ಅನ್ಯಾಯದ ವಿರುದ್ಧದ ಹೋರಾಟದಲ್ಲಿ ಕಾಂಗ್ರೆಸ್ ಹಿಂದೆ ಸರಿಯುವುದಿಲ್ಲ, ನಮ್ಮ ಕೊನೆಯ ಉಸಿರಿರುವವರೆಗೂ ದೇಶ, ಪ್ರಜಾಪ್ರಭುತ್ವವನ್ನು ಉಳಿಸುವ ನಮ್ಮ ಕರ್ತವ್ಯವನ್ನು ಪೂರೈಸುತ್ತೇವೆ ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹೇಳಿದ್ದಾರೆ.
ಭಾರತ ಉಳಿಸಿ ರ್‍ಯಾಲಿಯಲ್ಲಿ ಮಾತನಾಡಿದ ಅವರು ಅನ್ಯಾಯವನ್ನು ಅನುಭವಿಸುವುದು ದೊಡ್ಡ ಅಪರಾಧ, ಪ್ರಜಾಪ್ರಭುತ್ವ ಮತ್ತು ಸಂವಿಧಾನಗಳನ್ನು ಉಳಿಸುವ ಸಮಯ ಎಂದು ಅವರು ಹೇಳಿದ್ದಾರೆ.
ಕತ್ತಲೇ ನಗರಿ ತಲೆಕೆಟ್ಟ ರಾಜ ಎಂಬ ಪರಿಸ್ಥಿತಿ ದೇಶಕ್ಕೆ ತಲೆದೋರಿದೆ. ಇಡೀ ರಾಷ್ಟ್ರವು “ಸಬ್ಕಾ ಸಾತ್ ಸಬ್ಕಾ ವಿಕಾಸ್” ಎಲ್ಲಿದೆ ಎಂದು ಕೇಳುತ್ತದೆ ಎಂದ ಅವರು ಮೋದಿ-ಷಾ ಸರ್ಕಾರ ಸಂಸತ್ತು ಅಥವಾ ಸಂಸ್ಥೆಗಳ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ; ಅವರ ಏಕೈಕ ಕಾರ್ಯಸೂಚಿ ನಿಜವಾದ ಸಮಸ್ಯೆಗಳನ್ನು ಮರೆಮಾಡುವುದು, ಜನರನ್ನು ದಿಕ್ಕುತಪ್ಪಿಸುವುದಾಗಿ ಎಂದು ಕಿಡಿಕಾರಿದ್ದಾರೆ.
ಅವರು ಪ್ರತಿದಿನ ಸಂವಿಧಾನವನ್ನು ಉಲ್ಲಂಘಿಸುತ್ತಾರೆ ಮತ್ತು ನಂತರ ಸಂವಿಧಾನ ದಿನವನ್ನು ಸಹ ಆಚರಿಸುತ್ತಾರೆ ಎಂದು ಸೋನಿಯಾ ಗಾಂಧಿ ವ್ಯಂಗ್ಯವಾಡಿದ್ದಾರೆ. ಭರವಸೆಯಂತೆ ಕಪ್ಪುಹಣವನ್ನು ಏಕೆ ಮರಳಿ ತರಲು ಸಾಧ್ಯವಾಗಲಿಲ್ಲ? ಯಾಕೆ ಇದರ ಬಗ್ಗೆ ತನಿಖೆಯಾಗಬಾರದು ಎಂದು ಅವರು ಪ್ರಶ್ನಿಸಿದ್ದಾರೆ.


