Homeಚಳವಳಿ‘ಸ್ಟಾನ್‌ಸ್ವಾಮಿಯದ್ದು ನಿಧನವಲ್ಲ; ಪ್ರಭುತ್ವ ಮುಂದೆ ನಿಂತು ಮಾಡಿಸಿದ ಕೊಲೆ’

‘ಸ್ಟಾನ್‌ಸ್ವಾಮಿಯದ್ದು ನಿಧನವಲ್ಲ; ಪ್ರಭುತ್ವ ಮುಂದೆ ನಿಂತು ಮಾಡಿಸಿದ ಕೊಲೆ’

- Advertisement -
- Advertisement -

ಇದು ಪ್ರಕೃತಿದತ್ತ ಸಾವಲ್ಲ, ಬದಲಾಗಿ ಪ್ರಭುತ್ವ ಮುಂದೆ ನಿಂತು ನಡೆಸಿದ ಕೊಲೆ. ಫಾದರ್‌ ಸ್ಟ್ಯಾನ್ ಸ್ವಾಮಿ ಸತ್ತಿಲ್ಲ, ಅವರ ಕೊಲೆಯಾಗಿದೆ. ಆದಿವಾಸಿಗಳ ಹಕ್ಕುಗಳಿಗಾಗಿ ದಶಕಗಳ ಕಾಲ ಹೋರಾಡಿದ, ಪ್ರಭುತ್ವದ ವಿರುದ್ಧ ಸಿಡಿದೆದ್ದ ಸ್ಟ್ಯಾನ್ ಸ್ವಾಮಿ ಕೊನೆಗೂ ಅದೇ ಪ್ರಭುತ್ವದ ಅಹಂಕಾರ, ದರ್ಪಕ್ಕೆ ಬಲಿಯಾದರು.

ಅವರ ಮೇಲೆ ಅತೀ ಕಠಿಣ UAPA ಕಾಯಿದೆಯಡಿ ಕೇಸ್ ಹಾಕಲಾಗಿತ್ತು. ಹೋರಾಟಗಾರರಾದ ಅವರನ್ನು ಭಯೋತ್ಪಾದಕರೆಂದು ಪರಿಗಣಿಸಿ ಜೈಲಿಗಟ್ಟಲಾಯಿತು. ತನ್ನ ನಡುಗುವ ಕೈಗಳಿಂದ ಗ್ಲಾಸ್ ಹಿಡಿದು ನೀರೂ ಕುಡಿಯಲು ಆಗುತ್ತಿಲ್ಲ. ಆದ್ದರಿಂದ ತನಗೊಂದು ಸ್ಟ್ರಾ ಹಾಗೂ ಸಿಪ್ಪರ್ ಕೊಡಿ ಎಂದು ಅವರು ಕೋರ್ಟ್ ಮೊರೆ ಹೋಗಬೇಕಾಯಿತು. ಅದನ್ನು ವಿಚಾರಣೆಗೆತ್ತಿಕೊಳ್ಳಲು ಇಪ್ಪತ್ತು ದಿನ ಬೇಕಾಯಿತು.

ಕೋರ್ಟ್ ಅವರಿಗೆ ಸ್ಟ್ರಾ ಹಾಗೂ ಸಿಪ್ಪರ್ ಕೊಡಿ ಎಂದಾಗ ಎನ್‍ಐಎ ನಮ್ಮ ಬಳಿ ಅವುಗಳಿಲ್ಲ ಎಂದು ಹೇಳಿತು. ಕೊನೆಗೆ ಸೋಷಿಯಲ್ ಮೀಡಿಯಾದಲ್ಲಿ ಜನರು ಸ್ಟ್ರಾ ಹಾಗೂ ಸಿಪ್ಪರ್ ಖರೀದಿಸಿ ಎನ್‍ಐಗೆ ಕಳುಹಿಸಿ ಅವರ ಮಾನವನ್ನು ಕಳೆದಾಗ ಸ್ಟ್ಯಾನ್ ಸ್ವಾಮಿಗೆ, ಬಂಧನವಾಗಿ 50 ದಿನಗಳ ಬಳಿಕ ಸಿಪ್ಪರ್ ಸಿಕ್ಕಿತು.

ಇದನ್ನೂ ಓದಿ: ಬುಡಕಟ್ಟು ಜನರ ಹಕ್ಕುಗಳ ಹೋರಾಟಗಾರ ಫಾದರ್ ಸ್ಟ್ಯಾನ್ ಸ್ವಾಮಿ ನಿಧನ

ಕೇವಲ ಪ್ರಭುತ್ವ ಅಲ್ಲ ನಮ್ಮ ನ್ಯಾಯಾಂಗ ವ್ಯವಸ್ಥೆ ಕೂಡಾ ಈ ಕೊಲೆಗೆ ಜವಾಬ್ದಾರಿಯನ್ನು ಹೊರಬೇಕು. ಕಳೆದ ಆರೇಳು ತಿಂಗಳಲ್ಲಿ ಸ್ಟ್ಯಾನ್ ಸ್ವಾಮಿ ಅದೆಷ್ಟು ಬಾರಿ ಕೋರ್ಟ್ ಮೊರೆಹೋಗಿದ್ದಾರೋ? ಆದರೂ ಪ್ರತೀ ಬಾರಿ ‘ತಾರೀಕ್ ಪೆ ತಾರೀಕ್, ತಾರೀಕ್ ಪೆ ತಾರೀಕ್’ ಎಂದರೆ ಹೊರತು ನ್ಯಾಯ ಕೊಡಿಸಲಿಲ್ಲ. ನ್ಯಾಯಾಧೀಶರ ತಾರೀಕು ಬರಲೇ ಇಲ್ಲ ಆದರೆ ಯಮರಾಯನ ತಾರೀಕು ಇವತ್ತು ಬಂದುಬಿಟ್ಟಿತು.

ಸ್ಟ್ಯಾನ್ ಸ್ವಾಮಿಗೆ ಪ್ರಭುತ್ವ, ಅಸಮಾನತೆ, ಅನ್ಯಾಯದ ವಿರುದ್ಧ ಹೋರಾಟ ಹೊಸತಲ್ಲ. ಅವರು ಕೇವಲ ಪ್ರಸಕ್ತ ಸರಕಾರದವಧಿಯಲ್ಲಿ ಮಾತ್ರ ಪ್ರತಿಭಟಿಸಿದ್ದಲ್ಲ, ಹೋರಾಡಿದ್ದಲ್ಲ. ದಶಕಗಳಿಂದ ಹೋರಾಟದ ಹಾದಿಯಲ್ಲಿಯೇ ಇದ್ದರವರು. ಆದಿವಾಸಿಗಳ ಪರ ಸದಾಕಾಲ ದನಿಯೆತ್ತಿದ್ದವರು. ಸಂವಿಧಾನ ಐದನೇ ಪರಿಚ್ಛೇಧವನ್ನು ಅನುಷ್ಟಾನ ಮಾಡದ್ದರ ವಿರುದ್ಧ ಅವರ ಹೋರಾಟ ಇವತ್ತು ನಿನ್ನೆಯದಲ್ಲ.

ಬರೀ ಭಾರತ ಸರ್ಕಾರವೇಕೆ, ತಮ್ಮ ವಿದ್ಯಾರ್ಥಿ ದೆಸೆಯಲ್ಲಿ ಫಿಲಿಪೈನ್ಸ್ ದೇಶದಲ್ಲಿ ತತ್ವಶಾಶ್ತ್ರ ಹಾಗೂ ಸಮಾಜಶಾಸ್ತ್ರವನ್ನು ಅಧ್ಯಯನ ಮಾಡುತ್ತಿದ್ದಾಗ, ಅಲ್ಲಿನ ಸ್ಥಳೀಯ ಜನರ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಪ್ರತಿಭಟನೆಗಳನ್ನು ಹಮ್ಮಿಕೊಂಡು, ಪ್ರಭುತ್ವದ ವಿರುದ್ಧ ದನಿಯೆತ್ತಿದ್ದ ಧೀಮಂತ ವ್ಯಕ್ತಿ ಅವರು. ಇಂಥ ಅಪ್ರತಿಮ ಚೇತನ ಇನ್ನಿಲ್ಲ.

ಇದನ್ನೂ ಓದಿ: ಒಂದು ಸ್ಟ್ರಾ ಪಡೆಯಲು ’ಸ್ಟ್ಯಾನ್ ಸ್ವಾಮಿ’ ಹಲವು ತಿಂಗಳು ಕಾಯಬೇಕು!

ಸ್ಟ್ಯಾನ್ ಸ್ವಾಮಿಯ ಈ ಫೊಟೋ ನೋಡಿ. ಹಿಟ್ಲರನ ಗ್ಯಾಸ್ ಚೇಂಬರ್‌ಗಳ ಕಥನ ಹೇಗೆ ಇವತ್ತಿಗೂ ವಿಶ್ವವನ್ನು ಕಾಡುತ್ತಿದೆಯೋ, ಹಾಗೆಯೇ ಆಸ್ಪತ್ರೆಯ ಹಾಸಿಗೆಯ ಮೇಲಿರುವ ಎಂಬತ್ನಾಲ್ಕರ ಹರೆಯದ ಪಾರ್ಕಿನ್ಸನ್ ಪೀಡಿತ ಈ ಹೋರಾಟಗಾರನ ಕತೆ ಭವಿಷ್ಯದಲ್ಲಿ ನಮ್ಮ ದೇಶದ ಕರಾಳ ಇತಿಹಾಸ ಹಾಗೂ ಪ್ರಭುತ್ವದ ಅಹಂಕಾರವನ್ನು ಬಿಚ್ಚಿಡುವ ಸಾಧನವಾಗಲಿದೆ.

ಪಾರ್ಕಿನ್ಸನ್ ಕಾಯಿಲೆಯಿಂದ ಬಳಲುತ್ತಿದ್ದ ಅವರು ಬಂಧನದಲ್ಲಿರುವಾಗಲೇ ಕೋವಿಡ್‌ಗೆ ಒಳಗಾದರು. ಆದರೂ 84 ರ ಹರೆಯದ, ಪಾರ್ಕಿನ್ಸನ್ ಹಾಗೂ ಇತರೆ ವಯೋ ಸಹಜ ಆರೋಗ್ಯ ಸಮಸ್ಯೆಗಳಿರುವ ಅವರನ್ನು ಸರ್ಕಾರ ಇನ್ನಿಲ್ಲದಂತೆ ಪೀಡಿಸಿತು.

ಇಂದು ಸ್ಟ್ಯಾನ್ ಸ್ವಾಮಿ ಇರುವ ಜಾಗದಲ್ಲಿ ಮುಂದೆ ನಾವಿರಲಿದ್ದೇವೆ. ಪ್ರಭುತ್ವದ ಕೋವಿಗಳಿಗೆ ಹಾಗೂ ಪ್ರಭುತ್ವದ ಸರಪಣಿಗಳಿಗೆ ವ್ಯಕ್ತಿ ಕಾಣಿಸುವುದಿಲ್ಲ, ಬದಲಾಗಿ ಪ್ರಭುತ್ವದ ವಿರುದ್ಧದ ದನಿ ಮಾತ್ರ ಕೇಳಿಸುತ್ತೆ. ಹಾಗಾಗೀ ಇವತ್ತು ಸ್ಟ್ಯಾನ್ ಸ್ವಾಮಿಯ ಜಾಗದಲ್ಲಿ ನಾಳೆ ನಾವು ಯಾರಾದರೂ ಇರಬಹುದು. ನಾವಾಗಿಯೇ ಇದನ್ನು ಆರಿಸಿರುವುದು, ನಾವೇ ಅದರ ಪರಿಣಾಮಗಳನ್ನು ಉಣಲಿದ್ದೇವೆ.

ಇದನ್ನೂ ಓದಿ: ಸ್ಟಾನ್ ಸ್ವಾಮಿ ಬಂಧನ: ದಸ್ತಗಿರಿಯಾದದ್ದು ಆದಿವಾಸಿಗಳ ಕೊರಳ ದನಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸ್ವಕ್ಷೇತ್ರ ತಿರುವನಂತಪುರದಲ್ಲಿ ಬಿಜೆಪಿ ಭರ್ಜರಿ ಗೆಲುವು : ‘ಪ್ರಜಾಪ್ರಭುತ್ವದ ಸೌಂದರ್ಯ’ ಎಂದ ಕಾಂಗ್ರೆಸ್ ಸಂಸದ ಶಶಿ ತರೂರ್

ಕೇರಳದ ಸ್ಥಳೀಯ ಸಂಸ್ಥೆ ಚುನಾವಣೆಯ ಫಲಿತಾಂಶ ಇಂದು (ಡಿ.13) ಪ್ರಕಟಗೊಂಡಿದ್ದು, ತಿರುವನಂತಪುರಂ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಭರ್ಜರಿ ಗೆಲುವು ದಾಖಲಿಸಿದೆ. ಈ ಮೂಲಕ 45 ವರ್ಷಗಳ ಸಿಪಿಐ(ಎಂ) ನೇತೃತ್ವದ ಎಲ್‌ಡಿಎಫ್‌...

ಕೇರಳ ಸ್ಥಳೀಯ ಸಂಸ್ಥೆ ಚುನಾವಣೆ : ಯುಡಿಎಫ್‌ ಸ್ಪಷ್ಟ ಮೇಲುಗೈ

ಇಂದು (2025 ಡಿಸೆಂಬರ್ 13, ಶನಿವಾರ) ಪ್ರಕಟಗೊಂಡ ಕೇರಳದ ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶದಲ್ಲಿ ವಿರೋಧ ಪಕ್ಷಗಳ ಒಕ್ಕೂಟವಾದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್) ಸ್ಪಷ್ಟ ಮೇಲುಗೈ ಸಾಧಿಸಿದೆ. ಈ ಮೂಲಕ ರಾಜ್ಯ...

ಕೋಲ್ಕತ್ತಾ ಮೆಸ್ಸಿ ಕಾರ್ಯಕ್ರಮದಲ್ಲಿ ಗಲಾಟೆ | ಕ್ಷಮೆ ಯಾಚಿಸಿದ ಸಿಎಂ ಮಮತಾ ಬ್ಯಾನರ್ಜಿ, ತನಿಖೆಗೆ ಸಮಿತಿ ರಚನೆ; ಆಯೋಜಕನ ಬಂಧನ

ಫುಟ್ಬಾಲ್ ತಾರೆ ಲಿಯೋನೆಲ್ ಮೆಸ್ಸಿ ಭೇಟಿಯ ವೇಳೆ ಶನಿವಾರ (ಡಿಸೆಂಬರ್ 13) ಕೋಲ್ಕತ್ತಾದ ಸಾಲ್ಟ್ ಲೇಕ್ ಕ್ರೀಡಾಂಗಣದಲ್ಲಿ ಉಂಟಾದ ಗಲಾಟೆಗೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕ್ಷಮೆಯಾಚಿಸಿದ್ದು, ನಿವೃತ್ತ ನ್ಯಾಯಮೂರ್ತಿ...

ಮೆಸ್ಸಿ ನೋಡಲು 25 ಸಾವಿರ ರೂ. ಪಾವತಿಸಿದವರಿಗೆ ನಿರಾಶೆ; ಕೋಪಗೊಂಡ ಅಭಿಮಾನಿಗಳಿಂದ ಕ್ರೀಡಾಂಗಣದಲ್ಲಿ ದಾಂಧಲೆ

ಶನಿವಾರ ನಡೆದ ಲಿಯೋನೆಲ್ ಮೆಸ್ಸಿ ಅವರ ಬಹು ನಿರೀಕ್ಷಿತ "ಗೋಟ್ ಇಂಡಿಯಾ ಟೂರ್" ಕೋಲ್ಕತ್ತಾದಲ್ಲಿ ಅಸ್ತವ್ಯಸ್ತವಾಯಿತು. ಯುವ ಭಾರತಿ ಕ್ರಿರಂಗನ್‌ನಲ್ಲಿ ರೊಚ್ಚಿಗೆದ್ದ ಅಭಿಮಾನಿಗಳ ದಾಂಧಲೆಯಿಂದ ಕ್ರೀಡಾಂಗಣ ಅವ್ಯವಸ್ಥೆಗೆ ಒಳಗಾಯಿತು. ಸಾವಿರಾರು ಅಭಿಮಾನಿಗಳು ಅರ್ಜೆಂಟೀನಾದ...

ಡ್ರಗ್‌ ಪೆಡ್ಲರ್‌ಗಳ ಮನೆ ಒಡೆದು ಹಾಕುವ ಹೇಳಿಕೆ : ಪರಮೇಶ್ವರ್ ಮಾತಿಗೆ ಆತಂಕ ವ್ಯಕ್ತಪಡಿಸಿದ ಕಾಂಗ್ರೆಸ್ ಹಿರಿಯ ನಾಯಕ ಚಿದಂಬರಂ

"ಡ್ರಗ್‌ ಪೆಡ್ಲರ್‌ಗಳ ಬಾಡಿಗೆ ಮನೆಗಳನ್ನು ಒಡೆದು ಹಾಕುವ ಹಂತಕ್ಕೆ ಹೋಗಿದ್ದೇವೆ" ಎಂಬ ಗೃಹ ಸಚಿವ ಜಿ.ಪರಮೇಶ್ವರ್ ಹೇಳಿಕೆಗೆ ಕಾಂಗ್ರೆಸ್ ಹಿರಿಯ ನಾಯಕ, ಮಾಜಿ ಕೇಂದ್ರ ಸಚಿವ ಪಿ. ಚಿದಂಬರಂ ಆತಂಕ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ...

ಕೇರಳ ಸ್ಥಳೀಯ ಸಂಸ್ಥೆಗಳ ಚುನಾವಣೆ: ಶಶಿ ತರೂರ್ ಕ್ಷೇತ್ರ ತಿರುವನಂತಪುರಂನಲ್ಲಿ ಬಿಜೆಪಿ ಮುನ್ನಡೆ

ಕೇರಳ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ, ವಿಶೇಷವಾಗಿ ತಿರುವನಂತಪುರಂನಲ್ಲಿ ಭಾರತೀಯ ಜನತಾ ಪಕ್ಷದ ಸಾಧನೆಯನ್ನು ಹಿರಿಯ ಕಾಂಗ್ರೆಸ್ ನಾಯಕ ಶಶಿ ತರೂರ್ ಶನಿವಾರ ಅಭಿನಂದಿಸಿದ್ದಾರೆ. ಜನರ ತೀರ್ಪನ್ನು ಗೌರವಿಸಬೇಕು ಎಂದು ಹೇಳಿದ್ದಾರೆ. ಎಕ್ಸ್‌ನಲ್ಲಿ ದೀರ್ಘ...

ಆಳಂದ ಮತಗಳ್ಳತನ | ಬಿಜೆಪಿ ಮಾಜಿ ಶಾಸಕ ಸುಭಾಷ್ ಗುತ್ತೇದಾರ್ ಸೇರಿ 7 ಮಂದಿ ವಿರುದ್ಧ ಎಸ್‌ಐಟಿ ಚಾರ್ಜ್‌ಶೀಟ್‌

ಕಲಬುರಗಿಯ ಆಳಂದ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಮತಗಳ್ಳತನ (ಚುನಾವಣಾ ಆಕ್ರಮ) ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದು, ಆಳಂದದ ಬಿಜೆಪಿ ಮಾಜಿ ಶಾಸಕ ಸುಭಾಷ್ ಗುತ್ತೇದಾರ್...

ಉತ್ತರ ಪ್ರದೇಶ| ಗಸ್ತು ವಾಹನ ಹಳ್ಳಕ್ಕೆ ಉರುಳಿಸಿದ ಪಾನಮತ್ತ ಪೊಲೀಸರು; ಕ್ರೇನ್ ಚಾಲಕನ ಮೇಲೆ ಹಲ್ಲೆ

ಶುಕ್ರವಾರ (ಡಿಸೆಂಬರ್ 12) ರಾತ್ರಿ ಪೊಲೀಸರೊಬ್ಬರು ಕಾರಿನ ನಿಯಂತ್ರಣ ಕಳೆದುಕೊಂಡ ಬಳಿಕ '112' ಪೊಲೀಸ್ ಪ್ರತಿಕ್ರಿಯೆ ವಾಹನ (ಪಿಆರ್‌ವಿ) ಹಳ್ಳಕ್ಕೆ ಉರುಳಿದೆ. ವರದಿಗಳ ಪ್ರಕಾರ, ಘಟನೆಯ ಸಮಯದಲ್ಲಿ ಪೊಲೀಸರು ಪಾನಮತ್ತರಾಗಿದ್ದರು. ಕಾರ್ ಕಂದಕಕ್ಕೆ...

ಲಿಯೋನೆಲ್ ಮೆಸ್ಸಿ ಇಂಡಿಯಾ ಪ್ರವಾಸ; ಅಭೂತಪೂರ್ವ ಸ್ವಾಗತ ಕೋರಿದ ಕೋಲ್ಕತ್ತಾ ಅಭಿಮಾನಿಗಳು

ಇಂಡಿಯಾ ಪ್ರವಾಸ ಪ್ರಾರಂಭಿಸಿರುವ ಅರ್ಜೆಂಟೀನಾದ ಪುಟ್‌ಬಾಲ್‌ ತಾರೆ ಲಿಯೋನೆಲ್ ಮೆಸ್ಸಿ ಕೋಲ್ಕತ್ತಾಗೆ ಬಂದಿಳಿದಿದ್ದಾರೆ. ಶನಿವಾರ ಬೆಳಗಿನ ಜಾವ ವಿಮಾನ ನಿಲ್ದಾಣದಲ್ಲಿ ನೆರೆದಿದ್ದ ಸಾವಿರಾರು ಅಭಿಮಾನಿಗಳಿಂದ ಅವರಿಗೆ ಅಭೂತಪೂರ್ವ ಸ್ವಾಗತ ಕೋರಿದರು. ಅರ್ಜೆಂಟೀನಾದ ಸೂಪರ್‌ಸ್ಟಾರ್ ದುಬೈ...

ನಟಿಯ ಅಪಹರಣ, ಅತ್ಯಾಚಾರ ಪ್ರಕರಣ : ಆರು ಅಪರಾಧಿಗಳಿಗೆ 20 ವರ್ಷ ಕಠಿಣ ಜೈಲು ಶಿಕ್ಷೆ

ಮಲಯಾಳಂ ಮೂಲದ ಬಹುಭಾಷಾ ನಟಿಯ ಅಪಹರಣ ಮತ್ತು ಅತ್ಯಾಚಾರ ಪ್ರಕರಣದ (2017ರ ಪ್ರಕರಣ) ಆರು ಅಪರಾಧಿಗಳಿಗೆ ಇಪ್ಪತ್ತು ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿ ಶುಕ್ರವಾರ (ಡಿಸೆಂಬರ್ 12) ಕೇರಳ ನ್ಯಾಯಾಲಯ ಆದೇಶಿಸಿದೆ. ಡಿಸೆಂಬರ್...