ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ ಐಕ್ಯತಾ ಯಾತ್ರೆಯಲ್ಲಿ ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಭಾಗವಹಿಸಿರುವುದು ಯಾವುದೆ ಪರಿಣಾಮ ಬೀರುವುದಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಗುರುವಾರ ಹೇಳಿದ್ದಾರೆ.
ಭಾರತ ಐಕ್ಯತಾ ಯಾತ್ರೆಯು ಮಂಡ್ಯ ಜಿಲ್ಲೆಯ ನಾಗಮಂಗಲಲ್ಲಿ ಇದ್ದು, ಇದರಲ್ಲಿ ಭಾಗವಹಿಸಲು ಸೋನಿಯಾ ಗಾಂಧಿ ಆಗಮಿಸಿದ್ದರು. ತನ್ನ ಜೊತೆಗೆ ಹೆಜ್ಜೆ ಹಾಕಿದ ಸೋನಿಯಾ ಗಾಂಧಿ ಅವರನ್ನು ಸ್ವಲ್ಪ ಹೊತ್ತಿನಲ್ಲೆ ತಡೆದ ರಾಹುಲ್ ಗಾಂಧಿ ಅವರನ್ನು ವಾಪಾಸು ಕಳುಹಿಸಿದ್ದಾರೆ. ಈ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿವೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಈ ಬಗ್ಗೆ ಪ್ರತಿಕ್ರಿಯಿಸಿದ ಸಿಎಂ ಬೊಮ್ಮಾಯಿ, ಅವರು ಅರ್ಧ ಕಿಮೀ ನಡೆದು, ವಾಪಸ್ಸಾಗಿದ್ದಾರೆ ಎಂದು ಹೇಳಿದ್ದು, ಇದರಿಂದ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಅವರು ಪ್ರತಿಪಾದಿಸಿದ್ದಾರೆ.
ಇದನ್ನೂ ಓದಿ: ‘ಭಾರತ ಐಕ್ಯತಾ ಯಾತ್ರೆ’ ನಡುವೆ ಡಿ.ಕೆ. ಶಿವಕುಮಾರ್‌ಗೆ ಇಡಿ ಸಮನ್ಸ್
“ಸಹಜವಾಗಿ ಎಲ್ಲಾ ಪಕ್ಷದ ಮುಖ್ಯಸ್ಥರು ತಮ್ಮ ಪಕ್ಷಕ್ಕೆ ಕೆಲಸ ಮಾಡುತ್ತಾರೆ. ಸೋನಿಯಾ ಗಾಂಧಿ ಅರ್ಧ ಕಿ.ಮೀ ನಡೆದು ವಾಪಸ್ಸಾಗಿದ್ದಾರೆ. ಇದ್ಯಾವುದೂ ಪರಿಣಾಮವನ್ನು ಬೀರುವುದಿಲ್ಲ. ಪ್ರಿಯಾಂಕಾ ಗಾಂಧಿ ಅಭಿಯಾನದಲ್ಲಿ ಪಾಲ್ಗೊಳ್ಳುವುದಕ್ಕೂ ನಮಗೂ ಸಂಬಂಧ ಇಲ್ಲ, ಇದರಿಂದ ಯಾವ ಪರಿಣಾಮವೂ ಆಗುವುದಿಲ್ಲ” ಎಂದು ಹೇಳಿದ್ದಾರೆ.
Caring son @RahulGandhi Ji 💕🫶#BharatJodoYatra #BharatJodoWithSoniaGandhi pic.twitter.com/BwB3CJy0aw
— Nitin Agarwal (@nitinagarwalINC) October 6, 2022
ವಿಧಾನಸಭೆ ಚುನಾವಣೆಗೆ ಮುಂಚಿತವಾಗಿ ನಡೆಯುತ್ತಿರುವ ಕಾಂಗ್ರೆಸ್‌ನ ಯಾತ್ರೆಯನ್ನು ಎದುರಿಸಲು ಬಿಜೆಪಿ ಕೂಡಾ ರ್‍ಯಾಲಿಗಳನ್ನು ಯೋಜಿಸುತ್ತಿದೆ ಎಂಬ ವರದಿಗಳ ಬಗ್ಗೆ ಪ್ರತಿಕ್ರಿಯಿಸಿದ ಅವರು, “ನಮ್ಮ ರ್‍ಯಾಲಿಗಳನ್ನು ಬಹಳ ಮೊದಲೆ ಯೋಜಿಸಲಾಗಿತ್ತು” ಎಂದು ಹೇಳಿದ್ದಾರೆ.
“ನಾನು ಮೊದಲೇ ಹೇಳಿದಂತೆ ಆರು ರ್‍ಯಾಲಿಗಳು ಇರುತ್ತವೆ. ನಾವು ಅದನ್ನು ಮೊದಲೇ ಯೋಜಿಸಿದ್ದೆವು, ಆದರೆ ವಿಧಾನಸಭೆ ಅಧಿವೇಶನ ಇರುವುದರಿಂದ ಅದನ್ನು ದಸರಾ ನಂತರ ಮಾಡಲು ನಿರ್ಧರಿಸಿದ್ದೇವೆ” ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: 5ನೇ ದಿನದ ಭಾರತ ಐಕ್ಯತಾ ಯಾತ್ರೆ ಆರಂಭ: ಜೊತೆಗೂಡಿದ ಸೋನಿಯಾ ಗಾಂಧಿ
“ನಾವು ಅನೇಕ ಚಂಡಮಾರುತಗಳನ್ನು ಎದುರಿಸಿದ್ದೇವೆ ಮತ್ತು ಎಲ್ಲಾ ಸವಾಲುಗಳನ್ನು ಜಯಿಸುತ್ತೇವೆ. ಒಟ್ಟಾಗಿ ನಾವು ಭಾರತವನ್ನು ಒಗ್ಗೂಡಿಸುತ್ತೇವೆ” ಎಂದು ರಾಹುಲ್ ಗಾಂಧಿ ಹಿಂದಿಯಲ್ಲಿ ಟ್ವೀಟ್ ಮಾಡಿ, ತಮ್ಮ ತಾಯಿಯ ತೋಳು ಹಿಡಿದುಕೊಂಡು ನಡೆಯುತ್ತಿರುವ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ.
हम पहले भी तूफानों से कश्ती निकाल कर लाए हैं, हम आज भी हर चुनौतियों की हदें तोड़ेंगे, मिलकर भारत जोड़ेंगे। pic.twitter.com/RCR46zYXZJ
— Rahul Gandhi (@RahulGandhi) October 6, 2022
ಯಾತ್ರೆಯ ನಡುವೆ ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಅವರ ಮತ್ತೊಂದು ಚಿತ್ರ ಕೂಡಾ ವೈರಲ್ ಆಗಿದೆ. ಅದರಲ್ಲಿ ರಾಹುಲ್ ಗಾಂಧಿ ತನ್ನ ತಾಯಿಯ ಶೂಲೇಸ್‌ಗಳನ್ನು ಕಟ್ಟುತ್ತಿದ್ದಾರೆ. ಈ ಚಿತ್ರವನ್ನು ಕಾಂಗ್ರೆಸ್ ನಾಯಕರು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ಭಾರತ ಐಕ್ಯತಾ ಯಾತ್ರೆ ವಿರುದ್ಧ ಆಕ್ಷೇಪಾರ್ಹ ಸುದ್ದಿ ರೂಪದ ಜಾಹೀರಾತು ನೀಡಿದ ಬಿಜೆಪಿ: ತೀವ್ರ ಖಂಡನೆ
ಈ ಚಿತ್ರವನ್ನು ಕಾಂಗ್ರೆಸ್ ನಾಯಕ ಶಶಿ ತರೂರ್ ಟ್ವೀಟ್ ಮಾಡಿದ್ದು, “ಅವಳು ಉಸಿರಾಡಿದರೂ, ಆ ಉಸಿರಿನಲ್ಲೂ ಪ್ರಾರ್ಥನೆ ಇರುತ್ತದೆ. ತಾಯಂದಿರು ಒಡೆಯುವುದಿಲ್ಲ, ತಾಯಂದಿರು ತಾಯಂದಿರಾಗಿರುತ್ತಾರೆ” ಎಂದು ಹೇಳಿದ್ದಾರೆ.
वो साँस भी लेती है तो, उनमें भी दुआएं होती हैं
माँओं का तोड़ नही होता, माएँ तो माएँ होती हैं !🙏#BharatJodoYatra @INCIndia pic.twitter.com/npjsJnCah3— Shashi Tharoor (@ShashiTharoor) October 6, 2022


