Homeಮುಖಪುಟ'ಸಣ್ಣ ಪಿಕಾ-ಒಂದುವರೆ ರುಪಾಯಿ' - ಅಧೀರ್ ಬಿಸ್ವಾಸ್ ಅವರ ನಿರಾಶ್ರಿತ ಆತ್ಮಕಥೆ

‘ಸಣ್ಣ ಪಿಕಾ-ಒಂದುವರೆ ರುಪಾಯಿ’ – ಅಧೀರ್ ಬಿಸ್ವಾಸ್ ಅವರ ನಿರಾಶ್ರಿತ ಆತ್ಮಕಥೆ

ಇದು ‘ಅಲ್ಲಾಹ್ರ್ ಜೊಮಿತೆ ಪಾ’ (ಸೆಟಿಂಗ್ ಫುಟ್ ಆನ್ ಅಲ್ಲಾಹ್ಸ್ ಲ್ಯಾಂಡ್) ಎಂಬ ಪುಸ್ತಕದ ಆಯ್ದ ಭಾಗ. ಅಧೀರ್ ಬಿಸ್ವಾಸ್ ಅವರ ನಿರಾಶ್ರಿತ ಆತ್ಮಕಥೆ. ಇದನ್ನು ಇಂಗ್ಲಿಷಿಗೆ ವಿ. ರಾಮಸ್ವಾಮಿ ಅವರು ಅನುವಾದಿಸಿದ್ದಾರೆ.

- Advertisement -
- Advertisement -

ಕಿನ್ನೋರ್ ರಾಯ್ ನನ್ನನ್ನು ಬೊಯ್‍ಪಾರಾಗೆ ಕರೆದುಕೊಂಡು ಹೋಗಿದ್ದರು. ಅವರ ಇನ್ನೊಂದು ಹೆಸರು ಝುಪು. ಬಾಸುಮತಿ ಪತ್ರಿಕೆಯ ಕಲ್ಯಾಣ್‍ದಾ ಅವರು ಅವರನ್ನು ಆ ಹೆಸರಿನಿಂದ ಕರೆಯುತ್ತಿದ್ದರು. ಅವರು ನನಗೂ ಒಂದು ಹೆಸರನ್ನು ಇಟ್ಟಿದ್ದರು; ನನ್ನ ಅನಾರೋಗ್ಯದ ಕಾರಣಕ್ಕಾಗಿ ಪೀಲಯ್ ಅಥವಾ ಸ್ಪ್ಲೀನ್(ಗುಲ್ಮ/ಪ್ಲೀಹ) ಎಂದು ಕರೆಯುತ್ತಿದ್ದರು.

70 ದಶಕದಲ್ಲಿ ನನ್ನ ಬೆಂಬಲಕ್ಕೆ ನಿಂತವರಲ್ಲಿ ಕೇವಲ ಕಿನ್ನೋರ್ ರಾಯ್ ಒಬ್ಬರೇ ಆಗಿರಲಿಲ್ಲ. ಕಲ್ಯಾಣ್ ದಾ, ಪ್ರೊಲೊಯ್ ದಾಸ್, ಸುಭಾಶ್ ಮೈತ್ರಾ ಕೂಡ ಇದ್ದರು. ಕಲ್ಯಾಣ್ ದಾ ಅಂದರೆ ಕಲ್ಯಾಣಕ್ಷಾ ಬಂಡೋಪಾಧ್ಯಾಯ ಅವರು ಟಾಗೋರ್ ಕುಟುಂಬಕ್ಕೆ ಸೇರಿದವರು. ಅವರು ಬಾಸುಮತಿ ಎಂಬ ನಿಯತಕಾಲಿಕೆಯ ಸಂಪಾದಕರಾಗಿದ್ದರು. ನನ್ನ ಕಥೆಗಳನ್ನು ಆ ಪತ್ರಿಕೆಯಲ್ಲಿ ಆಗಾಗ ಪ್ರಕಟಿಸಿ ನನ್ನ ಕುಟುಂಬದ ಬೆಂಗಾವಲಾಗಿ ನಿಂತಿದ್ದರು ಎಂದು ಹೇಳಬಹುದು. ಅದರ ಹೊರತಾಗಿ ನಾನು ಆ ನಿಯತಕಾಲಿಕೆಯ ‘ಇಲ್ಲಿ ಮತ್ತು ಅಲ್ಲಿ’ (ಹಿಯರ್ ಆ್ಯಂಡ್ ದೇರ್) ವಿಭಾಗಕ್ಕೂ ನಾನು ಬರೆಯುತ್ತಿದ್ದೆ. ಅದು ಇಪ್ಪತ್ತರಿಂದ ಇಪ್ಪತೈದು ಪದಗಳ ಒಂದು ಪುಟ್ಟ ಬರಹ, ಆ ಪ್ರತಿಯೊಂದು ಬರಹಕ್ಕೂ ವಾರಾಂತ್ಯದಲ್ಲಿ ನನಗೆ ಹತ್ತು ರೂಪಾಯಿಗಳು ಸಿಗುತ್ತಿದ್ದವು.

ಇದನ್ನೂ ಓದಿ: ಅಧೀರ್ ಬಿಸ್ವಾಸ್: ತಳಸ್ಥರೀಯ ನೆನಪಿನ ಪ್ರಜ್ಞೆ

ಕಿನ್ನೋರ್ ಅವರಿಗೂ ನನ್ನ ಮನೆಯ ಪರಿಸ್ಥಿತಿಯ ಬಗ್ಗೆ ಅರಿವಿತ್ತು. ಪೋತಿಕ್-ದಾ ಅಂದರೆ ಪೋತಿಕ್ ಗುಹಾ ಅವರಿಗೆ ಕೂಡ ತಿಳಿದಿತ್ತು. ಒಂದು ಸಲ ಪೋತಿಕ್ ದಾ ‘ನನ್ನ ಜೊತೆ ಬಾ’ ಕರೆದು, ಪ್ರೊನೊಬೇಶ್ ಚಕ್ರೊಬೊರ್ತಿ ಅವರಿಗೆ ನನ್ನನ್ನು ಪರಿಚಯಿಸಿದರು. ಪ್ರೊನೊಬೇಶ್ ಬಾಬು ಅವರು ಬಾಸುಮತಿ ಪತ್ರಿಕೆಯ ಹೊರಸಂಪಾದಕೀಯದ(op-ed) ಜವಾಬ್ದಾರಿ ವಹಿಸಿಕೊಂಡಿದ್ದರು. ಪೋತಿಕ್ ದಾ ಅವರು ನನ್ನ ಕಡೆ ಬೊಟ್ಟು ಮಾಡಿ, “ಈ ಹುಡುಗನಿಗೆ ಹಳ್ಳಿಯ ಜೀವನದ ಬಗ್ಗೆ ಚೆನ್ನಾಗಿ ಗೊತ್ತು, ಇವನಿಂದ ನೀವು ಬರೆಸಬಹುದು ಪ್ರೊನಬೇಶ್ ದಾ. ಇವನಿಗೆ ತುಂಬಾ ಅವಶ್ಯಕತೆಯಿದೆ” ಎಂದರು.

ಒಂದು ಸಲ, ನಾನು ‘ಇಲ್ಲಿ ಮತ್ತು ಅಲ್ಲಿ’ ಬರಹದ ಸಂಭಾವನೆಯನ್ನು ಪಡೆಯಲು ಹೋದಾಗ, ದಿಢೀರನೆ ಕಿನ್ನೋರ್ ನನ್ನ ಬಳಿ ಬಂದರು. ಮೂರು ಬರಹಗಳ, ಒಟ್ಟು ಮೂವತ್ತು ರೂಪಾಯಿಗಳನ್ನು ಪಡೆದನಂತರ ಅವರು ಹೇಳಿದರು, “ನಿನಗೆ ಕರಡು ತಿದ್ದುವುದು ಗೊತ್ತಾ ಅಧೀರ್?” ‘ಇಲ್ಲ’ ಎಂದು ನಾನು ಹೇಳಿದೆ. ಆಗ ಅವರು, “ನಾನು ನಿನಗೆ ಕಲಿಸುವೆ. ನೀನು ಕರಡು ತಿದ್ದುವುದಕ್ಕೆ ಪ್ರಾರಂಭಿಸಿದರೆ, ಅದು ನಿನ್ನ ಬರಹದ ಪ್ರಯೋಗಗಳಿಗೆ ಅಡ್ಡಿ ಮಾಡುವುದಿಲ್ಲ. ನೀನು ಈ ಕೆಲಸ ಮಾಡಬಹುದು. ಇದರಿಂದ ನಿನ್ನ ಕುಟುಂಬಕ್ಕೆ ಸಹಾಯವಾಗುವುದು” ಎಂದರು.

ಆಗ ಕಿನ್ನೋರ್ ನನಗೆ ಕರಡು ತಿದ್ದುವುದನ್ನು ಹೇಳಿಕೊಟ್ಟರು. ಅವರ ಹೆಗಲಿಗೆ ಜೋತಿರುವ ಚೀಲವು ಕರಡುತಿದ್ದಲು ಕಾದಿರುವ ಕಾಲೇಜ್ ಸ್ಟ್ರೀಟ್‍ನ ಅನೇಕ ಪ್ರಕಾಶಕರ ಅನೇಕ ಹಸ್ತಪ್ರತಿಗಳನ್ನು ಹೊಂದಿರುತ್ತಿತ್ತು. ಬಾಸುಮತಿ ಪತ್ರಿಕೆಗೆ ಅದನ್ನು ಇದನ್ನು ಬರೆಯುತ್ತಲೇ, ಹಸ್ತಪ್ರತಿಗಳ ರಾಶಿಯಿಂದ ಒಂದನ್ನು ತೆಗೆದು, “ಇದನ್ನು ನೋಡು, ಇದನ್ನು ನೋಡಿದರೆ, ನಿನಗೆ ಬಳಸಿದ ಚಿಹ್ನೆಗಳು ಅರ್ಥವಾಗುತ್ತವೆ” ಎಂದರು.

ಇದನ್ನೂ ಓದಿ: “ಕೇಳುವಿರೇನು ನೀವು ನಾ ಹುಚ್ಚನಾದದ್ದು ಹೇಗೆಂದು?”- ಖಲೀಲ್ ಗಿಬ್ರಾನ್

ಆಗಿನಿಂದ, ಕಿನ್ನೋರ್ ಅವರ ಪ್ರೂಫ್‍ಗಳನ್ನು ಗಮನಿಸುತ್ತ ನಾನು ಕರಡು ತಿದ್ದುವುದನ್ನು ಕಲಿತುಕೊಂಡೆ. ಕಿನ್ನೋರ್ ಅವರಿಂದ ನನ್ನ ಬಗ್ಗೆ ಕೇಳಿ ತಿಳಿದಿದ್ದ ಪ್ರೊಲೊಯ್-ದಾ ಅವರು ಬೆಂಗಾಳ್ ಪಬ್ಲಿಷರ್‌ನ ಮಯುಖ್ ಬಸು ಅವರಿಗೆ ಒಂದು ಪತ್ರ ಬರೆದರು.

ನಾನು ಮಯುಖ್ ಬಸು ಅವರನ್ನು ಭೇಟಿಯಾಗಲು ಹೋದೆ. ಆ ದಿನ ಒಂದು ಪ್ರೂಫ್ ನನಗಾಗಿಯೇ ಕಾಯುತ್ತಿತ್ತು ಅನಿಸುತ್ತೆ. ಟೇಬಲ್ ಮೇಲೆ ನನ್ನ ಸಲುವಾಗಿಯೇ ಇಟ್ಟಂತಿದ್ದ ಒಂದು ಹಸ್ತಪ್ರತಿಯನ್ನು ತೆಗೆದುಕೊಂಡು, ಮಯುಖ್-ದಾ ಹೇಳಿದರು, “ಯಾರೋ ಒಬ್ಬರು ಬರಬೇಕಾಗಿತ್ತು, ಅವನಿನ್ನೂ ಬಂದಿಲ್ಲ. ನೀನು ಮಾಡುತ್ತೀಯಾ? ತುಂಬಾ ತುರ್ತು ಇದೆ. ಆದರೆ, ನಾಳೆಯೊಳಗಾಗಿ ನೀನು ಇದನ್ನು ತಿದ್ದಿ ಹಿಂದಿರುಗಿಸಬೇಕು.” ನಾನೂ ಆಗಲಿ ಎಂದು ತಲೆಯಾಡಿಸಿದೆ.

‘ಅಲ್ಲಾಹ್ರ್ ಜೊಮಿತೆ ಪಾ’ ಪುಸ್ತಕ (PC: Bookiecart)

ಇದು ನನಗೊಂದು ಮಹತ್ವದ ಅವಕಾಶವಾಗಿತ್ತು. ನನಗಿನ್ನೂ ನೆನಪಿದೆ, ತಿದ್ದುಪಡಿಗಾಗಿ ಬಂದ ಪುಸ್ತಕ ಮನೋಜ್ ಬಸು ಅವರ ‘ಬೋನ್ ಕೇಟೆ ಬೋಸೊಟ್’ (ಅರಣ್ಯದಿಂದ ಆವಾಸಕ್ಕೆ) ಎಂಬ ಕಾದಂಬರಿಯಾಗಿತ್ತು. ಕೈಯಿಂದಲೇ ಟೈಪ್‍ಸೆಟ್ ಮಾಡಿ, ನ್ಯೂಸ್‍ಪ್ರಿಂಟ್ ಮೇಲೆ ಅಚ್ಚುಮೊಳೆ(ಗ್ಯಾಲಿ-ಪ್ರೂಫ್) ಪ್ರಿಂಟ್ ಮಾಡಲಾಗಿತ್ತು. ಅಕ್ಷರಗಳು ಇನ್ನೂ ಒದ್ದೆಯಾಗಿಯೇ ಇದ್ದವು. ಒಂದಿಷ್ಟು ಹೊತ್ತಿನ ಮುಂಚೆಯೇ ಮುದ್ರಣಾಲಯದಿಂದ ತಂದಿಟ್ಟುಹೋಗಿದ್ದಾರ ಎನಿಸಿತು ನನಗೆ.

ಇದರೊಂದಿಗೆ ನನ್ನ ಹೊಸ ಜೀವನ ಶುರು ಆಯಿತು. ನಾನು ಪ್ರೂಫ್ ಅನ್ನು ಹಿಂದಿರುಗಿಸಿ, ಒಂದು ಪುಸ್ತಕದಲ್ಲಿ ನಮೂದಿಸಬೇಕಿತ್ತು. ವಾರದ ಕೊನೆಯಲ್ಲಿ ನನಗೆ ಸಿಗುತ್ತಿದ್ದ ದುಡ್ಡು; ‘ಚಿಕ್ಕ ಪಿಕಾ’. ಅಂದರೆ ಒಂದು ‘ಫಾರ್ಮಾ’ಗೆ ಒಂದೂವರೆ ರೂಪಾಯಿ. ಒಂದು ಪೂರ್ಣ ಪಿಕಾ ಆಗಿದ್ದರೆ, ಅದು ಐದು ಕಾಲು ನಾಣ್ಯಗಳಾಗಿರುತ್ತಿತ್ತು. ಫಾರ್ಮಾ ಎಂದರೆ, ಸಾಧಾರಣ ಆಕಾರದ ಹದಿನಾರು ಪುಟಗಳು. ಬೆಂಗಾಳ್ ಪಬ್ಲಿಷರ್ಸ್‍ನ ಹೆಸರು ಹೇಳಿಕೊಂಡು, ವಿಶ್ವವಾಣಿ ಮತ್ತು ಇತರ ಎರಡು ಪ್ರಕಾಶಕರಿಂದಲೂ ಕೆಲಸ ಗಿಟ್ಟಿಸಿಕೊಂಡೆ. ಆಗ ವಿಶ್ವವಾಣಿಯಲ್ಲಿ ಬ್ರೊಜೊ ಕಿಶೋರ್ ಮಂಡಲ್ ಇದ್ದರು. ಅವರಿಗೆ ಪೊದೆ ಮೀಸೆ ಇತ್ತು.

ನಾನು ಎಷ್ಟೇ ಕಷ್ಟಪಟ್ಟರೂ, ಒಂದು ವಾರದಲ್ಲಿ ಹತ್ತು ಫಾರ್ಮಾಗಳಿಗಿಂತ ಹೆಚ್ಚು ನೋಡಲಾಗುತ್ತಿದ್ದಿಲ್ಲ. ರೈಲಿನಲ್ಲಿ ಪಯಾಣಕ್ಕೆ ನಾಲ್ಕು ಗಂಟೆ ವ್ಯಯಿಸುತ್ತಿದ್ದೆ. ಕೆಲಸ ಮಾಡಲು ರಾತ್ರಿಯೂ ಕುಳಿತುಕೊಳ್ಳುತ್ತಿದ್ದೆ. ಈ ಕೆಲಸದಲ್ಲಿ ದುಡ್ಡು ಸಿಗುತ್ತಿತ್ತಾದುದರಿಂದ ಮುಂಚಿನಂತೆ ನಿಯಮಿತವಾಗಿ ಕಾಲೇಜಿಗೆ ಹೋಗಲು ಆಗುತ್ತಿರಲಿಲ್ಲ.

ಇದನ್ನೂ ಓದಿ: ನವ ಉದಾರವಾದಿ ಭಾರತದಲ್ಲಿ ದಲಿತರು: ಮೇಲ್ಚಲನೆಯೋ ಅಥವಾ ಮೂಲೆಗುಂಪೋ? – ಪುಸ್ತಕ ಸಂವಾದ

ನನಗೆ ಪದವೀಧರ ಆಗಬೇಕು ಎಂಬ ಮಹದಾಸೆಯಿತ್ತು. ಪುರಬಿ ಸಿನೆಮಾ ಎಂಬ ಹೆಸರಿನ ಥಿಯೇಟರ್ ಪಕ್ಕ ಹಾದುಹೋಗುತ್ತಿದ್ದಾಗ, ಹಶಿಮುಖ ಎಂಬ ಫೋಟೋ ಸ್ಟುಡಿಯೋ ಇತ್ತು. ಅಲ್ಲಿ ಅನೇಕರು ತೆಗೆಸಿಕೊಂಡ ‘ಗ್ರ್ಯಾಜುಯೇಷನ್’ನ ಛಾಯಾಚಿತ್ರಗಳನ್ನು ನೋಡಿದೆ. ವಿಶ್ವವಿದ್ಯಾಲಯದ ಮೊದಲ ಭಾಗದ ಪರೀಕ್ಷೆಗಳು ನನ್ನ ಮುಂದಿದ್ದವು. ಅಲ್ಲಿ ಪಾಸಾದರೆ, ಭಾಗ 2 ರ ಪರೀಕ್ಷೆ ತೆಗೆದುಕೊಳ್ಳಬೇಕಿತ್ತು. ಕಾಲೇಜು ಬೀದಿಗೆ ಹೋಗಬೇಕಾದರೆ ಆ ಫೋಟೊ ಸ್ಟುಡಿಯೋ ಹಾದು ಹೋಗಲೇಬೇಕಿತ್ತು. ಅಲ್ಲಿ ಪ್ರತಿನಿತ್ಯ ಕಾಣಿಸುತ್ತಿದ್ದು; ತಲೆಯ ಮೇಲೊಂದು ಟೋಪಿ, ಮೈಮೇಲೊಂದು ಗೌನ್, ಕೈಯಲ್ಲಿ ನೀಟಾಗಿ ಸುತ್ತಿದ ಸರ್ಟಿಫಿಕೇಟು.., ರೆಡಿ, ಒನ್, ಟೂ.., ಕ್ಲಿಕ್..!

ಕರಡು ತಿದ್ದಲು ಕೆಲವು ಪುಟಗಳನ್ನು ತಿರುವಿಹಾಕುತ್ತಿದ್ದಂತೆ ನನ್ನ ಕಣ್ಣಗಳು ಉರಿಯತೊಡಗುತ್ತಿದ್ದವು. ಹಾಗೆ ಮುಂಚೆ ಆಗುತ್ತಿದ್ದಿಲ್ಲ. ಕಂದೀಲಿನ ಬೆಳಕಿನಲ್ಲಿ ಚಿಕ್ಕ ಅಕ್ಷರಗಳನ್ನು ಓದುವುದು ಸುಲಭವಾಗಿದ್ದಿಲ್ಲ. ಬೆಳಕಿನಿಂದ ಕತ್ತಲೆಯೆಡೆಗೆ ಕಣ್ಣು ಹಾಯಿಸಿದ ಕೂಡಲೇ, ತಲೆನೋವು ಶುರುವಾಗಿ, ಕಣ್ಣುಗಳು ಭಾರವೆನಿಸುತ್ತಿದ್ದವು. ನನಗೆಷ್ಟು ಸಾಧ್ಯವಾಗುತ್ತೋ ಅಷ್ಟು ಕೆಲಸ ಮಾಡುತ್ತಿದ್ದೆ. ಮುಖದ ಮೇಲೆ ನೀರು ಚಿಮುಕಿಸಿ ಮತ್ತೆ ಪ್ರಯತ್ನ ಶುರು ಮಾಡುತ್ತಿದ್ದೆ. ಪಟ್ಟ ಕಷ್ಟಕ್ಕೆ ಸಿಗುತ್ತಿದ್ದ ದುಡ್ಡು ಅತ್ಯಲ್ಪವಾಗಿತ್ತು. ಯಾರಿಗೂ ಹೇಳುವ ಸ್ಥಿತಿಯಲ್ಲೂ ಇರಲಿಲ್ಲ. ಏನು ಹೇಳಬೇಕೆಂಬುದೂ ನನಗೆ ತಿಳಿಯುತ್ತಿದ್ದಿಲ್ಲ. ನಾನು ಶಾಲೆಯಲ್ಲಿ ಮೂರನೇ ದರ್ಜೆಯಲ್ಲಿ ಪಾಸು ಮಾಡಿ ಆಗ ಬಿ.ಎ ಓದುತ್ತಿದ್ದೆ. ಆಮೇಲೆ ನನಗೆ ತಿಳಿದಿದ್ದೇನೆಂದರೆ, ನಾನು ಮಾಡುತ್ತಿದ್ದ ಕೆಲಸಕ್ಕೆ ಬೊಯಿಪಾರಾದಲ್ಲಿ ಅಷ್ಟು ಗೌರವ ಸಿಗುತ್ತಿದ್ದಿಲ್ಲ ಹಾಗೂ ಕೆಲಸದಲ್ಲಿ ದುಡ್ಡೂ ಇದ್ದಿಲ್ಲ ಎಂದು. ಆದರೆ, ಅದು ದೇವರ ವಿನೋದವಾಗಿತ್ತು, ಈ ಕೆಲಸವೇ ನನ್ನ ವಿಧಿಯಾಗಿತ್ತು.

ಇದು ‘ಅಲ್ಲಾಹ್ರ್ ಜೊಮಿತೆ ಪಾ’ (ಸೆಟಿಂಗ್ ಫುಟ್ ಆನ್ ಅಲ್ಲಾಹ್ಸ್ ಲ್ಯಾಂಡ್) ಎಂಬ ಪುಸ್ತಕದ ಆಯ್ದ ಭಾಗ. ಅಧೀರ್ ಬಿಸ್ವಾಸ್ ಅವರ ನಿರಾಶ್ರಿತ ಆತ್ಮಕಥೆ. ಇದನ್ನು ಇಂಗ್ಲಿಷಿಗೆ ವಿ. ರಾಮಸ್ವಾಮಿ ಅವರು ಅನುವಾದಿಸಿದ್ದಾರೆ.


ಇದನ್ನೂ ಓದಿ: ಬಾಬರಿ ಮಸೀದಿ ಪ್ರಕರಣದಲ್ಲಿ ಗಲ್ಲಿಗೇರಿಸಲಿ, ಜಾಮೀನು ಪಡೆಯುವುದಿಲ್ಲ- ಉಮಾ ಭಾರತಿ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...