Homeಚಳವಳಿನನ್ನ ಹೆಸರು ರಾಹುಲ್ ಗಾಂಧಿ, ರಾಹುಲ್ ಸಾವರ್ಕರ್ ಅಲ್ಲ: ಸತ್ಯವನ್ನು ಹೇಳಿದ್ದಕ್ಕಾಗಿ ನಾನು ಎಂದಿಗೂ ಕ್ಷಮೆಯಾಚಿಸುವುದಿಲ್ಲ

ನನ್ನ ಹೆಸರು ರಾಹುಲ್ ಗಾಂಧಿ, ರಾಹುಲ್ ಸಾವರ್ಕರ್ ಅಲ್ಲ: ಸತ್ಯವನ್ನು ಹೇಳಿದ್ದಕ್ಕಾಗಿ ನಾನು ಎಂದಿಗೂ ಕ್ಷಮೆಯಾಚಿಸುವುದಿಲ್ಲ

ನೋಟು ರದ್ದತಿ ಮಾಡಿದರು. ಕಪ್ಪು ಹಣ ತರುತ್ತೇವೆ, ಭ್ರಷ್ಟಾಚಾರ ನಿಲ್ಲುಸುತ್ತೇವೆ ಎಂದು ಸುಳ್ಳು ಹೇಳಿ ಜನಸಾಮಾನ್ಯರನ್ನು ಲೂಟಿ ಮಾಡಿ ಅಂಬಾನಿ ಮತ್ತು ಅದಾನಿಯವರ ಜೇಬು ತುಂಬಿಸಿದರು ಎಂದು ರಾಹುಲ್‌ ಆರೋಪಿಸಿದ್ದಾರೆ.

- Advertisement -
- Advertisement -

“ನನ್ನ ಹೆಸರು ರಾಹುಲ್ ಗಾಂಧಿ, ರಾಹುಲ್ ಸಾವರ್ಕರ್ ಅಲ್ಲ; ಸತ್ಯವನ್ನು ಹೇಳಿದ್ದಕ್ಕಾಗಿ ನಾನು ಎಂದಿಗೂ ಕ್ಷಮೆಯಾಚಿಸುವುದಿಲ್ಲ ಮತ್ತು ಯಾವುದೇ ಕಾಂಗ್ರೆಸ್ಸಿಗರು ಹಾಗೆ ಮಾಡುವುದಿಲ್ಲ ಎಂದು ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ಸಾರಿದ್ದಾರೆ.

ಭಾರತ ಉಳಿಸಿ ರ್‍ಯಾಲಿ ಉದ್ದೇಶಿಸಿ ಮಾತನಾಡಿದ ಅವರು “ಭಾರತದ ಆರ್ಥಿಕತೆಯನ್ನು ನಾಶಪಡಿಸಿದ್ದಕ್ಕಾಗಿ ದೇಶದ ಕ್ಷಮೆಯಾಚಿಸಬೇಕಾಗಿರುವುದು ನರೇಂದ್ರ ಮೋದಿ ಮತ್ತು ಅವರ ಸಹಾಯಕ ಅಮಿತ್ ಶಾ” ಎಂದು  ಹೇಳಿದ್ದಾರೆ.

ಭಾರತ ದೇಶದ ಶಕ್ತಿ, ಭಾರತ ಆತ್ಮ ಇಲ್ಲಿನ ಆರ್ಥಿಕ ವ್ಯವಸ್ಥೆಯಾಗಿತ್ತು. ಇಡೀ ವಿಶ್ವ ನಮ್ಮನ್ನು ನೋಡುತ್ತಿತ್ತು. ಹಲವು ಧರ್ಮ, ಜಾತಿ ಮತ್ತು ಹಲವಾರು ವಿಚಾರಧಾರೆಗಳು ಸೇರಿ 9% ಜಿಡಿಪಿ ತಂದಿದ್ದೆವು. ಚೀನಾ ಮತ್ತು ಇಂಡಿಯಾ ಸೇರಿ ಚಿಂಡಿಯಾ ಎಂದು ಕರೆಯುತ್ತಿದ್ದರು. ಚಿಂಡಿಯಾ ವಿಶ್ವದ ಭವಿಷ್ಯ ಎಂದು ಕರೆಯಲಾಗುತ್ತಿದೆ. ಆದರೆ ಈಗ ಏನಾಗಿದೆ ಎಂದು ನೀವೇ ನೋಡುತ್ತಿದ್ದೀರಿ. ಭಾರತದ ಭವಿಷ್ಯವನ್ನು ನರೇಂದ್ರ ಮೋದಿ ತಮ್ಮ ಕೈಯ್ಯಾರೆ ಹಾಳು ಮಾಡಿದ್ದರೆ ಎಂದು ರಾಹುಲ್‌ ಗಾಂಧಿ ಕಿಡಿಕಾರಿದರು.

ನೋಟು ರದ್ದತಿ ಮಾಡಿದರು. ಕಪ್ಪು ಹಣ ತರುತ್ತೇವೆ, ಭ್ರಷ್ಟಾಚಾರ ನಿಲ್ಲುಸುತ್ತೇವೆ ಎಂದು ಸುಳ್ಳು ಹೇಳಿ ಜನಸಾಮಾನ್ಯರನ್ನು ಲೂಟಿ ಮಾಡಿ ಅಂಬಾನಿ ಮತ್ತು ಅದಾನಿಯವರ ಜೇಬು ತುಂಬಿಸಿದರು ಎಂದು ರಾಹುಲ್‌ ಆರೋಪಿಸಿದ್ದಾರೆ.

ಇನ್ನು ಗಬ್ಬರ್‌ ಸಿಂಗ್‌ ಟ್ಯಾಕ್ಸ್‌ ಪದ್ದತಿ ಜಾರಿಗೆ ತಂದು 45 ವರ್ಷಗಳಲ್ಲಿಯೇ ಅತಿ ಹೆಚ್ಚಿನ ನಿರುದ್ಯೋಗ ದರ ಮಾಡಿದರು. 9%ಇದ್ದ ಜಿಡಿಪಿಯನ್ನು 4%ಗೆ ತಂದು ನಿಲ್ಲಿಸಿದರು. ಭಾರತದ ಆರ್ಥಿಕತೆಯನ್ನು ಮಾಡಿದ್ದು ನಮ್ಮ ಅತ್ಯಂತ ದೊಡ್ಡ ಶತ್ರು ಅಲ್ಲ ಬದಲಿಗೆ ನಮ್ಮ ಪ್ರಧಾನಿಯಾಗಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ರೈತರು, ಕಾರ್ಮಿಕರು, ಸಣ್ಣ ವ್ಯಾಪಾರಿಗಳು ಇದರಿಂದ ನಷ್ಟ ಅನುಭವಿಸಿದ್ದಾರೆ ಎಂದರು.

ಒಂದು ಲಕ್ಷಕ್ಕೂ ಹೆಚ್ಚಿನ ಕಾಂಟ್ರಾಕ್ಟ್‌ಅನ್ನು ಅದಾನಿಯೊಬ್ಬರಿಗೆ ಮೋದಿ ನೀಡಿದ್ದಾರೆ. ಏಕೆ? ಇದು ಭ್ರಷ್ಟಾಚಾರವಲ್ಲವೇ? ಒಂದು ಲಕ್ಷದ ನಲವತ್ತು ಲಕ್ಷ ಕೋಟಿ ರೂಪಾಯಿಗಳನ್ನು ಅತೀ ಶ್ರೀಮಂತರ ಸಾಲವನ್ನು ಮನ್ನಾ ಮಾಡಿದ ಸರ್ಕಾರ ಬಡಜನರು ಬಳಸುವ ಫೋನ್‌ ಕರೆಗಳ ದರವನ್ನು 15% ಹೆಚ್ಚಿಸಿದ್ದಾರೆ.

ಭಾರತದ ರೈತರು, ಕಾರ್ಮಿಕರು, ಯುವಜನರ ಜೇಬಿನಲ್ಲಿ ಹಣ ಎಲ್ಲಿಯವರೆಗೂ ಬರುವುದಿಲ್ಲ ಅಲ್ಲಿಯವರೆಗೆ ನಮ್ಮ ಅರ್ಥ ವ್ಯವಸ್ಥೆ ಸುಧಾರಿಸುವುದಿಲ್ಲ. ಮೊದಲು ಬಡವರ, ರೈತರ, ಕಾರ್ಮಿಕರ ಕೈಗೆ ಬರಬೇಕು. ಅವರು ಖರೀದಿಸುತ್ತಾರೆ. ಬೇಡಿಕೆ ಹೆಚ್ಚಾದಂತೆ ಫ್ಯಾಕ್ಟರಿಗಳು ಹೆಚ್ಚು ಉತ್ಪಾದನೆ ಮಾಡಲು ಜನರಿಗೆ ಉದ್ಯೋಗ ನೀಡುತ್ತಾರೆ. ಇದು ಒಂದು ವ್ಯವಸ್ಥೇ ಇದನ್ನು ನರೇಂದ್ರ ಮೋದಿ ಹಾಳು ಮಾಡಿದರು.

ಕಾಂಗ್ರೆಸ್‌ ಆಡಳಿತದ ಪಂಜಾಬ್‌, ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್‌ಘಡ ಸೇರಿದಂತೆ ಹಲವು ರಾಜ್ಯಗಳಲ್ಲಿ ರೈತರ ಸಾಲ ಮನ್ನಾ ಮಾಡಿದ್ದೇವೆ. ಕೆಲವೆಡೆ ಎಂಎಸ್‌ಪಿ ಕೊಡುತ್ತಿದ್ದೇವೆ. ಮನರೇಗಾ ಯೋಜನೆ ಯಾಕೆ ಜಾರಿಗೆ ತಂದೆವು? ನಮಗೆ ಗೊತ್ತು ರೈತರು ಚೆನ್ನಾಗಿದ್ದರೆ ದೇಶ ಚೆನ್ನಾಗಿರುತ್ತದೆ ಎಂದು ಅವರು ಹೇಳಿದರು.

ಇಡೀ ದೇಶ ನರೇಂದ್ರ ಗಾಂಧಿಯವರನ್ನು ಆಯ್ಕೆ ಮಾಡಿತು. ಏಕೆಂದರೆ ದೇಶಕ್ಕೆ ಒಳ್ಳೆಯದು ಮಾಡಲಿ ಎಂದು. ಆದರೆ ಅವರು ಮಾಡಿದ್ದೇನು? ದೇಶವನ್ನು ಹಳ್ಳ ಹಿಡಿಸಿದರು ಎಂದು ರಾಹುಲ್‌ ಗಾಂಧಿ ಕಿಡಿಕಾರಿದ್ದಾರೆ.

ಭಾರತದ ಟಿವಿಗಳಲ್ಲಿ ಕೇವಲ ನರೇಂದ್ರ ಮೋದಿಯವರು ಮಾತ್ರ ಕಾಣಿಸಿಕೊಳ್ಳುತ್ತಾರೆ. ಎಲ್ಲಾ ಜಾಹೀರಾತುಗಳಲ್ಲಿಯೂ ಅವರೇ ಕಾಣಿಸುತ್ತಾರೆ. ಮನಮೋಹನ್‌ ಸಿಂಗ್‌ ಕಾಣಿಸುವುದಿಲ್ಲ ಅಲ್ಲವೇ? ನರೇಂದ್ರ ಮೊದಿಯವರ ಜಾಹಿರಾತು ಕೊಡಲು ಅವರಿಗೆ ಹಣ ಎಲ್ಲಿಂದ ಬರುತ್ತದೆ? ಅದು ನಮ್ಮೆಲ್ಲರ ತೆರಿಗೆ ಹಣವಲ್ಲವೇ? ಎಂದು ಪ್ರಶ್ನಿಸಿದರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read