Homeಅಂಕಣಗಳುಮೋದಿಯ ಕೀಳು ಟೀಕೆಗೆ ಗುರಿಯಾದ ಸೋನಿಯಾರ ಬಗ್ಗೆ ಲಂಕೇಶರು ಹೀಗಂದಿದ್ದರು...

ಮೋದಿಯ ಕೀಳು ಟೀಕೆಗೆ ಗುರಿಯಾದ ಸೋನಿಯಾರ ಬಗ್ಗೆ ಲಂಕೇಶರು ಹೀಗಂದಿದ್ದರು…

- Advertisement -
- Advertisement -

ಸೋನಿಯಾ ಎಂಬ ಸ್ತ್ರೀ ಕಾರಂಜಿ
“ಘಜ್ನಿ ಮಹಮದ್, ತೈಮೂರ್‍ನ ಅನುಯಾಯಿಗಳು ಗಾಂಧೀಜಿಯನ್ನು ಕೊಂದದ್ದು, ಈ ನಾಡಿನ ಮುಸ್ಲಿಂ ಜನಾಂಗದ ದೇವಸ್ಥಾನವನ್ನು ಒಡೆದು ಬೀಳಿಸಿದ್ದು, ಮುಂಬೈನಂಥ ನಗರದಲ್ಲಿ ಅಮಾಯಕ ಅಲ್ಪಸಂಖ್ಯಾತರನ್ನು ಸುತ್ತುವರಿದು ಹಿಂಸಿಸಿ, ಅಂಗಡಿಗಳನ್ನು ಲೂಟಿ ಮಾಡಿದ್ದು ಇವತ್ತು ಐತಿಹಾಸಿಕ ದಾಖಲೆಯಾಗಿದೆ; ಗಲ್ಲಿಗೇರಬೇಕಾದ, ಜೈಲಲ್ಲಿ ಕೊಳೆಯುತ್ತಿರಬೇಕಾದ ಇಂಥವರು ಇವತ್ತು ಈ ರಾಷ್ಟ್ರದ ಆಡಳಿತ ಸೂತ್ರಗಳನ್ನು ಹಿಡಿದುಕೊಳ್ಳುವ ಮಾತಾಡುತ್ತಿರುವುದು ಭಾರತ ತಲುಪಿರುವ ಕರುಣಾಜನಕ ಸ್ಥಿತಿಯನ್ನು ತೋರುತ್ತದೆ. ಕೇಡಿಗಳನ್ನು ಹಿಡಿದು ಶಿಕ್ಷಿಸುವ ಬದಲು ಅವರು ದಿಗ್ವಿಜಯ ಸಾಧಿಸಿದಂತೆ ಆರತಿ ಬೆಳಗುತ್ತಿರುವುದು ವಿಚಿತ್ರವಾಗಿದೆ. ಯಾರೂ ಯಾವ ದೇಶವನ್ನು ನೋಡಕೂಡದು, ಕೋಶವನ್ನು ಓದಕೂಡದು, ಮೌಢ್ಯದಿಂದ ಹೊರಬರಕೂಡದು ಎಂದು ಇವತ್ತಿಗೂ ಹೇಳುತ್ತಿರುವ ಈ ಸಮಾಜದ್ರೋಹಿ, ಜೀವದ್ರೋಹಿಗಳು ಸಾವಿರಾರು ವರ್ಷಗಳಿಂದ ಈ ದೇಶವನ್ನು ಜಾತಿಪದ್ಧತಿಯಲ್ಲಿ ಹೂತುಹಾಕಿದ್ದು ಕಣ್ಣಿದ್ದು ನೋಡಬಲ್ಲವರಿಗೆ ಗೊತ್ತಿದೆ. ಇಂಥ ವಂಚಕರು ಸೋನಿಯಾ ತರಹದ ಮಹಿಳೆಯನ್ನು ವಿದೇಶದವಳೆಂದು ಹೀಯಾಳಿಸುವುದು ಇವರ ಪರಂಪರೆಗೆ ತಕ್ಕಂತಿದೆ.”
“ಈ ದೇಶದಲ್ಲಿಯೇ ಇದ್ದು ಇಲ್ಲಿಯ ಜನಸಮುದಾಯದ ದುರಂತ, ಸೋಲು, ಸಾವು ಎಲ್ಲವನ್ನೂ ತಮ್ಮ ಸ್ವಾರ್ಥಕ್ಕೆ ಬಳಸಿಕೊಂಡ, ಇಲ್ಲಿಯ ಜನರ ಅಸಹಾಯಕ ಸ್ಥಿತಿಯನ್ನೇ ತಮ್ಮ ಏಳ್ಗೆಗೆ ಉಪಯೋಗಿಸಿಕೊಂಡ ಪೂರ್ಣಯ್ಯಗಳೆಂಬ ದುಷ್ಟರು ನಿಜವಾಗಿಯೂ ಪರದೇಶಿಗಳು; ಇಲ್ಲಿಯ ಒಬ್ಬ ವಿಮಾನ ಚಾಲಕನನ್ನು ವರಿಸಿ ಆತನನ್ನು ರಾಜಕೀಯದಿಂದ ಹೊರಗಿಡಲು ಯತ್ನಿಸಿ ವಿಫಲವಾಗಿ ಸಾವು, ನೋವು, ದುಃಖದಲ್ಲಿ ಬೆಂದು ಹೋಗಿ ಇವತ್ತು ಗಾಂಧೀಜಿಯ ಮಾನವೀಯತೆಯನ್ನು ಸಾರ್ವಜನಿಕ ಜೀವನಕ್ಕೆ ತರಲು ಯತ್ನಿಸುತ್ತಿರುವ ಸೋನಿಯಾ ಈ ನಾಡಿನ ಸೊಸೆ, ಇಲ್ಲಿಯ ಹೆಮ್ಮೆಯ ಹೆಣ್ಣುಮಗಳು. ನನ್ನ ವೈಯಕ್ತಿಕ ಅಭಿಪ್ರಾಯದಲ್ಲಿ ಈ ಸೋನಿಯಾ ಅತ್ತೆ ಇಂದಿರಾಗಿಂತ, ಪತಿ ರಾಜೀವ್‍ಗಿಂತ ಜಾಣೆ; ಅವರಿಬ್ಬರೂ ಕೆಟ್ಟದಾಗಿ ಅರಚಬಹುದಾಗಿದ್ದ ಸಂದರ್ಭದಲ್ಲಿ ಪಶ್ಚಿಮದ ಖಚಿತತೆ, ಕುಶಲತೆ, ತೀವ್ರತೆ ತೋರುತ್ತಿರುವ ಸೋನಿಯಾ ನಿಜವಾದ ನಾಯಕಿಯಾಗಿ ರೂಪುಗೊಳ್ಳುವ ಸಾಧ್ಯತೆಯಿದೆ. ಈಕೆ ಕೇವಲ ಹತ್ತು ದಿನದಲ್ಲಿ ಭಾರತದ ರಾಜಕೀಯಕ್ಕೆ ಮಿಂಚಿನ ಸಂಚಾರ ಮೂಡಿಸಿರುವುದು ಬಿಜೆಪಿಗಳಿಗೆ ದುಃಸ್ವಪ್ನವಾಗಿ ಪರಿಣಮಿಸಿದೆ.”
ಫೆಬ್ರವರಿ 11, 1998

ಪರಕೀಯ ವಾಜಪೇಯಿ ನಮ್ಮ ಹೆಣ್ಣುಮಗಳು ಸೋನಿಯಾ
“ಮಾಸ್ತಿಯವರು ತುಂಬ ಸುಶಿಕ್ಷಿತರಾಗಿದ್ದರು. ಆದರೆ ಅವರಿಗೆ ಭಾರತೀಯ ಸಮಾಜದಲ್ಲಿರುವ ಅನ್ಯಾಯಗಳು, ಶೋಷಣೆ, ಜಾತಿಪದ್ಧತಿ, ಪ್ರಚ್ಛನ್ನ ದಬ್ಬಾಳಿಕೆ- ಯಾವುದೂ ಕಾಣಿಸುತ್ತಿರಲಿಲ್ಲ. ಹಾಗೆಯೇ ಬ್ರಾಹ್ಮಣೇತರರ ಮೌಢ್ಯದ ಸೂಕ್ಷ್ಮಗಳು, ಅಪಾಯಗಳೂ ತಿಳಿಯುತ್ತಿರಲಿಲ್ಲ. ಅವರ ಪ್ರಕಾರ ವಸ್ತುನಿಷ್ಠೆ ಯಾವುದೆಂದರೆ, ಈಗಿರುವ ವ್ಯವಸ್ಥೆಯನ್ನು ಕಿಂಚಿತ್ತೂ ಕೆಡದಂತೆ ಕಾಪಾಡಿಕೊಂಡು ಬರುವುದು. ಮಾಸ್ತಿಯವರ ವಸ್ತುನಿಷ್ಠೆಯ ಸಿದ್ಧಾಂತವನ್ನು ಒಪ್ಪಿಕೊಂಡರೆ ಮಾತ್ರ ಅವರು ಭಗವದ್ಗೀತೆಗೆ ನೀಡುವ ಅರ್ಥವನ್ನು ಒಪ್ಪಬಹುದು. ಅವರ ಪ್ರಕಾರ ಧರ್ಮ, ಸ್ವಧರ್ಮ, ಆತ್ಮ, ಪರಮಾತ್ಮ ಮುಂತಾದವೆಲ್ಲ ಎಂದೂ ಬದಲಾಗದ ವಸ್ತುಗಳು; ಧರ್ಮ ಜಾತಿಯಾಗಿಯೂ ವರ್ಗವಾಗಿಯೂ ಧರ್ಮವಾಗಿಯೂ ಬರುತ್ತದೆ. ಹಾಗಾಗಿಯೇ ಇಲ್ಲಿ ಕಂದಾಚಾರಿಯೊಬ್ಬನನ್ನು ಧರ್ಮವಂತ ಎಂದು ಕರೆಯುವುದು ಸುಲಭವಾಗುತ್ತದೆ. ಹಾಗೆಯೇ ಸೋನಿಯಾ ಇಟಾಲಿಯನ್ ಹೆಣ್ಣುಮಗಳು ಎಂಬ ಕಾರಣಕ್ಕೆ ನಮ್ಮ ಧರ್ಮಕ್ಕೆ ಸೇರಿದವಳಲ್ಲ, ನಮ್ಮ ಜೀವನಕ್ರಮದಿಂದ ಬಂದವಳಲ್ಲ ಎಂದು ವಾದಿಸುವುದು ಸುಲಭವಾಗುತ್ತದೆ. ಇದು ಶೋಷಕರ ಮಾರ್ಗ, ಸುಳ್ಳರ ದಾರಿ. ಯಾರೂ ಸಮುದ್ರವನ್ನು ದಾಟಿ ಹೊರದೇಶಗಳಿಗೆ ಹೋಗದಿದ್ದರೆ, ಯಾರೂ ಹೊರದೇಶದಿಂದ ಇಲ್ಲಿಗೆ ಬರದಿದ್ದರೆ ಇಲ್ಲಿ ತಾಳೆಗರಿಯ ಮೂಲಕ ವಂಚಿಸುತ್ತಾ ಹೋಗಬಹುದು. ಈ ಪರಕೀಯ ಎಂಬ ಮಾತನ್ನೇ ತೆಗೆದುಕೋ. ನನ್ನ ಪ್ರಕಾರ ಇಲ್ಲಿಯ ಪ್ರಕೃತಿ, ಜನ, ಸಂಪತ್ತು, ಆತ್ಮಗೌರವ ಇವೆಲ್ಲವುಗಳ ಬಗ್ಗೆ ಯಾವುದೇ ಪ್ರೀತಿ, ಗೌರವ ಇಲ್ಲದವನು ಪರಕೀಯ. ಇಂಥ ಪರಕೀಯತೆಗೆ ಉದಾಹರಣೆಯಾಗಿ ನಾನು ದಿವಾನ್ ಪೂರ್ಣಯ್ಯನವರ ಬಗ್ಗೆ ಹೇಳುತ್ತಿರುತ್ತೇನೆ. ಮೈಸೂರು ರಾಜ್ಯದ ಸೋಲು, ಟಿಪ್ಪುವಿನ ಸಾವು, ಇಂಗ್ಲಿಷರ ದಬ್ಬಾಳಿಕೆ ಎಲ್ಲವೂ ಈ ದೇಶದ ಚೈತನ್ಯವನ್ನು ಮುರಿಯುತ್ತಿದ್ದಾಗ ಪೂರ್ಣಯ್ಯನವರು ದಿವಾನ ಸ್ಥಾನದಲ್ಲಿ ನೆಮ್ಮದಿಯಾಗಿದ್ದರು; ಆದರೆ ಫ್ರೆಂಚರ ದೂಬಾಯಿ ಪಾದ್ರಿ ಸಾವಿರಾರು ಜನರಿಗೆ ನೆರವಾದ; ಸಿಡುಬು ಬಂದಾಗ ಲಸಿಕೆ ಹಾಕಿಸಿ ಜೀವ ಉಳಿಸಿದ. ಇಲ್ಲಿಯ ಅನಕ್ಷರತೆ, ಅಸಹಾಯಕತೆಯನ್ನು ತಮ್ಮ ವೈಭವಕ್ಕಾಗಿ ಬಳಸಿಕೊಂಡ ಪೂರ್ಣಯ್ಯ ಈ ದೇಶದವರು, ಇಲ್ಲಿಯ ಜನರನ್ನು ಪ್ರೀತಿಸಿ ಪೊರೆದ ದೂಬಾಯಿ ಪಾದ್ರಿ ಪರಕೀಯ ಎಂದು ನಾನು ನಂಬುವುದಿಲ್ಲ. ಆದ್ದರಿಂದಲೇ ನನ್ನ ದೃಷ್ಟಿಯಲ್ಲಿ ಪೂರ್ಣಯ್ಯ ಪರಕೀಯ, ವಿಶ್ವೇಶ್ವರಯ್ಯ ಸ್ವಕೀಯ, ಅನ್ಯಜಾತಿಯ ದೇವಾಲಯ ಬೀಳಿಸುವ ಅಡ್ವಾಣಿ, ವಾಜಪೇಯಿಗಳು ಪರಕೀಯ, ಸೋನಿಯಾ ಈ ದೇಶದ ಹೆಣ್ಣುಮಗಳು. ನಮ್ಮ ಜನಕ್ಕೆ ಎಲ್ಲ ದೇಶಗಳಿಂದ, ಎಲ್ಲ ಬಗೆಯ ಜನರಿಂದ ಆರ್ಥಿಕ ನೆರವು, ಬೆಚ್ಚನೆಯ ಪ್ರೀತಿ, ವೈಜ್ಞಾನಿಕ ದೃಷ್ಟಿ, ಆಧುನಿಕ ಧೋರಣೆ ಬೇಕಾಗಿದೆ.”
ಮಾರ್ಚ್ 4, 1998

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...

ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು ಬಿಸಿಯೂಟ ಯೋಜನೆಯಿಂದ ಹೊರಕ್ಕೆ : ಸಂಸತ್ತಿಗೆ ತಿಳಿಸಿದ ಕೇಂದ್ರ

ಕಳೆದ ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು 'ಪ್ರಧಾನಮಂತ್ರಿ ಪೋಷಣ್ ಯೋಜನೆ'ಯಿಂದ (ಮಧ್ಯಾಹ್ನದ ಬಿಸಿಯೂಟ) ಹೊರ ಬಿದ್ದಿವೆ. 2020-21ರಲ್ಲಿ 11.19 ಲಕ್ಷ ಇದ್ದ ಶಾಲೆಗಳ ಸಂಖ್ಯೆ 2024-25ರಲ್ಲಿ 10.35ಕ್ಕೆ ಕುಸಿದಿದೆ ಎಂದು...

ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವಲಖಾಗೆ ಜಾಮೀನಿನ ಮೇಲೆ ದೆಹಲಿಗೆ ತೆರಳಲು ಅನುಮತಿ ನೀಡಿದ ಬಾಂಬೆ ಹೈಕೋರ್ಟ್

ಭೀಮಾ ಕೋರೆಗಾಂವ್ ಯುಎಪಿಎ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರಿಗೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನವದೆಹಲಿಯಲ್ಲಿ ವಾಸಿಸಲು ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಆದಾಗಲೂ, ಮಾನವ...

ಕಾರವಾರ ನೌಕಾ ಪ್ರದೇಶದ ಸುತ್ತಮುತ್ತ ಆತಂಕ ಮೂಡಿಸಿದ ‘ಸೀಗಲ್‌’ ಪಕ್ಷಿ; ಚೀನಾ ನಿರ್ಮಿತ ಜಿಪಿಎಸ್ ಸಾಧನ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕರಾವಳಿ ಪ್ರದೇಶದ ಬಳಿ, ಸೂಕ್ಷ್ಮ ನೌಕಾ ವಲಯದ ಬಳಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕಿಂಗ್ ಸಾಧನವೊಂದು 'ಸೀಗಲ್' (ಸಮುದ್ರಹಕ್ಕಿ) ಪಕ್ಷಿಗೆ ಅಳವಡಿಸಿರುವುದು ಕಂಡುಬಂದ ನಂತರ ಭದ್ರತಾ ಸಂಸ್ಥೆಗಳು...

ಅಣು ಶಕ್ತಿಯ ಖಾಸಗೀಕರಣ : ‘ಶಾಂತಿ’ ಮಸೂದೆಗೆ ಲೋಕಸಭೆ ಅಸ್ತು

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, 'ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿತು. ವಿಪಕ್ಷಗಳ ಸದಸ್ಯರು...