಪ್ರತಿಫಲಿಸುತ್ತಾನೆ. ಈ ಕಾರಣದಿಂದ 20ರಂದು ಸೂರ್ಯಾಸ್ತವನ್ನು ನೋಡುತ್ತಿದ್ದರೆ, ನೆತ್ತಿಯ ಮೇಲೆ ಕಾಣುವ ಚಂದ್ರನ ಯಾವ ಭಾಗ ಸೂರ್ಯನ ಬೆಳಕಿನಿಂದ ಹೊಳೆಯುತ್ತಿದೆ ಮತ್ತು ಆ ಭಾಗ ಯಾವ ದಿಕ್ಕಿಗಿದೆ ಎಂದು ಗಮನಿಸಿ. ಇದರಿಂದ ಸೂರ್ಯ ಮುಳುಗಿದ ನಂತರ ರಾತ್ರಿ ಆಕಾಶದಲ್ಲಿ, ಚಂದ್ರನ ಸಹಾಯದಿಂದ ಸುಲಭವಾಗಿ ದಿಕ್ಕನ್ನು ಗುರುತಿಸಲು ಸಹಾಯವಾಗುತ್ತದೆ. ಅಲ್ಲದೆ, ಈ ಚಟುವಟಿಕೆಯನ್ನು ೨೦ರಂದೇ ಮಾಡಬೇಕೆಂದೇನಿಲ್ಲ. ಯಾವ ದಿನವೇ ಆಗಲಿ, ಚಂದ್ರನ ಬೆಳಕಿನ ಭಾಗ ಯಾವ ದಿಕ್ಕಿಗೆ ಮುಖ ಮಾಡಿದೆ ಎಂದು ಗಮನಿಸುತ್ತಿರಿ.

ಅಂದಹಾಗೆ, 21ರಂದು ರಾತ್ರಿ ಆಕಾಶದಲ್ಲಿ ನೀವು ಚಂದ್ರನನ್ನು ಗಮನಿಸಿದರೆ, ಚಂದ್ರನ ಆಸು ಪಾಸಿನಲ್ಲಿಯೇ ಪ್ರಕಾಶಮಾನವಾದ ಕೆಂಪು ಚುಕ್ಕೆ ಕಾಣುತ್ತದೆ. ಸೂಕ್ಷ್ಮವಾಗಿ ಗಮನಿಸಿ, ಈ ಚುಕ್ಕೆ ಮಿನುಗುವುದಿಲ್ಲಾ. ಇದೇ ಮಂಗಳ ಗ್ರಹ.

ಜನವರಿ 28ರಂದು ಹುಣ್ಣಿಮೆ. ಅಂದು ಸೂರ್ಯಾಸ್ತವನ್ನು ಗಮನಿಸಿ. ಚಂದ್ರ ಅವೊತ್ತು ನೆತ್ತಿಯಲ್ಲಿ ಕಾಣುತ್ತಾನಾ ಅಥವಾ ಬೇರೆಡೆ ಕಾಣುತ್ತಾ ಅನ್ನುವುದನ್ನು ಗಮನಿಸಿ.

ಬುಧ ಗ್ರಹವನ್ನು ಸೂರ್ಯಾಸ್ತ ನಂತರ ನೋಡಬಹುದು

ಕಳೆದ ಡಿಸೆಂಬರ್‌ನಲ್ಲಿ, ಗುರು ಮತ್ತು ಶನಿ ಗ್ರಹಗಳ ಸಮಾಗಮವನ್ನು ಆಗಸದಲ್ಲಿ ಕಂಡೆವು. ಅಂದರೆ, ಗುರು ಮತ್ತು ಶನಿ ಗ್ರಹಗಳು ಆಗಸದಲ್ಲಿ ಹಿಂದೆಂದಿಗಿಂತಲೂ ಸನಿಹ ಬಂದಿದ್ದನ್ನು ನಾವು ವೀಕ್ಷಿಸಿದೆವು. ಸದ್ಯ ಈಗ ಎರಡೂ ಗ್ರಹಗಳ ಸೂರ್ಯನ ಆಸುಪಾಸಿನಲ್ಲಿಯೇ ಇರುವುದರಿಂದ, ಸೂರ್ಯನ ತೀಕ್ಷ್ಣವಾದ ಬೆಳಕಿನ ಕಾರಣ ಈ ಗ್ರಹಗಳನ್ನು ನೋಡುವುದು ಕಷ್ಟವಾಗಿರುತ್ತದೆ. ಆದರೆ, ಸೌರಮಂಡಲದ ಮೊದಲ ಗ್ರಹವಾದ ಬುಧ ಗ್ರಹವನ್ನು ನೋಡಬಹುದು.

ಈ ತಿಂಗಳಿನಲ್ಲಿ, ಸೂರ್ಯ ಮುಳುಗಿದ ನಂತರ ದಿಗಂತದಲ್ಲಿನ ಸೂರ್ಯನ ಸ್ಥಾನದಿಂದ ಸುಮಾರು 20 ಡಿಗ್ರಿ ಎತ್ತರದಲ್ಲಿ ಒಂದು ಚುಕ್ಕಿ ಕಾಣುತ್ತದೆ. ಈ ಚುಕ್ಕಿಯೇ ಬುಧ ಗ್ರಹ. ಬೈನಾಕ್ಯುಲರ್ ಅಥವಾ ದೂರದರ್ಶಕದಲ್ಲಿ ಬುಧ ಗ್ರಹವನ್ನು ಚೆನ್ನಾಗಿ ನೋಡಬಹುದು. ಸಾಮಾನ್ಯವಾಗಿ ಸೂರ್ಯಾಸ್ತದ ನಂತರ ಅಥವಾ ಸೂರ್ಯ ಉದಯಿಸುವ ಮೊದಲು ಸುಮಾರು ಒಂದೂವರೆ ಗಂಟೆಯವರೆಗೆ ಮಾತ್ರ ಬುಧ ಗ್ರಹವನ್ನು ನಾವು ನೋಡಬಹುದಾಗಿದೆ.

ಇದಕ್ಕೆ ಕಾರಣ, ಸೌರಮಂಡಲದಲ್ಲಿ ಭೂಮಿಯ ಕಕ್ಷೆಯಿಂದ ಹೊರಗಿರುವ ಗ್ರಹಗಳನ್ನು ಹೊರಗ್ರಹಗಳು ಮತ್ತು ಒಳಗಿರುವ ಗ್ರಹಗಳನ್ನು ಒಳಗ್ರಹಗಳು ಎಂದು ಕರೆಯುತ್ತೇವೆ. ಬುಧ ಒಳಗ್ರಹಗಳ ಪಟ್ಟಿಗೆ ಸೇರುತ್ತದೆ. ಒಳಗ್ರಹಗಳು ಸಾಮಾನ್ಯವಾಗಿ ಸೂರ್ಯಾಸ್ತದ ನಂತರ ಅಥವಾ ಸೂರ್ಯ ಉದಯಿಸುವ ಮೊದಲ ನಾಲ್ಕು ಗಂಟೆಯವರೆಗೆ ಕಾಣುತ್ತದೆ. ಬುಧ ಗ್ರಹಕ್ಕೆ ಈ ಸಮಯ ಸುಮಾರು ಎರಡು ಗಂಟೆಯಾಗಿದೆ. ಹಾಗಾಗಿ, ಒಳ ಗ್ರಹಗಳಾದ ಬುಧ ಮತ್ತು ಶುಕ್ರ ಆಗಸದಲ್ಲಿ ಎತ್ತರದಲ್ಲಿ ಕಾಣಸಿಗುವುದಿಲ್ಲ. ಆಗಸದಲ್ಲಿ, ಬುಧ ಗ್ರಹ ಕ್ಷಿತಿಜದಿಂದ (Horizon) ಹೆಚ್ಚು ಎಂದರೆ 20 ಡಿಗ್ರಿ ಎತ್ತರದಲ್ಲಿ ಕಾಣಿಸಿದರೆ, ಶುಕ್ರ ಗ್ರಹ 45 ಡಿಗ್ರಿವರೆಗೆ ತಲುಪುತ್ತದೆ. ಈ ಎತ್ತರ ಬಿಟ್ಟು ಈ ಎರಡೂ ಗ್ರಹಗಳು ಎಂದಿಗೂ ನೆತ್ತಿಯಲ್ಲಿ ಕಾಣಿಸುವುದಿಲ್ಲ.

ಧ್ರುವ ನಕ್ಷತ್ರವನ್ನು ಗುರುತಿಸುವುದು ಹೇಗೆ?

ಆಗಸವನ್ನು 88 ನಕ್ಷತ್ರ ಪುಂಜಗಳಿಂದ ಗುರುತಿಸಿರುವುದನ್ನು ನಾವು ಈಗಾಗಲೇ ತಿಳಿದುಕೊಂಡಿದ್ದೇವೆ. ಇವುಗಳಲ್ಲಿ ಕೆಲವು ನಕ್ಷತ್ರ ಪುಂಜಗಳ ಆಕೃತಿಗಳು ಆಗಸದಲ್ಲಿ ಗುರುತಿಸಲು ಬಹಳ ಸುಲಭ ಮತ್ತು ಈ ನಕ್ಷತ್ರ ಪುಂಜದಲ್ಲಿನ ನಕ್ಷತ್ರಗಳು ಹೆಚ್ಚು ಪ್ರಕಾಶಮಾನ ಹೊಂದಿರುವುದರಿಂದ, ನಗರ ಪ್ರದೇಶದಿಂದಲೂ ಇವುಗಳನ್ನು ಸುಲಭವಾಗಿ ಕಾಣಬಹುದು. ಇಂತಹ ಪ್ರಕಾಶಮಾನವಾದ ನಕ್ಷತ್ರ ಪುಂಜಗಳನ್ನು ಆಗಸದಲ್ಲಿನ ಗ್ರಹ, ನಕ್ಷತ್ರ ಮತ್ತು ಧೂಮಕೇತುಗಳನ್ನು ಗುರುತಿಸಲು ಮಾರ್ಗದರ್ಶಕವಾಗಿ ಬಳಸುತ್ತೇವೆ. ಇಂತಹ ಒಂದು ನಕ್ಷತ್ರ ಪುಂಜ ಉತ್ತರ ದಿಕ್ಕಿನಲ್ಲಿ ಕಾಣುವ ಕ್ಯಾಸಿಯೋಪಿಯ (ದಿ ಕ್ವೀನ್), ಕನ್ನಡದಲ್ಲಿ ಇದನ್ನು ಕುಂತಿ ನಕ್ಷತ್ರ ಪುಂಜ ಎಂದು ಕರೆಯುತ್ತಾರೆ.

ಈ ತಿಂಗಳಿನಲ್ಲಿ, ಮೋಡವಿಲ್ಲದ ರಾತ್ರಿಯಂದು ಸುಮಾರು 7.30 ಗಂಟೆಗೆ, ಆಗಸದ ಉತ್ತರ ದಿಕ್ಕಿನಲ್ಲಿ ಗಮನಿಸಿದರೆ ಚಿತ್ರ 1 ರಲ್ಲಿ ಗುರುತಿಸಿರುವ ಒ ಆಕಾರದ ಒಂದು ನಕ್ಷತ್ರ ಪುಂಜವನ್ನು ನೋಡಬಹುದು. ಈ ಒ ಆಕಾರದ ನಕ್ಷತ್ರ ಪುಂಜವೇ ಕುಂತಿ ನಕ್ಷತ್ರ ಪುಂಜ.

ಈಗ ಚಿತ್ರ 2ನ್ನು ಗಮನಿಸಿ, ಕುಂತಿ ನಕ್ಷತ್ರ ಪುಂಜದಲ್ಲಿ ಪ್ರಕಾಶಮಾನವಾದ 5 ನಕ್ಷತ್ರಗಳನ್ನು ಗುರುತಿಸಲಾಗಿದೆ. ಇಲ್ಲಿ, 3 ಮತ್ತು 4ನೇ ನಕ್ಷತ್ರದ ಕಾಲ್ಪನಿಕ S ಕ್ಷಿತಿಜಕ್ಕೆ (Horizon) ಲಂಬ ಕೋನದಲ್ಲಿ ಒಂದು ಗೆರೆಯನ್ನು ಎಳೆದುಕೊಂಡು ಬಂದರೆ, ಅದು ಒಂದು ನಕ್ಷತ್ರಕ್ಕೆ ತಾಗುವುದು. ಈ ನಕ್ಷತ್ರವೇ ಧ್ರುವ ನಕ್ಷತ್ರ, ಅಂದರೆ Pole Star. ಈ ನಕ್ಷತ್ರದ ವಿಶೇಷತೆ ಏನೆಂದರೆ, ಬೇರೆ ಆಕಾಶಕಾಯಗಳಂತೆ ಈ ನಕ್ಷತ್ರ ಪೂರ್ವದಲ್ಲಿ ಹುಟ್ಟುವುದಿಲ್ಲ ಅಥವಾ ಪಶ್ಚಿಮದಲ್ಲಿ ಮುಳುಗುವುದೂ ಇಲ್ಲ. ಈ ನಕ್ಷತ್ರ ನಿಶ್ಚಲ ಸ್ಥಿತಿಯಲ್ಲಿ ಅದೇ ದಿಕ್ಕಿನಲ್ಲಿ ಯಾವಾಗಲೂ ಇರುತ್ತದೆ. ನಕ್ಷತ್ರ ಪುಂಜಗಳ ಸಹಾಯದಿಂದ ಧ್ರುವ ನಕ್ಷತ್ರವನ್ನು ಗುರುತಿಸಲು ನಾವು ಕಲಿತರೆ, ದಿಕ್ಕುಗಳನ್ನು ಬೇರ್‍ಯಾವುದೇ ಸಹಾಯ ಇಲ್ಲದೆ ಗುರುತಿಸಬಹುದು. ಹಿಂದೆ, ರಾತ್ರಿ ಸಮಯದಲ್ಲಿ ಕಾಡಿನಲ್ಲಿ ಸಂಚರಿಸಲು, ಸಮುದ್ರಯಾನ ಕೈಗೊಳ್ಳಲು ಧ್ರುವ ನಕ್ಷತ್ರವನ್ನು ಈ ರೀತಿ ಗುರುತಿಸಿಯೇ, ದಿಕ್ಕುಗಳನ್ನು ಕಂಡುಕೊಳ್ಳುತ್ತಿದ್ದರು.

ಧ್ರುವ ನಕ್ಷತ್ರ ಏಕೆ ಹುಟ್ಟುವುದಿಲ್ಲ ಮತ್ತು ಮುಳುಗುವುದಿಲ್ಲ ಎಂಬ ವಿಷಯವನ್ನು ಯೋಚಿಸುತ್ತಿದ್ದೀರಿ ಅಲ್ಲವೇ? ಮುಂದಿನ ಸಂಚಿಕೆಯಲ್ಲಿ ಅದರ ಬಗ್ಗೆ ಚರ್ಚಿಸೋಣ.

(ಚಿತ್ರ ಕೃಪೆ: Stellarium Software)


ಇದನ್ನೂ ಓದಿ:

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧದ ಅವಿಶ್ವಾಸ ನಿರ್ಣಯಕ್ಕೆ ಸೋಲು

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧ ವಿರೋಧ ಪಕ್ಷಗಳು ಮಂಡಿಸಿದ್ದ ಅವಿಶ್ವಾಸ ನಿರ್ಣಯವು ಬುಧವಾರ (ಮಾ.11) ಧ್ವನಿ ಮತದ ಮೂಲಕ ತಿರಸ್ಕಾರಗೊಂಡಿದೆ. ಸದನದಲ್ಲಿ ವಿರೋಧ ಪಕ್ಷಗಳ ತೀವ್ರ ಗದ್ದಲ ಮತ್ತು ಘೋಷಣೆಗಳ ನಡುವೆಯೇ ಸ್ಪೀಕರ್...

ಉತ್ತರ ಪ್ರದೇಶ| ರಸ್ತೆ ಗುಂಡಿಗೆ ಇಳಿದ ಆಂಬ್ಯುಲೆನ್ಸ್; ಮರುಜೀವ ಪಡೆದ ಮೆದುಳು ನಿಷ್ಕ್ರಿಯಗೊಂಡಿದ್ದ ಮಹಿಳೆ!

ಉತ್ತರ ಪ್ರದೇಶದ ಬರೇಲಿಯ ಖಾಸಗಿ ಆಸ್ಪತ್ರೆಯೊಂದರ ವೈದ್ಯರು ಮೆದುಳು ನಿಷ್ಕ್ರಿಯ ಎಂದು ಘೋಷಿಸಿದ್ದು, ಮಹಿಳೆಯೊಬ್ಬರ ಮೃತದೇಹವನ್ನು ಅಂತ್ಯಕ್ರಿಯೆಗಾಗಿ ಮನೆಗೆ ಸಾಗಿಸುತ್ತಿದ್ದಾಗ ಆಂಬ್ಯುಲೆನ್ಸ್ ರಸ್ತೆಯ ಗುಂಡಿಗೆ ಇಳಿದ ನಂತರ ಆಕೆ ಜೀವಂತವಾಗಿರುವ ಲಕ್ಷಣಗಳು ಕಂಡುಬಂದು...

ಪಶ್ಚಿಮ ಏಷ್ಯಾ ಸಂಘರ್ಷ: ದುಬೈ ವಿಮಾನ ನಿಲ್ದಾಣದ ಮೇಲೆ ಇರಾನ್​ ಡ್ರೋನ್​ ದಾಳಿ; ಭಾರತೀಯ ಪ್ರಜೆ ಸೇರಿ ನಾಲ್ವರಿಗೆ ಗಾಯ

ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಇರಾನಿನ ಎರಡು ಡ್ರೋಣಗಳಿಂದ ದಾಳಿ ನಡೆದಿದೆ. ಈ ದಾಳಿಯಲ್ಲಿ ಓರ್ವ ಭಾರತೀಯ ಸೇರಿದಂತೆ ನಾಲ್ವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲಿನ ಸರ್ಕಾರದ ಪರವಾಗಿ ಪ್ರಕಟಣೆ ಹೊರಡಿಸಿರುವ...

ಜಾರ್ಖಂಡ್| ಆಂಬ್ಯುಲೆನ್ಸ್ ನಿರಾಕರಿಸಿದ ಆಸ್ಪತ್ರೆ ಸಿಬ್ಬಂದಿ; ಕಾರ್ಡ್‌ಬೋರ್ಡ್‌ನಲ್ಲಿ ಮಗುವಿನ ಶವ ಸಾಗಿಸಿದ ತಂದೆ

ಆಸ್ಪತ್ರೆ ಸಿಬ್ಬಂದಿ ಆಂಬ್ಯುಲೆನ್ಸ್ ನಿರಾಕರಿಸಿದ್ದರಿಂದ ಕೂಲಿಕಾರ ತಂದೆಯೊಬ್ಬ ಕಾರ್ಡ್‌ಬೋರ್ಡ್‌ನಲ್ಲಿ ಮಗುವಿನ ಶವ ಸಾಗಿಸಿರುವ ಹೃದಯವಿದ್ರಾವಕ ಘಟನೆಯೊಂದು ಜಾರ್ಖಂಡ್‌ನ ಪಶ್ಚಿಮ ಸಿಂಗ್ಭೂಮ್ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಕಳೆದ ಶನಿವಾರ ನಡೆದಿದೆ ಎನ್ನಲಾದ...

ಮಧುರಾಂತಕಂ ಬಳಿ 14 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ: ಪೋಕ್ಸೋ ಪ್ರಕರಣದಡಿ ಓರ್ವ ರೌಡಿ ಶೀಟರ್ ಬಂಧನ

ಚೆನ್ನೈ (ಚೆಂಗಲ್ಪಟ್ಟು): ಸೋಮವಾರ ರಾತ್ರಿ ಮಧುರಾಂಟಕಂ ಬಳಿಯ ಜಲಮೂಲದ ದಡದಲ್ಲಿ 14 ವರ್ಷದ ಬಾಲಕಿಯ ಮೇಲೆ ರೌಡಿ ಶೀಟರ್ ಮತ್ತು ಆತನ ಸಹಚರರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ವರದಿಯಾಗಿದೆ. ಪ್ರಕರಣ ಸಂಬಂಧ ಪೋಕ್ಸೋ...

ಮುಸ್ಲಿಂ ಮಹಿಳೆಯರ ವಿರುದ್ಧದ ಷರಿಯಾ ಕಾನೂನಿಗೆ ಏಕರೂಪ ನಾಗರಿಕ ಸಂಹಿತೆ ಪರಿಹಾರ: ಸುಪ್ರೀಂ ಕೋರ್ಟ್

"ಮುಸ್ಲಿಂ ವೈಯಕ್ತಿಕ ಕಾನೂನಿನಡಿಯಲ್ಲಿ ತಾರತಮ್ಯದ ಆನುವಂಶಿಕ ನಿಬಂಧನೆಗಳನ್ನು ಪರಿಹರಿಸಲು ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಅತ್ಯಂತ ಪರಿಣಾಮಕಾರಿ ಪರಿಹಾರ ಎಂದು ಸುಪ್ರೀಂ ಕೋರ್ಟ್ ಮಂಗಳವಾರ (ಮಾ.20) ಹೇಳಿದೆ. ಮುಖ್ಯ ನ್ಯಾಯಮೂರ್ತಿ ಸೂರ್ಯ...

ಮುಂಬೈ: ಬಜೆಟ್ ಅಧಿವೇಶನದ ನಡುವೆ ವಿಧಾನ ಭವನದ ಬಳಿ ವ್ಯಕ್ತಿಯೊಬ್ಬನಿಂದ ಆತ್ಮಹತ್ಯೆಗೆ ಯತ್ನ: ವಶಕ್ಕೆ ಪಡೆದ ಪೊಲೀಸರು

ಮುಂಬೈ: ಮಾರ್ಚ್ 11, ಬುಧವಾರ ಮಹಾರಾಷ್ಟ್ರ ವಿಧಾನ ಭವನದ ಹೊರಗೆ ವ್ಯಕ್ತಿಯೊಬ್ಬರು ಆತ್ಮಾಹುತಿ ಮಾಡಿಕೊಳ್ಳಲು ಯತ್ನಿಸಿರುವುದಾಗಿ ವರದಿಯಾಗಿದೆ. ತಕ್ಷಣವೇ ಮುಂಬೈ ಪೊಲೀಸರು ಆತನನ್ನು ಬಂಧಿಸಿದ್ದಾರೆ.  2026 ರ ಮಹಾರಾಷ್ಟ್ರ ಬಜೆಟ್ ಅಧಿವೇಶನ ವಿಧಾನ ಭವನದಲ್ಲಿ...

ಕೋವಿಡ್ ಲಸಿಕೆ ಕೆಲ ಸಾವುಗಳಿಗೆ ಕಾರಣವಾಗಿದೆ ಎಂದು ಅಧಿಕೃತ ದತ್ತಾಂಶ ತೋರಿಸಿದೆ, ಸರ್ಕಾರ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಸಾಧ್ಯವಿಲ್ಲ : ಸುಪ್ರೀಂ ಕೋರ್ಟ್

ಸರ್ಕಾರದ ಅಧೀನದ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಮೂಲಕ ಕೋವಿಡ್ ಲಸಿಕೆಯನ್ನು ವಿತರಿಸಲಾಗಿದೆ. ಕೋವಿಡ್ ಲಸಿಕೆ ಪಡೆದ ಬಳಿಕ ಕೆಲ ಸಾವುಗಳು ಸಂಭವಿಸಿರುವುದನ್ನು ಅಧಿಕೃತ ದತ್ತಾಂಶಗಳೇ ದೃಢಪಡಿಸಿವೆ. ಹೀಗಿರುವಾಗ, ಲಸಿಕೆ ಹಾಕಿಸಿಕೊಂಡ ನಂತರ ಸಾವು...

ತಮಿಳುನಾಡು| ಪೊಲೀಸ್ ದೌರ್ಜನ್ಯದಿಂದ ಎರಡು ತಿಂಗಳಲ್ಲಿ ನಾಲ್ವರು ದಲಿತರು ಸಾವು

ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿರುವ ತಮಿಳುನಾಡಿನಲ್ಲಿ ಕಾನೂನು ಸುವ್ಯವಸ್ಥೆ ಹದಗೆಡುತ್ತಿರುವುದನ್ನು ಪ್ರತಿಬಿಂಬಿಸುವ ಆತಂಕಕಾರಿ ವಿಚಾರವೊಂದು ಮುನ್ನಲೆಗೆ ಬಂದಿದ್ದು, ಪೊಲೀಸ್ ಹಿಂಸಾಚಾರದಿಂದಾಗಿ ಎರಡು ತಿಂಗಳ ಅವಧಿಯಲ್ಲಿ ನಾಲ್ವರು ದಲಿತರು ಸಾವನ್ನಪ್ಪಿದ್ದಾರೆ. ಈ ಸಾವುಗಳಲ್ಲಿ, ಎರಡು ಪ್ರಕರಣಗಳನ್ನು...

ಪಶ್ಚಿಮ ಏಷ್ಯಾ ಸಂಘರ್ಷ| ಹಾರ್ಮುಜ್ ಜಲಸಂಧಿಯಲ್ಲಿ ಇರಾನಿನ 16 ಹಡಗುಗಳನ್ನು ನಾಶಪಡಿಸಿದ್ದಾಗಿ ವಿಡಿಯೋ ಹಂಚಿಕೊಂಡ ಅಮೆರಿಕ ಸೇನೆ

ಪಶ್ಚಿಮ ಏಷ್ಯಾದಿಂದ ತೈಲ ರಫ್ತನ್ನು ತಡೆಯಲು ಇರಾನ್ ಪ್ರಯತ್ನಿಸುತ್ತಿರುವುದರಿಂದ ಹಾರ್ಮುಜ್ ಜಲಸಂಧಿಯಲ್ಲಿ ಇರಾನಿನ 16 ಹಡಗುಗಳನ್ನು ನಾಶಪಡಿಸಿರುವುದಾಗಿ ಅಮೆರಿಕ ಸೇನೆ ಹೇಳಿಕೊಂಡಿದೆ.  ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಹಿಂದೆ ಇರಾನ್ ಜಲಸಂಧಿಯಲ್ಲಿ ಗಣಿಗಳನ್ನು...