2012 ರಲ್ಲಿ ಅತ್ಯಾಚಾರಕ್ಕೊಳಗಾಗಿ ಕೊಲೆಯಾದ 17 ವರ್ಷದ ಸೌಜನ್ಯ ಪರ ನ್ಯಾಯಕ್ಕೆ ಆಗ್ರಹಿಸಿ ಬೆಂಗಳೂರಿನಲ್ಲಿ ಮಂಗಳವಾರ ಸಭೆ ಸೇರಿದ ರಾಜ್ಯದ ಹಲವಾರು ಹೋರಾಟಗಾರರು, ಹೋರಾಟವನ್ನು ಮತ್ತೊಂದು ಮಜಲಿಗೆ ಕೊಂಡೊಯ್ಯಲು “ಧರ್ಮಸ್ಥಳ ಚಲೋ” ನಡೆಸಲು ನಿರ್ಧರಿಸಿದ್ದಾರೆ ಎಂದು ದಿ ಹಿಂದೂ ಪತ್ರಿಕೆ ವರದಿ ಮಾಡಿದೆ. ಸೌಜನ್ಯ ಪ್ರಕರಣ
ಅಪರಾಧ ತನಿಖಾ ಇಲಾಖೆ (ಸಿಐಡಿ) ಮತ್ತು ಕೇಂದ್ರ ತನಿಖಾ ದಳ (ಸಿಬಿಐ) ತನಿಖೆ ನಡೆಸಿದರೂ, ಪ್ರಕರಣದ ಅಪರಾಧಿಗಳು ಇಂದಿಗೂ ಪತ್ತೆಯಾಗಿಲ್ಲ. ಬೆಂಗಳೂರಿನ ಪೊಲೀಸರು ಈ ಹಿಂದೆ ಸಭೆ ನಡೆಸಲು ಹೋರಾಟಗಾರರಿಗೆ ಅನುಮತಿ ನೀಡಿರಲಿಲ್ಲ. ಇದನ್ನು ವಿರೋಧಿಸಿ ಹೋರಾಟಗಾರರು ಕರ್ನಾಟಕ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದು, ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಸಭೆಯನ್ನು ನಿಲ್ಲಿಸಲು ಸಾಧ್ಯವಿಲ್ಲ ಎಂದು ಹೇಳಿತ್ತು. ಸೌಜನ್ಯ ಪ್ರಕರಣ
ಅದಕ್ಕೂ ಮೊದಲು ಮಾರ್ಚ್ 8 ರಂದು ಕೂಡಾ ಕನ್ನಡ ಸಾಹಿತ್ಯ ಪರಿಷತ್ತು ತಮಗೆ ಬಂದ ಕಾನೂನು ಸೂಚನೆಯನ್ನು ಉಲ್ಲೇಖಿಸಿ ತನ್ನ ಆವರಣದಲ್ಲಿ ಇದೇ ರೀತಿಯ ಸಭೆಯನ್ನು ರದ್ದುಗೊಳಿಸುವಂತೆ ಸಂಘಟಕರನ್ನು ಕೇಳಿಕೊಂಡಿತ್ತು. ಮಾರ್ಚ್ 9 ರಂದು ಪರಿಷತ್ ನಡೆಸುವ ಸಭಾಂಗಣದಲ್ಲಿ ಕಾರ್ಯಕ್ರಮವನ್ನು ನಡೆಸಲು ನಿರ್ಧರಿಸಲಾಗಿತ್ತು.
ಇದತ ನಂತರ ಸಂಘಟಕರು ಸ್ಥಳವನ್ನು AITUC ಸಭಾಂಗಣಕ್ಕೆ ಬದಲಾಯಿಸಿದರು ಮತ್ತು ಮಾರ್ಚ್ 18 ರಂದು ಕಾರ್ಯಕ್ರಮವನ್ನು ನಿಗದಿಪಡಿಸಿದ್ದರು. ಇದತ ನಂತರ ಶೇಷಾದ್ರಿಪುರಂ ಪೊಲೀಸರು ನ್ಯಾಯಾಲಯದ ಆದೇಶವನ್ನು ಉಲ್ಲೇಖಿಸಿ ಕಾರ್ಯಕ್ರಮವನ್ನು ನಡೆಸದಂತೆ ಮಾರ್ಚ್ 17 ರಂದು ಸಂಘಟಕರಿಗೆ ನೋಟಿಸ್ ನೀಡಿದ್ದರು. ಇದನ್ನು ವಿರೋಧಿಸಿ ಸಂಘಟಕರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
“ಸಭೆಯಲ್ಲಿ, ನಾವು ‘ಧರ್ಮಸ್ಥಳ ಚಲೋ’ ನಡೆಸಲು ನಿರ್ಧರಿಸಿದ್ದೇವೆ. ವಿವಿಧ ಜಿಲ್ಲೆಗಳಿಂದ ಜನರು ನ್ಯಾಯಕ್ಕಾಗಿ ಪಟ್ಟಣದ ಕಡೆಗೆ ಮೆರವಣಿಗೆ ನಡೆಸಲಿದ್ದಾರೆ. ಇದರ ಜೊತೆಗೆ ನಾವು ಕಾನೂನುಬದ್ಧವಾಗಿ ಕೂಡಾ ಪ್ರಕರಣದಲ್ಲಿ ಹೋರಾಟ ಮುಂದುವರಿಸುತ್ತೇವೆ” ಎಂದು ಕಾರ್ಯಕ್ರಮದ ಆಯೋಜಕರೊಬ್ಬರು ಹೇಳಿದ್ದಾರೆ ಎಂದು ದಿ ಹಿಂದೂ ಪತ್ರಿಕೆ ವರದಿ ಮಾಡಿದೆ.
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: ಹೆಚ್‌ಡಿ ಕುಮಾರಸ್ವಾಮಿ ಭೂ ಒತ್ತುವರಿ: ಅಧಿಕಾರಿಗಳಿಂದ ತೆರವು ಕಾರ್ಯಾಚರಣೆ
ಹೆಚ್‌ಡಿ ಕುಮಾರಸ್ವಾಮಿ ಭೂ ಒತ್ತುವರಿ: ಅಧಿಕಾರಿಗಳಿಂದ ತೆರವು ಕಾರ್ಯಾಚರಣೆ

