Homeಅಂಕಣಗಳು`ಸರ್ವೋಚ್ಚ’ವೇ ಶೋಷಿತರ ಭವಿಷ್ಯಕ್ಕೆ ಮುಳ್ಳಾದರೆ...

`ಸರ್ವೋಚ್ಚ’ವೇ ಶೋಷಿತರ ಭವಿಷ್ಯಕ್ಕೆ ಮುಳ್ಳಾದರೆ…

- Advertisement -
  • ಗೌರಿ ಲಂಕೇಶ್
    ಆಗಸ್ಟ್ 24, 2005 (`ಕಂಡಹಾಗೆ’ ಸಂಪಾದಕೀಯದಿಂದ) |
- Advertisement -

ಇಡೀ ದೇಶ ಆಗಸ್ಟ್ 15ರಂದು, ದೇಶಕ್ಕೆ ಸ್ವಾತಂತ್ರ್ಯ ಬಂದು 58 ವರ್ಷಗಳಾಗಿದ್ದನ್ನು ಸಂಭ್ರಮಿಸಲು ಸಜ್ಜಾಗುತ್ತಿತ್ತು. ಆದರೆ ಮೂರು ದಿನಗಳ ಮುನ್ನ ಬಂದ ಸುದ್ದಿ ಈ ದೇಶದ ಶೇ. 80ರಷ್ಟು ಮುಂದಿನ ಪ್ರಜೆಗಳ ಕನಸುಗಳನ್ನೇ ಹೊಸಕಿ ಹಾಕಿತು. ಶುಕ್ರವಾರ ನಮ್ಮ ಸರ್ವೋಚ್ಚ ನ್ಯಾಯಾಲಯ ನೀಡಿದ ತೀರ್ಪು, ಇನ್ನು ಮುಂದೆ ಶೋಷಿತ, ಹಿಂದುಳಿದ, ದಲಿತ, ಹಣ ಹೊಂದಿರದ ವರ್ಗಗಳಿಗೆ ಸೇರಿದ್ದ ಪ್ರತಿಭಾವಂತ ಯುವಕ-ಯುವತಿಯರಿಗೆ ವೃತ್ತಿ ಶಿಕ್ಷಣ ಪಡೆಯುವ ಅವಕಾಶವನ್ನೇ ನಿರಾಕರಿಸಿತು. ಎಲ್ಲರಿಗೂ ನ್ಯಾಯ ಒದಗಿಸಬೇಕಿರುವ ನ್ಯಾಯಾಲಯವೇ ಇನ್ನು ಮುಂದೆ ಖಾಸಗಿ ಇಂಜಿನಿಯರಿಂಗ್ ಮತ್ತು ಮೆಡಿಕಲ್ ಕಾಲೇಜುಗಳು ‘ಸಾಮಾಜಿಕ ನ್ಯಾಯ’ ಒದಗಿಸಬೇಕೆಂಬ ಗೋಜಲುಗಳಿಲ್ಲದೆ ಸರ್ಕಾರದ ಹಸ್ತಕ್ಷೇಪವಿಲ್ಲದೆ, ಕಾರ್ಯ ನಿರ್ವಹಿಸಬಹುದು ಎಂದು ಫರ್ಮಾನು ಹೊರಡಿಸಿತು.
ಜಾಗತೀಕರಣ, ಖಾಸಗಿಕರಣ, ಉದಾರೀಕರಣ ಇಂದಿನ ಪರಿಸ್ಥಿತಿಯಲ್ಲಿ ಭಾರತದ ವಂಚಿತ ವರ್ಗಗಳಿಗೆ ನ್ಯಾಯ ಸಿಗಬೇಕೆಂದಿದ್ದರೆ ಖಾಸಗಿ ಕಂಪನಿಗಳಲ್ಲೂ ಮೀಸಲಾತಿ ಬೇಕೆಂಬ ಬೇಡಿಕೆ ಇರುವ ಸಂದರ್ಭದಲ್ಲಿ ನಮ್ಮ ಸರ್ವೋಚ್ಚ ನ್ಯಾಯಾಲಯವೇ ವೃತ್ತಿ ಶಿಕ್ಷಣದ ಬಾಗಿಲನ್ನು ಈ ವಂಚಿತ ವರ್ಗಗಳಿಗೆ ಮುಚ್ಚಿದೆ.
ಖಾಸಗಿ ವೃತ್ತಿ ಶಿಕ್ಷಣ ಕಾಲೇಜುಗಳು ‘ಸಾಮಾಜಿಕ ನ್ಯಾಯ’ದ ಯಾವ ಮಾನದಂಡವನ್ನು ಅನುಸರಿಸುವ ಅಗತ್ಯವಿಲ್ಲ ಎಂದು ಹೇಳಿರುವ ಸರ್ವೋಚ್ಚ ನ್ಯಾಯಾಲಯ, ತಮಗೆ ಬೇಕಾದವರಿಗೆ ಈ ಸಂಸ್ಥೆಗಳು ಪ್ರವೇಶ ನೀಡಬಹುದು ಎಂದಿದೆ. ಆದರೆ, ಈ ಪ್ರವೇಶಕ್ಕೆ ಗ್ರಾಮೀಣ, ಕನ್ನಡಿಗ, ದಲಿತ, ಹಿಂದುಳಿದ ಹಿನ್ನಲೆಯವರಿಗೆ ಯಾವುದೇ ಮೀಸಲಾತಿ ಇರುವುದಿಲ್ಲ ಅಷ್ಟೇ ಅಲ್ಲ, ಈ ಖಾಸಗಿ ವಿದ್ಯಾಸಂಸ್ಥೆಗಳು “ಡೊನೇಷನ್ ಪಡೆಯಬಾರದು, ಲಾಭ ಮಾಡಿಕೊಳ್ಳಬಾರದು” ಎಂದು ಹೇಳಿರುವ ನ್ಯಾಯಾಲಯ ಅವುಗಳು ತಮಗೆ ಸೂಕ್ತ ಎನಿಸಿದಷ್ಟು ಶುಲ್ಕ ವಿಧಿಸಹುದು ಎಂದೂ ಆದೇಶಿಸಿದೆ.
ಈ “ಸೂಕ್ತ” ಶುಲ್ಕ ಎಂದರೇನು?
ನಮ್ಮ ಸಂವಿಧಾನವು ಶಿಕ್ಷಣದಲ್ಲಿ ಹಾಗೂ ಉದ್ಯೋಗ ಅವಕಾಶಗಳಲ್ಲಿ ವರ್ಗ, ಜಾತಿ, ಲಿಂಗ ಆಧಾರಿತ ತಾರತಮ್ಯಗಳನ್ನು ನಿವಾರಿಸುವಂತೆ ಯೋಜನೆಗಳನ್ನು ರೂಪಿಸಬೇಕೆಂದು ಸರ್ಕಾರಕ್ಕೆ ಆದೇಶಿಸುತ್ತದೆ. ಅದೇ ರೀತಿ ದೇಶದ ಸಂಪನ್ಮೂಲಗಳೂ ಎಲ್ಲರಿಗೆ ಸಿಗುವಂತಾಂಗಬೇಕು ಎಂದು ಹೇಳುತ್ತದೆ. ಆದ್ದರಿಂದಲೇ ಅತ್ಯಂತ ದಮನಿತ ಪಂಗಡ ಹಾಗೂ ಸಮುದಾಯಗಳಿಗೆ ವಿಶೇಷ ಮೀಸಲಾತಿ ನೀಡಲಾಗುತ್ತದೆ. ಇದನ್ನು ಗಮನದಲ್ಲಿಟ್ಟುಕೊಂಡೇ ಮೋಹಿನಿ ಜೈನ್ ಪ್ರಕರಣದಲ್ಲಿ “ಯಾವುದೇ ಖಾಸಗಿ ಶಿಕ್ಷಣ ಸಂಸ್ಥೆ ಸರ್ಕಾರದಿಂದ ಮಾನ್ಯತೆ ಪಡೆದ ಕೂಡಲೇ ಆ ಸಂಸ್ಥೆಗೆ ಸರ್ಕಾರಕ್ಕಿರುವ ಸಾಮಾಜಿಕ ಜವಾಬ್ದಾರಿಗಳೂ ಅನ್ವಯಿಸುತ್ತದೆ” ಎಂದು 90ರ ದಶಕದಲ್ಲಿ ಸರ್ವೋಚ್ಛ ನ್ಯಾಯಲಯ ಹೇಳಿತ್ತು. ಹಾಗೆಯೇ 1993ರ ಉನ್ನಿ ಕೃಷ್ಣನ್ ಪ್ರಕರಣದಲ್ಲಿ “ಖಾಸಗಿ ಶಿಕ್ಷಣ ಸಂಸ್ಥೆಗಳು ಶಿಕ್ಷಣವನ್ನು ಒಂದು ವ್ಯಾಪಾರವಾಗಿ ನಡೆಸಲು ಸಂವಿಧಾನದಲ್ಲಿ ಮಾನ್ಯತೆ ಇಲ್ಲ” ಎಂದೂ ಹೇಳಿತ್ತು.
ಆದರೆ ಈಗ, ಖಾಸಗಿ ಶಿಕ್ಷಣ ಸಂಸ್ಥೆಗಳು ಸಾಮಾಜಿಕ ನ್ಯಾಯ ನೀತಿಯನ್ನು ಅನುಸರಿಸಬೇಕಿಲ್ಲ, ತಮಗೆ ಸೂಕ್ತವೆನಿಸುವಷ್ಟು ಶುಲ್ಕವನ್ನು ವಿಧಿಸಬಹುದು ಎಂದು ಅದೇ ಸರ್ವೋಚ್ಛ ನ್ಯಾಯಾಲಯ ಹೇಳಿದೆ. ಒಂದು ರೀತಿಯಲ್ಲಿ ಇದೇ ನ್ಯಾಯಾಲಯ ಖಿಒಂ ಪೈ ಪ್ರಕರಣದಲ್ಲಿ “ಶಿಕ್ಷಣವನ್ನು ವ್ಯವಹಾರವಾಗಿ ನಡೆಸಬಹುದು; ಸರ್ಕಾರ ಮೂಗು ತೂರಿಸಬಾರದು” ಎಂದು 2002ರಲ್ಲಿ ನೀಡಿದ್ದ ತೀರ್ಪಿನ ಮುಂದುವರಿದ ಭಾಗದಂತಿದೆ. ಈ ತೀರ್ಪು ನಮ್ಮ ಸಂವಿಧಾನದಲ್ಲಿರುವ ಆಶಯಗಳಿಗೆ ಎಷ್ಟು ಹತ್ತಿರವಾಗಿದೆ ಎಂದು ಯಾರೂ ಬೇಕಾದರೂ ತೀರ್ಮಾನಿಸಬಹುದು.
ಇನ್ನು ಮೆರಿಟ್ ಆಧಾರದ ಮೇಲೆ ಖಾಸಗಿ ಶಿಕ್ಷಣ ಸಂಸ್ಥೆಗಳು ಪ್ರವೇಶವನ್ನು ತೀರ್ಮಾನಿಸಬಹುದು ಎಂದು ಹೇಳಿದೆ. ಮೊದಲನೆಯದಾಗಿ ಈ ‘ಮೆರಿಟ್’ ಎಂಬುದನ್ನೇ ತೀರ್ಮಾನಿಸುವುದು ಯಾವ ಮಾನದಂಡದಿಂದ? ಜಾತಿ, ವರ್ಗ, ನಗರ-ಗ್ರಾಮೀಣ, ಉಳ್ಳವರು-ಉಳ್ಳದಿರುವವರು ಹೀಗೆ ಹಲವಾರು ಅಂತರಗಳು ನಮ್ಮ ಸಮಾಜದಲ್ಲಿರುವಾಗ, ಇಲ್ಲಿ ಐeveಟ Pಟಚಿಥಿiಟಿg ಈieಟಜ ಎಂಬುದೇ ಇಲ್ಲದಿರುವಾಗ, ಈ ‘ಮೆರಿಟ್’ ಅನ್ನು ನಿರ್ಧರಿಸುವುದು ಹೇಗೆ? ಇದನ್ನೆಲ್ಲಾ ಚಿಂತಿಸುತ್ತಾ ಹೋದಂತೆ, ನಿಜವಾಗಲೂ ಇಂದಿನ ಸಮಾಜದಲ್ಲಿ ನಮ್ಮ ಲಕ್ಷಾಂತರ ಪ್ರತಿಭಾವಂತ ವಂಚಿತ ಸಮುದಾಯಗಳ ವಿದ್ಯಾರ್ಥಿಗಳಿಗೆ ಭವಿಷ್ಯವೇ ಇಲ್ಲದಂತಾಗಿದೆ,
ಇದು ಯಾವ ನ್ಯಾಯ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

2025ಕ್ಕೆ ಬಿಜೆಪಿ ಸಂಪೂರ್ಣ ಮೀಸಲಾತಿಯನ್ನು ರದ್ದುಗೊಳಿಸಲಿದೆ: ರೇವಂತ್ ರೆಡ್ಡಿ

0
ಎಸ್‌ಸಿ, ಎಸ್‌ಟಿ ಮತ್ತು ಒಬಿಸಿ ಸಮುದಾಯಗಳ ಮೀಸಲಾತಿಯನ್ನು ರದ್ದುಗೊಳಿಸುವ ಉದ್ದೇಶದಿಂದ ಬಿಜೆಪಿ ಮತ್ತು ಆರ್‌ಎಸ್‌ಎಸ್ ಸಂವಿಧಾನದ ವಿರುದ್ಧ ಸಮರ ಸಾರಿವೆ ಎಂದು ಆರೋಪಿಸಿರುವ ತೆಲಂಗಾಣದ ಮುಖ್ಯಮಂತ್ರಿ ಎ ರೇವಂತ್ ರೆಡ್ಡಿ, ಮೀಸಲಾತಿ ರದ್ದುಗೊಳಿಸುವ...